AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IKEAದಲ್ಲಿ ಮಹಿಳೆಯೊಬ್ಬರ ಊಟದ ಟೇಬಲ್​ ಮೇಲೆ ಬಿದ್ದ ಸತ್ತ ಇಲಿ

ಮಹಿಳೆಯೊಬ್ಬರು ಐಕಿಯ ಫುಡ್ ಕೋರ್ಟ್‌ನಲ್ಲಿ ಊಟ ಮಾಡುತ್ತಿದ್ದ ವೇಳೆ ಟೇಬಲ್​ ಮೇಲೆ ಸತ್ತ ಇಲಿ ಬಿದ್ದಿದೆ.

IKEAದಲ್ಲಿ ಮಹಿಳೆಯೊಬ್ಬರ ಊಟದ ಟೇಬಲ್​ ಮೇಲೆ ಬಿದ್ದ ಸತ್ತ ಇಲಿ
ಊಟದ ಟೇಬಲ್​ ಮೇಲೆ ಬಿದ್ದ ಸತ್ತ ಇಲಿ
ವಿವೇಕ ಬಿರಾದಾರ
|

Updated on: Jul 18, 2023 | 1:27 PM

Share

ಬೆಂಗಳೂರು: ಗೃಹ ಬಳಕೆ ವಸ್ತುಗಳು ಒಂದೇ ಸೂರಿನ ಅಡಿ ಗ್ರಾಹಕರಿಗೆ ನೀಡುವ ಬಹುರಾಷ್ಟ್ರೀಯ ಕಂಪನಿ ಐಕಿಯ (IKEA) ಇತ್ತೀಚಿಗೆ ನಾಗಸಂದ್ರ (Nagsandra) ಬಳಿ ಪ್ರಾರಂಭವಾಗಿದೆ. ನೆದರ್ಲ್ಯಾಂಡ್ಸ್ ಮೂಲದ ಸ್ವೀಡಿಷ್​​ನ ಐಕಿಯ ಮಳಿಗೆಯಲ್ಲಿ ಪೀಠೋಪಕರಣಗಳು, ಅಡುಗೆ ಉಪಕರಣಗಳು, ಅಲಂಕಾರ, ಗೃಹ ಪರಿಕರಗಳು ಮತ್ತು ಇತರ ವಸ್ತುಗಳು ಸಿಗುವ ಮೂಲಕ ಗ್ರಾಹಕ ಉತ್ತಮ ಸೇವೆ ನೀಡುತ್ತಿದೆ. ಆದರೆ ಇದೊಂದು ಪ್ರಕರಣದಲ್ಲಿ ಓರ್ವ ಮಹಿಳಾ ಗ್ರಾಹಕರಿಗೆ ಕೆಟ್ಟ ಅನುಭವ ನೀಡಿದೆ. ಹೌದು ಮಹಿಳೆಯೊಬ್ಬರು ಫುಡ್ ಕೋರ್ಟ್‌ನಲ್ಲಿ (Food Court) ಉಪಹಾರ ಸೇವಿಸುತ್ತಿದ್ದ ವೇಳೆ ಟೇಬಲ್​ ಮೇಲೆ ಸತ್ತ ಇಲಿ ಬಿದ್ದಿದೆ.

ಈ ಕುರಿತ ಭಾವಚಿತ್ರವನ್ನುಮಾಯಾ (@ಶರಣ್ಯಶೆಟ್ಟಿ) ಎಂಬುವರು “ಇದು ಅತ್ಯಂತ ವಿಲಕ್ಷಣ ಕ್ಷಣ”  ಎಂದು ಟ್ವೀಟ್ ​ಮಾಡಿದ್ದಾರೆ. Wtf.. ikea ನಾವು ಉಪಹಾರ  ಸೇವಿಸುತ್ತಿದ್ದ ವೇಳೆ ಟೇಬಲ್​ ಮೇಲೆ ಅಚಾನಕ್​​ ಆಗಿ ಸತ್ತ ಇಲಿ ಬಿದ್ದಿದೆ. ಇದು ಅತ್ಯಂತ ವಿಲಕ್ಷಣ ಕ್ಷಣ..! ಎಂದಿದ್ದಾರೆ.

ಅಂಕಿತ್ ಜೈನ್ ಎಂಬ ನೆಟಿಜನ್ ಪ್ರತಿಕ್ರಿಯಿಸಿ ಹೆಚ್ಚುವರಿ ಖಾದ್ಯಕ್ಕೆ ಪಾವತಿಸಬೇಡಿ ಎಂದು ಐಕಿಯ ವಿರುದ್ಧ ವ್ಯಂಗ್ಯವಾಗಿ ಆಕ್ರೋಶ ಹೊರಹಾಕಿದ್ದಾರೆ.

FireInTheHole ಟ್ವೀಟ್ ಮಾಡಿ ಅದು ಸತ್ತಿಲ್ಲ, ಅತಿಯಾದ ಕೆಲಸದಿಂದ ದಣಿದಿದೆ ಎಂದು ಕುಹಕವಾಡಿದ್ದಾರೆ.

ಇದನ್ನೂ ಓದಿ: IKEA ಸ್ಟೋರ್​ನಲ್ಲಿ ಸರತಿ ಸಾಲುಗಳು: ಜನಸಂದಣಿಯ ತಮಾಷೆಯ ವಿಡಿಯೋಗಳು ಇಲ್ಲಿವೆ ನೋಡಿ

ಟ್ವೀಟ್ ವೈರಲ್ ಆದ ನಂತರ, IKEA ಇಂಡಿಯಾ ಕ್ಷಮೆಯಾಚಿಸಿದೆ. ನಾಗಸಂದ್ರದಲ್ಲಿರುವ ಐಕಿಯದಲ್ಲಿ ನಡೆದ ಅಹಿತಕರ ಘಟನೆಗೆ ನಾವು ಕ್ಷಮೆಯಾಚಿಸುತ್ತೇವೆ. ನಾವು ಪ್ರಸ್ತುತ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದೇವೆ ಮತ್ತು ಎಲ್ಲಾ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಆಹಾರ ಸುರಕ್ಷತೆ ಮತ್ತು ನೈರ್ಮಲ್ಯವು ನಮ್ಮ ಪ್ರಮುಖ ಆದ್ಯತೆಯಾಗಿದೆ ಮತ್ತು ನಮ್ಮ ಗ್ರಾಹಕರು ಯಾವಾಗಲೂ IKEA ನಲ್ಲಿ ಅತ್ಯುತ್ತಮ ಶಾಪಿಂಗ್ ಅನುಭವವನ್ನು ಹೊಂದಬೇಕೆಂದು ಎಂದು ನಾವು ಬಯಸುತ್ತೇವೆ ಎಂದು ಸಂಸ್ಥೆ ಟ್ವೀಟ್ ಮಾಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್