DK Shivakumar Press Meet: ಅರ್ಧ ಗಂಟೆಯಲ್ಲಿ ಮುಗಿಯುವ ವಿಚಾರಣೆ 3 ದಿನ ನಡೆಸಿದ್ದಾರೆ, ರಾಹುಲ್ ಗಾಂಧಿಗೆ ಇಲ್ಲಸಲ್ಲದ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ

| Updated By: ಆಯೇಷಾ ಬಾನು

Updated on: Jun 15, 2022 | 9:47 PM

ನ್ಯಾಷನಲ್ ಹೆರಾಲ್ಡ್ ಗಾಂಧಿ ಕುಟುಂಬಕ್ಕೆ ಸೇರಿದ ಸ್ವತ್ತಲ್ಲ. ನ್ಯಾಷನಲ್ ಹೆರಾಲ್ಡ್ ಕಾಂಗ್ರೆಸ್ ಪಕ್ಷದ ಧ್ವನಿಯಾಗಿತ್ತು. ಕಾನೂನಿನಲ್ಲಿ ಎಲ್ಲೂ ಸಾಲ ಕೊಡಬಾರದೆಂದು ಹೇಳಿಲ್ಲ. ನ್ಯಾಷನಲ್ ಹೆರಾಲ್ಡ್ ಸಂಸ್ಥೆಗೆ ನಾವೆಲ್ಲರೂ ಹಣ ಹಾಕಿದ್ದೇವೆ.

DK Shivakumar Press Meet: ಅರ್ಧ ಗಂಟೆಯಲ್ಲಿ ಮುಗಿಯುವ ವಿಚಾರಣೆ 3 ದಿನ ನಡೆಸಿದ್ದಾರೆ, ರಾಹುಲ್ ಗಾಂಧಿಗೆ ಇಲ್ಲಸಲ್ಲದ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ
ಡಿ ಕೆ ಶಿವಕುಮಾರ
Follow us on

ಬೆಂಗಳೂರು: ನಗರದ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(DK Shivakumar), ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ತುರ್ತು ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ(Ramalinga Reddy), ಸಲೀಂ ಅಹ್ಮದ್(Salim Ahmed), ಧ್ರುವನಾರಾಯಣ(Dhruvanarayana) ಉಪಸ್ಥಿತರಿದ್ದಾರೆ. ನಾಳೆ ಕೆಪಿಸಿಸಿ ಕಚೇರಿಯಿಂದ ರಾಜಭವನದವರೆಗೆ ಮೆರವಣಿಗೆ ಮೂಲಕ ತೆರಳಿ ರಾಜಭವನಕ್ಕೆ ಮುತ್ತಿಗೆ ಹಾಕುತ್ತೇವೆ. ನಾಳೆ ಬೆಳಗ್ಗೆ 9.30ರಿಂದ ರಾಜಭವನ ಚಲೋ ಹಮ್ಮಿಕೊಂಡಿದ್ದೇವೆ. ಕಾಂಗ್ರೆಸ್ನ ನೂರಾರು ಕಾರ್ಯಕರ್ತರ ಜೊತೆ ಮುತ್ತಿಗೆ ಹಾಕುತ್ತೇವೆ ಎಂದು ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಜಂಟಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ‘ದೇಶದಲ್ಲಿ ನಡೆಯುತ್ತಿರುವ ಅಧಿಕಾರ ದುರುಪಯೋಗ, ಸಂವಿಧಾನಿಕ ಸಂಸ್ಥೆಗಳು ಹಾಗೂ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ಬಿಜೆಪಿ ಸರ್ಕಾರ ನಡೆಸುತ್ತಿರುವ ದ್ವೇಷದ ರಾಜಕಾರಣ ಹಾಗೂ ಪ್ರತಿಭಟನೆ ನಿರತರ ಮೇಲೆ ದೌರ್ಜನ್ಯ ಖಂಡಿಸಿ ಜೂನ್ 16, 2022 ರಂದು ಗುರುವಾರ ಬೆಳಗ್ಗೆ 10 ಗಂಟೆಗೆ ಪಕ್ಷದ ಕಚೇರಿಯಿಂದ ರಾಜಭವನ ಚಲೋ, ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.ಇದನ್ನೂ ಓದಿ: ಎರಡು ಕೊಲೆ ಮಾಡಿದ್ದ ಮೂವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಪ್ರಕಟ ಮಾಡಿದ ಚಿಕ್ಕೋಡಿ ನ್ಯಾಯಾಲಯ

