ಬೆಂಗಳೂರು: ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ(Beluru Raghavendra Shetty) ವಿರುದ್ಧ ರಾಜ್ಯ ಮುಖ್ಯ ಕಾರ್ಯದರ್ಶಿಗೆ ವರದಿ ಸಲ್ಲಿಸಲಾಗಿದೆ. ನಿಗಮದ ಎಂಡಿ ರೂಪಾ ಮೌದ್ಗಿಲ್(D Roopa Moudgil) ಸುದೀರ್ಘ 6 ಪುಟಗಳ ದೂರಿನ ವರದಿ ಸಲ್ಲಿಸಿದ್ದಾರೆ. ವರದಿಯಲ್ಲಿ ನಿಗಮದಲ್ಲಿ ರಾಘವೇಂದ್ರ ಶೆಟ್ಟಿ ಎಸಗಿರುವ ಅವ್ಯವಹಾರ, ಅಧಿಕಾರ ದುರುಪಯೋಗ ಮತ್ತು ದುರ್ನಡತೆ ಬಗ್ಗೆ ಉಲ್ಲೇಖಿಸಿದ್ದಾರೆ. ಅಲ್ಲದೆ ಬೇಳೂರು ರಾಘವೇಂದ್ರ ಶೆಟ್ಟಿ ಅವ್ಯವಹಾರ ಕುರಿತು ಈ ಹಿಂದೆಯೂ ಸಿಎಸ್‌ಗೆ ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ದೂರು ನೀಡಿದ್ದರು.
ಪಿಎಸ್ಐ ಅಕ್ರಮ ನೇಮಕಾತಿ ಹಗರಣದಲ್ಲಿ ರಾಘವೇಂದ್ರ ಶೆಟ್ಟಿ ಪಿಎ ಆಗಿದ್ದ ಶ್ರೀಕಾಂತ್ ಬಂಧನ ಆಗಿರುವ ಕಾರಣ ಹಗರಣದಲ್ಲಿ ರಾಘವೇಂದ್ರ ಶೆಟ್ಟಿ ಪಾತ್ರದ ಬಗ್ಗೆ ತನಿಖೆ ನಡೆಸಬೇಕು. ರಾಘವೇಂದ್ರ ಶೆಟ್ಟಿ ಡಾಕ್ಟರೇಟ್ ಪದವಿ ಪಡೆದಿರುವ ಹಿನ್ನೆಲೆಯ ಬಗ್ಗೆ ತನಿಖೆ ನಡೆಸಬೇಕು. ನಿಗಮದ ಶೋ ರೂಂನಿಂದ ಹಲವು ಬೆಲೆಬಾಳುವ ಶ್ರೀಗಂಧದ ಮೂರ್ತಿ ತೆಗೆದುಕೊಂಡು ಹೋಗಿದ್ದಾರೆ. ಅಧ್ಯಕ್ಷರಾಗಿದ್ದ ಆರಂಭದಲ್ಲಿ ಮಹಿಳಾ ಪಿಎ ಬೇಕು ಎಂದು ಒತ್ತಾಯಿಸಿದ್ದರು. ಫೆಬ್ರವರಿಯಲ್ಲಿ ಒಂದು ಬಾರಿ ಮಹಿಳಾ ಸಿಬ್ಬಂದಿಯನ್ನು ಸಂಜೆ 6.30 ಕಳೆದರೂ ಕಚೇರಿಯಲ್ಲೇ ಇರುವಂತೆ ಹೇಳಿದ್ದರು. ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಒತ್ತಡ ಹೇರುವ ಕೆಲಸ ಮಾಡಿದ್ದಾರೆ. ಈ ಸಂಬಂಧ ದೂರು ದಾಖಲಿಸಲು ಪರವಾನಗಿ ನೀಡಬೇಕು ಎಂದು 6 ಪುಟಗಳ ದೂರಿನಲ್ಲಿ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ವಿರುದ್ಧ ಹದಿನಾರು ಗಂಭೀರ ಆರೋಪಗಳನ್ನು ಎಂಡಿ ರೂಪಾ ಮೌದ್ಗಿಲ್ ಮಾಡಿದ್ದಾರೆ. ಇದನ್ನೂ ಓದಿ: GST Collection: ಮೇ ತಿಂಗಳಲ್ಲಿ ಜಿಎಸ್ಟಿ ಸಂಗ್ರಹ ಶೇ 16ರಷ್ಟು ಕಡಿಮೆಯಾಗಿ ರೂ. 1.41 ಲಕ್ಷ ಕೋಟಿಗೆ ಕುಸಿತ
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ವಿರುದ್ಧ ನಿಗಮದ ಎಂಡಿ ಡಿ.ರೂಪಾ ಮೌದ್ಗಿಲ್ ದೂರು
ಬೆಂಗಳೂರು: ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ವಿರುದ್ಧ ನಿಗಮದ ಎಂಡಿ ಡಿ.ರೂಪಾ ಮೌದ್ಗಿಲ್ ದೂರು ಸಲ್ಲಿಸಿದ್ದಾರೆ. ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿರುವ ಕರಕುಶಲ ಅಭಿವೃದ್ಧಿ ನಿಗಮದ ಪ್ರಧಾನ ಕಚೇರಿಯಲ್ಲಿರುವ ಸಿಸಿಟಿವಿ ಡಿವಿಆರ್ ವಿರೂಪಗೊಳಿಸಿರುವ ಬಗ್ಗೆ ದೂರು ನೀಡಿದ್ದಾರೆ. ಮೇ 27 ರಂದು ಬೆಳಗ್ಗೆ ಕಚೇರಿ ಅಟೆಂಡರ್ ರನ್ನು ಕರೆಸಿಕೊಂಡು ಅಪರಿಚಿತ ವ್ಯಕ್ತಿ ಮೂಲಕ ಡಿವಿಆರ್ ವಿರೂಪಗೊಳಿಸಿರುವುದಾಗಿ ಎಂಡಿ ಡಿ.ರೂಪಾ ಆರೋಪ ಮಾಡಿದ್ದಾರೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಲಿಖಿತ ದೂರು ನೀಡಿದ್ದಾರೆ. ಇದನ್ನೂ ಓದಿ: ರಾಜ್ಯಸಭಾ ಚುನಾವಣೆ: ಮಹಾರಾಷ್ಟ್ರಕ್ಕೆ ಅಶ್ವಿನಿ ವೈಷ್ಣವ್, ಕರ್ನಾಟಕಕ್ಕೆ ಕಿಶನ್ ರೆಡ್ಡಿಯನ್ನು ಉಸ್ತುವಾರಿಯಾಗಿ ನೇಮಿಸಿದ ಬಿಜೆಪಿ
Published On - 7:29 pm, Wed, 1 June 22