ದಿನಾ ಬೀದಿ ನಾಯಿಗಳ ದಾಳಿ, ಕಚ್ಚಿದ್ರೂ BBMP ಕಮಕ್​ ಕಿಮಕ್​ ಅಂತಿಲ್ಲ!

ಬೆಂಗಳೂರು: ಕತ್ತಲಾದ್ರೆ ಸಾಕು.. ಒಬ್ಬೊಬ್ಬರೇ ಓಡಾಡಂಗೇ ಇಲ್ಲ.. ಕಂಡ ಕಂಡ ಏರಿಯಾಗಳಲ್ಲಿ ಸುಮ್ನೆ ನಡ್ಕೊಂಡು ಹೋಗಂಗೇ ಇಲ್ಲ. ಒಂದ್ ವೇಳೆ ಹೋದ್ರೋ ಅಷ್ಟೇ ಕಥೆ. ಕೈಯೋ ಕಾಲಿಗೋ ಅಥವಾ ಮೈಗೋ ಗಾಯ ಗ್ಯಾರಂಟಿ. ಯಾಕಂದ್ರೆ, ಒಬ್ಬೊಬ್ಬರೇ ಬರೋರನ್ನು ಹುರಿದು ಮುಕ್ಕೋಕೆ ಈ ರೌಡಿಗಳು ಕಾಯ್ತಾ ಇರ್ತವೆ. ದಿನಕ್ಕೆ 30 ಜನರ ಮೇಲೆ ಬೀದಿ ನಾಯಿಗಳ ದಾಳಿ! ಬೆಂಗಳೂರಿನಲ್ಲಿ ದಿನೇದಿನೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗ್ತಿದೆ. ರಾತ್ರಿ 11 ಗಂಟೆ ದಾಟ್ತಂದ್ರೆ ಸಾಕು ಶ್ವಾನಗಳ ಅಟ್ಟಹಾಸ ಮಿತಿ ಮೀರುತ್ತೆ. […]

ದಿನಾ ಬೀದಿ ನಾಯಿಗಳ ದಾಳಿ, ಕಚ್ಚಿದ್ರೂ BBMP ಕಮಕ್​ ಕಿಮಕ್​ ಅಂತಿಲ್ಲ!
ಸಾಂಕೇತಿಕ ಚಿತ್ರ
Follow us
ಸಾಧು ಶ್ರೀನಾಥ್​
|

Updated on:Mar 02, 2020 | 12:24 PM

ಬೆಂಗಳೂರು: ಕತ್ತಲಾದ್ರೆ ಸಾಕು.. ಒಬ್ಬೊಬ್ಬರೇ ಓಡಾಡಂಗೇ ಇಲ್ಲ.. ಕಂಡ ಕಂಡ ಏರಿಯಾಗಳಲ್ಲಿ ಸುಮ್ನೆ ನಡ್ಕೊಂಡು ಹೋಗಂಗೇ ಇಲ್ಲ. ಒಂದ್ ವೇಳೆ ಹೋದ್ರೋ ಅಷ್ಟೇ ಕಥೆ. ಕೈಯೋ ಕಾಲಿಗೋ ಅಥವಾ ಮೈಗೋ ಗಾಯ ಗ್ಯಾರಂಟಿ. ಯಾಕಂದ್ರೆ, ಒಬ್ಬೊಬ್ಬರೇ ಬರೋರನ್ನು ಹುರಿದು ಮುಕ್ಕೋಕೆ ಈ ರೌಡಿಗಳು ಕಾಯ್ತಾ ಇರ್ತವೆ.

ದಿನಕ್ಕೆ 30 ಜನರ ಮೇಲೆ ಬೀದಿ ನಾಯಿಗಳ ದಾಳಿ! ಬೆಂಗಳೂರಿನಲ್ಲಿ ದಿನೇದಿನೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗ್ತಿದೆ. ರಾತ್ರಿ 11 ಗಂಟೆ ದಾಟ್ತಂದ್ರೆ ಸಾಕು ಶ್ವಾನಗಳ ಅಟ್ಟಹಾಸ ಮಿತಿ ಮೀರುತ್ತೆ. ಬೈಕುಗಳಲ್ಲಿ ಯಾರು ಓಡಾಡೋಕೆ ಆಗಲ್ಲ. ರಸ್ತೆ ಬದಿ ಜನ ತಿರುಗಾಡಂಗೂ ಇಲ್ಲ. ವಾಕಿಂಗು, ರೌಂಡ್ಸು ಅಂತಾ ಯಾರೂ ಆಚೆ ಬರೋ ಹಂಗೇ ಇಲ್ಲ. ಯಾಕಂದ್ರೆ, ಈ ಬೀದಿ ನಾಯಿಗಳು ಅವರ ಮೇಲೆ ದಾಳಿ ಮಾಡೋಕೆ ಕಾದು ಕುಳಿತಿರುತ್ತವೆ.