‘ದೇಶದಲ್ಲಿ ಸಂವಿಧಾನ, ಕಾನೂನನ್ನು ಗಾಳಿಗೆ ತೂರಿ ಕಾಂಗ್ರೆಸ್ಸಿಗರ ಬಾಯಿ ಮುಚ್ಚಿಸಲು ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ಕಳೆದ ಮೂರು ದಿನಗಳಿಂದ ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರಿಗೆ ಇ.ಡಿ. ನೋಟೀಸ್ ಕೊಟ್ಟು ವಿಚಾರಣೆ ಮಾಡುತ್ತಿದೆ. ಎರಡು-ಮೂರು ಗಂಟೆಯಲ್ಲಿ ಮಾಡುವ ವಿಚಾರಣೆಯನ್ನು 10, 14 ಗಂಟೆಗಳ ಕಾಲ ಮಾಡಿ ಕಿರುಕುಳ ನೀಡುತ್ತಿದ್ದಾರೆ.

ನಮ್ಮ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ರಾಷ್ಟ್ರಪತಿಯಾಗಿದ್ದ ಅಬ್ದುಲ್ ಕಲಾಂ ಅವರು ಪ್ರಧಾನಿಯಾಗುವ ಆಹ್ವಾನ ಕೊಟ್ಟಾಗ, ದೇಶದ ಅಭಿವೃದ್ಧಿಗಾಗಿ, ಎಲ್ಲ ವರ್ಗಕ್ಕೆ ನ್ಯಾಯ ದೊರಕಿಸಲು ಪ್ರಧಾನಮಂತ್ರಿ ಸ್ಥಾನವನ್ನು ತ್ಯಾಗ ಮಾಡಿದ್ದರು. ರಾಹುಲ್ ಗಾಂಧಿ ಅವರು ಕೂಡ ಈ ದೇಶದ ಪ್ರಧಾನಿ ಆಗಬಹುದಾಗಿತ್ತು. ಎಲ್ಲ ನಾಯಕರು ಒತ್ತಾಯ ಮಾಡಿದರೂ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರು ತಮ್ಮ ಬಳಿಗೆ ಬಂದ ಅಧಿಕಾರ ಸ್ವೀಕರಿಸಲಿಲ್ಲ.

ನೆಹರೂ, ಸರ್ದಾರ್ ಪಟೇಲ್, ಪುರುಷೋತ್ತಮ ಟಂಡನ್, ಆಚಾರ್ಯ ದೇವ್ ಹಾಗೂ ಇತರೆ ನಾಯಕರು ಸೇರಿ ಅಸೋಸಿಯೇಟೆಡ್ ಜೆನರಲ್ ಲಿಮಿಟೆಡ್ ಎಂಬ ಸಂಸ್ಥೆ ಸ್ಥಾಪಿಸಿ, ಮಹಾತ್ಮ ಗಾಂಧಿ ಅವರ ಕ್ವಿಟ್ ಇಂಡಿಯಾ ಚಳುವಳಿಗೆ ಧ್ವನಿಯಾಗಿ, ಕಾಂಗ್ರೆಸ್ ಆಚಾರ, ವಿಚಾರಗಳನ್ನು ಜನರಿಗೆ ತಿಳಿಸಲು ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಇಂಗ್ಲೀಷ್, ಉರ್ದು, ಹಿಂದಿಯಲ್ಲಿ ಆರಂಭಿಸಿದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಈ ಪತ್ರಿಕೆಯಲ್ಲಿ ನೂರಾರು ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಈ ಸಂಸ್ಥೆ ಗಾಂಧಿ ಕುಟುಂಬದ್ದಲ್ಲ. ಇದು ನಮ್ಮ ಧ್ವನಿ ಎಂದು ಕಾಂಗ್ರೆಸ್ ಪಕ್ಷದ ನಾಯಕತ್ವ ಉಳಿಸಿಕೊಂಡು ಬಂದ ಪತ್ರಿಕೆ. ಎಲ್ಲಾ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಇದಕ್ಕೆ ಬೆಂಬಲ ನೀಡಿ ಬಂದಿದ್ದಾರೆ. ಆ ಸಂಸ್ಥೆ ನೌಕರರಿಗೆ ವೇತನ, ಮಾಡಿದ ಸಾಲ ತೀರಿಸಲು, ತೆರಿಗೆ ಕಟ್ಟಲು ಆರ್ಥಿಕ ಸಮಸ್ಯೆ ಎದುರಾದಾಗ ಆಸ್ತಿ ಹರಾಜು ಹಾಕುವ ಪರಿಸ್ಥಿತಿ ಎದುರಾಯಿತು.

