ಬೆಂಗಳೂರು, ಜೂನ್ 3: ಲೋಕಸಭಾ ಚುನಾವಣೆಯ (Lok Sabha Election) ಮತಎಣಿಕೆಗೆ ಕೌಂಟ್ ಡೌನ್ ಶುರುವಾಗಿದೆ. ಜೂನ್ 4 ರಂದು ಬೆಳಗ್ಗೆ 8 ಗಂಟೆಯಿಂದ ಮತಎಣಿಕೆ ಆರಂಭವಾಗಲಿದ್ದು, ಇದಕ್ಕಾಗಿ ಬೆಂಗಳೂರಿನ 3 ಮತಎಣಿಕೆ ಕೇಂದ್ರಗಳಲ್ಲಿ (Bengaluru Vote Counting Centres) ಸಕಲ ಸಿದ್ಧತೆ ನಡೆದಿದೆ. ಬಿಬಿಎಂಪಿ ಮುಖ್ಯ ಅಯುಕ್ತ ಹಾಗೂ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಸ್ಟ್ರಾಂಗ್ ರೂಂಗಳ ಪರಿಶೀಲನೆ ನಡೆಸಿದ್ದಾರೆ.
ಜೂನ್ 4 ರಂದು ಬೆಳಗ್ಗೆ 7.45ಕ್ಕೆ ಸ್ಟ್ರಾಂಗ್ ರೂಂಗಳು ಓಪನ್ ಆಗಲಿದ್ದು, ಬೆಳಗ್ಗೆ 8 ಗಂಟೆಯಿಂದ ಮತಎಣಿಕೆ ಆರಂಭಿಸಲು ತಯಾರಿ ನಡೆಸಲಾಗಿದೆ. ಸದ್ಯ ಬೆಂಗಳೂರಿನ 3 ಸ್ಟ್ರಾಂಗ್ ರೂಂಗಳಲ್ಲಿ 9 ಕೊಠಡಿಗಳಲ್ಲಿನ ಪ್ರತಿ ಕೊಠಡಿಗೆ 14 ಟೇಬಲ್ ಗಳಲ್ಲಿ ಮತಎಣಿಕೆ ನಡೆಯಲಿದೆ. 8 ಗಂಟೆಯಿಂದ ಅಂಚೆಮತಗಳ ಎಣಿಕೆ ಶುರುವಾಗಲಿದ್ದು, ಬಳಿಕ ಇವಿಎಂ ಕೌಂಟಿಂಗ್ ಆರಂಭವಾಗಲಿದೆ.
ಮತಎಣಿಕೆ ಕೇಂದ್ರಗಳಲ್ಲಿ ಸಿಸಿಟಿವಿಗಳ ಮೂಲಕ ನಿಗಾ ಇಡಲಿದ್ದು, ಮತಎಣಿಕೆ ಸಿಬ್ಬಂದಿಗೆ ಮೊಬೈಲ್ ,ಪರ್ಸ್ ನಿಷೇಧ ಹೇರಲಾಗಿದೆ. ಆನ್ ಕೂರ್ ಸಾಫ್ಟ್ವೇರ್ ನಲ್ಲಿ ಪ್ರತಿ ರೌಂಡ್ ಮತಎಣಿಕೆ ಅಪ್ ಲೋಡ್ ಆಗಲಿದ್ದು, ಎಣಿಕೆಯಲ್ಲಿ ಸಮಸ್ಯೆಯಾಗದಂತೆ ನಿಗಾ ಇಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
1200 ಸಿಬ್ಬಂದಿಯಿಂದ ಮೂರು ಮತ ಎಣಿಕಾ ಕೇಂದ್ರಗಳಲ್ಲಿ ಮತಎಣಿಕೆ ನಡೆಯಲಿದ್ದು, ಪ್ರತಿಕೇಂದ್ರದಲ್ಲೂ ಬಿಗಿಭದ್ರತೆ ಮೂಲಕ ಎಚ್ಚರವಹಿಸಲಾಗಿದೆ.
ಇದನ್ನೂ ಓದಿ: ಎಕ್ಸಿಟ್ಪೋಲ್ನಿಂದ ಕಾಂಗ್ರೆಸ್ ಶಾಸಕರಿಗೆ ತಳಮಳ: ಶಾಸಕಾಂಗ ಸಭೆಯಲ್ಲಿ ಧೈರ್ಯ ಹೇಳಿದ ಸಿಎಂ ಸಿದ್ದರಾಮಯ್ಯ
ಒಟ್ಟಿನಲ್ಲಿ ಎಕ್ಸಿಟ್ ಪೋಲ್ ಬಿಸಿ ಬಿಸಿ ಚರ್ಚೆ ಹುಟ್ಟುಹಾಕಿರೋ ಹೊತ್ತಲ್ಲೇ, ಇದೀಗ ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಸಿಲಿಕಾನ್ ಸಿಟಿಯ ಮತ ಎಣಿಕೆ ಕೇಂದ್ರಗಳು ಸಜ್ಜಾಗಿದ್ದು, ಮತದಾರರ ಒಲವು ಯಾರ ಮೇಲಿದೆ ಅನ್ನೋದನ್ನ ಕಾದುನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