Bengaluru Crime: ಹಣ, ಚಿನ್ನ ಮುಟ್ಟದೆ ಕೇವಲ ಲ್ಯಾಪ್​ಟಾಪ್, ಮೊಬೈಲ್ ಕದಿಯುವ ಡಿಫರೆಂಟ್ ಕಳ್ಳ ಪೊಲೀಸರ ಬಲೆಗೆ!

| Updated By: ganapathi bhat

Updated on: Mar 07, 2022 | 1:22 PM

ಬೈಯಪ್ಪನಹಳ್ಳಿ ಪೊಲೀಸರಿಂದ ಆರೋಪಿಯ ಬಂಧನ ಮಾಡಲಾಗಿದೆ. ನಾಗಲ್ಯಾಂಡ್ ಮೂಲದ ತಾಂಗ್ ಸೈನ್ ಬಂಧಿತ ಆರೋಪಿ ಆಗಿದ್ದಾನೆ. ಆರೋಪಿಯಿಂದ ಸುಮಾರು 9 ಲಕ್ಷ ಮೌಲ್ಯದ ಲ್ಯಾಪ್ ಟಾಪ್ ಹಾಗೂ ಮೊಬೈಲ್ ವಶಕ್ಕೆ ಪಡೆಯಲಾಗಿದೆ.

Bengaluru Crime: ಹಣ, ಚಿನ್ನ ಮುಟ್ಟದೆ ಕೇವಲ ಲ್ಯಾಪ್​ಟಾಪ್, ಮೊಬೈಲ್ ಕದಿಯುವ ಡಿಫರೆಂಟ್ ಕಳ್ಳ ಪೊಲೀಸರ ಬಲೆಗೆ!
ಲ್ಯಾಪ್​ಟಾಪ್, ಮೊಬೈಲ್ ಕದಿಯುವ ಡಿಫರೆಂಟ್ ಕಳ್ಳ ಪೊಲೀಸರ ಬಲೆಗೆ!
Follow us on

ಬೆಂಗಳೂರು: ನಗರದಲ್ಲಿ ಒಬ್ಬ ಡಿಫರೆಂಟ್ ಕಳ್ಳನಿದ್ದಾನೆ. ಎಲ್ರೂ ಚಿನ್ನಾಭರಣ, ಹಣ ಕದ್ದರೆ ಈತ ಅದನ್ನು ಮುಟ್ಟೋದಿಲ್ಲ. ಮನೆಗೆ ನುಗ್ಗಿದರೂ ಒಡವೆ, ಹಣಕ್ಕೆ ಕೈ ಹಾಕದ ಖದೀಮ ಕೇವಲ ಮೊಬೈಲ್, ಲ್ಯಾಪ್ ಟಾಪ್ ಮಾತ್ರ ಕಳ್ಳತನ ಮಾಡುತ್ತಾನೆ. ಮನೆಗೆ ನುಗ್ಗಿ ಮೊಬೈಲ್ ಲ್ಯಾಪ್ ಟಾಪ್ ಕಳ್ಳತನ ನಡೆಸ್ತಾ ಇದ್ದ ಚಾಲಕಿ ಆರೋಪಿಯನ್ನು ಇದೀಗ ಬಂಧಿಸಲಾಗಿದೆ. ಬೈಯಪ್ಪನಹಳ್ಳಿ ಪೊಲೀಸರಿಂದ ಆರೋಪಿಯ ಬಂಧನ ಮಾಡಲಾಗಿದೆ. ನಾಗಲ್ಯಾಂಡ್ ಮೂಲದ ತಾಂಗ್ ಸೈನ್ ಬಂಧಿತ ಆರೋಪಿ ಆಗಿದ್ದಾನೆ. ಆರೋಪಿಯಿಂದ ಸುಮಾರು 9 ಲಕ್ಷ ಮೌಲ್ಯದ ಲ್ಯಾಪ್ ಟಾಪ್ ಹಾಗೂ ಮೊಬೈಲ್ ವಶಕ್ಕೆ ಪಡೆಯಲಾಗಿದೆ.

