ಜೂನ್ 4 2024 ಮಂಗಳವಾರದ ದಿನ ವಿಶೇಷ ಏನು? ಭಾರತದ ಭವಿಷ್ಯ ಯಾರ ಕೈ ಸೇರಲಿದೆ? ಜ್ಯೋತಿಷ್ಯ ಏನು ಹೇಳುತ್ತದೆ?
ಇನ್ನೊಂದೇ ದಿನ ಅಷ್ಟೇ. ನಾಳೆ ಒಂದೇ ದಿನ ಕಳೆದು ಮಂಗಳವಾರ ಬೆಳಗಾಗ್ತಿದ್ದಂತೆ ಲೋಕಸಭಾ ಫಲಿತಾಂಶ ಹೊರಬೀಳಲಿದೆ. ಬೆಳಗಿನಿಂದಲೇ ಮತ ಏಣಿಕೆ ಆರಂಭವಾಗುತ್ತೆ. ಚುನಾವಣಾ ಸಿಬ್ಬಂದಿ ಮತ ಎಣಿಕೆಗೆ ತಯಾರಿ ನಡೆಸಿದ್ರೆ, ಎಕ್ಸಿಟ್‌ಪೋಲ್‌ಗಳು ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಜಟಾಪಟಿಗೆ ಕಾರಣವಾಗಿವೆ. ಈ ದಿನ ಏನಾಗಲಿದೆ? ಯಾವ ಪಕ್ಷ ಅಸ್ತಿತ್ವಕ್ಕೆ ಬರಲಿದೆ? ಭಾರತದ ಭವಿಷ್ಯ ಯಾರ ಕೈ ಸೇರಲಿದೆ ತಿಳಿಯಿರಿ.
ಜೂನ್ ನಾಲ್ಕನೇ ತಾರಿಖು ಪ್ರಜಾಪ್ರಭುತ್ವದ (Democracy) ಮಹತ್ತ್ವದ ದಿನ. ಎಲ್ಲರ ನಿರೀಕ್ಷೆ ಏನಾಗುವುದೋ ಎಂಬ ಭಯ, ಆತಂಕ, ಹರ್ಷ, ಉತ್ಸಾಹ, ಕನಸು ಎಲ್ಲವೂ ಇದೆ. ಈ ದಿನ ಏನಾಗಲಿದೆ? ಯಾವ ಪಕ್ಷ ಅಸ್ತಿತ್ವಕ್ಕೆ ಬರಲಿದೆ? ಭಾರತದ (India) ಭವಿಷ್ಯ ಯಾರ ಕೈ ಸೇರಲಿದೆ ಎನ್ನುವುದು ನೋಡ ಹೊರಟರೆ ಖಗೋಳದಲ್ಲಿ ವಿಶೇಷ ಸನ್ನಿವೇಶವು ನಿರ್ಮಾಣವಾದಂತೆ ಗೋಚರಿಸುವುದು. ಕಾಲವೂ ಇಂತಹ ಮಹತ್ತ್ವದ ಘಟ್ಟವನ್ನು ಗ್ರಹಗಳ ಮೂಲಕ ತಿಳಿಸುತ್ತದೆ.
ಇಲ್ಲಿ ಯಾರು ಬರುತ್ತಾರೆ ಎನ್ನುವುದಕ್ಕಿಂತ ಅಂದಿನ ಸೂರ್ಯೋದಯದ ಗ್ರಹಗತಿ ಏನನ್ನು ಹೇಳುತ್ತದೆ ಎನ್ನುವುದನ್ನು ಗಮಿಸಬೇಕಿದೆ.
ಇದನ್ನೂ ಓದಿ: Amit Shah Horoscope: ಅಮಿತ್ ಶಾ ಪ್ರಧಾನ ಮಂತ್ರಿ ಹುದ್ದೆ ಆಕಾಂಕ್ಷಿಯೇ?
ಒಂದು ವಾರವೂ ಮಂಗಳವಾರ. ಅದರ ಜೊತೆ ಕುಜನ ಪ್ರಾಬಲ್ಯವು ಉಳಿದ ಗ್ರಹಗಳಿಗಿಂತ ಹೆಚ್ಚಿದೆ. ಸ್ವಕ್ಷೇತ್ರ ಹಾಗೂ ವರ್ಗೋತ್ತಮ ನವಾಂಶದಲ್ಲಿ ಇರುವ ಕಾರಣ ಕುಜನ ಸುತ್ತ ಫಲವು ನಿರ್ಣಯವಾಗುವುದು.
