ಸಾಲು ಸಾಲು ಹಬ್ಬಗಳ ನಡುವೆ ಕೊರೊನಾತಂಕ: ಸೋಂಕಿಗೆ ಇಂದು ಐವರು ಬಲಿ
ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ ಐವರು ಮೃತಪಟ್ಟಿದ್ದಾರೆ. ಬಳ್ಳಾರಿ, ಮೈಸೂರು, ರಾಮನಗರ ಜಿಲ್ಲೆಯಲ್ಲಿ ತಲಾ ಒಬ್ಬರು ಬಲಿಯಾಗಿದ್ದು ಶಿವಮೊಗ್ಗ, ಉಡುಪಿ ಜಿಲ್ಲೆಯಲ್ಲಿ ಇಂದು ತಲಾ ಒಬ್ಬರು ಮೃತಪಟ್ಟಿದ್ದಾರೆ.
ಬೆಂಗಳೂರು: ಗೌರಿ ಗಣೇಶ ಹಬ್ಬ, ಓಣಂ, ಅನಂತ ಪದ್ಮನಾಭ ವ್ರತ, ವಿಶ್ವಕರ್ಮ ಜಯಂತಿ, ಮಹಾಲಯ ಅಮವಾಸ್ಯೆ ಹೀಗೆ ಸಾಲು ಸಾಲು ಹಬ್ಬಗಳು ಈ ತಿಂಗಳು ಬರಲಿವೆ. ಆದರೆ ಇತ್ತ ಮಹಾಮಾರಿ ಕೊರೊನಾ(Coronavirus) ಸಂಖ್ಯೆಯಲ್ಲೂ ಕೊಂಚ ಏರಿಳಿತ ಕಂಡು ಬರುತ್ತಿದೆ. ರಾಜ್ಯದಲ್ಲಿ ಇಂದು 845 ಜನರಿಗೆ ಕೊರೊನಾ ಸೋಂಕು ದೃಢ ಪಟ್ಟಿದ್ದು ಬೆಂಗಳೂರಿನಲ್ಲಿಂದು 589 ಜನರಿಗೆ ಕೊರೊನಾ ಸೋಂಕು ತಗುಲಿದೆ.
ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ ಐವರು ಮೃತಪಟ್ಟಿದ್ದಾರೆ. ಬಳ್ಳಾರಿ, ಮೈಸೂರು, ರಾಮನಗರ ಜಿಲ್ಲೆಯಲ್ಲಿ ತಲಾ ಒಬ್ಬರು ಬಲಿಯಾಗಿದ್ದು ಶಿವಮೊಗ್ಗ, ಉಡುಪಿ ಜಿಲ್ಲೆಯಲ್ಲಿ ಇಂದು ತಲಾ ಒಬ್ಬರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 6,775 ಇದೆ. ಹಾಗೂ ರಾಜ್ಯದಲ್ಲಿ ಕೊವಿಡ್ ಪಾಸಿಟಿವಿಟಿ ರೇಟ್ ಶೇಕಡಾ 4.44ರಷ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇಂದಿನ 30/08/2022 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/MLOQwuabXz @CMofKarnataka @BSBommai @mla_sudhakar @Comm_dhfwka @MDNHM_Kar @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/kdjJCGxfaj
— K'taka Health Dept (@DHFWKA) August 30, 2022
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಜನರ ಬದುಕಿಗೆ ಕೊವಿಡ್ ಪೆಟ್ಟು: ವಿಮಾ ಪಾಲಿಸಿಗಳ ಅವಧಿ ಪೂರ್ವ ಸರಂಡರ್ ಪ್ರಮಾಣ ಮೂರು ಪಟ್ಟು ಹೆಚ್ಚಳ
