ಡಾ.ಸಿ.ಎನ್.ಮಂಜುನಾಥ್ ಅವಧಿ ಮುಕ್ತಾಯ, ಯಾರಾಗಲಿದ್ದಾರೆ ಮುಂದಿನ ಜಯದೇವ ಆಸ್ಪತ್ರೆ ನಿರ್ದೇಶಕ?

| Updated By: ಆಯೇಷಾ ಬಾನು

Updated on: Jan 22, 2024 | 10:15 AM

ಜಯದೇವ ಆಸ್ಪತ್ರೆ ರಾಜಧಾನಿ ಬೆಂಗಳೂರಿನ ಪ್ರಖ್ಯಾತ ಹೃದ್ರೋಗ ಸಂಸ್ಥೆ. ಈ ಆಸ್ಪತ್ರೆ ಇಷ್ಟು ಖ್ಯಾತಿ ಗಳಿಸೋಕ್ಕೆ ಡಾ.ಸಿ.ಎನ್. ಮಂಜುನಾಥ್ ಅವರು ಕೂಡ ಕಾರಣ ಅಂದ್ರೆ ತಪ್ಪಾಗ್ಲಿಕ್ಕಿಲ್ಲ. ಹೃದಯದ ಡಾಕ್ಟರ್ ಅಂತಾನೇ ಫೆಮಸ್ ಆಗಿರುವ ಡಾ.ಸಿ.ಎನ್.ಮಂಜುನಾಥ್ ಅವರ ಅವಧಿ ಈ ತಿಂಗಳ 31 ಕ್ಕೆ ಮುಕ್ತಾಯಗೊಳ್ಳಲಿದೆ.

ಡಾ.ಸಿ.ಎನ್.ಮಂಜುನಾಥ್ ಅವಧಿ ಮುಕ್ತಾಯ, ಯಾರಾಗಲಿದ್ದಾರೆ ಮುಂದಿನ ಜಯದೇವ ಆಸ್ಪತ್ರೆ ನಿರ್ದೇಶಕ?
ಜಯದೇವ ಆಸ್ಪತ್ರೆ
Follow us on

ಬೆಂಗಳೂರು, ಜ.22: ಟ್ರೀಟ್ಮೆಂಟ್ ಫಸ್ಟ್, ಪೇಮೆಂಟ್ ನೆಕ್ಸ್ಟ್ ಎಂಬ ಪರಿಕಲ್ಪನೆಯನ್ನಿಟ್ಟುಕೊಂಡು ಸಾವಿರಾರು ಬಡ ರೋಗಿಗಳಿಗೆ ಚಿಕಿತ್ಸೆ ಕೊಟ್ಟವರು, ತಮ್ಮೊಂದಿಗೆ ಸಂಸ್ಥೆಯನ್ನು ಕಟ್ಟಿಬೆಳೆಸಿದವರು, ಹೃದ್ರೋಗ ವೈದ್ಯಕೀಯ ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡಿದ ಡಾ.ಸಿ.ಎನ್.ಮಂಜುನಾಥ್ (Dr CN Manjunath) ಈ ನಾಡು ಕಂಡ ಶ್ರೇಷ್ಠ ಮಟ್ಟದ ಹೃದ್ರೋಗ ತಜ್ಞರು. ಕಳೆದ ಬಾರಿ ಜಯದೇವ ಆಸ್ಪತ್ರೆ (Jayadeva Hospital) ನಿರ್ದೇಶಕರ ಅವಧಿ ಮುಗಿಯುತ್ತಿದೆ ಅಂದಾಗ ಸಾವಿರಾರು ರೋಗಿಗಳು ಆತಂಕಗೊಂಡಿದ್ದರು, ಸಿಬ್ಬಂದಿ ಕಣ್ಣೀರಿಟ್ಟಿದ್ದರು. ಆದರೆ ಆಗಿನ ಬಿಜೆಪಿ ಸರ್ಕಾರ ಇವರ ಸೇವೆಯನ್ನು ಒಂದು ವರ್ಷಗಳ ಕಾಲ ವಿಸ್ತರಿಸಿತ್ತು. ಆದರೆ ಈಗಿನ ಸರ್ಕಾರಕ್ಕೆ ಅಂತಹ ಯಾವ ಆಲೋಚನೆಯೂ ಇಲ್ಲದಿರುವುದು ಸ್ಪಷ್ಟವಾಗಿದೆ.