ಅಪ್ಪಿ ತಪ್ಪಿ ಒಬ್ಬೊಬ್ಬರೇ ಸಿಕ್ರೋ ಅವರ ಮೇಲೆ ದಾಳಿ ಮಾಡಿಬಿಡುತ್ತವೆ. ನಿತ್ಯ ಏನಿಲ್ಲ ಅಂದ್ರೂ ಸರಾಸರಿ 30ಕ್ಕೂ ಹೆಚ್ಚು ಮಂದಿಗೆ ಬೆಂಗಳೂರಿನಲ್ಲಿ ನಾಯಿಗಳು ಕಚ್ಚುತ್ತವೆ ಅನ್ನೋದನ್ನು ಸ್ವತಃ ಆರೋಗ್ಯ ಅಧಿಕಾರಿಗಳೇ ಹೇಳಿದ್ದಾರೆ. ಈ ಬಗ್ಗೆ ಪಾಲಿಕೆಗೆ ಹಲವು ಬಾರಿ ದೂರು ಕೊಟ್ರೂ ಯಾವುದೇ ಪ್ರಯೋಜನವಾಗಿಲ್ಲ ಅನ್ನೋದು ಸಾರ್ವಜನಿಕರ ಅಳಲು.

ಇವುಗಳ ಹಾವಳಿ ಮಿತಿಮೀರೋಕೆ ಕಾರಣವಿದೆ. ಸಿಟಿಯ ಗಲ್ಲಿ ಗಲ್ಲಿಯಲ್ಲೂ ಮಾಂಸದ ಅಂಗಡಿಗಳು, ಮಧ್ಯದಂಗಡಿಗಳು ಹೆಚ್ಚಾಗ್ತಿವೆ. ಇದ್ರಿಂದ ಬೀದಿ ನಾಯಿಗಳ ಕಾಟ ಕೂಡ ಹೆಚ್ಚಾಗ್ತಿದ್ದು, ಅವುಗಳಿಂದ ಕಡಿತಕ್ಕೊಳಗಾಗುತ್ತಿದ್ದವರ ಸಂಖ್ಯೆ ಕೂಡ ಹೆಚ್ಚಾಗ್ತಿದೆ. ಶ್ವಾನಗಳ ನಿರ್ವಹಣೆಗೆಂದೇ ಪ್ರತಿವರ್ಷ ಕೋಟ್ಯಂತರ ಖರ್ಚು ಮಾಡುತ್ತೆ.

ಆದ್ರೆ ಈ ಹಾವಳಿ ಮಾತ್ರ ಇನ್ನೂ ತಪ್ಪಿಲ್ಲ. ಈ ಬಗ್ಗೆ ಕಮಿಷನರ್​ರನ್ನ ಕೇಳಿದ್ರೆ, ದಿನೇದಿನೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ ಅಂತಾ ದೂರುಗಳು ಕೇಳಿಬರುತ್ತಿವೆ. ಈ ಬಗ್ಗೆ ಈಗಾಗಲೇ ನಾನು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಶೀಘ್ರದಲ್ಲೇ ಇದಕ್ಕೆ ಕಡಿವಾಣ ಹಾಕೋಕೆ ಎಲ್ಲ ಕ್ರಮಗಳನ್ನು ಜರುಗಿಸುತ್ತೇವೆ ಅಂತಿದ್ದಾರೆ.

ಒಟ್ನಲ್ಲಿ, ಸಿಲಿಕಾನ್ ಸಿಟಿ ಮಂದಿಗೆ ಬೀದಿ ನಾಯಿಗಳ ಕಾಟ ದಿನೇ ದಿನೇ ಹೆಚ್ಚಾಗ್ತಾ ಇದೆ. ಇನ್ನಾದರೂ ಇದಕ್ಕೆ ಬಿಬಿಎಂಪಿ ಕಡಿವಾಣ ಹಾಕುತ್ತಾ..? ನೋಡಬೇಕು.

Published On - 7:52 am, Mon, 2 March 20

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