AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Cabinet: ಹಂಚಿಕೆಯಾದ ಖಾತೆಗಳ ಬಗ್ಗೆ ನೂತನ ಸಚಿವರು ಹೇಳಿದ್ದೇನು?

ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಈಗ ಕೊಟ್ಟಿರುವ ಖಾತೆಯ ಬಗ್ಗೆ ನನಗೆ ಅಸಮಾಧಾನವಿಲ್ಲ. ನನಗೆ ಕೊಟ್ಟ ಖಾತೆಯನ್ನ ಸಮರ್ಥವಾಗಿ ನಿಭಾಯಿಸುತ್ತೇನೆ. ಖಾತೆ ಹಂಚಿಕೆಯಲ್ಲಿ ಹಿಂಬಡ್ತಿ, ಮುಂಬಡ್ತಿ ಎಂಬುದು ಇರಲ್ಲ. ನಮಗೆ ಸಕಾರಾತ್ಮಕ ಚಿಂತನೆ ಇರಬೇಕು.

Karnataka Cabinet: ಹಂಚಿಕೆಯಾದ ಖಾತೆಗಳ ಬಗ್ಗೆ ನೂತನ ಸಚಿವರು ಹೇಳಿದ್ದೇನು?
ನೂತನ ಸಚಿವ ಸಂಪುಟ
TV9 Web
| Edited By: |

Updated on: Aug 07, 2021 | 3:28 PM

Share

ಬೆಂಗಳೂರು: ಇಂದು (ಆಗಸ್ಟ್ 7) ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ತಮಗೆ ಸಿಕ್ಕ ಖಾತೆಯ ಬಗ್ಗೆ ಕೆಲ ಸಚಿವರು ಖುಷಿ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲ ಸಚಿವರು ಅಸಮಾಧಾನ ಹೊರಹಾಕಿದ್ದಾರೆ. ಮೊಟ್ಟ ಮೊದಲ ಬಾರಿಗೆ ಸಚಿವರಾಗಿ ಆಯ್ಕೆಯಾಗಿರುವ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರಿಗೆ ಗೃಹ ಸಚಿವ ಖಾತೆಯನ್ನು ನೀಡಲಾಗಿದೆ. ಮೊದಲ ಬಾರಿ ಸಚಿವ ಸ್ಥಾನಕ್ಕೆ ಕಾಲಿಟ್ಟ ಆರಗ ಜ್ಞಾನೇಂದ್ರಗೆ ಗೃಹ ಸಚಿವ ಖಾತೆ ನೀಡಿರುವುದು ವಿಶೇಷ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಆರಗ ಜ್ಞಾನೇಂದ್ರ, ನನ್ನ ಮೇಲೆ ಬಹಳ ದೊಡ್ಡ ಹೊಣೆಯನ್ನು ಹೊರಿಸಿದ್ದಾರೆ. ನನಗೆ ಕೊಟ್ಟ ಖಾತೆಯನ್ನು ಅಚ್ಚುಕಟ್ಟಾಗಿ ನಿಭಾಯಿಸ್ತೇನೆ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪ್ರಯತ್ನಿಸುವೆ. ಸಂಘ ಕೊಟ್ಟ ಶಿಸ್ತು, ಸಂಯಮದಿಂದ ಕೆಲಸ ಮಾಡ್ತೇನೆ. ಗೃಹ ಖಾತೆ ರಾಜ್ಯದ ಜನರ ಪರ ಇರುವಂತೆ ಕೆಲಸ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಈಗ ಕೊಟ್ಟಿರುವ ಖಾತೆಯ ಬಗ್ಗೆ ನನಗೆ ಅಸಮಾಧಾನವಿಲ್ಲ. ನನಗೆ ಕೊಟ್ಟ ಖಾತೆಯನ್ನ ಸಮರ್ಥವಾಗಿ ನಿಭಾಯಿಸುತ್ತೇನೆ. ಖಾತೆ ಹಂಚಿಕೆಯಲ್ಲಿ ಹಿಂಬಡ್ತಿ, ಮುಂಬಡ್ತಿ ಎಂಬುದು ಇರಲ್ಲ. ನಮಗೆ ಸಕಾರಾತ್ಮಕ ಚಿಂತನೆ ಇರಬೇಕು. ಎರಡು ವರ್ಷಗಳಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡಿದ ಸಮಾಧಾನವಿದೆ. ಜಿಲ್ಲಾ ಉಸ್ತುವಾರಿ ಸಚಿವೆಯಾಗಿ, ಸ್ವಂತ ಕ್ಷೇತ್ರದಲ್ಲೂ ಶಾಸಕಿಯಾಗಿ ಉತ್ತಮ ಕೆಲಸ ಮಾಡಿದ್ದೇನೆ. ನನ್ನ ಜವಾಬ್ದಾರಿಯನ್ನು ನಾನು ಸರಿಯಾಗಿ ನಿರ್ವಹಣೆ ಮಾಡಿದ್ದೇನೆ. ಈಗ ವಹಿಸಿರುವ ಖಾತೆಯ ಯೋಜನೆಗಳನ್ನು ರಾಜ್ಯದ ಜನರಿಗೆ ಮುಟ್ಟಿಸುವೆ. ಜೊತೆಗೆ ಪಕ್ಷ ಸಂಘಟನೆಯನ್ನೂ ಮಾಡುವೆ ಎಂದು ಹೇಳಿದ್ದಾರೆ.