ಭಾರತದಲ್ಲಿ ಕೊರೊನಾ ಪಿಡುಗು ಆರಂಭವಾದ ನಂತರ ಆರ್ಥಿಕ ಚಟುವಟಿಕೆಗಳು ನೀರಸವಾಗಿದ್ದು, ಕೌಟುಂಬಿಕ ಆದಾಯ ಕುಸಿದಿದೆ. ಅಂಕಿಅಂಶಗಳಲ್ಲಿ ಎಲ್ಲವೂ ಉತ್ತಮವಾಗಿರುವಂತೆ ಕಂಡುಬಂದರೂ ವಾಸ್ತವ ಚಿತ್ರಣ ಬೇರೆಯದ್ದೇ ಆಗಿದೆ. ಜನಸಾಮಾನ್ಯರ ಆದಾಯ ತೀವ್ರವಾಗಿ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಜೀವ ವಿವಾ ಪಾಲಿಸಿಗಳ ಅವಧಿ ಪೂರ್ವ ಸರಂಡರ್ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. 2021-22ರ ಆರ್ಥಿಕ ವರ್ಷದಲ್ಲಿ 2.3 ಕೋಟಿ ಪಾಲಿಸಿಗಳನ್ನು ಅವಧಿಗೆ ಮೊದಲೇ ಕ್ಲೋಸ್ ಮಾಡಲಾಗಿದೆ. 2020-21ರ ಆರ್ಥಿಕ ವರ್ಷದಲ್ಲಿ 69.78 ಲಕ್ಷ ಪಾಲಿಸಿಗಳನ್ನು ಅವಧಿಗೆ ಮೊದಲು ಕ್ಲೋಸ್ ಮಾಡಲಾಗಿತ್ತು ಎಂದು ‘ದಿ ಇಂಡಿಯನ್ ಎಕ್ಸ್ಪ್ರೆಸ್’ ಜಾಲತಾಣ ವರದಿ ಮಾಡಿದೆ. ಕೊವಿಡ್-19 ಪಿಡುಗು ಆವರಿಸಿದ ಎರಡನೇ ವರ್ಷದಲ್ಲಿ ಕುಟುಂಬಗಳು ಅನುಭವಿಸಿದ ಆರ್ಥಿಕ ಬಿಕ್ಕಟ್ಟನ್ನು ಇದು ಸೂಚಿಸುತ್ತದೆ.
ಕೊವಿಡ್ ವ್ಯಾಪಿಸಿಕೊಂಡ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಮಾರ್ಚ್ 24, 2020ರಲ್ಲಿ ದೇಶವ್ಯಾಪಿ ಲಾಕ್ಡೌನ್ ಘೋಷಿಸಿತು. ಇದರ ಪರಿಣಾಮ ಎನ್ನುವಂತೆ ದೇಶಾದ್ಯಂತ ಕೋಟ್ಯಂತರ ಜನರು ಕೆಲಸ ಕಳೆದುಕೊಂಡರು. ಹಿಂದೆಂದೂ ಕಂಡರಿಯದ ಕಾರ್ಮಿಕ ವಲಸೆ ಹಾಗೂ ನಗರಗಳಿಂದ ಗ್ರಾಮೀಣ ಪ್ರದೇಶಗಳತ್ತ ಜನರು ಹೊರ ನಡೆದ ಬೆಳವಣಿಗೆಗೂ ಈ ಬೆಳವಣಿಗೆ ಕಾರಣವಾಯಿತು. ಆದಾಯ ತೀವ್ರವಾಗಿ ಕುಂಠಿತಗೊಂಡ ಹಿನ್ನೆಲೆಯಲ್ಲಿ ಜನರಿಗೆ ವಿಮಾ ಪಾಲಿಸಿಗಳ ಕಂತು ಪಾವತಿಸುವುದು ಕಷ್ಟ ಎನಿಸಿತು. ಹಣಕಾಸಿನ ತುರ್ತು ಎದುರಾದ ಹಿನ್ನೆಲೆಯಲ್ಲಿ ಪಾಲಿಸಿಗಳನ್ನು ಮೆಚ್ಯುರಿಟಿ ಅವಧಿಗೆ ಮೊದಲೇ ಸರಂಡರ್ ಮಾಡಿ ಹಣ ಹಿಂಪಡೆಯಲು ಮುಂದಾದರು.
Published On - 9:01 pm, Tue, 30 August 22