Bengaluru Traffic Advisory: ಮತ ಎಣಿಕೆ ಎಫೆಕ್ಟ್: ಬೆಂಗಳೂರಿನ ಈ ರಸ್ತೆಗಳಲ್ಲಿ ನಾಳೆ ಸಂಚಾರ, ಪಾರ್ಕಿಂಗ್ ನಿಷೇಧ
ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಕೂಡ ಲೋಕಸಭೆ ಚುನಾವಣೆಯ ಮತ ಎಣಿಕೆ ಮಂಗಳವಾರ ನಡೆಯಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರು ಸಂಚಾರ ಪೊಲೀಸರು ಬೆಂಗಳೂರಿನ ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ, ಪಾರ್ಕಿಂಗ್ ನಿಷೇಧ ಹೇರಿದ್ದಾರೆ. ಆ ವಿವರ ಇಲ್ಲಿದೆ.
ಬೆಂಗಳೂರು, ಜೂನ್ 3: ಲೋಕಸಭೆ ಚುನಾವಣೆಯ ಮತ ಎಣಿಕೆ (Lok Sabha Elections) ಮಂಗಳವಾರ ನಡೆಯಲಿದ್ದು, ಫಲಿತಾಂಶವೂ (Lok Sabha Election Result) ಪ್ರಕಟಗೊಳ್ಳಲಿದೆ. ಈ ಕಾರಣ ಜೂನ್ 4 ರಂದು ಬೆಂಗಳೂರಿನ ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ (Bengaluru Traffic Advisory) ಹೇರಲಾಗಿದೆ. ಈ ಕುರಿತು ಬೆಂಗಳೂರು ಸಂಚಾರ ಪೊಲೀಸರು ಪ್ರಯಾಣಿಕರಿಗೆ ಸಾಮಾಜಿಕ ಮಾಧ್ಯಮ ಎಕ್ಸ್ ಸಂದೇಶದ ಮೂಲಕ ಮಾಹಿತಿ ನೀಡಿದ್ದಾರೆ. ಸಂಚಾರ ನಿರ್ಬಂಧದ ಸಮಯದಲ್ಲಿ ಕೆಲವು ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನೂ ನಿಷೇಧಿಸಲಾಗಿದೆ. ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಮತ ಎಣಿಕೆಯನ್ನು ಗಮನದಲ್ಲಿಟ್ಟುಕೊಂಡು ನಿಷೇಧಾಜ್ಞೆ ಹೇರಲಾಗಿದೆ.
ಈ ಕೆಳಗಿನ ರಸ್ತೆಗಳಲ್ಲಿ ಎಲ್ಲಾ ರೀತಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಈ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧ
- ಆರ್ಆರ್ಎಂಆರ್ ರಸ್ತೆ – ರಿಚ್ಮಂಡ್ ವೃತ್ತದಿಂದ ಹಡ್ಸನ್ ಜಂಕ್ಷನ್.
- ವಿಠಲ್ ಮಲ್ಯ ರಸ್ತೆ – ಸಿದ್ದಲಿಂಗಯ್ಯ ವೃತ್ತದಿಂದ ರಿಚ್ಮಂಡ್.
- ಎನ್.ಆರ್.ರಸ್ತೆ – ಹಡ್ಸನ್ ವೃತ್ತದಿಂದ ಟೌನ್ ಹಾಲ್ ಜಂಕ್ಷನ್ ಕೆಬಿ ರಸ್ತೆ – ಎಚ್‌ಎಲ್‌ಡಿ ಜಂಕ್ಷನ್‌ನಿಂದ ಕ್ವಿನ್ ಜಂಕ್ಷನ್.
- ಕೆ.ಜಿ.ರಸ್ತೆ – ಪೊಲೀಸ್ ಕಾರ್ನರ್ ಜಂಕ್ಷನ್ ನಿಂದ ಮೈಸೂರು ಬ್ಯಾಂಕ್ ಜಂಕ್ಷನ್.
- ನೃಪತುಂಗ ರಸ್ತೆ – ಕೆಆರ್ ಜಂಕ್ಷನ್ ನಿಂದ ಪೊಲೀಸ್ ಕಾರ್ನರ್.
- ಕೀನ್ಸ್ ರಸ್ತೆ – ಬಾಳೇಕುಂದ್ರಿ ವೃತ್ತದಿಂದ ಸಿಟಿಒ ಪ್ರಶಕ್ಕೆ.
- ಸೆಂಟ್ರಲ್ ಸ್ಟ್ರೀಟ್ ರಸ್ತೆ – ಬಿಆರ್‌ವಿ ಜಂಕ್ಷನ್‌ನಿಂದ ಅನಿಲ್ ಕುಂಬ್ಳೆ ವೃತ್ತ, ಎಂಜಿ ರಸ್ತೆ – ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ಜಂಕ್ಷನ್
ಇದನ್ನೂ ಓದಿ: ಜೂನ್ 4 2024 ಮಂಗಳವಾರದ ದಿನ ವಿಶೇಷ ಏನು? ಭಾರತದ ಭವಿಷ್ಯ ಯಾರ ಕೈ ಸೇರಲಿದೆ? ಜ್ಯೋತಿಷ್ಯ ಏನು ಹೇಳುತ್ತದೆ?
ಈ ರಸ್ತೆಗಳಲ್ಲಿ ವಾಹನ ನಿಲುಗಡೆಗೆ ಅವಕಾಶ
- ಸೇಂಟ್ ಜೋಸೆಫ್ ಕಾಲೇಜು ಮೈದಾನ
- ಕಂಠೀರವ ಸ್ಟೇಡಿಯಂ ಪಾರ್ಕಿಂಗ್ ಸ್ಥಳ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:59 am, Mon, 3 June 24