ತಮ್ಮ ಜಿಲ್ಲೆಗೆ ಸಚಿವ ಸ್ಥಾನ ನೀಡಿದ್ದಕ್ಕೆ ರಾಷ್ಟ್ರೀಯ ನಾಯಕರಿಗೆ, ರಾಜ್ಯದ ನಾಯಕರಿಗೆ ಧನ್ಯವಾದ ತಿಳಿಸಿದ ನೂತನ ಸಚಿವ ಹಾಲಪ್ಪ ಆಚಾರ್, ಎರಡು ಖಾತೆ ಸಿಕ್ಕಿರೋದಕ್ಕೆ ಗುಟ್ಟು ಏನಿಲ್ಲ. ಮೊದಲಿನಿಂದಲೂ ಜಿಲ್ಲೆಗೆ ಪ್ರಾತಿನಿಧ್ಯ ಕೊಡಬೇಕು ಅನ್ನೋ ಮಾತು ನಾನ ಹೇಳಿದ್ದೆ. ಜಿಲ್ಲೆಗೆ ಆದ್ಯತೆ ಬಗ್ಗೆ ನಾನು ಮೊದಲ ಗಮನ ಕೊಡ್ತೀನಿ. ನನ್ನ ಮೇಲೆ ದೊಡ್ಡ ಜವಾಬ್ದಾರಿ ಇದೆ. ಜಿಲ್ಲೆಗೆ ಪ್ರಾತಿನಿಧ್ಯ ಕೊಡಬೇಕು ಅನ್ನೋ ಹಿನ್ನೆಲೆ ನನಗೆ ಸಚಿವ ಸ್ಥಾನ ಸಿಕ್ಕಿದೆ. ಇದರಲ್ಲಿ ಬೇರೆ ಯಾವ ಅರ್ಥ ಇಲ್ಲ ಅಂತ ಅಭಿಪ್ರಾಯಪಟ್ಟಿದ್ದಾರೆ.

ಮತ್ತೆ ಗ್ರಾಮೀಣಾಭಿವೃದ್ಧಿ ಖಾತೆ ಸಿಕ್ಕಿರುವುದು ಸಂತಸ ತಂದಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ಶಿವಮೊಗ್ಗ ಜಿಲ್ಲೆ, ರಾಜ್ಯದ ಅಭಿವೃದ್ಧಿಗೆ ಕಾರ್ಯ ನಿರ್ವಹಿಸುವೆ. ಸಿಎಂ ಬೊಮ್ಮಾಯಿ ಬಹಳ ನಿರೀಕ್ಷೆಯಿಂದ ಪಟ್ಟಿ ಪ್ರಕಟಿಸಿದ್ದಾರೆ. ಪ್ರತಿಭೆ, ಶಾಸಕರ ಆಸಕ್ತಿಗೆ ತಕ್ಕಂತೆ ಖಾತೆ ಹಂಚಿಕೆ ಮಾಡಿದ್ದಾರೆ. ಎಲ್ಲಾ ಶಾಸಕರು ಸಿಕ್ಕಿರುವ ಅವಕಾಶ ಸದ್ಬಳಕೆ ಮಾಡಿಕೊಳ್ಳಲಿ. ಹೊಸದಾಗಿ ಮಂತ್ರಿಮಂಡಲ ಸೇರಿರುವವರಿಗೆ ಅಭಿನಂದಿಸುತ್ತೇನೆ ಎಂದು ಹೇಳಿದರು.

