ಒಮಿಕ್ರಾನ್ ಸೋಂಕಿತ ವಿದೇಶಕ್ಕೆ ಎಸ್ಕೇಪ್! ಹೋಟೆಲ್ ಮಾಲೀಕರಿಗೆ ನೋಟಿಸ್ ನೀಡಿದ ಬಿಬಿಎಂಪಿ
ಬೆಂಗಳೂರಿನ ಶಾಂಗ್ರಿಲಾ ಹೋಟೆಲ್ನಲ್ಲಿ ಒಮಿಕ್ರಾನ್ ಸೋಂಕಿತ ವಾಸ್ತವ್ಯವಿದ್ದ. ಜಿನೋಮಿಕ್ ಸೀಕ್ವೆನ್ಸ್ ವರದಿ ಬರುವ ಮುನ್ನವೇ ನಕಲಿ ವರದಿ ತೋರಿಸಿ ವ್ಯಕ್ತಿ ಪರಾರಿಯಾಗಿದ್ದು, ಇದೀಗ ಆತನಿಗೆ ಒಮಿಕ್ರಾನ್ ಸೋಂಕಿರುವುದು ದೃಢಪಟ್ಟಿದೆ.
ಬೆಂಗಳೂರು: ಒಮಿಕ್ರಾನ್ (Omicron) ಸೋಂಕಿತನೊಬ್ಬ ವಿದೇಶಕ್ಕೆ ಎಸ್ಕೇಪ್ ಆಗಿರುವ ವಿಚಾರಕ್ಕೆ ಸಂಬಂಧಿಸಿ ಹೋಟೆಲ್ ಮಾಲೀಕರಿಗೆ ಬಿಬಿಎಂಪಿ ನೋಟಿಸ್ ನೀಡಿದೆ. ಬೆಂಗಳೂರಿನ ಶಾಂಗ್ರಿಲಾ ಹೋಟೆಲ್ನಲ್ಲಿ ಒಮಿಕ್ರಾನ್ ಸೋಂಕಿತ ವಾಸ್ತವ್ಯವಿದ್ದ. ಜಿನೋಮಿಕ್ ಸೀಕ್ವೆನ್ಸ್ ವರದಿ ಬರುವ ಮುನ್ನವೇ ನಕಲಿ ವರದಿ ತೋರಿಸಿ ವ್ಯಕ್ತಿ ಪರಾರಿಯಾಗಿದ್ದು, ಇದೀಗ ಆತನಿಗೆ ಒಮಿಕ್ರಾನ್ ಸೋಂಕಿರುವುದು ದೃಢಪಟ್ಟಿದೆ. ಸೋಂಕಿತ ನವೆಂಬರ್ 27ರ ಮಧ್ಯರಾತ್ರಿ ಬೆಂಗಳೂರು ತೊರೆದಿದ್ದಾನೆ. ದಕ್ಷಿಣ ಆಫ್ರಿಕಾದಿಂದ ಬಂದಿದ್ದ ಸೋಂಕಿತ ಕ್ವಾರಂಟೈನ್ಗೆ ಒಳಗಾಗಿರಲಿಲ್ಲ.
ಒಮಿಕ್ರಾನ್ ಸೋಂಕಿತ ವಿದೇಶಕ್ಕೆ ಹೇಗೆ ಎಸ್ಕೇಪ್ ಆದ? ಹೋಟೆಲ್ ಸಿಬ್ಬಂದಿ ಯಾವ ಕಾರಣಕ್ಕೆ ಹೊರಗೆ ಕಳಿಸಿದರು? ಜಿನೋಮಿಕ್ ಸೀಕ್ವೆನ್ಸ್ಗೂ ಮೊದಲೇ ಹೇಗೆ ಹೊರಗೆ ಬಿಟ್ರಿ? ಯಾವ ಕಾರಣಕ್ಕೆ ಆತನನ್ನು ಕ್ವಾರಂಟೈನ್ ಮಾಡಿಲ್ಲ? ಕಾರಣ ಹೇಳಿ ಸ್ಪಷ್ಟನೆ ನೀಡುವಂತೆ ಬಿಬಿಎಂಪಿ ಹೋಟೆಲ್ ಮಾಲೀಕರಿಗೆ ನೋಟಿಸ್ನೀಡಿದೆ. ಅಲ್ಲದೇ ಈ ಕರಿತು ಸಮಗ್ರ ತನಿಖೆಗೆ ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ಮುಂದಾಗಿದೆ.
ಆಫ್ರಿಕಾದಿಂದ ಬಂದ 10 ಜನರ ನಾಪತ್ತೆ ಬಗ್ಗೆ ಸಿಎಂ ಪ್ರತಿಕ್ರಿಯೆ ನೀಡಿದ್ದು, ಆರೋಗ್ಯ ಸಚಿವರ ಜೊತೆ ನಾನು ಮಾತನಾಡುತ್ತೇನೆ. ನಾಪತ್ತೆ ಬಗ್ಗೆ ಸದ್ಯಕ್ಕೆ ನನಗೆ ಮಾಹಿತಿ ಇಲ್ಲ ಎಂದಿದ್ದಾರೆ.
ಒಮಿಕ್ರಾನ್ ಸೋಂಕು ವೇಗವಾಗಿ ಹರಡುತ್ತೆ ಎನ್ನುತ್ತಿದ್ದಾರೆ. ಆದರೆ ಒಮಿಕ್ರಾನ್ ಪರಿಣಾಮ ಮಾತ್ರ ಕಡಿಮೆ ಇದೆ. ಒಮಿಕ್ರಾನ್ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಒಮಿಕ್ರಾನ್‌ಗೆ ಹೇಗೆ ಚಿಕಿತ್ಸೆ ನೀಡಬೇಕೆಂದು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮೊದಲು 10 ಪ್ರಕರಣಗಳಿಗೆ ಕ್ಲಸ್ಟರ್ ಎಂದು ಕರೆಯುತ್ತಿದ್ದೆವು. ಈಗ 3 ಪ್ರಕರಣಗಳಿಗೆ ಕ್ಲಸ್ಟರ್ ಮಾಡಲಾಗುತ್ತಿದೆ. ಅಪಾರ್ಟ್‌ಮೆಂಟ್ ಭೇಟಿಗೂ 2 ಡೋಸ್ ಲಸಿಕೆ ಕಡ್ಡಾಯವಾಗಿದೆ. ಶಾಲಾ-ಕಾಲೇಜು ಮಕ್ಕಳ ಪೋಷಕರು, ಸಿಬ್ಬಂದಿ ಕಡ್ಡಾಯವಾಗಿ 2 ಡೋಸ್ ಲಸಿಕೆ ಪಡೆಯಲೇಬೇಕು ಅಂತ ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ
ಹಾಸನದಲ್ಲಿ ರಾತ್ರಿಯಿಡಿ ಸುರಿದ ಮಳೆಗೆ ಕೊಚ್ಚಿ ಹೋದ ರಸ್ತೆ; ವಾಹನ ಸವಾರರ ಪರದಾಟ
Published On - 10:59 am, Sat, 4 December 21