ಈ ಮಧ್ಯ ಕಾಂಗ್ರೆಸ್ ಪಕ್ಷ ಈ ಪತ್ರಿಕೆ ನಮ್ಮ ವಿಚಾರಧಾರೆ ಹಂಚಿದೆ ಎಂದು 90 ಕೋಟಿ ರೂ. ನೀಡಿ ಉಳಿಸಿಕೊಂಡಿತು.ಈ ಹಣ ಕಾಂಗ್ರೆಸ್ ನಾಯಕರು ದೇಣಿಗೆ ನೀಡಿದ ಹಣ. ಪಕ್ಷದ ಸಂವಿಧಾನದಲ್ಲಿ ನಮ್ಮನ್ನು ನಂಬಿದ್ದ ಜನರಿಗೆ ಸಹಾಯ ಮಾಡಲು ಅವಕಾಶ ನೀಡಲಾಗಿದೆ. ಹೀಗಾಗಿ ನಮ್ಮ ನಾಯಕರು ತಮ್ಮ ಸಂಬಳ, ಕಾರ್ಯಕರ್ತರು ದೇಣಿಗೆ ನೀಡಿದ್ದಾರೆ. ಹೀಗಾಗಿ ಪತ್ರಿಕೆಯ ಆಸ್ತಿಗಳು ಕಾಂಗ್ರೆಸ್ ಪಕ್ಷದ ಆಸ್ತಿ. ಇದನ್ನು ಉಳಿಸಿಕೊಳ್ಳಲು ನಾವು ಅನೇಕ ಪ್ರಯತ್ನ ಪಟ್ಟಿದ್ದೇವೆ.

ಕಾನೂನಿನ ಅಡಿಯಲ್ಲಿ ಇದಕ್ಕೆ ಸಾಲ ಕೊಡಬಾರದು ಎಂದು ಹೇಳಿಲ್ಲ. ಯಂಗ್ ಇಂಡಿಯಾ ಎಂಬ ಸರ್ಕಾರೇತರ ಸಂಸ್ಥೆ ಆರಂಭವಾಯಿತು. ಈ ಬಗ್ಗೆ ಅನೇಕ ತನಿಖೆ ಆಗಿದ್ದು, ತೆರಿಗೆ ಇಲಾಖೆ ಇದರಲ್ಲಿ ಅಕ್ರಮ ಇಲ್ಲ ಎಂದು ಸ್ಪಷ್ಟಪಡಿಸಿದೆ. ಅರುಣ್ ಜೇಟ್ಲ್ ಅವರು ಈ ವಿಚಾರವಾಗಿ ಏನು ಉತ್ತರ ಕೊಟ್ಟಿದ್ದಾರೆ, ತೆರಿಗೆ ಇಲಾಖೆ ಇದರಲ್ಲಿ ಅಕ್ರಮ ನಡೆದಿಲ್ಲ ಎಂದು ಪ್ರಕರಣ ಮುಚ್ಚಿಹಾಕಿದ ವಿಚಾರ ನಿಮಗೆ ಗೊತ್ತಿದೆ. ಈ ಮಧ್ಯದಲ್ಲಿ ಸುಬ್ರಮಣಿಯನ್ ಸ್ವಾಮಿ ಅವರು ಖಾಸಗಿ ದೂರು ಕೊಟ್ಟ ಹಿನ್ನೆಲೆಯಲ್ಲಿ ವಿಚಾರಣೆ ಮಾಡಲಾಗಿದೆ. ನ್ಯಾಯಾಲಯ ಈ ವಿಚಾರದಲ್ಲಿ ಇವರಿಗೆ ಕಿರುಕುಳ ನೀಡಬಾರದು ಎಂದು ಹೇಳಿದ್ದರೂ ಹಣಕಾಸು ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿ, ಕಿರುಕುಳ ನೀಡಲಾಗುತ್ತಿದೆ.