ಗ್ರಾಮೀಣಾಭಿವೃದ್ಧಿ ಇಲಾಖೆಯ ಮೇಲೆ ಆಸಕ್ತಿ ಇತ್ತು. ಆದ್ರೆ ಅದನ್ನು ಕೆ.ಎಸ್.ಈಶ್ವರಪ್ಪನವರಿಗೆ ನೀಡಿದ್ದಾರೆ. ನಮ್ಮ ಆಸಕ್ತಿ, ಕ್ಷೇತ್ರದ ಆಕಾಂಕ್ಷೆ ಸಾಮಾನ್ಯವಾಗಿರುತ್ತೆ. ಕೆ.ಎಸ್.ಈಶ್ವರಪ್ಪ ನನಗಿಂತ ಹಿರಿಯರು. ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಕೆಲಸ ಆಗಬೇಕಾದಾಗ ಕೆ.ಎಸ್.ಈಶ್ವರಪ್ಪ ಬಳಿ ಹೇಳಿ ಮಾಡಿಸಿಕೊಳ್ಳುತ್ತೇನೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಖಾತೆ ಹಂಚಿಕೆಯಿಂದ ನಾನು ಸಂಪೂರ್ಣ ಸಂತೃಪ್ತ ಎಂದ ಉಮೇಶ್ ಕತ್ತಿ, ನಾನು ಯಾವುದೇ ಖಾತೆಗೆ ಬೇಡಿಕೆ ಇಟ್ಟಿರಲಿಲ್ಲ. ಯಡಿಯೂರಪ್ಪ ಸಂಪುಟದಲ್ಲಿ 6 ತಿಂಗಳು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸರಿಯಾಗಿ ನಿಭಾಯಿಸಿದ್ದೇನೆ. ಅರಣ್ಯ ಇಲಾಖೆಯ ಹೆಚ್ಚಿನ ಜವಾಬ್ದಾರಿಯನ್ನು ನೀಡಲಾಗಿದೆ. ಅರಣ್ಯ ಇಲಾಖೆಯನ್ನು ಕೂಡ ಜವಾಬ್ದಾರಿಯಿಂದ ನಿಭಾಯಿಸುವೆ ಅಂತ ಆಹಾರ ಮತ್ತು ಅರಣ್ಯ ಇಲಾಖೆ ಸಚಿವ ಉಮೇಶ್ ಕತ್ತಿ ಅಭಿಪ್ರಾಯಪಟ್ಟಿದ್ದಾರೆ.

ಸಾರಿಗೆ ಹಾಗೂ ನೂತನವಾಗಿ ಸೃಷ್ಟಿಯಾಗಿರುವ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವಾಲಯದ ಮಹತ್ವದ ಜವಾಬ್ದಾರಿ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಜಿ ಮಾದರಿ ಆಡಳಿತ, ಜನಪರ ಹಾಗೂ ಅಭಿವೃದ್ಧಿ ಪರ ಆಡಳಿತವೊಂದೇ ನಮ್ಮ ಸರ್ಕಾರದ ಗುರಿ. ಮುಖ್ಯಮಂತ್ರಿಗಳ ನೇತೃತ್ವ ಹಾಗೂ ಹಿರಿಯರು ಯಡಿಯೂರಪ್ಪರವರ ಮಾರ್ಗದರ್ಶನದಲ್ಲಿ ಅಭಿವೃದ್ಧಿಯತ್ತ ನಮ್ಮ ಹೆಜ್ಜೆ ಸಾಗುತ್ತದೆ. ಅಸಮಾಧಾನ ಮತ್ತಿತರೆ ಸುದ್ದಿಗಳು ಸತ್ಯಕ್ಕೆ ದೂರವಾದದ್ದು ಎಂದು ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.

