
ಬೆಂಗಳೂರು: ದಿನದಿಂದ ದಿನಕ್ಕೆ ಡೆಂಘಿ (Dengue) ಕೇಸ್ ಪ್ರಮಾಣ ಹೆಚ್ಚಾಗುತ್ತಲೆಯಿದ್ದು, ಮೂರು ಸಾವಿರತ್ತ ಡೆಂಘಿ ಕೇಸ್ಗಳ ಸಂಖ್ಯೆ ದಾಖಾಲಾಗಿದೆ. ರಾಜ್ಯದಲ್ಲಿ ಎರಡು ತಿಂಗಳ ಅಂತರದಲ್ಲಿ ಡೆಂಘಿ ಕೇಸ್ಗಳ ಪ್ರಮಾಣ ದುಪ್ಪಟ್ಟಾಗಿದೆ. ರಾಜ್ಯದ 176 ತಾಲೂಕಿನ 1807 ಹಳ್ಳಿಗಳಲ್ಲಿ ಡೆಂಘಿ ಕೇಸ್ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ 800ಕ್ಕೆ ಡೆಂಘಿ ಕೇಸ್ ಪ್ರಮಾಣ ಏರಿಕೆಯಾಗಿದೆ. ಮಳೆಗಾಲದಲ್ಲಿ 3 ಪಟ್ಟು ಹೆಚ್ಚಾಗುತ್ತಿದ್ದು, ಮೇ ತಿಂಗಳಲ್ಲಿ 1100 ರಷ್ಟಿದ್ದ ಕೇಸ್ಗಳು ಜುಲೈ ತಿಂಗಳ ಅಂತ್ಯಕ್ಕೆ 3035 ಕ್ಕೆ ಏರಿಕೆ ಆಗಿದೆ. ಕೇವಲ ಎರಡು ತಿಂಗಳ ಅಂತರದಲ್ಲಿ 3 ಪಟ್ಟು ಕೇಸ್ಗಳು ಹೆಚ್ಚಳವಾಗಿದ್ದು, ರಾಜ್ಯದಲ್ಲಿ 10 ಜಿಲ್ಲೆಗಳಲ್ಲಿ ಡೆಂಘಿ ಕೇಸ್ಗಳು ಹೆಚ್ಚಾಗುತ್ತಿದ್ದಂತೆ ವೈದ್ಯರುಗಳಿಂದ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: Diabetes: ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಈ ಆಹಾರಗಳನ್ನು ಸೇವಿಸಿ
ಯಾವ್ಯವ ಜಿಲ್ಲೆಗಳಲ್ಲಿ ಕೇಸ್ಗಳು ಹೆಚ್ಚಾಗಿವೆ ಎನ್ನುವುದನ್ನ ನೋಡುವುದಾದರೆ
ಮೈಸೂರು – 349
ಉಡುಪಿ – 377
ದಕ್ಷಿಣ ಕನ್ನಡ – 190
ಶಿವಮೊಗ್ಗ – 175
ಚಿತ್ರದುರ್ಗ – 170
ಮಂಡ್ಯ – 102
ಹಾಸನ – 132
ವಿಜಯಪುರ – 128
ಬೆಳಗಾವಿ – 116
ದಾವಣಗೆರೆ – 119
ಕಲಬುರುಗಿ – 105 ರಷ್ಟು ಕೇಸ್ಗಳು ಹೆಚ್ಚಾಗಿವೆ.
ಇದನ್ನೂ ಓದಿ: Bitter Gourd Benefits: ಹಾಗಲಕಾಯಿ ಸಿಪ್ಪೆಯನ್ನು ಎಸೆಯಬೇಡಿ, ಏನೆಲ್ಲಾ ಪ್ರಯೋಜನಗಳಿವೆ ತಿಳಿಯಿರಿ
ಇನ್ನು ಡೆಂಘಿ ಕೇಸ್ಗಳ ಜೊತೆಗೆ ಚಿಕನ್ ಗುನ್ಯ ಕೇಸ್ಗಳ ಪ್ರಮಾಣವು ಹೆಚ್ಚಾಗಿದ್ದು, ಎರಡು ತಿಂಗಳ ಹಿಂದೆ 482 ಕೇಸ್ಗಳು 852 ಕ್ಕೆ ಏರಿಕೆಯಾಗಿವೆ. ಇನ್ನು ಬೆಂಗಳೂರಿನಲ್ಲಿಯು ಡೆಂಘಿ ಕೇಸ್ ಪ್ರಮಾಣ ಏರಿಕೆಯಾಗಿದ್ದು, ಮಹದೇವಪುರ ಹಾಗೂ ಪೂರ್ವವಲಯಗಳಲ್ಲಿ ಕೇಸ್ಗಳ ಸಂಖ್ಯೆ ಹೆಚ್ಚಳವಾಗಿದೆ.
ಬೆಂಗಳೂರಿನ ಯಾವ್ಯಾವ ವಲಯಗಳಲ್ಲಿ ಎಷ್ಟೇಷ್ಟು ಕೇಸ್ಗಳು ಏರಿಕೆಯಾಗಿವೆ ಎನ್ನುವುದನ್ನ ನೋಡುವುದಾದರೆ
ಬೊಮ್ಮನಹಳ್ಳಿ – 28
ದಾಸರಹಳ್ಳಿ – 13
ಪೂರ್ವ ವಲಯ – 288
ಮಹದೇವಪುರ – 152
ಆರ್ ಆರ್ ನಗರ – 36
ದಕ್ಷಿಣ ವಲಯ – 68
ಪಶ್ಚಿಮ ವಲಯ – 83
ಯಲಹಂಕ – 32