ಭ್ರಷ್ಟಾಚಾರ: ಬಿಬಿಎಂಪಿ ಮಾಜಿ ಸಹಾಯಕ ಕಂದಾಯ ಅಧಿಕಾರಿಗೆ 3 ವರ್ಷ ಕಠಿಣ ಜೈಲು ಶಿಕ್ಷೆ

ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿಯಾಗಿದ್ದ ಕೃಷ್ಣೇಗೌಡ ಅವರಿಗೆ 3 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಬೆಂಗಳೂರಿನ 23ನೇ ಹೆಚ್ಚುವರಿ ಸಿಟಿ ಸಿವಿಲ್​ ಕೋರ್ಟ್ ಆದೇಶ ಹೊರಡಿಸಿದೆ.

ಭ್ರಷ್ಟಾಚಾರ: ಬಿಬಿಎಂಪಿ ಮಾಜಿ ಸಹಾಯಕ ಕಂದಾಯ ಅಧಿಕಾರಿಗೆ 3 ವರ್ಷ ಕಠಿಣ ಜೈಲು ಶಿಕ್ಷೆ
ಬಿಬಿಎಂಪಿ
Follow us
ವಿವೇಕ ಬಿರಾದಾರ
|

Updated on:Jun 17, 2023 | 7:45 PM

ಬೆಂಗಳೂರು: ಬಿಬಿಎಂಪಿ (BBMP) ಸಹಾಯಕ ಕಂದಾಯ ಅಧಿಕಾರಿಯಾಗಿದ್ದ (ARO) ಕೃಷ್ಣೇಗೌಡ ಅವರಿಗೆ 3 ವರ್ಷ ಕಠಿಣ ಜೈಲು (Jail) ಶಿಕ್ಷೆ ವಿಧಿಸಿ ಬೆಂಗಳೂರಿನ 23ನೇ ಹೆಚ್ಚುವರಿ ಸಿಟಿ ಸಿವಿಲ್​ ಕೋರ್ಟ್ ಆದೇಶ ಹೊರಡಿಸಿದೆ. 2016ರ ಮೇ 11ರಂದು ಕೊತ್ತನೂರು, ಹುಳಿಮಾವು ಬಳಿ ಆಸ್ತಿ ಜಂಟಿ ಖಾತೆ ಮಾಡಿಕೊಡಲು 20,000 ರೂ. ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದರು. ಇದೀಗ ಭ್ರಷ್ಟಾಚಾರ ಸಾಬೀತಾದ ಹಿನ್ನೆಲೆಯಲ್ಲಿ 3 ವರ್ಷ ಕಠಿಣ ಜೈಲು ಶಿಕ್ಷೆ 40 ಸಾವಿರ ರೂ. ದಂಡ ವಿಧಿಸಲಾಗಿದೆ.

ಪ್ರದೀಪ್‌ ಎಂಬುವರು ನೀಡಿದ ದೂರಿನ ಮೇರೆಗೆ ದಾಳಿ ನಡೆಸಿದ ಎಸಿಬಿ ಪೊಲೀಸರು, ಲಂಚ ಸ್ವೀಕರಿಸುತ್ತಿದ್ದ ಕೃಷ್ಣೇಗೌಡರನ್ನು ಬಂಧಿಸಿದ್ದರು. ಕೊತ್ತನೂರು, ಹುಳಿಮಾವು ಬಳಿ ಆಸ್ತಿ ಜಂಟಿ ಖಾತೆ ಮಾಡಿಕೊಡಲು ಕೃಷ್ಣೇಗೌಡ ಅವರು 20 ಸಾವಿರ ರೂ. ಲಂಚ ಕೇಳಿದ್ದರು. ಈ ಸಂಬಂಧ ಪ್ರದೀಪ್‌ ಎಸಿಬಿಗೆ ದೂರು ನೀಡಿದ್ದರು.

ಕಾಮಗಾರಿ ನಡೆಸದೇ 118 ಕೋಟಿ ರೂ. ನಕಲಿ ಬಿಲ್ ಸೃಷ್ಟಿ

2019-20ರಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಸದೇ 118 ಕೋಟಿ ರೂಪಾಯಿ ನಕಲಿ ಬಿಲ್ ಸೃಷ್ಟಿಸಿದ ಆರೋಪದ ಮೇಲೆ 11 ಬಿಬಿಎಂಪಿ ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ಕಳಪೆ ಕಾಮಗಾರಿ ಸಂಬಂಧ ಲೋಕಾಯುಕ್ತಕ್ಕೆ ಕಾಂಗ್ರೆಸ್​ ಸಂಸದ ಡಿ.ಕೆ.ಸುರೇಶ್ ದೂರು ನೀಡಿದ್ದರು.