ನನಗೆ ಪವರ್ ಫುಲ್ ಖಾತೆ ಕೊಟ್ಟಿದ್ದಕ್ಕೆ ಖುಷಿ ಇದೆ. ಸಿಎಂ ನನಗೆ ಬಹಳ ದೊಡ್ಡ ಜವಾಬ್ದಾರಿ ಕೊಟ್ಟಿದ್ದಾರೆ. ನನಗೆ ಈ ಖಾತೆ ಕೊಟ್ಟ ಸಿಎಂಗೆ ಅಭಿನಂದನೆ ಸಲ್ಲಿಸುವೆ. ಹಿರಿಯರ ಸಲಹೆ ಪಡೆದು ಸಮರ್ಥವಾಗಿ ಖಾತೆ ನಿಭಾಯಿಸುವೆ. ಪಕ್ಷ ನನಗೆ ಸಚಿವನಾಗಿ ಜವಾಬ್ದಾರಿ ನೀಡಿತ್ತು. ಈಗ ಮುಖ್ಯಮಂತ್ರಿಗಳು ಅದಕ್ಕಿಂತ ದೊಡ್ಡ ಜವಾಬ್ದಾರಿ ಕೊಟ್ಟಿದ್ದಾರೆ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ನಾನು ಮಂತ್ರಿ ಸ್ಥಾನಕ್ಕೆ ಆಸೆ ಪಟ್ಟವನು ಅಲ್ಲ, ಆಕಾಂಕ್ಷಿಯೂ ಅಲ್ಲ. ನನ್ನ ಮೇಲೆ ನಂಬಿಕೆ ಇಟ್ಟುಕೊಂಡು ಸಿಎಂ ಅವರು ಶಿಕ್ಷಣ ಖಾತೆ ಕೊಟ್ಟಿದ್ದಾರೆ. 15 ವರ್ಷಕ್ಕೂ ಅಧಿಕ ವರ್ಷ ವಿದ್ಯಾರ್ಥಿ ಪರಿಷತ್ನಲ್ಲಿ ಕೆಲಸ ಮಾಡಿದ್ದೇನೆ ಅಂತ ಕೊಟ್ಟಿರಬಹುದು. ಸುರೇಶ್ ಕುಮಾರ್, ವಿಶ್ವೇಶ್ವರ ಹೆಗಡೆ, ಎಚ್.ವಿಶ್ವನಾಥ್ ನಂತರವು ನನ್ನ ಜೊತೆಗೆ ಇದ್ದಾರೆ. ಇಲಾಖೆಯಲ್ಲಿ ಅಲ್ಪಸ್ವಲ್ಪ ಕೊರತೆಗಳಿವೆ. ಅದನ್ನ ಪರಿಪೂರ್ಣ ಮಾಡುವ ಕೆಲಸ ಮಾಡುತ್ತೇನೆ. ತಜ್ಞರ ಸಲಹೆ ಪಡೆದು ಶಾಲೆ ಆರಂಭಿಸುತ್ತೇವೆ ಅಂತ ನೂತನ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು ಹಳೆ ಖಾತೆಯನ್ನೆ ಪಡೆದುಕೊಂಡಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್, ಇಂತಹದ್ದೇ ಖಾತೆ ಬೇಕೆಂದು ನಾನು ಕೇಳಿರಲಿಲ್ಲ. ನನಗೆ ಮತ್ತೆ ಕೃಷಿ ಖಾತೆ ಕೊಟ್ಟಿದ್ದಕ್ಕೆ ಖುಷಿ ಇದೆ. ನನಗೆ ಕೃಷಿ ಖಾತೆ ನಿಭಾಯಿಸಿದ ಅನುಭವ ಇದೆ. ಹೀಗಾಗಿ ನನಗೆ ಕೊಟ್ಟ ಖಾತೆ ನಿಭಾಯಿಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ

Karnataka Cabinet: ಇಂದೇ ಸಚಿವರಿಗೆ ಖಾತೆ ಹಂಚಿಕೆ; ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ

ಯಾವ ಖಾತೆ ಇದ್ದರೂ ಅದರ ಯೋಜನೆಗಳನ್ನು ತಳಮಟ್ಟದ ಜನರಿಗೆ ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನ ಮಾಡುವೆ: ಶಶಿಕಲಾ ಜೊಲ್ಲೆ

(Defferent Karnataka Cabinet ministers react to cabinet posts)

