ಬೆಂಗಳೂರು: ಪರಿಸರ ಪ್ರೇಮಿಗಳು, ವಾಕಿಂಗ್ ಮಾಡುವವರು, ಜೋಗರ್ಸ್, ಫಿಟ್ನೆಸ್ ಪ್ರಿಯರು, ಸಾಕುಪ್ರಾಣಿ ಪ್ರಿಯರು, ಸೈಕ್ಲಿಸ್ಟ್ಗಳಿಗೆ ಹಾಟ್ ಫೇವರಿಟ್ ತಾಣವಾದ ಕಬ್ಬನ್ ಪಾರ್ಕ್ ಈಗ ಮತ್ತೊಂದು ಸ್ವರೂಪ ಪಡೆದಿದೆ. ಕಬ್ಬನ್ ಪಾರ್ಕ್ನ(Cubbon Park) ಹಚ್ಚ ಹಸಿರಿನ ಮಧ್ಯೆ ಕೂತು ಪ್ರಸ್ತಕ ಪ್ರೇಮಿಗಳು ಪುಸ್ತಕ ಓದುತ್ತಿದ್ದಾರೆ. ಎಲ್ಲೆಂದರಲ್ಲಿ ಪ್ರೇಮಿಗಳಿಂದ ತುಂಬಿ ಇರಿಸುಮುರಿಸು ಅನಿಸುತ್ತಿದ್ದ ಕಬ್ಬನ್ ಪಾರ್ಕ್ನಲ್ಲಿ ಪುಸ್ತಕ ಪ್ರಿಯರು ತಮ್ಮ ಇಷ್ಟದ ಬುಕ್ಗಳನ್ನು ಓದುತ್ತಾ ಕುಳಿತಿರುವುದನ್ನು ಇನ್ನು ಮುಂದೆ ಕಾಣಬಹುದು. ಇದಕ್ಕೆ ಕಬ್ಬನ್ ರೀಡ್ಸ್ ಕಾರಣ.
ಸ್ವ ಉದ್ಯೋಗಿ, ಹಾಗೂ ಕಬ್ಬನ್ ರೀಡ್ಸ್‌ನ ಕ್ರಿಯೇಟರ್ ಆಗಿರುವ ಹರ್ಷ ಸ್ನೇಹಾಂಶು ಎಂಬುವವರು ಮೊದಲ ಬಾರಿಗೆ ಕಬ್ಬರ್ ರೀಡ್ಸ್ ಎಂಬ ಕಾನ್ಸೆಪ್ಟ್ಗೆ ಜೀವ ನೀಡಿದ್ದಾರೆ. ಇವರು ಈ ಪ್ರಯತ್ನಕ್ಕೆ ಕೈ ಹಾಕಿದ್ದು ಹೇಗೆ ಎಂಬ ಬಗ್ಗೆ ವಿವರಿಸಿದ್ದಾರೆ. ನಾನು ಹಾಗೂ ಕಬ್ಬನ್ ರೀಡ್ಸ್‌ನ ಮತ್ತೋರ್ವ ಕ್ರಿಯೇಟರ್ ಆಗಿರುವ ಶೃತಿ ಷಾ ಅವರು ಶನಿವಾರಗಳಲ್ಲಿ ಕಬ್ಬನ್ ಪಾರ್ಕ್‌ಗೆ ಸೈಕಲ್‌ನಲ್ಲಿ ಬರ್ತಿದ್ವಿ. ನಮಗೆ ಓದುವುದೆಂದರೆ ಇಷ್ಟ. ಹೀಗಾಗಿ ಕಬ್ಬನ್ ಪಾರ್ಕ್ನಲ್ಲಿ ಬಂದು ಓದಲು ಶುರು ಮಾಡ್ದಿವಿ. ಒಂದು ದಿನ ಇದನ್ನು ವಿಡಿಯೋ ಮಾಡಿ ಇನ್ಸ್ಟಾಗ್ರಾಮ್ನಲ್ಲಿ ಅಪ್ ಲೋಡ್ ಮಾಡುದ್ವಿ. ಇದು ನಮ್ಮ ವೀಕೆಂಟ್ ಪ್ಲಾನ್ ಆಗಿ ಮುಂದುವರೀತು.
