ಹೆಬ್ಬಾಳ ರೈಲ್ವೆ ಹಳಿಯಲ್ಲಿ ಕಂತೆ ಕಂತೆ ಡಾಲರ್​​ ಪತ್ತೆ ಕೇಸ್; ಇಬ್ಬರು ಆರೋಪಿಗಳ ಬಂಧನ, ಡಾಲರ್​ ಹಿಂದಿದೆ ರೋಚಕ ಕಥೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 16, 2023 | 6:08 PM

ಹೆಬ್ಬಾಳ ರೈಲ್ವೆ ನಿಲ್ದಾಣ ಬಳಿಯ ಹಳಿಯಲ್ಲಿ ಕಂತೆ ಕಂತೆ ಡಾಲರ್(Doller) ​​ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರಲ್ಲಿ ಇಬ್ಬರು ಆರೋಪಿಗಳನ್ನು ಅಮೃತಹಳ್ಳಿ ಪೊಲೀಸರು(Amruthahalli Police)  ಬಂಧಿಸಿದ್ದಾರೆ. ಶರವಣ, ಬಿದನ್​​ನನ್ನು ಆರೋಪಿಗಳು.

ಹೆಬ್ಬಾಳ ರೈಲ್ವೆ ಹಳಿಯಲ್ಲಿ ಕಂತೆ ಕಂತೆ ಡಾಲರ್​​ ಪತ್ತೆ ಕೇಸ್; ಇಬ್ಬರು ಆರೋಪಿಗಳ ಬಂಧನ, ಡಾಲರ್​ ಹಿಂದಿದೆ ರೋಚಕ ಕಥೆ
ಬಂಧಿತ ಆರೋಪಿಗಳು
Follow us on

ಬೆಂಗಳೂರು, ನ.16: ಹೆಬ್ಬಾಳ ರೈಲ್ವೆ ನಿಲ್ದಾಣ ಬಳಿಯ ಹಳಿಯಲ್ಲಿ ಕಂತೆ ಕಂತೆ ಡಾಲರ್(Doller) ​​ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರಲ್ಲಿ ಇಬ್ಬರು ಆರೋಪಿಗಳನ್ನು ಅಮೃತಹಳ್ಳಿ ಪೊಲೀಸರು(Amruthahalli Police)  ಬಂಧಿಸಿದ್ದಾರೆ. ಶರವಣ, ಬಿದನ್​​ನನ್ನು ಆರೋಪಿಗಳು. ಹಳಿಯಲ್ಲಿ ಸಿಕ್ಕ ಡಾಲರ್ಸ್​ನ್ನು ಪೊಲೀಸರಿಗೆ ​​ ಒಪ್ಪಿಸಿದ್ದ ಸಾಮಾಜಿಕ ಕಾರ್ಯಕರ್ತ  ಕಲೀಮುಲ್ಲಗೆ ಬಂಧಿತರು ಅಪಹರಿಸಿದ್ದರು. ಈ ಕೇಸ್​ಗೆ ಸಂಬಂಧಪಟ್ಟಂತೆ ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಿ, ಉಳಿದ ಆರೋಪಿಗಳಿಗಾಗಿ ಶೋಧಕಾರ್ಯ ನಡೆಸಿದ್ದಾರೆ.

ಘಟನೆ ವಿವರ

ನವೆಂಬರ್ 1 ರಂದು ಚಿಂದಿ ಆಯುವ ವ್ಯಕ್ತಿಗೆ ಡಾಲರ್ಸ್ ನೋಟು ಸಿಕ್ಕಿತ್ತು. 100ರ ಮುಖಬೆಲೆಯ 23 ಕಂತೆಗಳಲ್ಲಿ 30 ಮಿಲಿಯನ್ ಡಾಲರ್​ನ್ನು​ ಗುತ್ತಿಗೆದಾರ ತೊಹಿಬುಲ್​ ಇಸ್ಲಾಂಗೆ ಆತ ನೀಡಿದ್ದ. ಇದನ್ನು ನೋಡಿದ ಗುತ್ತಿಗೆದಾರ ಕೂಡಲೇ ಕರೆ ಮಾಡಿ ವಿಷಯ ತಿಳಿಸಿ ಸಾಮಾಜಿಕ ಕಾರ್ಯಕರ್ತ ಕಲೀಮುಲ್ಲಗೆ ಕೊಟ್ಟಿದ್ದ,  ಆತ ಡಾಲರ್​ಗಳ ಕಂತೆಯನ್ನು ಪೊಲೀಸ್​ ಕಮಿಷನರ್​​ಗೆ ಒಪ್ಪಿಸಿದ್ದ. ಇದಾದ ಬಳಿಕ ಖದೀಮರು ಇವರಿಬ್ಬರು ಅಪಹರಣ ಮಾಡಿದ್ದರು.

ಇದನ್ನೂ ಓದಿ:ಗೆಳೆಯನನ್ನೇ ಕೊಲೆಗೈದ ಯುವಕ; ದೂರದ ಊರಿನಲ್ಲಿ ಅಡಗಿ ಕುಳಿತಿದ್ದ ಆರೋಪಿಯನ್ನು ಬಂಧಿಸಿದ ಮಂಡ್ಯ ಪೊಲೀಸರು

ಪೊಲೀಸ್​ ಠಾಣೆಗೆ ದೂರು ನೀಡಿದ್ದ ಸಾಮಾಜಿಕ ಕಾರ್ಯಕರ್ತ ಕಲೀಮುಲ್ಲ

ಬಪ್ಪಾ ಎಂಬುವವರಿಗೆ ಡಾಲರ್ಸ್ ಸಿಕ್ಕಿರುವ ವಿಷಯ ತಿಳಿದಿದ್ದ ಆರೋಪಿಗಳು, ನವೆಂಬರ್ 7ರಂದು ಆತನನ್ನು ಐವರು ಸೇರಿ ಅಪಹರಿಸಿದ್ದರು. ಆದರೆ, ಅದು ಆತನ ಬಳಿ ಇಲ್ಲವೆಂದು ತಿಳಿದ ಮೇಲೆ ನವೆಂಬರ್​ 8ರ ಮಧ್ಯರಾತ್ರಿ ಸಾಮಾಜಿಕ ಕಾರ್ಯಕರ್ತ ಕಲೀಮುಲ್ಲನನ್ನು ಅಪಹರಿಸಿ ಡಾಲರ್ಸ್ ಕೊಡುವಂತೆ ಕೇಳಿ ಬೆದರಿಕೆ ಹಾಕಿದ್ದರು. ಅದನ್ನು ತೆಗೆದುಕೊಂಡು ಫಾರಿನ್ ಎಕ್ಸ್​ಚೇಂಜ್​ನಲ್ಲಿ ರೂಪಾಯಿಗೆ ಕನ್ವರ್ಟ್ ಮಾಡಿಸಿ ಹಂಚಿಕೊಳ್ಳಲು ಪ್ಲಾನ್ ಮಾಡಿದ್ದರು. ಆದ್ರೆ, ಸಿಕ್ಕ ಡಾಲರ್ಸ್​ನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂಬ ವಿಷಯ ತಿಳಿದು ನಿರಾಸೆಗೊಂಡಿದ್ದರು. ಈ ಬಗ್ಗೆ ಕಲೀಮುಲ್ಲ ಅವರು ಅಮೃತಹಳ್ಳಿ ಪೊಲೀಸ್​ ಠಾಣೆಗೆ ದೂರು ನೀಡಿದ್ದರು, ಇದೀಗ ದೂರಿನನ್ವಯ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