ಸರ್ಕಾರದ ಆದೇಶ ಉಲ್ಲಂಘಿಸಿ ಚಿಕ್ಕಬಳ್ಳಾಪುರ ರೆಸಾರ್ಟ್​ನಲ್ಲಿ ಮಸ್ತ್ ಪಾರ್ಟಿ; ಪೊಲೀಸ್ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಿಗಳ ಬಂಧನ

ಸರ್ಕಾರದ ಆದೇಶ ಉಲ್ಲಂಘಿಸಿ ಚಿಕ್ಕಬಳ್ಳಾಪುರ ರೆಸಾರ್ಟ್​ನಲ್ಲಿ ಮಸ್ತ್ ಪಾರ್ಟಿ; ಪೊಲೀಸ್ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಿಗಳ ಬಂಧನ
ಪೊಲೀಸ್ ಇನ್ಸ್ಪೆಕ್ಟರ್ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಿಗಳು

ವೈಟ್ ನಿರ್ವಾಣ ಜಡೇ ರೆಸಾರ್ಟ್ ಮಾಲೀಕ ಮತ್ತು ಸಹಚರರು ಚಿಕ್ಕಬಳ್ಳಾಪುರ ಇನ್ಸ್​ಪೆಕ್ಟರ್​ ಪ್ರಶಾಂತ್ ಎಂಬುವವರನ್ನ ಎಳೆದಾಡಿ ಹಲ್ಲೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.

TV9kannada Web Team

| Edited By: Apurva Kumar Balegere

Jan 08, 2022 | 5:10 PM


ಚಿಕ್ಕಬಳ್ಳಾಪುರ: ಕೊರೊನಾ (Coronavirus) ರೂಪಾಂತರಿ ಒಮಿಕ್ರಾನ್ (Omicron) ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಈ ಬಾರಿ ನ್ಯೂ ಇಯರ್ (New Year 2020) ಪಾರ್ಟಿಗೆ ನಿರ್ಬಂಧ ಹೇರಿದೆ. ಕೊರೊನಾ ವಿರುದ್ಧ ಹೋರಾಡಲು ಈ ನಿರ್ಬಂಧ ಅನಿವಾರ್ಯ. ಹೀಗಿದ್ದೂ ಕೆಲವರು ಮಾತ್ರ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ರೆಸಾರ್ಟ್​ನಲ್ಲಿ ಮಸ್ತ್ ಪಾರ್ಟಿ ಮಾಡಿದ್ದಾರೆ. ಅಲ್ಲದೇ ಪಾರ್ಟಿ ಬಗ್ಗೆ ಪ್ರಶ್ನಿಸಿದ ಪೊಲೀಸ್ ಇನ್ಸ್​ಪೆಕ್ಟರ್​ ಮೇಲೆಯೇ ಆರೋಪಿಗಳು ಹಲ್ಲೆಗೆ ಯತ್ನಿಸಿದ್ದಾರೆ. ಈ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿ ಬಳಿಯ ರೆಸಾರ್ಟ್​ನಲ್ಲಿ ನಡೆದಿದೆ.

ವೈಟ್ ನಿರ್ವಾಣ ಜಡೇ ರೆಸಾರ್ಟ್ ಮಾಲೀಕ ಮತ್ತು ಸಹಚರರು ಚಿಕ್ಕಬಳ್ಳಾಪುರ ಇನ್ಸ್​ಪೆಕ್ಟರ್​ ಪ್ರಶಾಂತ್ ಎಂಬುವವರನ್ನ ಎಳೆದಾಡಿ ಹಲ್ಲೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಅಗಲಗುರ್ಕಿ ಬಳಿಯ ರೆಸಾರ್ಟ್​ನಲ್ಲಿ ರಾಜಾರೋಷವಾಗಿ ಡಿಜೆ ಹಾಕಿಕೊಂಡು ಪಾರ್ಟಿ ಮಾಡಿದ್ದಾರೆ. ಜೊತೆಗೆ ಕುಡಿದ ಮತ್ತಿನಲ್ಲಿ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.

ಆರೋಪಿಗಳು ಅರೆಸ್ಟ್
ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಹೊಸ ವರ್ಷ ಆಚರಿಸಿ, ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ 8 ಆರೋಪಿಗಳನ್ನು ನಂದಿಗಿರಿಧಾಮ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅದ್ಧೂರಿ ಸೆಲೆಬ್ರೇಷನ್
ಇನ್ನು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕನ್ನಮಂಗಲ ಗ್ರಾಮದ ಟ್ರಿಕೆಂಟಾ ರೆಸಾರ್ಟ್‌ನಲ್ಲಿ ನಿಯಮಗಳನ್ನು ಉಲ್ಲಂಘಿಸಿ ಪಾರ್ಟಿ ಮಾಡಿದ್ದಾರೆ. ನೈಟ್ ಕರ್ಫ್ಯೂ ನಿಯಮ ಉಲ್ಲಂಘಿಸಿ ಅದ್ಧೂರಿಯಾಗಿ ಪಾರ್ಟಿ ಮಾಡಿದ್ದಾರೆ. ಸಾವಿರಾರು ಜನರನ್ನು ಸೇರಿಸಿ ಡಿಜೆ ಹಾಕಿ ಸೆಲೆಬ್ರೇಷನ್ ಮಾಡಿದ್ದಾರೆ. ಸ್ಥಳಕ್ಕೆ ರಾಮನಗರ ಎಸ್‌ಪಿ ಗಿರೀಶ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಟಿವಿ9ಗೆ ರಾಮನಗರ ಎಸ್‌ಪಿ ಎಸ್​ ಗಿರೀಶ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ

‘ಆರ್​ಆರ್​ಆರ್​’ ಬೆಂಗಳೂರು ಪ್ರೀ ರಿಲೀಸ್​ ಇವೆಂಟ್​ನಲ್ಲಿ ದಿಗ್ಗಜರು; ಸ್ಥಳ, ಸಮಯದ ಬಗ್ಗೆ ಇಲ್ಲಿದೆ ಮಾಹಿತಿ

ರಾಮನಲ್ಲಿಟ್ಟಿದ್ದ ಬೇಡಿಕೆಯನ್ನು ಪೂರೈಸಿದ ಕೃಷ್ಣ, ಗೋವರ್ಧನ ಬೆಟ್ಟಕ್ಕಿದೆ ರಾಮ-ಕೃಷ್ಣನ ಲಿಂಕ್

Follow us on

Related Stories

Most Read Stories

Click on your DTH Provider to Add TV9 Kannada