“ಒಮ್ಮೆ ಶ್ರುತಿ ಮತ್ತು ನಾನು ಏನು ಮಾಡುತ್ತಿದ್ದೆವು ಎಂಬುದರ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಸ್ಟೋರಿ ಹಾಕಿದೆ. ಇದನ್ನು ನೋಡಿ ನನ್ನ ಸ್ನೇಹಿತರು ನಾವು ಕೂಡ ನಿಮ್ಮ ಜೊತೆ ಕಬ್ಬನ್ ಪಾರ್ಕ್ನಲ್ಲಿ ಪುಸ್ತಕ ಓದಲು ಬರಬಹುದಾ ಅಂದ್ರು. ಅಲ್ಲಿಂದ ಈ ಕಬ್ಬನ್ ರೀಡ್ಸ್ ಹುಟ್ಟಿಕೊಂಡಿತು ಎಂದು ಹರ್ಷ ವಿವರಿಸಿದರು. ತಮ್ಮ ಸ್ನೇಹಿತರಲ್ಲಿನ ಉತ್ಸಾಹ ಕಂಡ ಹರ್ಷ ಅವರು ಇನ್ಸ್ಟಾಗ್ರಾಮ್ನಲ್ಲಿ ಕಬ್ಬನ್ ರೀಡ್ಸ್‌ನ ಎಂಬ ಇನ್ಸ್ಟಾ ಹ್ಯಾಂಡಲ್ ಕ್ರಿಯೇಟ್ ಮಾಡಿ ಮತ್ತಷ್ಟು ಪ್ರಸ್ತಕ ಪ್ರಿಯರನ್ನು ಸೆಳೆಯಲು ನಿಂತರು. ಇವರ ಫೋಸ್ಟ್ಗಳನ್ನು ಇಷ್ಟಪಟ್ಟು ಅನೇಕರು ಇವರ ಗುಂಪಿಗೆ ಸೇರಿಕೊಂಡರು. ಬಳಿಕ ಹರ್ಷ ಅವರು ಜನವರಿ 7 ರಂದು ಮೊದಲ ಬಾರಿಗೆ ಕಬ್ಬನ್ ರೀಡ್ಸ್‌ನ ಓದುಗರಿಗೆ ಆಹ್ವಾನ ನೀಡಿ ಸಮೂಹವಾಗಿ ಎಲ್ಲರೂ ಕಬ್ಬನ್ ಪಾರ್ಕ್ನಲ್ಲಿ ಓದಲು ಶುರು ಮಾಡಿದರು. ಆಗ ಹರ್ಷ ಅವರ ಸ್ನೇಹಿತರು ಕೂಡ ಪುಸ್ತಕ ಓದಲು ಕಬ್ಬನ್ ಪಾರ್ಕ್‌ಗೆ ಭೇಟಿ ನೀಡಿ ಅವರ ವಿಶೇಷ ಅನುಭವಗಳನ್ನು ಹಂಚಿಕೊಂಡರು.
In 21st edition of @cubbonreads, we hijacked Cubbon Park with our silence & books. 400+ readers showed up & read till the end. The video shows what we saw. Number of books in the stack is doubling weekly. Thank you, #Bangalore!
Try @lalbaghreads tomorrow if you missed today! pic.twitter.com/FbWEe9Ihzy
— Cubbon Reads (@cubbonreads) June 3, 2023
ಇದನ್ನೂ ಓದಿ: ಕಾಫಿ ಸವಿಯುತ್ತ ಪುಸ್ತಕ ಓದಬೇಕಾ? ಹಾಗಾದ್ರೆ ಪುಸ್ತಕ ಪ್ರಿಯರೊಮ್ಮೆ ಈ ಕೆಫೆಗಳಿಗೆ ಭೇಟಿ ನೀಡಿ
