ರಾಜ್ಯದಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿದೆ: ಮಾಸ್ಕ್​ ಕಡ್ಡಾಯ ಮಾಡುವಂತೆ ತಾಂತ್ರಿಕ ಸಮಿತಿ ಸಲಹೆ

| Updated By: ವಿವೇಕ ಬಿರಾದಾರ

Updated on: Jun 27, 2022 | 3:42 PM

ರಾಜ್ಯದಲ್ಲಿ ದಿನೇದಿನೆ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆ ಮಾಸ್ಕ್​ ಧರಿಸದಿದ್ದರೆ ದಂಡ ವಿಧಿಸಲು ಸರ್ಕಾರಕ್ಕೆ ಕೊರೊನಾ ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸು ಮಾಡಿದೆ.

ರಾಜ್ಯದಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿದೆ: ಮಾಸ್ಕ್​ ಕಡ್ಡಾಯ ಮಾಡುವಂತೆ ತಾಂತ್ರಿಕ ಸಮಿತಿ ಸಲಹೆ
ಮಾಸ್ಕ್
Follow us on

ಬೆಂಗಳೂರು: ರಾಜ್ಯದಲ್ಲಿ ದಿನೇದಿನೆ ಕೊರೊನಾ (Covid) ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆ ಮಾಸ್ಕ್ (Mask)​ ಧರಿಸದಿದ್ದರೆ ದಂಡ (Fine) ವಿಧಿಸಲು ಸರ್ಕಾರಕ್ಕೆ (Government) ಕೊರೊನಾ ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸು ಮಾಡಿದೆ. ಮಾಸ್ಕ್​ ದಂಡದ ಬಗ್ಗೆ ಈ ವಾರದಿಂದಲೇ ಜಾರಿಗೆ ಬರುವ ನಿರೀಕ್ಷೆ ಇದೆ. ಆರೋಗ್ಯ ಇಲಾಖೆ ವರದಿ ಸಂಜೆ ವೇಳೆಗೆ ಸರ್ಕಾರಕ್ಕೆ ತಲುಪಲಿದೆ. ವರದಿ ಸಲ್ಲಿಸಿದ ನಂತರ ಮಾಸ್ಕ್​ ಧರಿಸದಿದ್ದರೆ ದಂಡದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ದಂಡದ ಪ್ರಸ್ತಾವನೆ ಕುರಿತು ಸರ್ಕಾರದ ಮಟ್ಟದಲ್ಲಿ ಸಭೆ ನಡೆದಿದ್ದು, ಸಭೆ ಬಳಿಕ ಮಾಸ್ಕ್ ದಂಡದ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಆರೋಗ್ಯ ‌ಇಲಾಖೆಯ ಆಯುಕ್ತ ಡಿ.ರಂದೀಪ್ ಹೇಳಿದ್ದಾರೆ.