AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರವೀಣ್ ನೆಟ್ಟಾರು ಹತ್ಯೆ: ಟ್ವೀಟ್​ ಮಾಡಿ ಸಂತಾಪ ಸೂಚಿಸಿದ ಬಿಎಸ್​ ಯಡಿಯೂರಪ್ಪ

ಬಿಜೆಪಿ ಮುಖಂಡ ಪ್ರವೀಣ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರು ಟ್ವೀಟ್​ ಮಾಡಿ, "ನಮ್ಮ ಪಕ್ಷದ ಕಾರ್ಯಕರ್ತ ಶ್ರೀ ಪ್ರವೀಣ್ ನೆಟ್ಟಾರು ಅವರ ಬರ್ಬರ ಹತ್ಯೆ ಅತ್ಯಂತ ಆಘಾತ ಮತ್ತು ದುಃಖವನ್ನು ಉಂಟುಮಾಡಿದೆ. ದೇವರು ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ ಎಂದು ಸಂತಾಪ ಸೂಚಿಸಿದ್ದಾರೆ.

ಪ್ರವೀಣ್ ನೆಟ್ಟಾರು ಹತ್ಯೆ: ಟ್ವೀಟ್​ ಮಾಡಿ ಸಂತಾಪ ಸೂಚಿಸಿದ ಬಿಎಸ್​ ಯಡಿಯೂರಪ್ಪ
ಬಿ ಎಸ್ ಯಡಿಯೂರಪ್ಪ
TV9 Web
| Updated By: ವಿವೇಕ ಬಿರಾದಾರ|

Updated on:Jul 27, 2022 | 6:59 PM

Share

ಬೆಂಗಳೂರು: ಬಿಜೆಪಿ ಮುಖಂಡ ಪ್ರವೀಣ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರು ಟ್ವೀಟ್​ ಮಾಡಿ, “ನಮ್ಮ ಪಕ್ಷದ ಕಾರ್ಯಕರ್ತ ಶ್ರೀ ಪ್ರವೀಣ್ ನೆಟ್ಟಾರು ಅವರ ಬರ್ಬರ ಹತ್ಯೆ ಅತ್ಯಂತ ಆಘಾತ ಮತ್ತು ದುಃಖವನ್ನು ಉಂಟುಮಾಡಿದೆ. ದೇವರು ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ ಎಂದು ಸಂತಾಪ ಸೂಚಿಸಿದ್ದಾರೆ. ಪ್ರವೀಣ ಕುಟುಂಬದವರಿಗೆ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ಈ ಸಂದರ್ಭದಲ್ಲಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಅವರ ಕುಟುಂಬದ ಜೊತೆಯಲ್ಲಿದ್ದಾರೆ” ಪ್ರವೀಣ್ ಹತ್ಯೆಯ ಹಿಂದೆ ಇರುವ ವಿಚ್ಚಿದ್ರಕಾರಿ ಶಕ್ತಿಗಳನ್ನು ಕೂಡಲೇ ಪತ್ತೆ ಹಚ್ಚಿ, ತಪ್ಪಿತಸ್ಥರಿಗೆ ಕಾನೂನು ರೀತಿ ಕಠಿಣ ಶಿಕ್ಷೆಗೆ ಗುರಿಪಡಿಸಲು ಸರ್ಕಾರ ಬದ್ದವಾಗಿದೆ. ಶಾಂತಿ ಕಾಪಾಡುವ ಜೊತೆಗೆ, ಸಮಾಜವಿರೋಧಿ ಶಕ್ತಿಗಳನ್ನು ಮಟ್ಟಹಾಕುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಸಹಕರಿಸೋಣ ಎಂದು ವಿನಂತಿಸಿದ್ದಾರೆ.

