ಪ್ರವೀಣ್ ನೆಟ್ಟಾರು ಹತ್ಯೆ: ಆರೋಪಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಡಿಕೆ ಶಿವಕುಮಾರ್ ಆಗ್ರಹ
ಪ್ರವೀಣ್ ನೆಟ್ಟಾರು ಕುಟುಂಬ, ಸ್ನೇಹಿತ ವರ್ಗಕ್ಕೆ ಸಂತಾಪಗಳು. ಕೃತ್ಯದಲ್ಲಿ ಯಾರೇ ಭಾಗಿಯಾಗಿದ್ರೂ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಿ ಎಂದು ಟ್ವೀಟ್ ಮಾಡಿದ್ದಾರೆ.
ಬೆಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ(Praveen Nettar) ಪ್ರಕರಣಕ್ಕೆ ಸಂಬಂಧಿಸಿ ಡಿಕೆ ಶಿವಕುಮಾರ್(DK Shivakumar) ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಪ್ರವೀಣ್ ನೆಟ್ಟಾರು ಭೀಕರ ಹತ್ಯೆಗೀಡಾಗಿದ್ದು ಬೇಸರದ ಸಂಗತಿ. ಪ್ರವೀಣ್ ನೆಟ್ಟಾರು ಕುಟುಂಬ, ಸ್ನೇಹಿತ ವರ್ಗಕ್ಕೆ ಸಂತಾಪಗಳು. ಕೃತ್ಯದಲ್ಲಿ ಯಾರೇ ಭಾಗಿಯಾಗಿದ್ರೂ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಿ ಎಂದು ಟ್ವೀಟ್ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ, ಸುಳ್ಯ ತಾಲ್ಲೂಕಿನ ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರು ಭೀಕರವಾಗಿ ಹತ್ಯೆಗೀಡಾಗಿರುವುದು ಬೇಸರದ ಸಂಗತಿ. ಅವರ ಕುಟುಂಬ ಹಾಗೂ ಸ್ನೇಹಿತ ವರ್ಗಕ್ಕೆ ಸಂತಾಪಗಳು. ಈ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡುತ್ತೇನೆ. pic.twitter.com/3YEiuNG8p6
— DK Shivakumar (@DKShivakumar) July 27, 2022
ಪೈಶಾಚಿಕ ಕೃತ್ಯ ಇಲ್ಲಿಗೆ ಕೊನೆಯಾಗಲಿ -ಎಂ.ಬಿ. ಪಾಟೀಲ್
ಇನ್ನು ಪ್ರವೀಣ್ ಹತ್ಯೆಗೆ ಕೆಪಿಸಿಸಿ ಪ್ರಚಾರ ಸಮೀತಿ ಆಧ್ಯಕ್ಷ ಎಂ.ಬಿ. ಪಾಟೀಲ್ ಖಂಡನೆ ವ್ಯಕ್ತಪಡಿಸಿದ್ದಾರೆ. ಹತ್ಯೆ ಖಂಡನೀಯ ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ಪ್ರವೀಣ ಕುಟುಂಬಸ್ಥರಿಗೆ ಸಂತಾಪ. ಪೈಶಾಚಿಕ ಕೃತ್ಯ ಇಲ್ಲಿಗೆ ಕೊನೆಯಾಗಲಿ, ರಾಜ್ಯ-ದೇಶದಲ್ಲಿ ಶಾಂತಿ-ಸೌಹಾರ್ದತೆ ನೆಲೆಸಲಿ. ಹಂತಕರನ್ನ ಪತ್ತೆ ಹಚ್ಚಿ ಉಗ್ರ ಶಿಕ್ಷೆ ನೀಡಿ ಎಂದು ಆಗ್ರಹಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಜರಂಗದಳದ ಮುಖಂಡ ಪ್ರವೀಣ್ ನೆಟ್ಟಾರು ಇವರನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ಖಂಡನೀಯ. ಕುಟುಂಬಸ್ಥರಿಗೆ ನನ್ನ ಸಂತಾಪಗಳು. ಅಪರಾಧಿಗಳನ್ನು ಪೊಲೀಸರು ಪತ್ತೆ ಹಚ್ಚಿ ಕಾನೂನು ರೀತಿ ಉಗ್ರ ಶಿಕ್ಷೆ ಕೊಡಿಸಬೇಕಾಗಿದೆ. ಇಂತಹ ಪೈಶಾಚಿಕ ಕೃತ್ಯಗಳು ಇಲ್ಲಿಗೇ ಕೊನೆಯಾಗಲಿ.ರಾಜ್ಯ-ದೇಶದಲ್ಲಿ ಶಾಂತಿ-ಸೌಹಾರ್ದತೆ ನೆಲೆಸಲಿ. pic.twitter.com/GlZm0Bx6DY
— M B Patil (@MBPatil) July 27, 2022
Published On - 4:59 pm, Wed, 27 July 22