ಬೆಂಗಳೂರು: ಪುರಾತನ ವಿಷ್ಣು ವಿಗ್ರಹ ವಿದೇಶಕ್ಕೆ ರಫ್ತು ಮಾಡಲು ಯತ್ನ; ಆರೋಪಿ ಬಂಧನ

| Updated By: preethi shettigar

Updated on: Mar 20, 2022 | 4:03 PM

ಭಾರತೀಯ ಪುರಾತತ್ವ ಸಮೀಕ್ಷೆಯಲ್ಲಿ ಪ್ರಾಚೀನವೆಂದು ದೃಢೀಕರಿಸಲಾಗಿದ್ದ ವಿಗ್ರಹ ಇದಾಗಿದ್ದು, ಅಕ್ರಮವಾಗಿ ಮಲೇಷ್ಯಾಗೆ ಸಾಗಿಸಲು ಯತ್ನಿಸುತ್ತಿದ್ದಾಗ ಜಪ್ತಿ ಮಾಡಲಾಗಿದೆ. ಸದ್ಯ 1972ರ ಪ್ರಾಚ್ಯ ಸಂಪತ್ತು ಕಾಯ್ದೆ 24ರಡಿ ಕೇಸ್ ದಾಖಲು ಮಾಡಲಾಗಿದೆ.

ಬೆಂಗಳೂರು: ಪುರಾತನ ವಿಷ್ಣು ವಿಗ್ರಹ ವಿದೇಶಕ್ಕೆ ರಫ್ತು ಮಾಡಲು ಯತ್ನ; ಆರೋಪಿ ಬಂಧನ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಪುರಾತನ ವಿಷ್ಣು ವಿಗ್ರಹ(Idol) ವಿದೇಶಕ್ಕೆ ರಫ್ತು ಮಾಡಲು ಯತ್ನಸಿದ ಆರೋಪಿಯನ್ನು ಬೆಂಗಳೂರು ಕಸ್ಟಮ್ಸ್‌ನ ಏರ್ ಕಾರ್ಗೋ ಇಂಟೆಲಿಜೆನ್ಸ್ ಅಧಿಕಾರಿಗಳು ಬಂಧಿಸಿದ್ದಾರೆ(Arrest). ಅಕ್ರಮವಾಗಿ 22.5 ಕೆಜಿ ತೂಕದ ಕಂಚಿನ ವಿಷ್ಣು ವಿಗ್ರಹ ಸಾಗಿಸಲು ಯತ್ನಿಸುತ್ತಿದ್ದ ವೇಳೆ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತನಿಂದ 22.5 ಕೆಜಿ ತೂಕದ ಕಂಚಿನ ವಿಷ್ಣು(Vishnu) ವಿಗ್ರಹವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಭಾರತೀಯ ಪುರಾತತ್ವ ಸಮೀಕ್ಷೆಯಲ್ಲಿ ಪ್ರಾಚೀನವೆಂದು ದೃಢೀಕರಿಸಲಾಗಿದ್ದ ವಿಗ್ರಹ ಇದಾಗಿದ್ದು, ಅಕ್ರಮವಾಗಿ ಮಲೇಷ್ಯಾಗೆ ಸಾಗಿಸಲು ಯತ್ನಿಸುತ್ತಿದ್ದಾಗ ಜಪ್ತಿ ಮಾಡಲಾಗಿದೆ. ಸದ್ಯ 1972ರ ಪ್ರಾಚ್ಯ ಸಂಪತ್ತು ಕಾಯ್ದೆ 24ರಡಿ ಕೇಸ್ ದಾಖಲು ಮಾಡಲಾಗಿದೆ.