ಮಂಡ್ಯ: ಯುಕ್ತಿ ಕೊಲೆ ಪ್ರಕರಣದಲ್ಲಿ ಆರೋಪಿ ಜತೆ ಪೊಲೀಸರು ಶಾಮೀಲಾಗಿದ್ದಾರೆಂದು ಆರೋಪ

ಮಳವಳ್ಳಿಯ ಯುಕ್ತಿ ಕೊಲೆ ಪ್ರಕರಣದಲ್ಲಿ ಆರೋಪಿ ಜತೆ ಪೊಲೀಸರು ಶಾಮೀಲಾಗಿದ್ದಾರೆಂದು ಮೃತಳ ಪೋಷಕರು ಆರೋಪ ಮಾಡಿದ್ದಾರೆ. ಮಳವಳ್ಳಿ ಗ್ರಾಮಾಂತರ ಠಾಣೆ ಪೊಲೀಸರ ವಿರುದ್ಧ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಜನವರಿ 27ರಂದು ಮಳವಳ್ಳಿ ವಿದ್ಯಾರ್ಥಿನಿ ಯುಕ್ತಿ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಒಂದೂವರೆ ತಿಂಗಳ ಹಿಂದೆ ಘಟನೆ ನಡೆದಿತ್ತು. ಯುವತಿ ಮೃತದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. 23 ದಿನದದ ನಂತರ ಯುವತಿ ಗುರುತು ಪತ್ತೆ ಆಗಿತ್ತು. ಕಿರುಗಾವಲು ಗ್ರಾಮದ ನಿಲಗಿರಿ ತೋಪಿನಲ್ಲಿ ಮೃತದೇಹ ಪತ್ತೆಯಾಗಿತ್ತು.

ಜನವರಿ 25 ರಂದು ಮಗಳು ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದ ಕುಟುಂಬಸ್ಥರು, ಆದರೆ ಮಳವಳ್ಳಿ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ ಎಂದು ಆರೋಪ ಮಾಡಿದ್ದರು. ಯುವತಿ ಮೃತದೇಹ ಪತ್ತೆಯಾದ ಬಳಿಕ ಪೊಲೀಸರೆ ಕರೆದು ಜನವರಿ 28 ರಂದು ದೂರು ದಾಖಲಿಸಿದ ಆರೋಪವೂ ಕೇಳಿಬಂದಿತ್ತು. ಆದ್ರೆ ವಿದ್ಯಾರ್ಥಿನಿ ಸತ್ತ 23 ದಿನದ ನಂತರ ಯುಕ್ತಿ ಕುಟುಂಬಸ್ಥರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಯುವತಿ ಧರಿಸಿದ್ದ ಆಭರಣಗಳನ್ನ ಫೆ 17 ರಂದು ಯುವತಿ ಕುಟುಂಬಸ್ಥರಿಗೆ ಕಳುಹಿಸಿದ್ದರು.

ಪೊಲೀಸರು ಪ್ರಕರಣ ಮುಚ್ಚಿಹಾಕಲು ಪ್ರಯತ್ನ ಮಾಡಿದ್ದಾರೆ ಎಂದು ಕುಟುಂಬಸ್ಥರ ಆರೋಪ ಕೇಳಿಬಂದಿದೆ. ಸದ್ಯ ಯುವತಿ ಪ್ರಿಯಕರ ಶಶಿಕುಮಾರ್ ನಾಪತ್ತೆ ಆಗಿದ್ದಾರೆ. ಕಳೆದ ಒಂದೂವರೆ ತಿಂಗಳಿಂದಲು ನಾಪತ್ತೆಯಾಗಿರುವ ಪ್ರಿಯಕರನನ್ನು ರಕ್ಷಣೆ ಮಾಡಲು ಪೊಲೀಸರು ಶಾಮೀಲಾಗಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಮಳವಳ್ಳಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮೈಸೂರು: ಪ್ರೀತಿಸಿ ವಿವಾಹವಾದ ಜೋಡಿಗೆ ಸಂಕಷ್ಟ

