ಜನವರಿ 3 ರಿಂದ 15-18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ಪ್ರಾರಂಭ; ಮಕ್ಕಳ ವ್ಯಾಕ್ಸಿನೇಷನ್‌ ಕುರಿತು ಮಾರ್ಗಸೂಚಿ ಬಿಡುಗಡೆ

| Updated By: preethi shettigar

Updated on: Dec 31, 2021 | 11:20 AM

ಇನ್ನು ಜನವರಿ 10 ರಿಂದ ಲಸಿಕೆಯ ಮತ್ತೊಂದು ಡೋಸ್ ಲಭ್ಯವಾಗುತ್ತಿದ್ದು, ಎರಡು ಡೋಸ್‌ಗಳನ್ನು ಪಡೆದಿರುವ ಆರೋಗ್ಯ ಕಾರ್ಯಕರ್ತರು, ಫ್ರಂಟ್‌ಲೈನ್ ವರ್ಕರ್ಸ್​ಗೂ ಲಸಿಕೆ ನೀಡಲಾಗುತ್ತಿದೆ. ಆರೋಗ್ಯ ಇಲಾಖೆ ಆದ್ಯತೆ ಮೇರೆಗೆ ಲಸಿಕೆ ನೀಡಲಿವೆ.

ಜನವರಿ 3 ರಿಂದ 15-18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ಪ್ರಾರಂಭ; ಮಕ್ಕಳ ವ್ಯಾಕ್ಸಿನೇಷನ್‌ ಕುರಿತು ಮಾರ್ಗಸೂಚಿ ಬಿಡುಗಡೆ
ಸಾಂಕೇತಿಕ ಚಿತ್ರ
Follow us on

ಬೆಂಗಳೂರು: ರಾಷ್ಟ್ರೀಯ ಆರೋಗ್ಯ ಅಭಿಯಾನವು ಮಕ್ಕಳ ವ್ಯಾಕ್ಸಿನೇಷನ್‌ (Vaccination) ಕುರಿತು ಮಾರ್ಗಸೂಚಿ ಬಿಡುಗಡೆ ಮಾಡಿದೆ. ಜನವರಿ 3 ರಿಂದ 15-18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ಆರಂಭವಾಗುತ್ತಿದ್ದು, ಈ ನಿಟ್ಟಿನಲ್ಲಿ ಪಾಲಿಸಬೇಕಾದ ಕೆಲವು ನಿಯಮಗಳ ಕುರಿತು ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಎಲ್ಲಾ ಫಲಾನುಭವಿಗಳಿಗೆ “ಕೋವ್ಯಾಕ್ಸಿನ್” ಮಾತ್ರ ನೀಡಲಾಗುತ್ತದೆ ಎಂದು ಈ ಮೂಲಕ ತಿಳಿಸಲಾಗಿದೆ.

ಇನ್ನು ಜನವರಿ 10 ರಿಂದ ಲಸಿಕೆಯ ಮತ್ತೊಂದು ಡೋಸ್ ಲಭ್ಯವಾಗುತ್ತಿದ್ದು, ಎರಡು ಡೋಸ್‌ಗಳನ್ನು ಪಡೆದಿರುವ ಆರೋಗ್ಯ ಕಾರ್ಯಕರ್ತರು, ಫ್ರಂಟ್‌ಲೈನ್ ವರ್ಕರ್ಸ್​ಗೂ ಲಸಿಕೆ ನೀಡಲಾಗುತ್ತಿದೆ. ಆರೋಗ್ಯ ಇಲಾಖೆ ಆದ್ಯತೆ ಮೇರೆಗೆ ಲಸಿಕೆ ನೀಡಲಿವೆ. 2 ನೇ ಡೋಸ್ ಪಡೆದ ದಿನಾಂಕದಿಂದ 39 ವಾರಗಳು ಕಳೆದ ಬಳಿಕ 3 ನೇ ಡೋಸ್ ನೀಡಲಾಗುತ್ತದೆ. ಅಂದರೆ ಎರಡನೇ ಡೋಸ್ ಪಡೆದು 9 ತಿಂಗಳ ಬಳಿಕ ಮೂರನೇ ಡೋಸ್ ಪಡೆಯಬೇಕು ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನ ತಿಳಿಸಿದೆ.

ಈಗಾಗಲೇ 2 ಡೋಸ್​ ಲಸಿಕೆಯನ್ನು ಪಡೆದಿರುವ ಇತರ ಆರೋಗ್ಯ ಸಮಸ್ಯೆ ಇರುವವರಿಗೂ ಮೂರನೇ ಡೋಸ್​ ನೀಡಲಾಗುತ್ತದೆ. ಆದರೆ ಮೂರನೇ ಡೋಸ್​ ಲಸಿಕೆ ವೈದ್ಯರ ಸಲಹೆಯ ಮೇರೆಗೆ ನೀಡಬೇಕು ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನ ಸ್ಪಷ್ಟಪಡಿಸಿದೆ.

ಇವರೆಲ್ಲಾ ಸರ್ಕಾರದಿಂದ ನೀಡುವ ಉಚಿತ ಲಸಿಕೆಗೆ ಅರ್ಹರಾಗಿದ್ದಾರೆ. ಫಲಾನುವಿಗಳು Co-WIN ಪೋರ್ಟಲ್​ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಆನ್‌ಲೈನ್ ಮತ್ತು ಆನ್‌ಸೈಟ್​ನಲ್ಲೂ ನೋಂದಣಿ ಮತ್ತು ಅಪಾಯಿಂಟ್ಮೆಟ್ ಪಡೆಯಬಹುದು ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನ ಹೇಳಿದೆ.

