ದಿನಾ ಬೀದಿ ನಾಯಿಗಳ ದಾಳಿ, ಕಚ್ಚಿದ್ರೂ BBMP ಕಮಕ್​ ಕಿಮಕ್​ ಅಂತಿಲ್ಲ!

ಬೆಂಗಳೂರು: ಕತ್ತಲಾದ್ರೆ ಸಾಕು.. ಒಬ್ಬೊಬ್ಬರೇ ಓಡಾಡಂಗೇ ಇಲ್ಲ.. ಕಂಡ ಕಂಡ ಏರಿಯಾಗಳಲ್ಲಿ ಸುಮ್ನೆ ನಡ್ಕೊಂಡು ಹೋಗಂಗೇ ಇಲ್ಲ. ಒಂದ್ ವೇಳೆ ಹೋದ್ರೋ ಅಷ್ಟೇ ಕಥೆ. ಕೈಯೋ ಕಾಲಿಗೋ ಅಥವಾ ಮೈಗೋ ಗಾಯ ಗ್ಯಾರಂಟಿ. ಯಾಕಂದ್ರೆ, ಒಬ್ಬೊಬ್ಬರೇ ಬರೋರನ್ನು ಹುರಿದು ಮುಕ್ಕೋಕೆ ಈ ರೌಡಿಗಳು ಕಾಯ್ತಾ ಇರ್ತವೆ. ದಿನಕ್ಕೆ 30 ಜನರ ಮೇಲೆ ಬೀದಿ ನಾಯಿಗಳ ದಾಳಿ! ಬೆಂಗಳೂರಿನಲ್ಲಿ ದಿನೇದಿನೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗ್ತಿದೆ. ರಾತ್ರಿ 11 ಗಂಟೆ ದಾಟ್ತಂದ್ರೆ ಸಾಕು ಶ್ವಾನಗಳ ಅಟ್ಟಹಾಸ ಮಿತಿ ಮೀರುತ್ತೆ. […]

ದಿನಾ ಬೀದಿ ನಾಯಿಗಳ ದಾಳಿ, ಕಚ್ಚಿದ್ರೂ BBMP ಕಮಕ್​ ಕಿಮಕ್​ ಅಂತಿಲ್ಲ!
ಸಾಂಕೇತಿಕ ಚಿತ್ರ
ಸಾಧು ಶ್ರೀನಾಥ್​

Updated on: Mar 02, 2020 | 12:24 PM

ಬೆಂಗಳೂರು: ಕತ್ತಲಾದ್ರೆ ಸಾಕು.. ಒಬ್ಬೊಬ್ಬರೇ ಓಡಾಡಂಗೇ ಇಲ್ಲ.. ಕಂಡ ಕಂಡ ಏರಿಯಾಗಳಲ್ಲಿ ಸುಮ್ನೆ ನಡ್ಕೊಂಡು ಹೋಗಂಗೇ ಇಲ್ಲ. ಒಂದ್ ವೇಳೆ ಹೋದ್ರೋ ಅಷ್ಟೇ ಕಥೆ. ಕೈಯೋ ಕಾಲಿಗೋ ಅಥವಾ ಮೈಗೋ ಗಾಯ ಗ್ಯಾರಂಟಿ. ಯಾಕಂದ್ರೆ, ಒಬ್ಬೊಬ್ಬರೇ ಬರೋರನ್ನು ಹುರಿದು ಮುಕ್ಕೋಕೆ ಈ ರೌಡಿಗಳು ಕಾಯ್ತಾ ಇರ್ತವೆ.

ದಿನಕ್ಕೆ 30 ಜನರ ಮೇಲೆ ಬೀದಿ ನಾಯಿಗಳ ದಾಳಿ!
ಬೆಂಗಳೂರಿನಲ್ಲಿ ದಿನೇದಿನೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗ್ತಿದೆ. ರಾತ್ರಿ 11 ಗಂಟೆ ದಾಟ್ತಂದ್ರೆ ಸಾಕು ಶ್ವಾನಗಳ ಅಟ್ಟಹಾಸ ಮಿತಿ ಮೀರುತ್ತೆ. ಬೈಕುಗಳಲ್ಲಿ ಯಾರು ಓಡಾಡೋಕೆ ಆಗಲ್ಲ. ರಸ್ತೆ ಬದಿ ಜನ ತಿರುಗಾಡಂಗೂ ಇಲ್ಲ. ವಾಕಿಂಗು, ರೌಂಡ್ಸು ಅಂತಾ ಯಾರೂ ಆಚೆ ಬರೋ ಹಂಗೇ ಇಲ್ಲ. ಯಾಕಂದ್ರೆ, ಈ ಬೀದಿ ನಾಯಿಗಳು ಅವರ ಮೇಲೆ ದಾಳಿ ಮಾಡೋಕೆ ಕಾದು ಕುಳಿತಿರುತ್ತವೆ.

