ಮೇಕೆದಾಟು ಭೇಟಿ ವೇಳೆ ಹುಟ್ಟು ಹಾಕಿ ತೆಪ್ಪ ನಡೆಸಿ ಗಮನ ಸೆಳೆದ ಡಿಕೆ ಶಿವಕುಮಾರ್, ಮೇಕೆದಾಟು ಯೋಜನೆ ಪಾದಯಾತ್ರೆ ಬಗ್ಗೆ ಹೇಳಿದ್ದೇನು?

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಮೇಕೆದಾಟು ವೀಕ್ಷಣೆ ಮಾಡಿದ್ದಾರೆ. ಈ ವೇಳೆ ಡಿಕೆ ಶಿವಕುಮಾರ್ ತೆಪ್ಪ ವಿಹಾರ ನಡೆಸಿ ಗಮನ ಸೆಳೆದಿದ್ದಾರೆ.

ಮೇಕೆದಾಟು ಭೇಟಿ ವೇಳೆ ಹುಟ್ಟು ಹಾಕಿ ತೆಪ್ಪ ನಡೆಸಿ ಗಮನ ಸೆಳೆದ ಡಿಕೆ ಶಿವಕುಮಾರ್, ಮೇಕೆದಾಟು ಯೋಜನೆ ಪಾದಯಾತ್ರೆ ಬಗ್ಗೆ ಹೇಳಿದ್ದೇನು?
ಮೇಕೆದಾಟು ಭೇಟಿ ವೇಳೆ ಹುಟ್ಟು ಹಾಕಿ ತೆಪ್ಪ ನಡೆಸಿ ಗಮನ ಸೆಳೆದ ಡಿಕೆ ಶಿವಕುಮಾರ್

ರಾಮನಗರ: ಮೇಕೆದಾಟು ಯೋಜನೆಗೆ ಆಗ್ರಹಿಸಿ ಜನವರಿ ತಿಂಗಳಲ್ಲಿ ಕಾಂಗ್ರೆಸ್ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಮೇಕೆದಾಟು ವೀಕ್ಷಣೆ ಮಾಡಿದ್ದಾರೆ. ಈ ವೇಳೆ ಡಿಕೆ ಶಿವಕುಮಾರ್ ತೆಪ್ಪ ವಿಹಾರ ನಡೆಸಿ ಗಮನ ಸೆಳೆದಿದ್ದಾರೆ.

ಇನ್ನು ಇದೇ ವೇಳೆ ಮಾತನಾಡಿದ ಡಿಕೆಶಿ, ವಿಧಾನಪರಿಷತ್ ಚುನಾವಣೆಯಲ್ಲಿ 15 ಸ್ಥಾನಗಳಲ್ಲಿ ಗೆಲ್ಲುತ್ತೇವೆ ಎಂಬ ಬಿಜೆಪಿ ನಾಯಕರ ಕೇಳಿಕೆಗೆ ತಿರುಗೇಟು ನೀಡಿದ್ರು. ಇನ್ನು ಅರುಣ್ ಸಿಂಗ್ ಒಂದು ಹೇಳುತ್ತಾರೆ. ಬೇರೆಯವರು ಒಂದು ಹೇಳುತ್ತಾರೆ. ಅವರ ಪಕ್ಷದ ವಿಚಾರ ಯಾಕೆ ಮಾತನಾಡಲಿ. ಸದ್ಯ ನಮ್ಮ ಪಾರ್ಟಿ ನಮಗೆ. ರಾಜ್ಯದಲ್ಲಿ ಬದಲಾವಣೆ ಅವಶ್ಯಕತೆ ಇದೆ. ಪಕ್ಷ ಬೇದ ಮರೆತು ಗ್ರಾಮ ಪಂಚಾಯಿತಿಗಳಲ್ಲಿ ಗೆದ್ದಿದ್ದಾರೆ. ಪಂಚಾಯತ್ ರಾಜ್ ವ್ಯವಸ್ಥೆಗೆ ಶಕ್ತಿ ಕೊಟ್ಟವರೇ ನಾವು ಎಂದರು.

ಮೇಕೆದಾಟು ಯೋಜನೆ ವಿಚಾರವಾಗಿ ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಮಾತನಾಡಿದ ಅವರು, ಜನವರಿಯಲ್ಲಿ ಪಾದಯಾತ್ರೆ ಮಾಡುತ್ತೇವೆ. ದಿನಾಂಕವನ್ನ ಸದ್ಯದರಲ್ಲೇ ತಿಳಿಸುತ್ತೇವೆ. ನಮ್ಮ ಹೋರಾಟಕ್ಕೆ ಜೆಡಿಎಸ್ ಜೊತೆಗೆ ಬರಲಿ, ನಮ್ಮ ಅಭ್ಯಂತರ ಇಲ್ಲ. ನೀರು ನಾನೊಬ್ಬನೇ ಕುಡಿಯುತ್ತೇನಾ. ಯಾವ ಪಾರ್ಟಿಯವರು ಬೇಕಾದರೂ ಬರಲಿ. ಮೇಕೆದಾಟು ಯೋಜನೆಯನ್ನ ಸರ್ಕಾರ ಮಾಡಬಹುದು. ಆದ್ರೆ ಡಬಲ್ ಗೇಮ್ ಸರ್ಕಾರ, ಯೋಜನೆಯನ್ನ ಮಾಡುತ್ತಿಲ್ಲ. ಸಿಎಂ ಅವರೇ ಹೇಳಿದ್ದಾರೆ. ಯೋಜನೆಗೆ ಯಾವುದೇ ತೊಡಕು ಇಲ್ಲ ಎಂದು. ಆದರೂ ಇದುವರೆಗೂ ಯೋಜನೆಯನ್ನ ಮಾಡಿಲ್ಲ ಎಂದು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ರು.

DK Shivakumar

ಡಿಕೆ ಶಿವಕುಮಾರ್ ಮೇಕೆದಾಟು ವೀಕ್ಷಣೆ

DK Shivakumar

ಡಿಕೆ ಶಿವಕುಮಾರ್ ಮೇಕೆದಾಟು ವೀಕ್ಷಣೆ

ಇದನ್ನೂ ಓದಿ: ರಾಜಕೀಯಕ್ಕಾಗಿ ಮಳೆಹಾನಿ ಪ್ರದೇಶಗಳಿಗೆ ಸಿಎಂ ಭೇಟಿ: ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಆರೋಪ

Click on your DTH Provider to Add TV9 Kannada