ಉಕ್ರೇನ್​​​ನಿಂದ ಮೊಬೈಲ್‌ನಲ್ಲಿ ಟಿಕೆಟ್ ಬುಕ್ ಮಾಡಿ ಬಂದ್ರಾ? ಈ ರೀತಿ ಸುಳ್ಳು ಹೇಳಬಾರದು;ಕೆಲ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಸಂಸದ ತೇಜಸ್ವಿ ಸೂರ್ಯ

ಉಕ್ರೇನ್, ರಷ್ಯಾ ಅಧ್ಯಕ್ಷರ ಜತೆ ಮೋದಿ ನಿರಂತರ ಸಂಪರ್ಕದಲ್ಲಿದ್ದಾರೆ. ಭಾರತೀಯರನ್ನು ಕರೆತರುವುದಕ್ಕೆ ಮೋದಿ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.

ಉಕ್ರೇನ್​​​ನಿಂದ ಮೊಬೈಲ್‌ನಲ್ಲಿ ಟಿಕೆಟ್ ಬುಕ್ ಮಾಡಿ ಬಂದ್ರಾ? ಈ ರೀತಿ ಸುಳ್ಳು ಹೇಳಬಾರದು;ಕೆಲ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಸಂಸದ ತೇಜಸ್ವಿ ಸೂರ್ಯ
ಸಂಸದ ತೇಜಸ್ವಿ ಸೂರ್ಯ
Edited By:

Updated on: Mar 12, 2022 | 2:59 PM

ಬೆಂಗಳೂರು: ಆಪರೇಷನ್ ಗಂಗಾ ಹೆಸರಿನಲ್ಲಿ ಉಕ್ರೇನ್‌ನಲ್ಲಿ(Ukraine) ಸಿಲುಕಿದ್ದ 19,448 ಭಾರತೀಯರನ್ನು ಏರ್‌ಲಿಫ್ಟ್ ಮಾಡಲಾಗಿದೆ. ಇದರಲ್ಲಿ ಸುಮಾರು 16 ಸಾವಿರ ಜನ ವಿದ್ಯಾರ್ಥಿಗಳಿದ್ದಾರೆ. ಎಲ್ಲರನ್ನೂ ಭಾರತಕ್ಕೆ ಸುರಕ್ಷಿತವಾಗಿ ಕರೆತಂದಿದ್ದಕ್ಕೆ ಧನ್ಯವಾದ. ವಿದ್ಯಾರ್ಥಿಗಳ ಪರವಾಗಿ ಪ್ರಧಾನಿ ನರೇಂದ್ರ ಮೋದಿಗೆ(Narendra modi) ಧನ್ಯವಾದ ಹೇಳುತ್ತೇನೆ. ಇನ್ನೂ 633 ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲಾಗಿದೆ. ಆಪರೇಷನ್ ಗಂಗಾ ಸಾಕಷ್ಟು ಜಟಿಲವಾಗಿತ್ತು. ಮೋದಿ ನಿರಂತರ ಪ್ರಯತ್ನದಿಂದ ಆಪರೇಷನ್ ಗಂಗಾ ಯಶಸ್ವಿಯಾಗಿದೆ. ಉಕ್ರೇನ್, ರಷ್ಯಾ ಅಧ್ಯಕ್ಷರ ಜತೆ ಮೋದಿ ನಿರಂತರ ಸಂಪರ್ಕದಲ್ಲಿದ್ದಾರೆ. ಭಾರತೀಯರನ್ನು ಕರೆತರುವುದಕ್ಕೆ ಮೋದಿ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ(Tejasvi surya) ತಿಳಿಸಿದ್ದಾರೆ.

ಬಳಿಕ ಮಾತನಾಡಿದ ಅವರು, 3 ವಾರಗಳಿಂದ ಆಪರೇಶನ್ ಗಂಗಾ ಯೋಜನೆ ಜಾರಿಯಲ್ಲಿತ್ತು. ನನ್ನ ಕಚೇರಿಯಿಂದಲೂ ಸಾಕಷ್ಟು ಕೆಲಸವನ್ನು ಮಾಡಲಾಗಿದೆ. 400 ವಿದ್ಯಾರ್ಥಿಗಳ ಪಟ್ಟಿ ರೆಡಿ ಮಾಡಿ ಕೇಂದ್ರಕ್ಕೆ ಸಲ್ಲಿಸಲಾಗಿತ್ತು. ಉಕ್ರೇನ್​ನ ವಾಟ್ಸ್​ಅಪ್ ಗ್ರೂಪ್​ಗಳಿಗೆ ಆಡ್ ಮಾಡಿ ವಿದ್ಯಾರ್ಥಿಗಳ ಸಂಪರ್ಕ ಪಡೆಯಲಾಗಿತ್ತು. ಕೇವಲ ವಿದ್ಯಾರ್ಥಿಗಳು ಮಾತ್ರವಲ್ಲ ಅವರವರ ಪ್ರಾಣಿಗಳನ್ನು ಕೂಡ ಆಪರೇಶನ್ ಗಂಗಾ ಮೂಲಕ ರಕ್ಷಿಸಲಾಗಿದೆ. ಏನು ಕೆಲಸ ಮಾಡದೆ ಇದ್ದಿದ್ರೆ ವಿದ್ಯಾರ್ಥಿಗಳು ಬರುತ್ತಿರಲಿಲ್ಲ. ಯಾಕೆ ಕೆಲವು ವಿದ್ಯಾರ್ಥಿಗಳು ಆಕ್ರೋಶದಲ್ಲಿ ಹೀಗೆ ಹೇಳಿದ್ರೋ ಗೊತ್ತಾಗ್ಲಿಲ್ಲ. ಉಕ್ರೇನ್ ಇಲ್ಲಿಂದ ಶ್ರೀನಿವಾಸಪುರನೋ, ಬಸವನಗುಡಿಯೋ ಅಷ್ಟು ಹತ್ರ ಇಲ್ಲ. ಅವರೆಲ್ಲಾ ಬಂದಿದ್ದಾರಲ್ಲಾ ಸರ್ಕಾರ ಏನು ಮಾಡಿಲ್ಲ ಅಂತಿದ್ದಾರಲ್ಲಾ ಅದರ ಹಿಂದೆ ರಾಜಕೀಯದ ಬಗ್ಗೆ ಮಾತನಾಡೋದಿಲ್ಲ ಎಂದು ತಿಳಿಸಿದ್ದಾರೆ.

