ರಾಜ್ಯಸಭಾ ಚುನಾವಣೆ: ಮಹಾರಾಷ್ಟ್ರಕ್ಕೆ ಅಶ್ವಿನಿ ವೈಷ್ಣವ್, ಕರ್ನಾಟಕಕ್ಕೆ ಕಿಶನ್ ರೆಡ್ಡಿಯನ್ನು ಉಸ್ತುವಾರಿಯಾಗಿ ನೇಮಿಸಿದ ಬಿಜೆಪಿ
ಹರ್ಯಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಜಯ್ ಮಾಕೆನ್ ಅವರನ್ನು ಆಯ್ಕೆ ಮಾಡುವಷ್ಟು ಬಲವಿದೆ. ಕಾಂಗ್ರೆಸ್‌ನ ಮಾಜಿ ನಾಯಕ ವಿನೋದ್ ಶರ್ಮಾ ಅವರ ಪುತ್ರ ಕಾರ್ತಿಕೇಯ ಶರ್ಮಾ ಕೂಡಾ ಕಣದಲ್ಲಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಹೆಚ್ಚುವರಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ದೆಹಲಿ: ಮುಂಬರುವ ರಾಜ್ಯಸಭಾ ಚುನಾವಣೆಗೆ (Rajya Sabha Election) ಬಿಜೆಪಿ (BJP) ಉಸ್ತುವಾರಿಗಳನ್ನು ನೇಮಿಸಿದ್ದು, ರಾಜಸ್ಥಾನಕ್ಕೆ ರಾಜ್ಯಸಭಾ ಚುನಾವಣೆ ಉಸ್ತುವಾರಿಯಾಗಿ ನರೇಂದ್ರ ಸಿಂಗ್ ತೋಮರ್, ಹರ್ಯಾಣಕ್ಕೆ ಗಜೇಂದ್ರ ಸಿಂಗ್ ಶೇಖಾವತ್, ಕರ್ನಾಟಕಕ್ಕೆ ಜಿ ಕಿಶನ್ ರೆಡ್ಡಿ (G Kishan Reddy) ಮತ್ತು ಮಹಾರಾಷ್ಟ್ರಕ್ಕೆ ಅಶ್ವಿನಿ ವೈಷ್ಣವ್ ಅವರನ್ನು ನೇಮಿಸಲಾಗಿದೆ. ರಾಜ್ಯಸಭೆಯ 57 ಸ್ಥಾನಗಳಿಗೆ ಜೂನ್ 10 ರಂದು ಮತದಾನ ನಡೆಯಲಿದೆ. ರಾಜಸ್ಥಾನದ ಸ್ಪರ್ಧೆಯು ಅತ್ಯಂತ ರೋಚಕವಾಗಿದೆ ಎಂದು ಊಹಿಸಲಾಗಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷವು ಗಾಂಧಿ ನಿಷ್ಠ ರಣದೀಪ್ ಸಿಂಗ್ ಸುರ್ಜೆವಾಲಾ, ಪ್ರಮೋದ್ ತಿವಾರಿ ಮತ್ತು ಮುಕುಲ್ ವಾಸ್ನಿಕ್ ಅವರನ್ನು ಕಣಕ್ಕಿಳಿಸಿದೆ. ಇತ್ತ ಕಾಂಗ್ರೆಸ್ ಪಕ್ಷವು ಎಲ್ಲಾ ಮೂರು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಗೆಹ್ಲೋಟ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಜಸ್ಥಾನ ವಿಧಾನಸಭೆಯಲ್ಲಿ ಕಾಂಗ್ರೆಸ್ 108 ಶಾಸಕರನ್ನು ಹೊಂದಿದ್ದು, ಬಿಜೆಪಿ 71 ಶಾಸಕರನ್ನು ಹೊಂದಿದೆ.
BJP has appointed Narendra Singh Tomar as in charge of Rajya Sabha elections for Rajasthan, Gajendra Singh Shekhawat for Haryana, G Kishan Reddy for Karnataka, and Ashwini Vaishnaw for Maharashtra. pic.twitter.com/c00hbuWG1B
ಇದನ್ನೂ ಓದಿ— ANI (@ANI) June 1, 2022
ಹರ್ಯಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಜಯ್ ಮಾಕೆನ್ ಅವರನ್ನು ಆಯ್ಕೆ ಮಾಡುವಷ್ಟು ಬಲವಿದೆ. ಕಾಂಗ್ರೆಸ್‌ನ ಮಾಜಿ ನಾಯಕ ವಿನೋದ್ ಶರ್ಮಾ ಅವರ ಪುತ್ರ ಕಾರ್ತಿಕೇಯ ಶರ್ಮಾ ಕೂಡಾ ಕಣದಲ್ಲಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಹೆಚ್ಚುವರಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕರ್ನಾಟಕದಲ್ಲಿ ಬಿಜೆಪಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ನಟ ಜಗ್ಗೇಶ್ ಅವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ ಜೈರಾಮ್ ರಮೇಶ್ ಮತ್ತು ಮನ್ಸೂರ್ ಅಲಿ ಖಾನ್ ಅವರನ್ನು ಕರ್ನಾಟಕದಿಂದ ಕಣಕ್ಕಿಳಿಸಿದೆ.
ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ (ಎಂವಿಎ) ಯ ಮೂರು ಘಟಕ ಪಕ್ಷಗಳು ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಪ್ರತಾಪ್‌ಗಢಿ ಅವರೊಂದಿಗೆ ಅತೃಪ್ತವಾಗಿವೆ ಎಂದು ವರದಿಯಾಗಿದೆ. ಬಿಜೆಪಿ ರಾಜ್ಯಸಭಾ ಚುನಾವಣೆಗೆ ತನ್ನ ಅಭ್ಯರ್ಥಿಗಳಾಗಿ ಪಿಯೂಷ್ ಗೋಯಲ್, ಹಿರಿಯ ನಾಯಕರಾದ ಅನಿಲ್ ಬೋಂಡೆ ಮತ್ತು ಧನಂಜಯ್ ಮಹಾದಿಕ್ ಅವರನ್ನು ಕಣಕ್ಕಿಳಿಸಿದೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