ರಾಜ್ಯದಲ್ಲಿ ಆಡಳಿತ ಹಾಳಾಗ್ತಾ ಇರೋದಕ್ಕೆ ಸಿಎಂ ಬೊಮ್ಮಾಯಿ ಕಾರಣ; ಇವರು ತನಿಖೆ ಹಾದಿಯ ದಿಕ್ಕನ್ನ ತಪ್ಪಿಸುತ್ತಿದ್ದಾರೆ -ಡಿಕೆ ಶಿವಕುಮಾರ್

| Updated By: ಆಯೇಷಾ ಬಾನು

Updated on: Apr 16, 2022 | 2:40 PM

ನಾನು ಸಿಎಂ ಬೊಮ್ಮಾಯಿ ಬಗ್ಗೆ ಏನೋ ಅಂದು ಕೊಂಡಿದ್ದೆ. ರಾಜ್ಯದಲ್ಲಿ ಆಡಳಿತ ಹಾಳಾಗ್ತಾ ಇರೋದಕ್ಕೆ ಸಿಎಂ ಕಾರಣ. ಸಿಎಂ ಬೊಮ್ಮಾಯಿ ತನಿಖೆ ಹಾದಿಯ ದಿಕ್ಕನ್ನ ತಪ್ಪಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಿಎಂ ವಿರುದ್ಧ ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ಆಡಳಿತ ಹಾಳಾಗ್ತಾ ಇರೋದಕ್ಕೆ ಸಿಎಂ ಬೊಮ್ಮಾಯಿ ಕಾರಣ; ಇವರು ತನಿಖೆ ಹಾದಿಯ ದಿಕ್ಕನ್ನ ತಪ್ಪಿಸುತ್ತಿದ್ದಾರೆ -ಡಿಕೆ ಶಿವಕುಮಾರ್
ಡಿ ಕೆ ಶಿವಕುಮಾರ
Follow us on

ಬೆಂಗಳೂರು: ಬಿಜೆಪಿ ನಾಯಕ ಸಿ.ಟಿ.ರವಿ ಬಹಳ ದೊಡ್ಡವರಿದ್ದಾರೆ. ಅಧಿಕಾರಿಗಳಿಗೆ ಹೆದರಿಸೋದು, ಬೆದರಿಸೋದು ಗೊತ್ತಿದೆ. ಅವರು ಮಾತನಾಡಿರುವ ಫೋನ್ ಕಾಲ್ ಮಾಹಿತಿ ಇದೆ. ಮುಂದಿನ ದಿನಗಳಲ್ಲಿ ತನಿಖೆಯಿಂದ ಹೊರಗೆ ಬರುತ್ತದೆ ಎಂದು ಬೆಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಿ.ಟಿ. ರವಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಿಎಂಗೆ ನೀರಾವರಿ ಇಲಾಖೆ ಗುತ್ತಿಗೆದಾರರ ದೂರು ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಸಣ್ಣ ಸಣ್ಣ ಗುತ್ತಿಗೆದಾರರನ್ನ ಮುಗಿಸುವ ಕೆಲಸ ಮಾಡಿದ್ದಾರೆ. ಸಣ್ಣ ಗುತ್ತಿಗೆದಾರರಿಂದ ಕಮಿಷನ್ ಪಡೆಯಲು ಆಗಲ್ಲ ಎಂದು ಕಮಿಷನ್ಗಾಗಿ ದೊಡ್ಡ ಗುತ್ತಿಗೆದಾರರಿಗೆ ಟೆಂಡರ್ ಕೊಡ್ತಾರೆ. ಕಮಿಷನ್ ಬಗ್ಗೆ ಈಶ್ವರಪ್ಪ ವಿರುದ್ಧ ಎಲ್ಲಿ FIR ಹಾಕಿದ್ದಾರೆ. ಭ್ರಷ್ಟಾಚಾರದಲ್ಲಿ ಸಿಲುಕಿದವರ ವಿರುದ್ಧ ಪ್ರಕರಣ ಎಲ್ಲಿದೆ. ಈಶ್ವರಪ್ಪರನ್ನ ಸಿಎಂ ಬೊಮ್ಮಾಯಿ ರಕ್ಷಣೆ ಮಾಡುತ್ತಿದ್ದಾರೆ. ಸಿಎಂ‌, BSY ನೇರವಾಗಿ ಈಶ್ವರಪ್ಪ ತಪ್ಪು ಮಾಡಿಲ್ಲ ಅಂತಾರೆ. ತನಿಖೆ ಮಾಡುವ ಮೊದಲೇ ಈಶ್ವರಪ್ಪಗೆ ಕ್ಲೀನ್ ಚಿಟ್ ನೀಡ್ತಾ ಇದ್ದಾರೆ. ನಾನು ಸಿಎಂ ಬೊಮ್ಮಾಯಿ ಬಗ್ಗೆ ಏನೋ ಅಂದು ಕೊಂಡಿದ್ದೆ. ರಾಜ್ಯದಲ್ಲಿ ಆಡಳಿತ ಹಾಳಾಗ್ತಾ ಇರೋದಕ್ಕೆ ಸಿಎಂ ಕಾರಣ. ಸಿಎಂ ಬೊಮ್ಮಾಯಿ ತನಿಖೆ ಹಾದಿಯ ದಿಕ್ಕನ್ನ ತಪ್ಪಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಿಎಂ ವಿರುದ್ಧ ಕಿಡಿಕಾರಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದಂಪತಿ ಕೇದಾರ ಜಗದ್ಗುರು ಭೀಮಾಶಂಕರ ಶಿವಾಚಾರ್ಯ ಸ್ವಾಮೀಜಿ ಪಾದಪೂಜೆ ನೆರವೇರಿಸಿದ್ರು. ಈ ವೇಳೆ ಮಾತನಾಡಿರುವ ಇವರು, ನಾನು ವೀರಶೈವ ಲಿಂಗಾಯತ ಧರ್ಮ ಪ್ರಸ್ತಾಪ ಮಾಡಿದ್ದೆ ಅದಕ್ಕೆ ಅವರು ಮೆಚ್ಚಿದ್ರು. ಯಾವ ಧರ್ಮವನ್ನೂ ಒಡೆಯಬಾರದು ಎಂಬುವುದು ನನ್ನ ನಂಬಿಕೆ. ಮಾನವ ಧರ್ಮ ದೊಡ್ಡದು. ಇದನ್ನ ಗುರುಗಳು ಮೆಚ್ಚಿದ್ರು. ಅದಕ್ಕೆ ನಮ್ಮ ಮನೆಗೆ ಬಂದಿದ್ದರು. ನಾನು ಪಾದಪೂಜೆ ಮಾಡಿದ್ದೇನೆ. ಬೇರೆ ಕೆಲ ವಿಷಯಗಳನ್ನ ಮಾತನಾಡಿದ್ದಾರೆ. ನಾನು ಈಗ ಅದನ್ನು ಮಾತನಾಡಲು ಆಗುವುದಿಲ್ಲ.