ಈ ಸಂಬಂಧ ಬಿ ವೈ ವಿಜಯೇಂದ್ರ ಅವರು ಟ್ವೀಟ್​ ಮಾಡಿ, “ಕಾರ್ಯಕರ್ತರೇ ಪಕ್ಷದ ಆಧಾರ ಸ್ತಂಭವೆಂದು ನಂಬಿರುವ ಬಿಜೆಪಿ, ಪ್ರತೀ ಕಾರ್ಯಕರ್ತನನ್ನೂ ತನ್ನ ಕುಟುಂಬದ ಸದಸ್ಯನೆಂದು ಪರಿಗಣಿಸುತ್ತದೆ. ಕಾರ್ಯಕರ್ತರ ಮೇಲೆ ನಡೆಯುವ ಹಲ್ಲೆ, ಹತ್ಯೆಗಳನ್ನು ಎಂದೂ ಪಕ್ಷ ಹಗುರವಾಗಿ ತೆಗೆದುಕೊಂಡಿಲ್ಲ. ಕಾರ್ಯಕರ್ತರ ಪ್ರಾಣಕ್ಕೆ ಬೆಲೆ ಕಟ್ಟಲಾಗದು” ಎಂದು ಹೇಳಿದ್ದಾರೆ.

ವಿದ್ರೋಹಿ ಕ್ರಿಮಿನಲ್’ಗಳ ಅಟ್ಟಹಾಸವನ್ನು ಬೇರು ಸಹಿತ ಕಿತ್ತೊಗೆಯುವವರೆಗೂ ವಿರಮಿಸುವ ಪ್ರಶ್ನೆಯೇ ಇಲ್ಲ ನಮ್ಮದೇ ಸರ್ಕಾರ ಇರವಾಗ ವಿಶ್ವಾಸವಿಡಿ. ಹೆಮ್ಮೆಯ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆಯ ಘಟನೆ ಇನ್ನೆಂದೂ ಮರುಕಳಿಸದಂತೆ ತಾರ್ಕಿಕ ಅಂತ್ಯ ಹಾಡಲೇ ಬೇಕಿದೆ. ಕಾರ್ಯಕರ್ತರ ಕಿಚ್ಚು ಸಂಯಮದ ಎಲ್ಲೆ ಮೀರದಿರಲಿ. ನಿಮ್ಮ ನೋವಲ್ಲಿ ಪಕ್ಷದ ಪ್ರತೀ ನಾಯಕರೂ ಜತೆಗಿದ್ದಾರೆ ಎಂದು ಹೇಳಿದರು.

ಅಗಲಿದ ಪ್ರವೀಣ್ ನೆಟ್ಟಾರ್ ಕುಟುಂಬದ ಜತೆ ನಾವೆಲ್ಲರೂ ಇದ್ದು ಆ ಕುಟುಂಬಕ್ಕೆ ನೈತಿಕ ಧೈರ್ಯ ತುಂಬೋಣ ಪೋಲಿಸರ ತನಿಖೆಗೆ ಪೂರಕ ಸಹಕಾರ ನೀಡೋಣ. ಇದು ನಿಮ್ಮಲ್ಲಿ ನನ್ನ ಕಳಕಳಿಯ ಮನವಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಸಿದ್ದು ಸವದಿ ಪುತ್ರ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ

ಬಾಗಲಕೋಟೆ: ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ  ಖಂಡಿಸಿ ತೇರದಾಳ ಶಾಸಕ ಸಿದ್ದು ಸವದಿ ಪುತ್ರ ವಿದ್ಯಾಧರ ಸವದಿ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.  ಈ ಹಿನ್ನೆಲೆ ಬಾಗಲಕೋಟೆ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲಗೆ ರಾಜಿನಾಮೆ ಪತ್ರ ಬರೆದಿದ್ದಾರೆ. ರಾಜೀನಾಮೆ‌ ನೀಡಿರುವ ಬಗ್ಗೆ ಫೇಸ್ ಬುಕ್ ನಲ್ಲಿ ಪೋಸ್ಟ್ ಸಹ ಹಾಕಿದ್ದಾರೆ.

Published On - 6:56 pm, Wed, 27 July 22