ಜಿಲ್ಲಾಧಿಕಾರಿಗಳಾಗಿ ಬಾಸಿಸಂ ಬಿಡಿ: ತುಂಬಾ ವಿನಯತೆ, ಎಚ್ಚರಿಕೆಯಿಂದ ಕೆಲಸ ಮಾಡಿ -ಸಿಎಂ ಬೊಮ್ಮಾಯಿ ತಾಕೀತು

Karnataka CM Basavaraj Bommai: ಜಿಲ್ಲಾಧಿಕಾರಿಗಳು ತಮ್ಮ ಕೆಳ ಹಂತದ ಅಧಿಕಾರಿಗಳನ್ನು ಹಿಡಿತದಲ್ಲಿಟ್ಟುಕೊಂಡಿರಬೇಕು ಎಂಬುದನ್ನು ಬಿಡಿ. ವಿವೇಚನೆ ಬಳಸಿ ಕೆಲಸ ಮಾಡಿ. ತುಂಬಾ ವಿನಯತೆ, ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಸಮಂಜಸ ರೀತಿಯಲ್ಲಿ ಕೆಲಸ ಮಾಡದ ಡಿಸಿಗಳಿಗೆ ಸಿಎಂ ಬೊಮ್ಮಾಯಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಜಿಲ್ಲಾಧಿಕಾರಿಗಳಾಗಿ ಬಾಸಿಸಂ ಬಿಡಿ: ತುಂಬಾ ವಿನಯತೆ, ಎಚ್ಚರಿಕೆಯಿಂದ ಕೆಲಸ ಮಾಡಿ -ಸಿಎಂ ಬೊಮ್ಮಾಯಿ ತಾಕೀತು
ಜಿಲ್ಲಾಧಿಕಾರಿಗಳಾಗಿ ಬಾಸಿಸಂ ಬಿಡಿ, ಮ್ಯಾಜಿಸ್ಟ್ರೇಟ್ ತರ ಕೆಲಸ ಮಾಡಬೇಡಿ: ತುಂಬಾ ವಿನಯತೆ, ಎಚ್ಚರಿಕೆ ಇರಲಿ- ಸಿಎಂ ಬೊಮ್ಮಾಯಿ ತಾಕೀತು
Updated By: ಸಾಧು ಶ್ರೀನಾಥ್​

Updated on: Dec 31, 2021 | 1:33 PM

ಬೆಂಗಳೂರು: ವಿಧಾನಸೌಧದಲ್ಲಿ ಸಿಎಂ ನೇತೃತ್ವದ ನಡೆದ ಡಿಸಿ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲಾಧಿಕಾರಿಗಳ ವಿರುದ್ಧ ಗರಂ ಆಗಿದ್ದು, ನಿಮ್ಮ ಜವಾಬ್ದಾರಿ ಅಧಿಕಾರವನ್ನು ಚಲಾಯಿಸುವುದಲ್ಲ. ಜಿಲ್ಲಾಧಿಕಾರಿಗಳು ಬಾಸ್ ಎಂಬುವುದನ್ನು ಬಿಟ್ಟುಬಿಡಿ. ಮ್ಯಾಜಿಸ್ಟ್ರೇಟ್‌ಗಳ ರೀತಿ ಕೆಲಸ ಮಾಡಬೇಡಿ ಎಂದು ರಾಜ್ಯದ ಜಿಲ್ಲಾಧಿಕಾರಿಗಳಿಗೆ ಕಿವಿಮಾತು ಹೇಳಿದ್ದಾರೆ.

ಮುಂದುವರಿದು ಮಾತನಾಡಿರುವ ಸಿಎಂ ಬೊಮ್ಮಾಯಿ ಕೆಳ ಹಂತದ ಅಧಿಕಾರಿಗಳನ್ನು ಹಿಡಿತದಲ್ಲಿಟ್ಟುಕೊಂಡಿರಬೇಕು ಎಂಬುದನ್ನು ಬಿಡಿ. ವಿವೇಚನೆ ಬಳಸಿ ಕೆಲಸ ಮಾಡಿ. ತುಂಬಾ ವಿನಯತೆ, ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಸಾಮಾನ್ಯರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಿ ಎಂದು ಸಮಂಜಸ ರೀತಿಯಲ್ಲಿ ಕೆಲಸ ಮಾಡದ ಡಿಸಿಗಳಿಗೆ ಸಿಎಂ ಬೊಮ್ಮಾಯಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಜಿಲ್ಲಾ ಮಟ್ಟದ ಆಡಳಿತಾತ್ಮಕ ವಿಚಾರಗಳು, ಯೋಜನೆಗಳ ಅನುಷ್ಠಾನದ ಬಗ್ಗೆ ಡಿಸಿಗಳ ಜತೆ ಸಿಎಂ ಬೊಮ್ಮಾಯಿ ನೇತೃತ್ವದ ಸಭೆಯಲ್ಲಿ ದೀರ್ಘ ಚರ್ಚೆ ನಡೆಯಿತು. ಈ ಸಂಬಂಧ ಬರುವ ದಿನಗಳಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗುವುದು. ಜನರೆಡೆಗೆ ಆಡಳಿತವನ್ನು ಇನ್ನಷ್ಟು ಹತ್ತಿರ ಕೊಂಡೊಯ್ಯುವ ಕೆಲಸ ಮಾಡಲು ಹೊಸ ಪ್ರಯತ್ನ ನಡೆಯಲಿದೆ ಎಂದು ಹೇಳೀದರು.

ಪರಿಹಾರವನ್ನ ಸರಿಯಾಗಿ ವಿಲೇವಾರಿ ಮಾಡದ ಜಿಲ್ಲಾಧಿಕಾರಿಗಳಿಗೆ ತರಾಟೆ ತೆಗೆದುಕೊಂಡು ಸಿಎಂ ಬೊಮ್ಮಾಯಿ ಪರಿಹಾರ ಆ್ಯಪ್ ನಲ್ಲಿ ಅಪ್ ಲೋಡ್ ಮಾಡಿದ 48 ಗಂಟೆಗಳ ಒಳಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಸೂಚಿಸಿದರು. ಜಿಲ್ಲಾಧಿಕಾರಿಗಳ ಸಭೆಯಲ್ಲಿ ಕೊವಿಡ್ ನಿರ್ವಹಣೆ ಸಂಬಂಧ ಕೊರೊನಾ ಎದುರಿಸಲೂ ಸಹ ಪೂರ್ವ ತಯಾರಿಗೆ ಸೂಚನೆ ನೀಡಿದರು. 3ನೇ ಅಲೆಯಲ್ಲಿ ಹೆಚ್ಚು ಅನಾಹುತಗಳಿಗೆ ಅವಕಾಶ ನೀಡಬೇಡಿ. ಪರಿಸ್ಥಿತಿಗೆ ಅನುಗುಣವಾಗಿ ಕಾಲಕಾಲಕ್ಕೆ ಒಳ್ಳೇ ನಿರ್ಧಾರ ಮಾಡಿ ಎಂದು ಡಿಸಿಗಳಿಗೆ ಸಿಎಂ ಬೊಮ್ಮಾಯಿ ಸೂಚಿಸಿದರು.

ಇದನ್ನು ಓದಿ:
Karnataka BJP: ಬಿಜೆಪಿ ಪಕ್ಷದ ಮುಂಚೂಣಿ ನಾಯಕರಿಗೆ ತರಬೇತಿ, ಜನವರಿ 7-8 ನಂದಿ ಬೆಟ್ಟದಲ್ಲಿ ತರಬೇತಿ ಶಿಬಿರ

Published On - 12:08 pm, Fri, 31 December 21