ಇದರಲ್ಲಿ ಯಾವ ರೀತಿ ಹಣಕಾಸು ಅವ್ಯವಹಾರ ನಡೆಸಲಾಗಿದೆ. ಇಲ್ಲಿ ವರ್ಗಾವಣೆಯಾಗಿರುವ ಹಣ ಬಿಳಿ ಹಣ. ಎಲ್ಲವೂ ಲೆಕ್ಕದ ಹಣ. ಆದರೆ 2 ಸಾವಿರ ಕೋಟಿ ಆಸ್ತಿಯನ್ನು ಲೂಟಿ ಮಾಡಲಾಗುತ್ತಿದೆ ಎಂದು ಮಾಧ್ಯಮಗಳ ಮೂಲಕ ಬಿಂಬಿಸಲಾಗುತ್ತಿದೆ. ಈ ಪಕ್ಷದ ಕಚೇರಿ ಜಾಗ ತೆಗೆದುಕೊಂಡಾಗ 10-20 ಲಕ್ಷ ಇರಬಹುದು, ಇಂದು ಇದರ ಬೆಲೆ 5-10 ಕೋಟಿ ಆಗಿರಬಹುದು. ಆ ರೀತಿ ಪತ್ರಿಕೆ ಆಸ್ತಿ ಬೆಲೆ ಏರಿಕೆಯಾಗಿರಬಹುದು. ಆದರೆ ಸೋನಿಯಾ ಗಾಂಧಿ ಅವರು ಹಾಗೂ ರಾಹುಲ್ ಗಾಂಧಿ ಅವರು ತಲಾ ಶೇ.36 ರಷ್ಟು ಆಸ್ತಿ ಹೊಂದಿದ್ದಾರೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಇದನ್ನೂ ಓದಿ: ಟಿವಿ9 ನೆಟ್‌ವರ್ಕ್‌ನ ‘ವಾಟ್ ಇಂಡಿಯಾ ಟುಡೇ – ಗ್ಲೋಬಲ್ ಶೃಂಗಸಭೆಯಲ್ಲಿ ಸಚಿವ ಅಮಿತ್ ಶಾ ಭಾಗಿ