ನವೀನ್ ಮೃತ ದೇಹ ತರುವ ವಿಚಾರ

ಅಲ್ಲಿನ ಭಾರತೀಯ ಎಂಬೆಸಿ ಮೃತ ದೇಹ ಪತ್ತೆ ಮಾಡಿದೆ. ಇಲ್ಲಿಗೆ ಕರೆತರುವ ವ್ಯವಸ್ಥೆ ಮಾಡುತ್ತಿದೆ. ಜನರಲ್ ರಾವತ್ ಮರಣ ಆದಾಗಲೂ ಬಾಡಿ ಐಡೆಂಟಿಫೈ ಮಾಡೋದು ಸಾಧ್ಯವಾಗಿಲ್ಲ. ಎಲ್ಲಾ ರೀತಿಯ ಪ್ರಯತ್ನ ನಡೆಯುತ್ತಿದೆ. ಉಕ್ರೇನ್ ಯುಧ್ಧವಾಗುತ್ತಿರುವ ಜಾಗ ಇದೆ. ದೇಹದ ಸ್ಥಿತಿ ಹೇಗಿರುತ್ತೆ ಅನ್ನೋದು ಅಲ್ಲಿ ತಿಳಿದಿರುತ್ತದೆ. ಡಿಎನ್‌ಎ ಟೆಸ್ಟ್ ಎಲ್ಲವನ್ನು ಕೂಡಾ ಮಾಡಲಾಗುತ್ತಿದೆ. ಭರವಸೆ ಇಟ್ಟುಕೊಳ್ಳೋಣ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

ಬಳಿಕ ಸುಳ್ಳು ವದಂತಿಗಳ ಮೇಲೆ ಮಾತನಾಡಿದ ಅವರು, ಉಕ್ರೇನ್​ನಿಂದ ಬಂದವರು ಮೊಬೈಲ್‌ನಲ್ಲಿ ಟಿಕೆಟ್ ಬುಕ್ ಮಾಡಿಕೊಂಡು ಬಂದ್ರಾ? ನಮ್ಮ ದೇಶ ಕಳಿಸಿದ ವಿಮಾನದಲ್ಲಿ ಬಂದ್ರಾ? ಈ ರೀತಿಯ ಸುಳ್ಳು ಹೇಳಬಾರದು ಎಂದು ಎರಡು ಮೂರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದ್ದಾರೆ.

ಮಧ್ಯಮ, ಬಡ ವರ್ಗದ ಮಕ್ಕಳು ಉಕ್ರೇನ್‌‌ಗೆ ಹೋಗಿದ್ದಾರೆ: ಸಂಸದ ತೇಜಸ್ವಿ ಸೂರ್ಯ

2014ಕ್ಕೂ ಮೊದಲು 54 ಸಾವಿರ ಮೆಡಿಕಲ್ ಸೀಟ್ ಇತ್ತು. ಮೋದಿ ಅಧಿಕಾರಕ್ಕೆ ಬಂದ ಬಳಿಕ 86,648ಕ್ಕೆ ಸೀಟ್ ಹೆಚ್ಚಳ ಮಾಡಲಾಗಿದೆ. ಮೆಡಿಕಲ್ ಸೀಟ್‌ಗಳ ಸಂಖ್ಯೆ ಶೇಕಡಾ 55 ರಷ್ಟು ಹೆಚ್ಚಾಗಿದೆ. ಇದು 7 ವರ್ಷದಲ್ಲಿ ಪ್ರಧಾನಿ ಮೋದಿ ಮಾಡಿರುವ ಸಾಧನೆ. ಪಿಜಿ ಸೀಟ್‌ಗಳು 24 ಸಾವಿರ ಇತ್ತು. ಅದನ್ನೂ ಹೆಚ್ಚಿಸಿದ್ದಾರೆ. 6 ವರ್ಷದಲ್ಲಿ ಶೇಕಡಾ 73ರಷ್ಟು ಹೆಚ್ಚಳ ಮಾಡಿದ್ದಾರೆ. ಮಧ್ಯಮ, ಬಡವರ್ಗದ ಮಕ್ಕಳು ಉಕ್ರೇನ್‌‌ಗೆ ಹೋಗಿದ್ದಾರೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ:
ಮೆಲಿಟೊಪೋಲ್​ ನಗರದ ಮೇಯರ್​ ಅಪಹರಣ; ರಷ್ಯಾ ಸೈನಿಕರನ್ನು ಐಸಿಸ್​ ಉಗ್ರರಿಗೆ ಹೋಲಿಸಿದ ಉಕ್ರೇನ್​ ಅಧ್ಯಕ್ಷ ಝೆಲೆನ್ಸ್ಕಿ

ರಷ್ಯಾ ದಾಳಿಯ ಬಳಿಕ ಹಾನಿಗೊಳಗಾದ ಉಕ್ರೇನ್​ ನಗರದ ಕಟ್ಟಡಗಳು: ಫೋಟೋಗಳಲ್ಲಿ ನೋಡಿ

Published On - 2:42 pm, Sat, 12 March 22