ಬೆಂಗಳೂರು ರೇಸ್ ಮೇಲೆ ಅನಧಿಕೃತ ಆನ್‌ಲೈನ್ ಬೆಟ್ಟಿಂಗ್, ಮೂವರು ಅರೆಸ್ಟ್

ಬೆಂಗಳೂರು ರೇಸ್ ವೇಳೆ ಅನಧಿಕೃತ ಆನ್‌ಲೈನ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಹರೀಶ್, ವಿಕಾಸ್ ಶೆಣೈ ಹಾಗೂ ರಘುನಂದನ್ ಸೇರಿದಂತೆ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರಿಂದ 5.5 ಲಕ್ಷ ನಗದು, ಲ್ಯಾಪ್‌ಟಾಪ್‌, 10 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳು ಸಾಯಿ ಸಾಫ್ಟ್‌ವೇರ್ ಎಂಬ ವೆಬ್‌ಸೈಟ್‌ ಮೂಲಕ ಬೆಟ್ಟಿಂಗ್ ನಡೆಸುತ್ತಿದ್ದರು. ಲೈಸೆನ್ಸ್ ಪಡೆಯದೆ ರೇಸ್ ಕೋರ್ಸ್ ಗೆ ಸಮಾನವಾಗಿ ಬೆಟ್ಟಿಂಗ್ ನಡೆಸುತ್ತಿದ್ದರು.

ಶಿವಮೊಗ್ಗ: ಪ್ರೀತಿಸಿದ ಯುವತಿಗೆ ಕೈಕೊಟ್ಟ ಪ್ರೀಯಕರ; ಪ್ರೇಯಸಿ ನೇಣಿಗೆ ಶರಣು

ಪ್ರೀತಿಸಿದ ಯುವತಿಗೆ ಕೈಕೊಟ್ಟು ಪ್ರಿಯಕರ ಬೇರೆ ಹುಡಿ ಮದುವೆಯಾಗಿದ್ದಕ್ಕೆ ಪ್ರೇಯಸಿ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಮುರಳಿ ಬೇರೆ ಯುವತಿ ಜತೆ ವಿವಾಹವಾದ ಹಿನ್ನೆಲೆ ಮನನೊಂದು ಪ್ರೇಯಸಿ ರೂಪಶ್ರೀ(25) ನೇಣಿಗೆ ಶರಣಾಗಿದ್ದಾಳೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಯಾದಗಿರಿ: ಹೋಳಿ ಹಬ್ಬದಲ್ಲಿ ಬಣ್ಣದಾಟ ಆಡಿ ಕೆರೆಯಲ್ಲಿ ಈಜಲು ಹೋಗಿ ಇಬ್ಬರು ಯುವಕರು ನೀರು ಪಾಲು

ಹೋಳಿ ಹಬ್ಬದಲ್ಲಿ ಬಣ್ಣದಾಟ ಆಡಿ ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ಸಾವನ್ನಪ್ಪಿದ ಘಟನೆ ಯಾದಗಿರಿ ತಾಲೂಕಿನ ಬಾಚವಾರ್ ಬಳಿಯ ಕೆರೆಯಲ್ಲಿ ನಿನ್ನೆ ನಡೆದಿದೆ. ಬಣ್ಣದಾಟ ಆಡಿ ಕೆರೆಯಲ್ಲಿ ಸ್ನೇಹಿತರ ಜೊತೆ ಸ್ನಾನ ಮಾಡಲು ಬಂದಿದ್ದ ಸಾಯಿಬಣ್ಣ (18) ಮಾರ್ತಂಡಪ್ಪ (17) ನೀರು ಪಾಲಾದ ಯುವಕರು. ಓರ್ವ ಯುವಕನ ಮೃತ ದೇಹ ಪತ್ತೆಯಾಗಿದ್ದು, ಇನ್ನೋರ್ವ ಯುವಕನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಸ್ಥಳಕ್ಕೆ‌ ಯಾದಗಿರಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದು, ಕೇಸ್ ದಾಖಲಿಸಿದ್ದಾರೆ.

 

ಇದನ್ನೂ ಓದಿ:

ಪಾವಗಡ ಬಸ್ ಅಪಘಾತ ಕೇಸ್: ಚಾಲಕ ವಶಕ್ಕೆ, FIR ದಾಖಲು, ಇತ್ತ ಬೆಂಗಳೂರಿನಲ್ಲಿ ರಂಗಭೂಮಿ ಕಲಾವಿದೆ ಮೇಲೆ ಆ್ಯಸಿಡ್ ದಾಳಿ

ಪಾಕಿಸ್ತಾನಕ್ಕೆ ಅನಧಿಕೃತವಾಗಿ ಔಷಧ ರಫ್ತು; ಬೆಂಗಳೂರಿನ ಎನ್​ಸಿಬಿ ಅಧಿಕಾರಿಗಳಿಂದ ನಾಲ್ವರ ಬಂಧನ

Published On - 3:50 pm, Sun, 20 March 22