ಹನುಮಾನ್ ದೇವಸ್ಥಾನಕ್ಕೆ ಐದು ಕೋಟಿ ರೂ. ದೇಣಿಗೆ ಕೊಟ್ಟ ಮುಖೇಶ್ ಅಂಬಾನಿ
ಹನುಮಾನ್ ದೇವಸ್ಥಾನಕ್ಕೆ ಐದು ಕೋಟಿ ರೂ. ದೇಣಿಗೆ ಕೊಟ್ಟ ಮುಖೇಶ್ ಅಂಬಾನಿ
ರೋಗಿ ನರಳುತ್ತಿದ್ದರೂ ಚಿಕಿತ್ಸೆ ನೀಡದೆ ಮೊಬೈಲಲ್ಲಿ ಹರಟುತ್ತಿದ್ದ ವೈದ್ಯ!
ರೋಗಿ ನರಳುತ್ತಿದ್ದರೂ ಚಿಕಿತ್ಸೆ ನೀಡದೆ ಮೊಬೈಲಲ್ಲಿ ಹರಟುತ್ತಿದ್ದ ವೈದ್ಯ!
ಕೋಗಿಲು ಕದನ: ಬಿಜೆಪಿ ವಿರುದ್ಧ ಕೃಷ್ಣಭೈರೇಗೌಡ ಸ್ಫೋಟಕ ಆರೋಪ
ಕೋಗಿಲು ಕದನ: ಬಿಜೆಪಿ ವಿರುದ್ಧ ಕೃಷ್ಣಭೈರೇಗೌಡ ಸ್ಫೋಟಕ ಆರೋಪ
ರಣರೋಚಕ ಪಂದ್ಯ, ಇಬ್ಬರು ರಿಟೈರ್ಡ್​ ಔಟ್, ಮ್ಯಾಚ್ ಟೈ
ರಣರೋಚಕ ಪಂದ್ಯ, ಇಬ್ಬರು ರಿಟೈರ್ಡ್​ ಔಟ್, ಮ್ಯಾಚ್ ಟೈ
ಕನ್ನಡ ಮಾತನಾಡದಂತೆ ವಾರ್ಡನ್ ಧಮ್ಕಿ: ಕಾಲೇಜು ಮುಂಭಾಗ ಭಾರಿ ಪ್ರತಿಭಟನೆ
ಕನ್ನಡ ಮಾತನಾಡದಂತೆ ವಾರ್ಡನ್ ಧಮ್ಕಿ: ಕಾಲೇಜು ಮುಂಭಾಗ ಭಾರಿ ಪ್ರತಿಭಟನೆ
‘ಚಾನೆಲ್ ಮನೆ ಮಗಳಾದರೆ ಉಳಿಯಲು ಸಾಧ್ಯವಿಲ್ಲ, ಅದು ಸುಳ್ಳು’; ಸ್ಪಂದನಾ
‘ಚಾನೆಲ್ ಮನೆ ಮಗಳಾದರೆ ಉಳಿಯಲು ಸಾಧ್ಯವಿಲ್ಲ, ಅದು ಸುಳ್ಳು’; ಸ್ಪಂದನಾ
ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ; ಜೆಜೆ ನಗರ ಠಾಣೆಗೆ ಜಮೀರ್ ಭೇಟಿ
ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ; ಜೆಜೆ ನಗರ ಠಾಣೆಗೆ ಜಮೀರ್ ಭೇಟಿ
ಬಾಯ್​ಫ್ರೆಂಡ್ ಹಾಗೂ ಮದುವೆ ಬಗ್ಗೆ ಮಾತನಾಡಿದ ಸ್ಪಂದನಾ ಸೋಮಣ್ಣ
ಬಾಯ್​ಫ್ರೆಂಡ್ ಹಾಗೂ ಮದುವೆ ಬಗ್ಗೆ ಮಾತನಾಡಿದ ಸ್ಪಂದನಾ ಸೋಮಣ್ಣ
ಬಳ್ಳಾರಿ ದಂಗಲ್​​​: ಜನಾರ್ದನ ರೆಡ್ಡಿ ಮನೆಯಲ್ಲಿ ರಾಶಿ ರಾಶಿ ದೊಣ್ಣೆ ಪತ್ತೆ
ಬಳ್ಳಾರಿ ದಂಗಲ್​​​: ಜನಾರ್ದನ ರೆಡ್ಡಿ ಮನೆಯಲ್ಲಿ ರಾಶಿ ರಾಶಿ ದೊಣ್ಣೆ ಪತ್ತೆ
ಅಶ್ಲೀಲ ಪದ ಬಳಕೆ ವಿರುದ್ಧ ಸಿಡಿದೆದ್ದ ಜನಪದ ಕಲಾವಿದರು: ಕಾರಣ ಇಲ್ಲಿದೆ
ಅಶ್ಲೀಲ ಪದ ಬಳಕೆ ವಿರುದ್ಧ ಸಿಡಿದೆದ್ದ ಜನಪದ ಕಲಾವಿದರು: ಕಾರಣ ಇಲ್ಲಿದೆ