ಈ ಬಾರಿಯ ಲಾಲ್ ಬಾಗ್ ಫ್ಲವರ್ ಶೋನಲ್ಲಿ ಅಣ್ಣಾವ್ರು, ಪುನೀತ್ರದ್ದೆ ರಂಗು: ಇದರ ವಿಶೇಷತೆ ಏನು?

ಅಣ್ಣಾವ್ರು ಎರಡು ಬಾರಿ ಲಾಲ್ ಬಾಗ್​ಗೆ ವಿಸಿಟ್ ಕೊಟ್ಟಿದ್ರು. ಪುನೀತ್ ಒಮ್ಮೆ ಬಂದಿದ್ರು. 15 ಲಕ್ಷ ಜನ ಬರುವ ನಿರೀಕ್ಷೆ ಇದೆ. ಲಾಲ್ ಬಾಗ್ ಗಾಜಿನ ಮನೆಯಲ್ಲೇ ಅಣ್ಣಾವ್ರಿಗೆ ಪದ್ಮವಿಭೂಷಣ ನೀಡಿದ್ದು.

ಈ ಬಾರಿಯ ಲಾಲ್ ಬಾಗ್ ಫ್ಲವರ್ ಶೋನಲ್ಲಿ ಅಣ್ಣಾವ್ರು, ಪುನೀತ್ರದ್ದೆ ರಂಗು: ಇದರ ವಿಶೇಷತೆ ಏನು?
ಡಾ.ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್
Follow us
TV9 Web
| Updated By: ಆಯೇಷಾ ಬಾನು

Updated on: Jul 29, 2022 | 3:08 PM

ಬೆಂಗಳೂರು: ಕಳೆದ ಎರಡು ವರ್ಷದಿಂದ ಕೊರೊನಾ(Coronavirus) ಕಾರಣದಿಂದಾಗಿ ನಿಂತಿದ್ದ ಲಾಲ್ ಬಾಗ್ ಫ್ಲವರ್ ಶೋ (Lalbagh Flower Show) ಈ ವರ್ಷ ಅದ್ದೂರಿಯಾಗಿ ನಡೆಯಲಿದೆ. ಆಗಸ್ಟ್ 5ರಿಂದ ಆ.15ರವರೆಗೆ ಫ್ಲವರ್ ಶೋ ನಡೆಯಲಿದ್ದು ಆಗಸ್ಟ್ 5 ರಂದು ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟನೆ(Basavaraj Bommai) ಮಾಡಲಿದ್ದಾರೆ. ಅದರಲ್ಲೂ ಈ ಬಾರಿ ವಿಶೇಷ ಅಂದ್ರೆ ಈ ಬಾರಿ ನಟ ಪುನೀತ್ ರಾಜ್ ಕುಮಾರ್(Puneeth Rajkumar) ಹೆಸರಿನಲ್ಲಿ ಫ್ಲವರ್ ಶೋ ನಡೆಯುತ್ತದೆ. ಡಾ.ರಾಜ್ ಕುಮಾರ್(Dr Raj kumar) ಅವರ ಗಾಜನೂರಿನ ಮನೆಗೆ ಹೂವಿನ ಅಲಂಕಾರ ಮಾಡಲಾಗುತ್ತಿದೆ.

ಲಾಲ್ ಬಾಗ್ ಗಾಜಿನ ಮನೆಯಲ್ಲೇ ಅಣ್ಣಾವ್ರಿಗೆ ಪದ್ಮವಿಭೂಷಣ ನೀಡಿದ್ದು

ಇನ್ನು ಈ ಬಾರಿಯ ಲಾಲ್ ಬಾಗ್ ಫ್ಲವರ್ ಶೋ ಬಗ್ಗೆ ತೋಟಗಾರಿಕೆ ಇಲಾಖೆ ನಿರ್ದೇಶಕ ಜಗದೀಶ್ ಮಾಹಿತಿ ನೀಡಿದ್ದಾರೆ. ಇದು 212ನೇ ಫ್ಲವರ್ ಶೋ. ಲಾಲ್ ಬಾಗ್ನಲ್ಲಿ ಈ ಬಾರಿಯ ಫ್ಲವರ್ ಶೋ ಅಣ್ಣಾವ್ರು ಮತ್ತು ಪುನೀತ್ ಗೆ ಡೆಡಿಕೇಟ್ ಮಾಡ್ತಿದ್ದೀವಿ. ಕಳೆದ ಒಂದೂವರೆ ವರ್ಷಗಳಿಂದ ಕೊರೊನಾ ಕಾರಣ ಫ್ಲವರ್ ಶೋ ಮಾಡಿರಲಿಲ್ಲ. ಗಾಜನೂರಿನ ಮನೆಯನ್ನ 4 ಲಕ್ಷ ಹೂಗಳಿಂದ ಅಲಂಕಾರ ಮಾಡ್ತೀವಿ. ಅಣ್ಣಾವ್ರು ಎರಡು ಬಾರಿ ಲಾಲ್ ಬಾಗ್​ಗೆ ವಿಸಿಟ್ ಕೊಟ್ಟಿದ್ರು. ಪುನೀತ್ ಒಮ್ಮೆ ಬಂದಿದ್ರು. 15 ಲಕ್ಷ ಜನ ಬರುವ ನಿರೀಕ್ಷೆ ಇದೆ. ಲಾಲ್ ಬಾಗ್ ಗಾಜಿನ ಮನೆಯಲ್ಲೇ ಅಣ್ಣಾವ್ರಿಗೆ ಪದ್ಮವಿಭೂಷಣ ನೀಡಿದ್ದು ಎಂದ ತಿಳಿಸಿದ್ದಾರೆ.

ಈ ಬಾರಿ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ಪುನೀತ್ ರಾಜ್ ಕುಮಾರ್ ಹಾಗೂ ಗಾಜನೂರಿನ ಮನೆ ವಿಶೇಷ ಕಳೆದ ಎರಡು ವರ್ಷ ಲಾಲ್‍ಬಾಗ್ ಫ್ಲವರ್ ಶೋ ಕೋವಿಡ್‍ನಿಂದ ಮಾಡಿರಲಿಲ್ಲ. ಆದರೆ ಈ ಬಾರಿ ಆಗಸ್ಟ್ 15ರಂದು ಹಿಂದೆ ಮಾಡುತ್ತಿದ್ದಕ್ಕಿಂತ ಹೆಚ್ಚಾಗಿ ಮಾಡಲು ತಯಾರಿ ನಡೆಯುತ್ತಿದೆ. ವಿದೇಶಗಳಿಂದಲೆಲ್ಲ ಹೂಗಳನ್ನು ತರಿಸಲಾಗುತ್ತಿದೆ. ಗಾಜನೂರಿನ ಮನೆಯನ್ನ 4 ಲಕ್ಷ ಹೂಗಳಿಂದ ಅಲಂಕಾರ ಮಾಡಲಾಗುತ್ತೆ.