Karnataka BJP: ಬಿಜೆಪಿ ಪಕ್ಷದ ಮುಂಚೂಣಿ ನಾಯಕರಿಗೆ ತರಬೇತಿ, ಜನವರಿ 7-8 ನಂದಿ ಬೆಟ್ಟದಲ್ಲಿ ತರಬೇತಿ ಶಿಬಿರ

Karnataka BJP: ಬಿಜೆಪಿ ಪಕ್ಷದ ಮುಂಚೂಣಿ ನಾಯಕರಿಗೆ ತರಬೇತಿ, ಜನವರಿ 7-8 ನಂದಿ ಬೆಟ್ಟದಲ್ಲಿ ತರಬೇತಿ ಶಿಬಿರ
Karnataka BJP: ಪಕ್ಷದ ಮುಂಚೂಣಿ ನಾಯಕರಿಗೆ ಬಿಜೆಪಿ ತರಬೇತಿ, ಜನವರಿ 7-8 ನಂದಿ ಬೆಟ್ಟದಲ್ಲಿ ತರಬೇತಿ ಶಿಬಿರ

Nandi Hills: ಬಿಜೆಪಿ ಸಚಿವರು ಮತ್ತು ರಾಜ್ಯ ಪದಾಧಿಕಾರಿಗಳಿಗೆ ಜನವರಿ 7 ಮತ್ತು 8 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದಲ್ಲಿ 2 ದಿನ ಕಾಲ ತರಬೇತಿ ಶಿಬಿರ ನಡೆಯಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಮತ್ತು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಭಾಗಿಯಾಗುವ ಸಾಧ್ಯತೆ ಇದೆ.

TV9kannada Web Team

| Edited By: sadhu srinath

Dec 31, 2021 | 11:46 AM

ಬೆಂಗಳೂರು: ವಿಧಾನಸಭೆ-ಲೋಕಸಭೆ ಸಾರ್ವತ್ರಿಕ ಚುನಾವಣೆಗಳು ಇನ್ನೇನು ಒಂದು ವರ್ಷದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಮತ್ತು ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷ ಈಗಾಗಲೇ ಚುನಾವಣಾ ಕಾರ್ಯಗಳಿಗೆ ಸಜ್ಜಾಗಿ ನಿಂತಿದೆ. ಪಕ್ಷದ ಮುಂಚೂಣಿ ನಾಯಕರಿಗೆ ಬಿಜೆಪಿ ತರಬೇತಿ ನೀಡಲು ನಿರ್ಧರಿಸಿದೆ. ಸಚಿವರು ಮತ್ತು ರಾಜ್ಯ ಪದಾಧಿಕಾರಿಗಳಿಗೆ ಜನವರಿ 7 ಮತ್ತು 8 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದಲ್ಲಿ ಎರಡು ದಿನಗಳ ಕಾಲ ತರಬೇತಿ ಶಿಬಿರ ನಡೆಯಲಿದೆ. ಪಕ್ಷ ಸಂಘಟನೆ ಮತ್ತು ಪಕ್ಷದ ಕಾರ್ಯ ಚಟುವಟಿಕೆಗಳ ಕುರಿತು ತರಬೇತಿ ಶಿಬಿರದಲ್ಲಿ ಸವಿಸ್ತಾರವಾಗಿ ಮನನ ನಡೆಯಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಭಾಗಿಯಾಗುವ ಸಾಧ್ಯತೆ ಇದೆ.

ಇತ್ತೀಚೆಗಿನ ಚುನಾವಣೆಗಳಲ್ಲಿನ ಸಾಧಾರಣ ಫಲಿತಾಂಶದ ಬೆನ್ನಲ್ಲೇ ಸಚಿವರು ಮತ್ತು ಪದಾಧಿಕಾರಿಗಳಿಗೆ ತರಬೇತಿ ನೀಡಲು ಬಿಜೆಪಿ ಮುಂದಾಗಿರುವುದು ಗಮನಾರ್ಹ. ಈ ಮಧ್ಯೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸಾಧಾರಣ ಪ್ರದರ್ಶನದ ಹಿನ್ನೆಲೆ ರಾಜ್ಯದ ಬಿಜೆಪಿ ನಾಯಕರು ಮೌನಕ್ಕೆ ಶರಣಾಗಿದ್ದಾರೆ. ಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡದ ನಾಯಕರು ಫಲಿತಾಂಶ ಬಂದು 1 ದಿನ ಕಳೆದರೂ ಫುಲ್ ಸೈಲೆಂಟ್ ಮೋಡ್​ನಲ್ಲಿದ್ದಾರೆ. ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕಟೀಲು ಸಹ ತುಟಿ ಪಿಟಿಕ್ ಎಂದಿಲ್ಲ.

ಇದನ್ನೂ ಓದಿ:

ಕಾಂಗ್ರೆಸ್​ನ ಮೇಕೆದಾಟು ಪಾದಯಾತ್ರೆಗೆ ಹಂಸಲೇಖ ಸಾಥ್​; 2 ಹಾಡು ಬರೆಯಲಿರುವ ‘ನಾದಬ್ರಹ್ಮ’

Follow us on

Related Stories

Most Read Stories

Click on your DTH Provider to Add TV9 Kannada