ಕಾರು ನಿಲ್ಲಿಸಿ ಅಕ್ರಮವಾಗಿ ಫೈನ್ ಹಾಕಿದ್ದ ಹಲಸೂರು ಗೇಟ್ ಎ.ಎಸ್.ಐ ಮತ್ತು ಹೆಡ್‌ ಕಾನ್ಸ್‌ಟೇಬಲ್ ಸಸ್ಪೆಂಡ್

ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣೆಯ ಮಹೇಶ್.ಡಿ.ಸಿ, ಎಎಸ್‌ಐ ಮತ್ತು ಗಂಗಾಧರಪ್ಪ, ಹೆಚ್‌ಸಿ 9813 ರವರುಗಳನ್ನು ಕರ್ತವ್ಯದಿಂದ ಅಮಾನತ್ತುಗೊಳಿಸಿ, ಶಿಸ್ತು ಕ್ರಮ ಜರುಗಿಸಲಾಗಿದೆ.

ಕಾರು ನಿಲ್ಲಿಸಿ ಅಕ್ರಮವಾಗಿ ಫೈನ್ ಹಾಕಿದ್ದ ಹಲಸೂರು ಗೇಟ್  ಎ.ಎಸ್.ಐ ಮತ್ತು ಹೆಡ್‌ ಕಾನ್ಸ್‌ಟೇಬಲ್ ಸಸ್ಪೆಂಡ್
ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣೆ
Follow us
TV9 Web
| Updated By: ಆಯೇಷಾ ಬಾನು

Updated on:Jun 27, 2022 | 4:48 PM

ಬೆಂಗಳೂರು: ತಪಾಸಣೆ ನೆಪದಲ್ಲಿ ಹೊರರಾಜ್ಯಗಳ ವಾಹನಗಳ ಚಾಲಕರುಗಳಿಂದ ಕೇವಲ ದಾಖಲಾತಿ ಪರಿಶೀಲನೆಗಾಗಿ ವಾಹನ ನಿಲ್ಲಿಸಿ ಅಕ್ರಮ ಹಣ ಸಂಗ್ರಹಿಸುತ್ತಿದ್ದ ಹಿನ್ನೆಲೆ ಎ.ಎಸ್.ಐ ಮತ್ತು ಹೆಡ್‌ ಕಾನ್ಸ್‌ಟೇಬಲ್ ಇಬ್ಬರನ್ನೂ ಅಮಾನತುಗೊಳಿಸಲಾಗಿದೆ. ಜೂನ್ 10ರಂದು ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣಾ( Ulsoor Gate Traffic Police Station) ಸರಹದ್ದಿನ ದೇವಾಂಗ ಜಂಕ್ಷನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ, ಪೊಲೀಸ್ ಸಿಬ್ಬಂದಿ ಮತ್ತು ಹೆಡ್‌ ಕಾನ್ಸ್‌ಟೇಬಲ್ ಇಬ್ಬರೂ ದಾಖಲಾತಿ ಪರಿಶೀಲಿಸುವುದಕ್ಕಾಗಿ ಕೇರಳದ ಸಂತೋಷ್ ಕುಮಾರ್‌ ಎಂಬುವರ ಕಾರನ್ನು ನಿಲ್ಲಿಸಿ, ಅವರ ಕಾರಿನಲ್ಲಿ ವಾಷ್ ಬೇಸಿನ್ ಇರುವ ಕಾರಣಕ್ಕಾಗಿ, ಕಾರನ್ನು ಸೀಜ್ ಮಾಡುವುದಾಗಿ ಹೇಳಿ 20 ಸಾವಿರ ದಂಡದ ಮೊತ್ತವನ್ನು ಕೋರ್ಟ್‌ ನಲ್ಲಿ ಪಾವತಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಆಗ ಸಂತೋಷ್, ಕೋರ್ಟ್ಗೆ ಹೋದರೆ 20 ಸಾವಿರ ಕಟ್ಟಬೇಕಾಗುತ್ತೆ ಎಂದು ಯಾವುದೇ ರಸೀದಿಯನ್ನು ನೀಡದೆ 2,500 ರೂ ನೀಡಿದ್ದಾರೆ. ಈ ದೂರನ್ನು ಈ-ಮೇಲ್ ಮೂಲಕ ಹಿರಿಯ ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಇನ್ನು ಈ ಸಂಬಂಧ ವಿಚಾರಣೆಯನ್ನು ಕೈಗೊಂಡು ಪರಿಶೀಲಿಸಿದ್ದು, ದೇವಾಂಗ ಜಂಕ್ಷನ್‌ನಲ್ಲಿ ಜೂನ್ 19 ರಂದು ಮಹೇಶ್‌, ಡಿ.ಸಿ. ಎಎಸ್‌ಐ ಮತ್ತು ಅವರ ಸಹಾಯಕ ಗಂಗಾಧರಪ್ಪ, ಹೆಚ್.ಸಿ. 9813 ಕರ್ತವ್ಯಕ್ಕೆ ನೇಮಕ ಮಾಡಲಾಗಿರುತ್ತದೆ. ವಿಚಾರಣಾ ಕಾಲದಲ್ಲಿ ಸದರಿಯವರುಗಳು ಕರ್ತವ್ಯದ ಅವಧಿಯಲ್ಲಿ ಕೇವಲ ದಾಖಲಾತಿ ಪರಿಶೀಲನೆಗಾಗಿ ವಾಹನವನ್ನು ನಿಲ್ಲಿಸಿದ್ದು, ಬಾಡಿವೋರ್ನ್ ಕ್ಯಾಮರಾ ಧರಿಸದೆ ಕರ್ತವ್ಯ ನಿರ್ವಹಿಸುತ್ತಿದ್ದು, ಅರ್ಜಿದಾರರಿಂದ ಅಕ್ರಮವಾಗಿ ರೂ. 2500/- ಗಳನ್ನು ಪಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಇದನ್ನೂ ಓದಿ: ಬಸವಣ್ಣನಿಗೆ ನೀಡಿದಷ್ಟೇ ಪ್ರಾಮುಖ್ಯತೆಯನ್ನು ಕೆಂಪೇಗೌಡರಿಗೆ ನೀಡಿದ ಮುಖ್ಯಮಂತ್ರಿಯೆಂದರೆ ಯಡಿಯೂರಪ್ಪ: ಶ್ರೀ ನಂಜಾವಧೂತ ಸ್ವಾಮೀಜಿ

