ಮಾನವಸಹಿತ ಗಗನಯಾನ ಕಾರ್ಯಕ್ರಮ ಸ್ಥಳಾಂತರ ಮಾಡದಂತೆ ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿಗೆ ಮನವಿ ಪತ್ರ ಬರೆದ ಡಿಕೆ ಶಿವಕುಮಾರ್

| Updated By: ಆಯೇಷಾ ಬಾನು

Updated on: Nov 28, 2021 | 2:22 PM

ಮಾನವಸಹಿತ ಗಗನಯಾನ ಕಾರ್ಯಕ್ರಮವು ಬೆಂಗಳೂರಿನಿಂದ ಗುಜರಾತ್ಗೆ ಸ್ಥಳಾಂತರಕ್ಕೆ ಡಿಕೆ ಶಿವಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ. ಗಗನಯಾನ ಯೋಜನೆ ಅನುಷ್ಠಾನ ಒಂದು ಜವಾಬ್ದಾರಿ. ಮಾನವಸಹಿತ ಗಗನಯಾನದಲ್ಲಿ ಭಾರತ 4ನೇ ರಾಷ್ಟ್ರವಾಗಲಿದೆ. ಕರ್ನಾಟಕದಲ್ಲಿ ಇಂತಹ ಗಗನಯಾನ ಯೋಜನೆಯಿಂದ ಕನ್ನಡಿಗರು ಹೆಮ್ಮೆಪಡುತ್ತಾರೆ ಎಂದು ಪತ್ರದಲ್ಲಿ ಬರೆದಿದ್ದಾರೆ.

ಮಾನವಸಹಿತ ಗಗನಯಾನ ಕಾರ್ಯಕ್ರಮ ಸ್ಥಳಾಂತರ ಮಾಡದಂತೆ ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿಗೆ ಮನವಿ ಪತ್ರ ಬರೆದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್
Follow us on

ಬೆಂಗಳೂರು: ಮಾನವಸಹಿತ ಗಗನಯಾನ ಕಾರ್ಯಕ್ರಮ ಸ್ಥಳಾಂತರ ವಿಚಾರಕ್ಕೆ ಸಂಬಂಧಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಮಾನವಸಹಿತ ಗಗನಯಾನ ಕಾರ್ಯಕ್ರಮವು ಬೆಂಗಳೂರಿನಿಂದ ಗುಜರಾತ್ಗೆ ಸ್ಥಳಾಂತರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಗಗನಯಾನ ಯೋಜನೆ ಅನುಷ್ಠಾನ ಒಂದು ಜವಾಬ್ದಾರಿ. ಮಾನವಸಹಿತ ಗಗನಯಾನದಲ್ಲಿ ಭಾರತ 4ನೇ ರಾಷ್ಟ್ರವಾಗಲಿದೆ. ಕರ್ನಾಟಕದಲ್ಲಿ ಇಂತಹ ಗಗನಯಾನ ಯೋಜನೆಯಿಂದ ಕನ್ನಡಿಗರು ಹೆಮ್ಮೆಪಡುತ್ತಾರೆ. ಈ ಯೋಜನೆ ಗುಜರಾತ್ಗೆ ಸ್ಥಳಾಂತರಿಸುವ ಪ್ರಸ್ತಾವನೆ ಇದೆ. ಈ ಪ್ರಸ್ತಾವನೆಯಿಂದ ಕನ್ನಡಿಗರು ಆಘಾತಕ್ಕೊಳಗಾಗಿದ್ದಾರೆ. ಹೀಗಾದರೆ, ಕೇಂದ್ರ ಸರಕಾರ ಸ್ಥಳೀಯರ ಭಾವನೆಗಳಿಗೆ ಮಣಿಯದೆ, ದ್ರೋಹ ಬಗೆದಿದೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಮಲತಾಯಿ ಧೋರಣೆಯಾಗಿದೆ ಎಂದು ಕನ್ನಡಿಗರಿಗೆ ಅನಿಸುತ್ತದೆ. ಈ ಕ್ರಮವು ರಾಷ್ಟ್ರದಲ್ಲಿ ಒಕ್ಕೂಟ ವ್ಯವಸ್ಥೆಯ ಬಲವರ್ಧನೆಯ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡುತ್ತದೆ.

ಈ ಪ್ರಸ್ತಾವನೆಯನ್ನು ಕೈಬಿಡುವಂತೆ ಈಗಾಗಲೇ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದೇನೆ. ಆದ್ದರಿಂದ, ದಯವಿಟ್ಟು ಸಂಸತ್ ಸದಸ್ಯರ ನಿಯೋಗದ ಜತೆ ಪ್ರಧಾನಿ ನರೇಂದ್ರ ಮೋದಿಗೆ ವಿವರಿಸಿ. ಕೇಂದ್ರ ಸರ್ಕಾರದ ಪ್ರಸ್ತಾವ ಕೈಬಿಡುವಂತೆ ಮನವಿ ಮಾಡಿ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವಂತೆ ಸಿಎಂ ಬಸವರಾಜ ಬೊಮ್ಮಾಯಿಗೆ ಡಿಕೆಶಿ ಪತ್ರ ಬರೆದಿದ್ದಾರೆ.

ಪ್ರಧಾನಿಗೂ ಪತ್ರ ಬರೆದ ಡಿಕೆಶಿ
ಇನ್ನು ಮತ್ತೊಂದು ಕಡೆ ಇದೇ ವಿಚಾರಕ್ಕೆ ಸಂಬಂಧಿಸಿ ಪ್ರಧಾನಿ ಮೋದಿಗೂ ಡಿಕೆ ಶಿವಕುಮಾರ್ ಪತ್ರ ಬರೆದು ಮಾನವಸಹಿತ ಗಗನಯಾನ ಕಾರ್ಯಕ್ರಮ ಸ್ಥಳಾಂತರ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಮೇಕೆದಾಟು ಭೇಟಿ ವೇಳೆ ಹುಟ್ಟು ಹಾಕಿ ತೆಪ್ಪ ನಡೆಸಿ ಗಮನ ಸೆಳೆದ ಡಿಕೆ ಶಿವಕುಮಾರ್, ಮೇಕೆದಾಟು ಯೋಜನೆ ಪಾದಯಾತ್ರೆ ಬಗ್ಗೆ ಹೇಳಿದ್ದೇನು?