ಈ ವಿಚಾರದ ಬಗ್ಗೆ ಮಾತನಾಡುತ್ತಿರುವ ರಾಜ್ಯ ಬಿಜೆಪಿ ನಾಯಕರಿಗೆ ತಲೆಯಲ್ಲಿ ಮೂರು ಕಾಸಿನ ಬುದ್ದಿ ಇಲ್ಲ. ಕೇವಲ ಸಗಣಿ ಇದೆ. ಅವರು ಬೇಕಾದರೆ ಈ ಬಗ್ಗೆ ಚರ್ಚೆಗೆ ಕರೆಯಲಿ, ಪಕ್ಷದ ಅಧ್ಯಕ್ಷ ಎಂಬುದನ್ನು ಮರೆತು ಚರ್ಚೆಗೆ ಸಿದ್ಧನಿದ್ದೇನೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಚುನಾವಣೆ ಅಫಿಡವಿಟ್ ತೆಗೆಯಿರಿ. ಅವರು ಇದುವರೆಗೂ ಎಲ್ಲೂ ಈ ಆಸ್ತಿ ತಮ್ಮದು ಎಂದು ಘೋಷಿಸಿಲ್ಲ. ನಾನು ಕೆಪಿಟಿಸಿಎಲ್ ಮುಖ್ಯಸ್ಥನಾದ ಕಾರಣ ಅದರ ಆಸ್ತಿ ನನ್ನದಾಗುತ್ತದೆಯಾ? ನಾನು ಕಾಂಗ್ರೆಸ್ ಅಧ್ಯಕ್ಷ ಆಗಿದ್ದೇನೆ, ಪಕ್ಷದ ವ್ಯವಹಾರ ನಡೆಸುತ್ತೇನೆ ಎಂದ ಮಾತ್ರಕ್ಕೆ ಈ ಆಸ್ತಿ ಎಲ್ಲ ನನ್ನದಾಗುತ್ತದೆಯೇ? ರಾಮಲಿಂಗಾರೆಡ್ಡಿ ಅವರು ಕೆಎಸ್ಆರ್ ಟಿಸಿ ಮುಖ್ಯಸ್ಥರಾಗಿದ್ದರು, ಹಾಗಂತ ಆ ಆಸ್ತಿ ಅವರದ್ದಾಗುತ್ತದಾ?

ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ಆಸ್ತಿ ವಿವರದಲ್ಲಿ ಈ ಆಸ್ತಿ ಎಲ್ಲಿದೆ ತೋರಿಸಿ. ಅವರಿಗೆ ಒಂದು ಫಾರಂ ಹೌಸ್ ಹೊರತಾಗಿ ಇರಲು ಒಂದು ಮನೆ ಕೂಡ ಇಲ್ಲ. ಅವರ ಮನೆತನ ದೇಶಕ್ಕಾಗಿ ತ್ಯಾಗ ಮಾಡಿರುವ ಅಲಹಬಾದ್ ನಲ್ಲಿರುವ ಆಸ್ತಿ 20 ಸಾವಿರ ಕೋಟಿ ಮೊತ್ತದ್ದಾಗಿದೆ. ಬಿಜೆಪಿಯವರು ಈ ವಿಚಾರ ತಲೆಯಲ್ಲಿಟ್ಟು ಕೊಳ್ಳಬೇಕು. ಆ ಕುಟುಂಬ ದೇಶವನ್ನು ಎಷ್ಟೆಲ್ಲ ಅಭಿವೃದ್ಧಿ ಮಾಡಿದೆ, ಪ್ರಾಣ ತ್ಯಾಗ ಮಾಡಿದೆ, ಜೈಲುವಾಸ ಅನುಭವಿಸಿದೆ. ಇಂತಹ ಕುಟುಂಬದ ಮೇಲೆ ಹಣಕಾಸು ಅವ್ಯವಹಾರ ಆರೋಪ ಮಾಡಲು ನಿಮಗೆ ನಾಚಿಕೆಯಾಗುವುದಿಲ್ಲವೇ? ಕಾನೂನು ಉಲ್ಲಂಘಿಸಿ ಇಡಿ ಅಧಿಕಾರಿಗಳನ್ನು ಬಿಟ್ಟು ಅವರನ್ನು ಜೈಲಿಗೆ ಹಾಕಿಸಲು ಪ್ರಯತ್ನಿಸುತ್ತಿದ್ದಾರೆ. ರಾಹುಲ್ ಗಾಂಧಿ ಅವರು ಏನು ಉತ್ತರ ಕೊಡಬೇಕೋ ಕೊಡುತ್ತಾರೆ. ಕಾಂಗ್ರೆಸ್ ನ ಯಾವುದೇ ನಾಯಕರು ನಿಮ್ಮ ಜೈಲು ಬೆದರಿಕೆಗೆ ಹೆದರುವುದಿಲ್ಲ.