ಅಪ್ಪಿ ತಪ್ಪಿ ಒಬ್ಬೊಬ್ಬರೇ ಸಿಕ್ರೋ ಅವರ ಮೇಲೆ ದಾಳಿ ಮಾಡಿಬಿಡುತ್ತವೆ. ನಿತ್ಯ ಏನಿಲ್ಲ ಅಂದ್ರೂ ಸರಾಸರಿ 30ಕ್ಕೂ ಹೆಚ್ಚು ಮಂದಿಗೆ ಬೆಂಗಳೂರಿನಲ್ಲಿ ನಾಯಿಗಳು ಕಚ್ಚುತ್ತವೆ ಅನ್ನೋದನ್ನು ಸ್ವತಃ ಆರೋಗ್ಯ ಅಧಿಕಾರಿಗಳೇ ಹೇಳಿದ್ದಾರೆ. ಈ ಬಗ್ಗೆ ಪಾಲಿಕೆಗೆ ಹಲವು ಬಾರಿ ದೂರು ಕೊಟ್ರೂ ಯಾವುದೇ ಪ್ರಯೋಜನವಾಗಿಲ್ಲ ಅನ್ನೋದು ಸಾರ್ವಜನಿಕರ ಅಳಲು.

ಇವುಗಳ ಹಾವಳಿ ಮಿತಿಮೀರೋಕೆ ಕಾರಣವಿದೆ. ಸಿಟಿಯ ಗಲ್ಲಿ ಗಲ್ಲಿಯಲ್ಲೂ ಮಾಂಸದ ಅಂಗಡಿಗಳು, ಮಧ್ಯದಂಗಡಿಗಳು ಹೆಚ್ಚಾಗ್ತಿವೆ. ಇದ್ರಿಂದ ಬೀದಿ ನಾಯಿಗಳ ಕಾಟ ಕೂಡ ಹೆಚ್ಚಾಗ್ತಿದ್ದು, ಅವುಗಳಿಂದ ಕಡಿತಕ್ಕೊಳಗಾಗುತ್ತಿದ್ದವರ ಸಂಖ್ಯೆ ಕೂಡ ಹೆಚ್ಚಾಗ್ತಿದೆ. ಶ್ವಾನಗಳ ನಿರ್ವಹಣೆಗೆಂದೇ ಪ್ರತಿವರ್ಷ ಕೋಟ್ಯಂತರ ಖರ್ಚು ಮಾಡುತ್ತೆ.

ಆದ್ರೆ ಈ ಹಾವಳಿ ಮಾತ್ರ ಇನ್ನೂ ತಪ್ಪಿಲ್ಲ. ಈ ಬಗ್ಗೆ ಕಮಿಷನರ್​ರನ್ನ ಕೇಳಿದ್ರೆ, ದಿನೇದಿನೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ ಅಂತಾ ದೂರುಗಳು ಕೇಳಿಬರುತ್ತಿವೆ. ಈ ಬಗ್ಗೆ ಈಗಾಗಲೇ ನಾನು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಶೀಘ್ರದಲ್ಲೇ ಇದಕ್ಕೆ ಕಡಿವಾಣ ಹಾಕೋಕೆ ಎಲ್ಲ ಕ್ರಮಗಳನ್ನು ಜರುಗಿಸುತ್ತೇವೆ ಅಂತಿದ್ದಾರೆ.

ಒಟ್ನಲ್ಲಿ, ಸಿಲಿಕಾನ್ ಸಿಟಿ ಮಂದಿಗೆ ಬೀದಿ ನಾಯಿಗಳ ಕಾಟ ದಿನೇ ದಿನೇ ಹೆಚ್ಚಾಗ್ತಾ ಇದೆ. ಇನ್ನಾದರೂ ಇದಕ್ಕೆ ಬಿಬಿಎಂಪಿ ಕಡಿವಾಣ ಹಾಕುತ್ತಾ..? ನೋಡಬೇಕು.

Published On - 7:52 am, Mon, 2 March 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us