ಇದನ್ನೂ ಓದಿ: ಸ್ಟೇ ಹಿನ್ನಲೆ ತೆರವು ಕಾರ್ಯಚರಣೆಗೆ ತಾತ್ಕಲಿಕ ಸ್ಥಗಿತಗೊಳಿಸಿದ ಬಿಬಿಎಂಪಿ: ಸೋಮವಾರಕ್ಕೆ ಮುಂದೂಡಿಕೆ

ಈ ಹಿನ್ನಲೆಯಲ್ಲಿ ಬೆಂಗಳೂರಿನ ರಾಜರಾಜೇಶ್ವರಿನಗರ ವಲಯದ 9 ಬಿಬಿಎಂಪಿ ಇಂಜಿನಿಯರ್​, ಓರ್ವ ಅಧೀಕ್ಷಕ, ಓರ್ವ ಉಪ ನಿರ್ದೇಶಕ ಸೇರಿದಂತೆ ಒಟ್ಟು 11 ಅಧಿಕಾರಿಗಳನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಅಲ್ಲದೇ ಹಗರಣದ ತನಿಖೆಗಾಗಿ ಬೆಂಗಳೂರು ಕಂದಾಯ ವಿಭಾಗದ ಪ್ರಾದೇಶಿಕ ಆಯುಕ್ತ ಆಮ್ಲನ್ ಆದಿತ್ಯ ಬಿಸ್ವಾಸ್ ಅವರನ್ನು ತನಿಖಾ ಅಧಿಕಾರಿಯಾಗಿ ನೇಮಿಸಿದೆ.

ಅಮಾನತ್ತುಗೊಂಡ ಅಧಿಕಾರಿಗಳು

  1. ದೊಡ್ಡಯ್ಯ- ಮುಖ್ಯ ಇಂಜಿನಿಯರ್ ಟಿವಿಸಿಸಿ ವಿಭಾಗ
  2. ಸತೀಶ್- ಸಹಾಯಕ ಕಾರ್ಯಪಾಲಕ ಇಂಜಿನಿಯರ್​, ಟಿವಿಸಿಸಿ ವಿಭಾಗ
  3. ವಿಜಯ್ ಕುಮಾರ್- ಮುಖ್ಯ ಇಂಜಿನಿಯರ್ ಆರ್​ಆರ್​ ನಗರ ವಲಯ
  4. ಶಿಲ್ಪಾ- ಸಹಾಯಕ ಇಂಜಿನಿಯರ್ ಆರ್​ಆರ್​ ವಲಯ
  5. ಮೋಹನ್- ಮುಖ್ಯ ಇಂಜಿನಿಯರ್ ಯೋಜನಾ ವಿಭಾಗ ಆರ್​ಆರ್ ವಲಯ
  6. ಭಾರತಿ- ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಯೋಜನಾ ವಿಭಾಗ ಆರ್​ಆರ್ ವಲಯ
  7. ಬಸವರಾಜ್- ಕಾರ್ಯಪಾಲಕ ಇಂಜಿನಿಯರ್ ಆರ್​ಆರ್​ ನಗರ ವಲಯ
  8. ಸಿದ್ದಯ್ಯ-ಸಹಾಯಕ ಇಂಜಿನಿಯರ್ ವಾರ್ಡ್​ ನಂ-129 ಮತ್ತು 160
  9. ಉಮೇಶ್​ -ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಲಗ್ಗೆರೆ
  10. ಅನಿತಾ- ಸೂಪರಿಡೆಂಟ್, ಕ್ಯಾರಿಯರ್ ಆರ್​ಆರ್​ ನಗರ ವಲಯ
  11. ಗೂಳಿಗೌಡ-ಡೆಪ್ಯುಟಿ ಮ್ಯಾನೇರ್ ಆರ್​ಆರ್​ ನಗರ ವಲಯ

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ  ಕ್ಲಿಕ್ ಮಾಡಿ

Published On - 7:45 pm, Sat, 17 June 23

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