ವಿಚಾರಣಾ ಕಾಲದಲ್ಲಿ ಕಂಡು ಬಂದ ಅಂಶಗಳನ್ನು ಆಧರಿಸಿ, ಸದರಿಯವರು ಅಕ್ರಮ ಎಸಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿ ಅತೀವ ನಿರ್ಲಕ್ಷ್ಯತೆ, ಬೇಜವಾಬ್ದಾರಿತನ ಹಾಗೂ ದುರ್ನಡತೆ ಪ್ರದರ್ಶಿಸಿರುವ ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣೆಯ ಮಹೇಶ್.ಡಿ.ಸಿ, ಎಎಸ್‌ಐ ಮತ್ತು ಗಂಗಾಧರಪ್ಪ, ಹೆಚ್‌ಸಿ 9813 ರವರುಗಳನ್ನು ಕರ್ತವ್ಯದಿಂದ ಅಮಾನತ್ತುಗೊಳಿಸಿ, ಶಿಸ್ತು ಕ್ರಮ ಜರುಗಿಸಲಾಗಿದೆ. ಈ ಬಗ್ಗೆ ಜಂಟಿ ಪೊಲೀಸ್ ಆಯುಕ್ತರು ಡಾ ಬಿ.ಆರ್. ರವಿಕಾಂತೇಗೌಡ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಇದನ್ನೂ ಓದಿ: IPS transfer: ಐಪಿಎಸ್ ಅಧಿಕಾರಿಗಳ ಭಾರೀ ವರ್ಗಾವಣೆ, ಸಂಜೀವ್ ಪಾಟೀಲ್ ಬೆಳಗಾವಿ ಎಸ್​ಪಿ, ಹಾಸನ ಎಸ್​ಪಿ ಎತ್ತಂಗಡಿ

Published On - 3:55 pm, Mon, 27 June 22

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