ಇದನ್ನೂ ಓದಿ: Narendra Modi Horoscope: ನರೇಂದ್ರ ಮೋದಿಗೆ ಮೂರನೇ ಅವಧಿಗೆ ಪ್ರಧಾನಿ ಹುದ್ದೆ ನಿಶ್ಚಿತ; ಇದು ಅತ್ಯಂತ ಕಠಿಣ ಸವಾಲುಗಳ ಸಮಯ
ಮಂಗಳವಾರ: ಮತ ಎಣಿಕೆ ಮಂಗಳವಾರವಾಗಲಿದೆ. ಅಂದರೆ ಕುಜನ ವಾರ. ಕುಜನು ಮೇಷದಲ್ಲಿ ಇದ್ದಾನೆ. ಅದು ಅವನ ಸ್ವಕ್ಷೇತ್ರ. ಅವನ ಜೊತೆ ಚಂದ್ರನ ಆಗಮನವಾಗಿದೆ. ಕುಜ – ಮಂಗಳ ಯೋಗ ಎನ್ನುವುದು ಪ್ರಸಿದ್ಧ ಯೋಗ. ಈ ಯೋಗದಲ್ಲಿ ಜನಿಸಿದ ಸ್ತ್ರೀ ಸುಮಂಗಲಿಯಾಗಿಯೇ ಬದುಕನ್ನು ಕಳೆಯುತ್ತಾಳೆ ಎನ್ನುವುದು. ಕುಜನೆಂದರೆ ಭೂಮಿ ಆತನಿಂದ ಭೂಮಿಯ ಲಾಭವಾಗುವುದು. ಮತ್ತೂ ಒಂದು ವಿಶೇಷವೆಂದರೆ ಕ್ರೋಧಿ ಸಂವತ್ಸರ ಆರಂಭವಾಗಿದ್ದೂ ಇದೇ ಮಂಗಳವಾರದಿಂದ. ಅಂದರೆ ಈ ವರ್ಷದ ಅಧಿಪತಿ ಕುಜ, ಅಂದರೆ ಅಂಗಾರಕ. ಕುಜನು ಚತುರ್ಥ, ಸಪ್ತಮ ಮತ್ತು ಅಷ್ಟಮ ಸ್ಥಾನದ ಮೇಲೆ ಪೂರ್ಣದೃಷ್ಟಿ ಇರುವುದು. ಹಾಗಾಗಿ ಮೇಷ ರಾಶಿಯಲ್ಲಿರುವ ಕುಜನು ವೃಶ್ಚಿಕ ರಾಶಿಯನ್ನು ನೋಡುವನು.
ಇಂದಿನ ಲಗ್ನ ವೃಷಭ
ನಾಲ್ಕನೇ ತಾರೀಖಿನ ಆರಂಭವಾಗುವುದು ವೃಷಭ ಲಗ್ನದಿಂದ. ವೃಷಭದಲ್ಲಿಯೇ ಸೂರ್ಯ, ಬುಧ, ಶುಕ್ರ ಹಾಗೂ ಗುರು ಇರುವರು. ಚುನಾವಣೆಯಲ್ಲಿ ಗೆಲ್ಲುವ ಪಕ್ಷವು ಮಿತ್ರಪಕ್ಷಗಳ ಜೊತೆ ೪೦೦ ಸ್ಥಾನವನ್ನು ಗೆಲ್ಲುವ ಸೂಚನೆ. ವೃಷಭ ಸ್ಥಾನದಿಂದ ಸಪ್ತಮ ಸ್ಥಾನ ವೃಶ್ಚಿಕ. ಸಪ್ತಮವು ಪತ್ನಿಸ್ಥಾನವೂ ಆಗಿದೆ. ಭೂಮಿಯನ್ನು ಸ್ತ್ರೀಗೆ ಹೋಲಿಸಿದ್ದಾರೆ. ಹಾಗಾಗಿ ಭೂಮಿಯ ಲಾಭವೂ ಆಗುವುದು.
ಶತ್ರು ನಾಶ
ವೃಶ್ಚಿಕ ರಾಶಿಗೆ ಷಷ್ಠದಲ್ಲಿ ಕುಜನಿದ್ದಾನೆ. ಜೊತೆಗೆ ಚಂದ್ರನೂ ಇದ್ದಾನೆ. ಕುಜನು ಪುರುಷಗ್ರಹ. ಚಂದ್ರ ಸ್ತ್ರೀ. ಇರುವಂತಹ ಸ್ಥಾನ ಶತ್ರುಸ್ಥಾನ. ಹಾಗಾಗಿ ಸ್ತ್ರೀಶತ್ರುಗಳು ಪುರುಷ ಶತ್ರುಗಳ ನಿರ್ನಾಮದ ಸೂಚನೆ ಇದು.
ಆಯ್ಕೆಯಲ್ಲಿ ಗೊಂದಲ
ಇನ್ನು ಕುಜನು ಸ್ವಕ್ಷೇತ್ರದಲ್ಲಿ ಇದ್ದು ದ್ವಾದಶ ಭಾವದಲ್ಲಿ ಇರುವ ಕಾರಣ ಆಧಿಪತ್ಯದ ವಿಚಾರದಲ್ಲಿ ಗೊಂದಲವಿರುವುದು. ಸೂಕ್ತ ನಿರ್ಧಾರವನ್ನು ಬೇಗ ಪಡೆಯಲಾಗದು.
ನಕ್ಷತ್ರ ಭರಣೀ
ಈ ನಕ್ಷತ್ರದಲ್ಲಿ ಜನಿಸಿದವರು ಧರಣಿಯನ್ನು ಆಳುವರು ಎಂಬ ಮಾತಿಗೆ. ಅಷ್ಟೇ ಅಲ್ಲದೇ ಈ ನಕ್ಷತ್ರದವರು ಒಂದು ನಿರ್ಧಾರವನ್ನು ಮಾಡಿದ ಅನಂತರ ಬದಲಾವಣೆ ಮಾಡಲಾರರು. ನಿಶ್ಚಯಾತ್ಮಕ ಬುದ್ಧಿ ಇರುವುದು. ಮತ್ತೆ ಹಿಡಿದ ಕಾರ್ಯವನ್ನು ಮುಗಿಯುವವರೆಗೆ ಬಿರಲಾರರು.
ಹೀಗೆ ಒಂದು ಉತ್ತಮ ದಿನವು ಚುನಾವಣೆಯ ಫಲಿತಾಂಶವನ್ನು ಹೇಳುವುದಾಗಿದೆ. ಒಳ್ಳೆಯ ಆಡಳಿತ ಇರಲಿದೆ.
ಲೋಹಿತ ಹೆಬ್ಬಾರ್ – 8762924271 (what’s app only)
Published On - 10:47 pm, Sun, 2 June 24