ಬೆಂಗಳೂರಿನಲ್ಲಿ ಮತ್ತೆ ಫ್ರೀ ಕಾಶ್ಮೀರ ಬರಹ ಪತ್ತೆ!

  • TV9 Web Team
  • Published On - 13:16 PM, 2 Mar 2020
ಬೆಂಗಳೂರಿನಲ್ಲಿ ಮತ್ತೆ ಫ್ರೀ ಕಾಶ್ಮೀರ ಬರಹ ಪತ್ತೆ!

ಬೆಂಗಳೂರು: ವಿವಾದದ ಕಿಚ್ಚು ಹೊತ್ತಿಸಿ ದೇಶಾದ್ಯಂತ ಹಿಂಸಾಚಾರಕ್ಕೆ ಕಾರಣವಾಗಿದ್ದ ಫ್ರೀ ಕಾಶ್ಮೀರ ಕೂಗು ಮತ್ತೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೇಳಿಬಂದಿದೆ. ನಗರದ ಎನ್‌ಸಿಸಿ ಕಚೇರಿಯ ಕಾಂಪೌಂಡ್ ಗೋಡೆಯ ಮೇಲೆ ಫ್ರೀ ಕಾಶ್ಮೀರ ಬರಹ ಪತ್ತೆಯಾಗಿದೆ.

ಮೇಜರ್ ಸಂದೀಪ್ ಉನ್ನಿಕೃಷ್ಣನ್ ಪ್ರತಿಮೆ ಬಳಿಯ ಡಿಫೆನ್ಸ್ ಕಾಂಪೌಂಡ್ ಮೇಲೆ ಸಿಎಎ ವಿರೋಧಿ ಬರಹ ಇದ್ದು, ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ಬರಹವೂ ಇದೇ ಜಾಗದಲ್ಲಿ ಪತ್ತೆಯಾಗಿದೆ. ಮೇಜರ್ ಎನ್ ಕ್ಲೇವ್ ನಿಂದ 200 ಮೀ. ದೂರದಲ್ಲಿ ಪತ್ತೆಯಾದ ಈ ಬರಹವನ್ನು ಯಾರು? ಯಾವಾಗ ಬರೆದಿದ್ದಾರೆ ಎಂದು ಸದ್ಯಕ್ಕೆ ತಿಳಿದು ಬಂದಿಲ್ಲ. ಆದ್ರೆ ಇದು ಹಳೆಯ ಬರಹವಾಗಿದ್ದು, ಇಂದು ಬೆಳಕಿಗೆ ಬಂದಿದೆ ಎಂದು ಇಲ್ಲಿನ ಸ್ಥಳೀಯರು ತಿಳಿಸಿದ್ದಾರೆ.