ಪ್ರೀತಿಸಿ ವಿವಾಹವಾದ ಜೋಡಿಗೆ ಸಂಕಷ್ಟ ಎದುರಾಗಿದೆ. ಪೋಷಕರು ವಿವಾಹವಾದ ಜೋಡಿಯನ್ನು ಬೇರ್ಪಡಿಸಿದ್ದಾರೆ. ಯುವತಿಯಿಂದ ಬೇರ್ಪಟ್ಟ ಯುವಕ ಅತಂತ್ರರಾಗಿದ್ದಾರೆ. ಮೈಸೂರಿನ ಮಹಮ್ಮದ್ ಆಖಿಬ್ ಒಡಿಸ್ಸಾದ ಮೂಲದ ರೌತ್ ಪ್ರೀತಿಸಿ ಮದುವೆಯಾಗಿದ್ದರು. ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಬಳಿ ಘಟನೆ ನಡೆದಿದೆ. ಮೈಸೂರಿನ ಯುವಕ ಹಾಗೂ ಒಡಿಸ್ಸಾದ ಮೂಲದ ಯುವತಿ ಪ್ರೀತಿಸಿ ಮದುವೆಯಾಗಿದ್ದರು. ಇದಕ್ಕೆ ಯುವತಿ ಪೋಷಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಮಗಳು ಅಪಹರಣವಾಗಿದ್ದಾಳೆಂದು ಪೋಷಕರು ದೂರು ದಾಖಲಿಸಿದ್ದರು. ದೂರಿನನ್ವಯ  ಒಡಿಸ್ಸಾ ಪೊಲೀಸರು ಯುವತಿಯನ್ನು ಕರೆದುಕೊಂಡು ಹೋಗಿದ್ದಾರೆ. ಯುವತಿಯ ಹೇಳಿಕೆ ಪಡೆಯದೇ ಒಡಿಸ್ಸಾಗೆ ಕರೆದುಕೊಂಡ ಆರೋಪ ಕೇಳಿಬಂದಿದೆ.

ಬೆಂಗಳೂರು: ಬೆಳ್ಳಂದೂರು ಠಾಣೆ ಪೊಲೀಸರಿಂದ ನಾಲ್ವರು ಮನೆಗಳ್ಳರ ಬಂಧನ

ಬೆಳ್ಳಂದೂರು ಠಾಣೆ ಪೊಲೀಸರಿಂದ ನಾಲ್ವರು ಮನೆಗಳ್ಳರ ಬಂಧನ ಮಾಡಲಾಗಿದೆ. ಸಂತೋಷ್, ಮೋಹನ್, ಸಾವಿತ್ರಿ, ರೇಣುಕಾ ಬಂಧಿಸಿ 25 ಲಕ್ಷ ರೂ. ಮೌಲ್ಯದ 510 ಗ್ರಾಂ ಚಿನ್ನ, 500 ಗ್ರಾಂ ಬೆಳ್ಳಿ ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ಬಂಧನದಿಂದ ವೈಟ್ ಫೀಲ್ಡ್, ಮಾರತ್ತಹಳ್ಳಿ, ಬೆಳ್ಳಂದೂರು ವ್ಯಾಪ್ತಿಯಲ್ಲಿ 7 ಪ್ರಕರಣಗಳು ಪತ್ತೆ ಆಗಿದೆ.

ಇದನ್ನೂ ಓದಿ: Crime News: ಸಂಚಾರ ವಿಭಾಗ ಜಂಟಿ ಪೊಲೀಸ್ ಆಯಕ್ತರ ಕಚೇರಿಯಲ್ಲೇ ಕಳ್ಳತನ; ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಇದನ್ನೂ ಓದಿ: Crime Update: ಎಬಿವಿಪಿ ವಿದ್ಯಾರ್ಥಿಗೆ ಕೊಲೆ ಬೆದರಿಕೆ, ಕಿಟಕಿ ರಾಡ್ ಮುರಿದು ಕಳ್ಳತನ, ಡ್ರಗ್ಸ್​ ದಂಧೆಯಲ್ಲಿ ತೊಡಗಿದ್ದವರ ಬಂಧನ

Published On - 1:10 pm, Mon, 7 March 22