ಹೋರಾಟ ನಮ್ಮ ಹಕ್ಕು, ಸಂವಿಧಾನ, ಕಾನೂನಿನಲ್ಲಿ ಹಕ್ಕಿದೆ. ಹೋರಾಟದ ವೇಳೆ ನಮ್ಮ ಧ್ವಜ ಹಿಡಿಯಬೇಡಿ ಎನ್ನುತ್ತಾರೆ. ಕಾಂಗ್ರೆಸ್ ಕಚೇರಿ ನಮ್ಮ ಪಾಲಿಗೆ ದೇವಾಲಯವಿದ್ದಂತೆ. ಅಲ್ಲಿ ಪಕ್ಷದ ನಾಯಕರು ಸಭೆ ನಡೆಸಲು ಹೋದರೆ ಅವರನ್ನು ಬಂಧಿಸಿ, ಸಭೆ ನಡೆಸಲು ಅವಕಾಶ ನೀಡುತ್ತಿಲ್ಲ. ಯಾವ ರಾಜ್ಯ ನಿರ್ಮಾಣ ಮಾಡಲು ಹೊರಟಿದ್ದೀರಿ. ಇದರ ವಿರುದ್ಧ ಹಳ್ಳಿ, ಹಳ್ಳಿಯಲ್ಲೂ ಹೋರಾಟ ಮಾಡುತ್ತೇವೆ. ನಿಮ್ಮ ಅಧಿಕಾರ ದುರ್ಬಳಕೆ ಖಂಡಿಸಿ ಧೈರ್ಯವಾಗಿ ಜನರ ಮುಂದೆ ನಿಲ್ಲುತ್ತೇವೆ.

ಸತ್ಯವನ್ನು ಮುಚ್ಚಿಡಲು ಯಾರಿಂದಲೂ ಸಾಧ್ಯವಿಲ್ಲ. ನೀವು ಎಷ್ಟೇ ಸುಳ್ಳು ಕೇಸ್ ದಾಖಲಿಸಬಹುದು, ಆದರೆ ಸತ್ಯಾಂಶ ಹೊರಗೆ ಬಂದೇ ಬರಲಿದೆ. ನಮ್ಮ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಸಣ್ಣ ಅಧಿಕಾರವಿಲ್ಲದೇ ಪಕ್ಷಕ್ಕಾಗಿ ಶ್ರಮಿಸುತ್ತಿದ್ದಾರೆ. ಅಂತಹವರಿಗೆ ನೀವು ಕಿರುಕುಳ ನೀಡಲು ಹೊರಟಿದ್ದು, ಇದನ್ನು ದೇಶದ ಜನ ಸಹಿಸುವುದಿಲ್ಲ. ಸೂರ್ಯ ಹುಟ್ಟಿ ಮುಳುಗುವುದು ಎಷ್ಟು ಸತ್ಯವೋ ನಿಮ್ಮ ಪಕ್ಷ ಅಧಿಕಾರದಿಂದ ಕೆಳಗಿಳಿಯುವುದು ಅಷ್ಟೇ ಸತ್ಯ.