ಆದ್ರೆ ಎರಡನೇ ಬಾರಿ ಪುಸ್ತಕ ಓದಿಗೆ ಆಹ್ವಾನಿಸಿದಾಗ ಕೇವಲ ಆರು ಜನರು ಮಾತ್ರ ಬಂದಿದ್ದರು. ಒಮ್ಮೆ ನಾವಿಬ್ಬರನ್ನು ಬಿಟ್ಟು ಕೇವಲ ಒಬ್ಬರು ಮಾತ್ರ ಬಂದಿದ್ದರು ಎಂದು ಶೃತಿ ತಿಳಿಸಿದರು. ಆದರೆ ಇದು ನಮ್ಮ ಮೇಲೆ ಪರಿಣಾಮ ಬೀರಲಿಲ್ಲ. ನಮಗೆ ಬೇಜಾರು ಆಗಲಿಲ್ಲ ಏಕೆಂದರೆ ನಾವು ಇದನ್ನು ದೊಡ್ಡ ಅಭಿಯಾನವನ್ನಾಗಿ ಮಾಡುವ ಉದ್ದೇಶವನ್ನು ಎಂದಿಗೂ ಹೊಂದಿರಲಿಲ್ಲ. ನಮ್ಮ ಮೂಲ ಉದ್ದೇಶವಿದ್ದದ್ದು ಮೌನವಾಗಿ, ಜನ ತಮಗಿಷ್ಟವಾದ ಪುಸ್ತಕಗಳನ್ನು ಓದಬೇಕು. ಜನರಲ್ಲಿ ಓದಿನ ಆಸಕ್ತಿ ಹೆಚ್ಚಬೇಕು ಎಂಬುವುದಷ್ಟೆ. ಜೊತೆಗೆ ನೂರಾರು ಜನ ಕಬ್ಬನ್ ಪಾರ್ಕ್‌ಗೆ ಬಂದು ಪುಸ್ತಕ ಓದಿದಲು ಶುರು ಮಾಡಿದ್ರೆ ನಿಶ್ಯಬ್ದತೆ ಇರುವುದಿಲ್ಲ ಎಂದು ಶೃತಿ ತಿಳಿಸಿದರು.
ಸಾಮಾಜಿಕ ಮಾಧ್ಯಮದಲ್ಲಿ ರೀಲ್ಸ್ ಮತ್ತು ಸ್ಟೋರಿಗಳ ಮೂಲಕ ಹೆಚ್ಚಿನ ಜನರಲ್ಲಿ ಸ್ನೇಹ ಬೆಳೆಸುತ್ತ ಕಬ್ಬನ್ ರೀಡ್ಸ್ ಬೆಳೆದಿದೆ. ಜೂನ್ 3 ರಂದು ನಡೆದ 21 ನೇ ಸೆಷನ್ನಲ್ಲಿ 400 ಕ್ಕೂ ಹೆಚ್ಚು ಜನರು ಬಂದು ಮೌನವಾಗಿ ಹಸಿರಿನ ಮಡಿಲ್ಲಲ್ಲಿ ಪುಸ್ತಕ ಓದಿ ಆನಂದಿಸಿದರು. “ನಾನು 400 ರ ನಂತರ ಎಣಿಸುವುದನ್ನು ನಿಲ್ಲಿಸಿದೆ, 400ಕ್ಕಿಂತ ಹೆಚ್ಚಿನ ಜನರು ಬಂದು ಪುಸ್ತಕ ಓದಿದರು ಎಂದು ಹರ್ಷ ಅವರು ತಮ್ಮ ಹರುಷವನ್ನು ವ್ಯಕ್ತಪಡಿಸಿದರು.
ಈ ಕಾರ್ಯಕ್ರಮವು ಉದ್ಯಾನವನದ ಸರ್ ಮಾರ್ಕ್ ಕಬ್ಬನ್ ಪ್ರತಿಮೆಯ ಬಳಿ ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾಗಿ ಮಧ್ಯಾಹ್ನ 2 ರವರೆಗೆ ನಡೆಯುತ್ತದೆ. ಭಾಗವಹಿಸುವವರು ತಮಗೆ ಬೇಕಾದ ಯಾವುದೇ ವಸ್ತುಗಳನ್ನು ತರಬಹುದು. ಪುಸ್ತಕಗಳು, ಇ-ರೀಡರ್‌ಗಳು, ಟ್ಯಾಬ್ಲೆಟ್‌ಗಳು, ಸ್ಮಾರ್ಟ್‌ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳನ್ನು ತಂದು ಓದಬಹುದು. ಇಲ್ಲಿಗೆ ಓದಲು ಬರುವವರು ಯಾವುದೇ ನೋಂದಣಿಗಳನ್ನು ಮಾಡಿಸುವ ಅಗತ್ಯವಿಲ್ಲ. ನಗರದಲ್ಲಿರುವ ಒಂದು ಸುಂದರ ಸ್ಥಳದಲ್ಲಿ ಕೂತು ಪುಸ್ತಕ ಸವಿಯುವ ಅನುಭವವೇ ಬೇರೆ. ಅದನ್ನು ಎಲ್ಲರೂ ಅನುಭವಿಸಬೇಕು ಎಂದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