ಇನ್ನು ಹರ್ಷ ಕೊಲೆ ಬಳಿಕ ಷಡ್ಯಂತ್ರ ಮಾಡಿದ್ದಾರೆ. ಕೆಲವರು ಏನೇನೋ ಮಾಡಬೇಕು ಅಂತಾ ಪ್ಲಾನ್ ಮಾಡಿದ್ದಾರೆ. ಒಂದು ಟ್ರಸ್ಟ್ ಇದೆ ಅದರಲ್ಲಿ ದೊಡ್ಡದೊಡ್ಡವರು ಇದ್ದಾರೆ. ಬೇಕಾದ ವಸ್ತುಗಳನ್ನ ಸಂಗ್ರಹ ಮಾಡಿದ್ದರು. ಆದರೆ ಶಿವಮೊಗ್ಗ ಪೊಲೀಸರು ಬುದ್ದಿ ವಂತರಿದ್ದಾರೆ. ಅವರಿಗೆ ಅಭಿನಂದಿಸ್ತಾ ಇದೀನಿ. ಪೋಲಿಸರು ಅವರನ್ನ ಬಂಧಿಸಿಲ್ಲ ಅಂದಿದ್ರೆ ರಾಜ್ಯದಲ್ಲಿ ಅಶಾಂತಿ ಸೃಷ್ಠಿ ಮಾಡುವ ಹುನ್ನಾರ ಇತ್ತು. ರಾಜ್ಯದಲ್ಲಿ ಅಶಾಂತಿ ನಿರ್ಮಾಣ ಮಾಡುವ ಸಾಧ್ಯತೆ ಇತ್ತು. ಈಶ್ವರಪ್ಪ ಪ್ರಕರಣದಿಂದ ವಿಷಯ ಬೇರೆಡಗೆ ಗಮನ ಸೆಳೆಯುವ ಕೆಲಸ ಮಾಡ್ತಾ ಇದ್ರು. ದೊಡ್ಡ ದೊಡ್ಡವರ ಹೆಸರು ಬರುತ್ತೆ ಆಚೆಗೆ ಎಂದರು.

ಇದನ್ನೂ ಓದಿ: ಸಂತೋಷ್ ಕೇಸ್ ಬಗ್ಗೆ ತನಿಖಾಧಿಕಾರಿಗಳಿಂದ ತೀರ್ಮಾನ ಎಂದ ಬೊಮ್ಮಾಯಿ; ಕಾಂಗ್ರೆಸ್ ನಾಯಕರೆಲ್ಲಾ ಜೈಲಿನಲ್ಲಿ ಇರಬೇಕು ಎಂದ ನಳಿನ್

ಕಾಂಗ್ರೆಸ್​ನವರು ಪವಿತ್ರ ಹಸ್ತದವರು; ಕಾಂಗ್ರೆಸ್ ಹಗರಣವನ್ನ ಜನರ ಮುಂದೆ ಇಡಬೇಕಾಗುತ್ತೆ -ಸಿಎಂ ಬೊಮ್ಮಾಯಿ ಎಚ್ಚರಿಕೆಯ ಸಂದೇಶ