ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಕ್ಷಣಗಣನೆ; ಜಾತ್ರೆ ನಡೆಯುವ ಸ್ಥಳದಲ್ಲಿಯೇ ಕೊರೊನಾ ಟೆಸ್ಟಿಂಗ್, ವ್ಯಾಕ್ಸಿನೇಷನ್ಗೆ ಸಿದ್ಧತೆ
ಒಮಿಕ್ರಾನ್ ರೂಪಾಂತರಿ ತಳಿ ರಾಜ್ಯದಲ್ಲಿ ಆತಂಕ ಹೆಚ್ಚಿಸಿದೆ. ದೇಶದಲ್ಲಿ ಇದುವರೆಗೂ ಈ ಹೊಸ ತಳಿಯ ಕೇಸ್ ಪತ್ತೆಯಾಗದೇ ಇದ್ರೂ, ಈ ರೂಪಾಂತರಿಯ ಕ್ರೌರ್ಯಕ್ಕೆ ಜಗತ್ತೆ ಬೆಚ್ಚಿ ಬಿದ್ದಿದೆ. ಹೀಗಾಗಿ ದೇವಾಸ್ಥಾನಕ್ಕೆ ಬರುವ ಪ್ರತಿಯೊಬ್ಬರಿಗೂ ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯ ಮಾಡಲಾಗಿದೆ.
ಬೆಂಗಳೂರು: ನಗರದ ಬಸವನಗುಡಿಯ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಕ್ಷಣಗಣನೆ ಆರಂಭವಾಗಿದೆ. ಪರಿಷೆಗೆ ಸಾವಿರಾರು ಸಂಖ್ಯೆಯಲ್ಲಿ ಜನ ಆಗಮಿಸುವ ಹಿನ್ನೆಲೆಯಲ್ಲಿ ಜಾತ್ರೆ ನಡೆಯುವ ಸ್ಥಳದಲ್ಲಿಯೇ ಕೊರೊನಾ ಟೆಸ್ಟಿಂಗ್ ಹಾಗೂ ವ್ಯಾಕ್ಸಿನೇಷನ್ ನೀಡುವುದಕ್ಕೆ ವ್ಯವಸ್ಥೆ ಮಾಡಲಾಗಿದೆ.
ಕಾರ್ತಿಕ ಮಾಸದ ಕೊನೆ ಸೋಮವಾರದಂದು ನಡೆಯುವ ಕಡಲೆಕಾಯಿ ಪರಿಷೆ ಈ ಬಾರಿ ನವೆಂಬರ್ 29ರಿಂದ ಡಿಸೆಂಬರ್ 1ರ ವರೆಗೆ ಮೂರು ದಿನಗಳ ಕಾಲ ನಡೆಯಲಿದೆ. ಹೀಗಾಗಿ ಬಸವನಗುಡಿ ಸುತ್ತಾಮುತ್ತಾ ಜಾತ್ರೆಯ ವಾತಾವರಣ ನಿರ್ಮಾಣವಾಗಿದೆ. ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಇಂದು ಸಾವಿರಾರು ಸಂಖ್ಯೆಯಲ್ಲಿ ಭಕ್ತದಿಗಳು ದೊಡ್ಡ ಗಣೇಶ ಹಾಗೂ ದೊಡ್ಡ ಬಸವಣ್ಣನ ದೇವಸ್ಥಾನದಲ್ಲಿ ಕ್ಯೂ ನಿಂತಿರುವ ದೃಶ್ಯ ಕಂಡು ಬಂದಿದೆ. ಸದ್ಯ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಸದ್ಯ ಒಮಿಕ್ರಾನ್ ರೂಪಾಂತರಿ ತಳಿ ರಾಜ್ಯದಲ್ಲಿ ಆತಂಕ ಹೆಚ್ಚಿಸಿದೆ. ದೇಶದಲ್ಲಿ ಇದುವರೆಗೂ ಈ ಹೊಸ ತಳಿಯ ಕೇಸ್ ಪತ್ತೆಯಾಗದೇ ಇದ್ರೂ, ಈ ರೂಪಾಂತರಿಯ ಕ್ರೌರ್ಯಕ್ಕೆ ಜಗತ್ತೆ ಬೆಚ್ಚಿ ಬಿದ್ದಿದೆ. ಹೀಗಾಗಿ ದೇವಾಸ್ಥಾನಕ್ಕೆ ಬರುವ ಪ್ರತಿಯೊಬ್ಬರಿಗೂ ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯ ಮಾಡಲಾಗಿದೆ. ಜಾತ್ರೆ ನಡೆಯುವ ಸ್ಥಳದಲ್ಲಿಯೇ ಟೆಸ್ಟಿಂಗ್ ಸೆಂಟರ್ ಹಾಗೂ ವ್ಯಾಕ್ಸಿನೇಷನ್ ನೀಡಲು ತಯಾರಿ ಮಾಡಿಕೊಳ್ಳಲಾಗುತ್ತಿದೆ.
ಸದ್ಯ ಕಡಿಲೆಕಾಯಿ ಪರಿಷೆ ಸಿದ್ದತೆ ಬಗ್ಗೆ ವಿಶೇಷ ಆಯುಕ್ತೆ ತುಳುಸಿ ಪರಿಶೀಲನೆ ನಡೆಸಿದ್ದಾರೆ. ಎಷ್ಟು ಕಡೆ ವ್ಯಾಕ್ಸಿನ್ ಸೆಂಟರ್ಗಳಿವೆ, ಎಷ್ಟು ಶೌಚಾಲಯಗಳಿವೆ, ಎಷ್ಟು ಜನ ವ್ಯಾಪಾರಸ್ಥರಿದ್ದಾರೆ, ಮುಜುರಾಯಿ ಇಲಾಖೆಯಿಂದ ಏನೆಲ್ಲ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎನ್ನುವ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಕಡಲೇಕಾಯಿಯ ತಾಯಿಬೇರು ಯಾವ ದೇಶದಲ್ಲಿದೆ ಗೊತ್ತಾ? ಪರಿಷೆಯ ನೆಪದಲ್ಲಿ ಮೂಲ ಕೆದಕಿದಾಗ..
Published On - 12:22 pm, Sun, 28 November 21