ಮೂರನೇ ಡೋಸ್‌ ಪಡೆಯಲು ಅರ್ಹ ಹಿರಿಯ ನಾಗರಿಕರಿಗೆ ಸಂದೇಶ ಕಳಿಸಲಿದೆ ಕೇಂದ್ರ
ಜನವರಿ 10 ರಿಂದ ಪ್ರಾರಂಭವಾಗುವ ಕೊವಿಡ್-19ನ ಮುಂಜಾಗರೂಕತೆ ಲಸಿಕೆ ಡೋಸ್ ತೆಗೆದುಕೊಳ್ಳುವುದನ್ನು ನೆನಪಿಸಲು ಅರ್ಹ ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರವು ಸಂದೇಶ  ಕಳುಹಿಸುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಗುರುವಾರ ತಿಳಿಸಿದೆ. ಹೊಸ ಒಮಿಕ್ರಾನ್  ರೂಪಾಂತರದ ಪ್ರಕರಣಗಳಲ್ಲಿ ಭಾರಿ ಏರಿಕೆ ಕಂಡುಬಂದಿರುವುದರಿಂದ ದೇಶವು ದೈನಂದಿನ ಕೊವಿಡ್ ಸೋಂಕುಗಳಲ್ಲಿ ತೀವ್ರ ಹೆಚ್ಚಳವನ್ನು ಎದುರಿಸುತ್ತಿರುವ ಮಧ್ಯೆ ಇದು ಬಂದಿದೆ. ಕೊವಿಡ್-19 ಲಸಿಕೆಯ ಮುಂಜಾಗರೂಕತೆ ಡೋಸ್ ಪ್ರಾಥಮಿಕವಾಗಿ ಸೋಂಕು, ಆಸ್ಪತ್ರೆಗೆ ದಾಖಲು ಮತ್ತು ಸಾವಿನ ತೀವ್ರತೆಯನ್ನು ತಗ್ಗಿಸಲು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ಡಿಸೆಂಬರ್ 25 ರಂದು ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ, ಒಮಿಕ್ರಾನ್ ಉಲ್ಬಣದ ಹಿನ್ನೆಲೆಯಲ್ಲಿ ಮಕ್ಕಳಿಗೆ ಲಸಿಕೆ ಮತ್ತು ವಯಸ್ಕರಿಗೆ ಬೂಸ್ಟರ್ ಡೋಸ್‌ಗಳ ಮುಂದಿನ ಹಂತಗಳನ್ನು ಘೋಷಿಸಿದ್ದರು.

“ಜನವರಿ 10 ರಿಂದ ಭಾರತವು ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರಿಗೆ ‘ಮುಂಜಾಗರೂಕತೆ’ ಲಸಿಕೆ ಡೋಸ್ ನೀಡಲು ಪ್ರಾರಂಭಿಸುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ. ಕೇಂದ್ರದ ಪ್ರಕಾರ, ದೇಶದ ವಯಸ್ಕ ಜನಸಂಖ್ಯೆಯ ಸರಿಸುಮಾರು 90 ಪ್ರತಿಶತದಷ್ಟು ಜನರು ಕೊವಿಡ್19 ವಿರುದ್ಧ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ.

“ಭಾರತದ ವಯಸ್ಕ ಜನಸಂಖ್ಯೆಯ ಸರಿಸುಮಾರು 90 ಪ್ರತಿಶತದಷ್ಟು ಜನರು ಕೊವಿಡ್-19 ವಿರುದ್ಧ ಮೊದಲ ಡೋಸ್‌ ಲಸಿಕೆ ಹಾಕಿದ್ದಾರೆ. ಸರಾಸರಿಯಾಗಿ, ಭಾರತವು ಕಳೆದ ವಾರ ದಿನಕ್ಕೆ 8,000 ಕ್ಕಿಂತ ಹೆಚ್ಚು ಪ್ರಕರಣಗಳನ್ನು ವರದಿ ಮಾಡಿದೆ. ಒಟ್ಟಾರೆ ಪ್ರಕರಣದ ಧನಾತ್ಮಕತೆಯ ಪ್ರಮಾಣವು 0.92 ಶೇಕಡಾ. ಡಿಸೆಂಬರ್ 26 ರಿಂದ ನಂತರ, ದೇಶವು ಪ್ರತಿದಿನ 10,000 ಪ್ರಕರಣಗಳನ್ನು ವರದಿ ಮಾಡುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಇದನ್ನೂ ಓದಿ:
ಭಾರತದಲ್ಲಿ ಕೊರೊನಾ ಲಸಿಕೆ 3ನೇ ಡೋಸ್​ಗಾಗಿ ಕಾರ್ಬೆವ್ಯಾಕ್ಸ್​ ಬಳಕೆ?-3ನೇ ಹಂತದ ಕ್ಲಿನಕಲ್​ ಪ್ರಯೋಗಕ್ಕೆ ಡಿಸಿಜಿಐ ಅನುಮೋದನೆ

ಒಮಿಕ್ರಾನ್​ ಒಂದು ಪ್ರಾಕೃತಿಕ ಲಸಿಕೆ, ಇದು ಕೊವಿಡ್​ 19ನ ಅಂತಿಮ ಹಂತ: ಬೂಸ್ಟರ್​ ಡೋಸ್​ ಬೇಡವೆಂದ ಡಾ. ಅಮಿತಾವ್​ ಬ್ಯಾನರ್ಜಿ

Published On - 11:18 am, Fri, 31 December 21