ನಮ್ಮ ನಾಯಕರು ಏನು ಮಾಡಿದ್ದಾರೆ ಎಂದು ದೆಹಲಿಯಲ್ಲಿ ಅವರನ್ನು ಎಳೆದುಕೊಂಡು ಹೋಗುತ್ತಿದ್ದೀರಿ. ಡಿ.ಕೆ ಸುರೇಶ್, ದಿನೇಶ್ ಗುಂಡೂರಾವ್, ಶ್ರೀನಿವಾಸ್, ಹೆಚ್.ಕೆ ಪಾಟೀಲ್, ಚಿದಂಬರಂ, ವೇಣುಗೋಪಾಲ್ ಅವರನ್ನು ದನಗಳನ್ನು ಎಳೆದುಕೊಂಡು ಹೋಗುವಂತೆ ಎಳೆದುಕೊಂಡು ಹೋಗುತ್ತಿದ್ದೀರಿ. ಇದು ಬಿಜೆಪಿಯ ದುರಾಡಳಿತ. ನಿಮಗೆ ತಾಕತ್ತಿದ್ದರೆ ಕಾನೂನು ಬದ್ಧ ಹೋರಾಟ ಮಾಡಿ, ಅದನ್ನು ಎದುರಿಸಲು ನಾವು ಸಿದ್ಧವಿದ್ದೇವೆ. ಇದನ್ನೂ ಓದಿ: ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣ: ಆರೋಪಿ ಸ್ವಪ್ನಾ ಸುರೇಶ್ ಆರೋಪಗಳಿಗೆ ಪ್ರತಿಯಾಗಿ ವಿಡಿಯೊ ಬಿಡುಗಡೆ ಮಾಡಿದ ಕೇರಳ ಸಿಎಂ ಕಚೇರಿ

ಸರ್ಕಾರದ ಈ ನಡೆ ವಿರುದ್ಧ ಪಕ್ಷದ ಕಚೇರಿಯಿಂದ ರಾಜಭವನಕ್ಕೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಎಲ್ಲ ನಾಯಕರು ಭಾಗವಹಿಸಬೇಕು. ನಾಡಿದ್ದು ಬೆಳಗ್ಗೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಕೇಂದ್ರ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು. ನೀವು ಜೈಲಿಗಾದರೂ ಹಾಕಿ, ಎಷ್ಟು ಕೇಸಾದರೂ ಹಾಕಿ, ನಾವು ಹೆದರುವುದಿಲ್ಲ.

ನಾವು ನಮ್ಮ ನೀರು ಹಾಗೂ ನಮ್ಮ ಹಕ್ಕಿನ ವಿಚಾರ, ರೈತರ ವಿಚಾರಕ್ಕೆ ಹೋರಾಟ ಮಾಡಿದ್ದಕ್ಕೆ ನಮ್ಮ ಮೇಲೆ ಕೇಸ್ ದಾಖಲಿಸಿದ್ದಾರೆ. ಇಂದು ನಾವು 20 ಜನ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದು ಬಂದಿದ್ದೇವೆ. ಬಿಜೆಪಿಯವರು ಅನೇಕ ಬಾರಿ ಕಾನೂನು ಉಲ್ಲಂಘನೆ ಮಾಡಿದ್ದು ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಯಂಗ್ ಇಂಡಿಯಾ ಸಂಸ್ಥೆ ಕಾರ್ಯಕರ್ತರ ಸಂಸ್ಥೆಗಳು, ನಮ್ಮ ನಾಯಕರು ಅದರ ಟ್ರಸ್ಟಿಗಳಾಗಿದ್ದಾರೆ. ನಮ್ಮ ನಾಯಕರ ಆತ್ಮಸ್ಥೈರ್ಯ ಕುಗ್ಗಿಸಲು ನೀವು ಎಷ್ಟೇ ಪ್ರಯತ್ನಿಸಿದರೂ ನಾವು ಕುಗ್ಗುವುದಿಲ್ಲ. ಜನರೇ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ.

ನಗರದಲ್ಲಿ ಪ್ರತಿಭಟನೆ ನಡೆಸುವಂತಿಲ್ಲ ಎಂಬ ಹೈಕೋರ್ಟ್ ನಿರ್ದೇಶನದ ಬಗ್ಗೆ ಕೇಳಿದ ಪ್ರಶ್ನೆಗೆ ‘ಬಿಜೆಪಿಯವರು ನಿಯಮ ಉಲ್ಲಂಘನೆ ಮಾಡಿಲ್ಲವೇ? ಜನರ ಹಣ ಲೂಟಿ ಮಾಡಿಲ್ಲವೇ? ಸಂವಿಧಾನ ನೀಡಿರುವ ಹಕ್ಕು ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ’ ಎಂದು ಉತ್ತರಿಸಿದರು.

Published On - 7:04 pm, Wed, 15 June 22