ಡಾ.ಸಿ.ಎನ್.ಮಂಜುನಾಥ್ ಅವರ ಅವಧಿ ಈ ತಿಂಗಳ 31 ಕ್ಕೆ ಮುಕ್ತಾಯಗೊಳ್ಳಲಿದೆ. ಸರ್ಕಾರವೂ ಮಂಜುನಾಥ್ ಅವರ ಅವಧಿಯನ್ನ ಮುಂದುವರೆಸುವು ನಿರ್ಧಾರದಿಂದ ಹಿಂದೆ ಸರಿದಿದ್ದು ಹೊಸ ನಿರ್ದೇಶಕರ ಆಯ್ಕೆಗೆ ಪತ್ರಿಕಾ ಪ್ರಕಟನೆಯ ಮೂಲಕ ಅರ್ಜಿ ಸಲ್ಲಿಕೆಗೆ ತಿಳಿಸಿತ್ತು. ಇದರಂತೆ ನಿನ್ನೆ ಅರ್ಜಿ ಸಲ್ಲಿಕೆಯ ಅವಧಿ ಕೂಡಾ ಮುಗಿದಿದ್ದು ಹತ್ತಾರು ಅರ್ಜಿಗಳು ಕೂಡಾ ಈ ಹುದ್ದೆಗೆ ಬಂದಿವೆ. ಆದ್ರೆ ಈ ನಡುವೆ ಈ ಜಾಗಕ್ಕೆ ಮೈಸೂರಿನ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ದಿನೇಶ್ ಅವರನ್ನು ನೇಮಿಸಲು ಚಿಂತನೆ ನಡೆದಿದೆ. ಎಲ್ಲಾ ಪ್ರೊಸಿಜರ್ ಮುಗಿದಿದೆ ಅಂತಾ ಕೂಡಾ ಹೇಳಲಾಗುತ್ತಿದೆ.

ಇದನ್ನೂ ಓದಿ: ಸುರಕ್ಷತಾ ಕಳವಳಕ್ಕೆ ಕಾರಣವಾಗುತ್ತಿವೆ ಬೆಂಗಳೂರಿನ ಸಾರ್ವಜನಿಕ ಶೌಚಾಲಯಗಳು; ಹೆಚ್ಚಿನವುಗಳಲ್ಲಿಲ್ಲ ಮೂಲಸೌಕರ್ಯ

ಇನ್ನು ಜಯದೇವ ಆಸ್ಪತ್ರೆಯ ನಿರ್ದೇಶಕರ ಅವಧಿ ಮುಕ್ತಾಯ ಹಿನ್ನಲೆ ಸಾಕಷ್ಟು ಸಿಬ್ಬಂದಿ ವರ್ಗ ಹಾಗೂ ರೋಗಿಗಳು ಬೇಸರ ಹೊರ ಹಾಕಿದ್ದಾರೆ. ಉತ್ತಮ ವೈದ್ಯರು ನಿರ್ದೇಶಕರು ಸಾಕಷ್ಟು ಬದಲಾವಣೆ ಮಾಡಿದ್ದಂತವರು ಅಂತಾ ಬೇಸರ ಹೊರ ಹಾಕಿದ್ದಾರೆ.

ಒಟ್ನಲ್ಲಿ ಡಾ ಸಿ.ಎನ್. ಮಂಜುನಾಥ್ ಅವಧಿ ಮುಂದುವರೆಸುವ ನಿರ್ಧಾರದಿಂದ ಸರ್ಕಾರ ಹಿಂದೆ ಸರದಿದೆ. ಪ್ರಸ್ತುತ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ ಸಿಎನ್ ಮಂಜುನಾಥ್ ಅವಧಿ ಈ ತಿಂಗಳು 31ಕ್ಕೆ ಮುಕ್ತಾಯವಾಗುತ್ತಿದ್ದು ಸಾಕಷ್ಟು ಜನರಿಗೆ ಇದು ಬೇಸರ ಮೂಡಿಸಿದ್ರೆ ಇನ್ನೊಂದಡೆ ನಿರ್ದೇಶಕರ ಹುದ್ದೆಗೆ ಏರಲು ಹಲವರು ಸರ್ಕಾರದ ಮಟ್ಟದಲ್ಲಿ ಲಾಭಿ ನಡೆಸಿರುವುದು ಕೇಳಿ ಬರ್ತಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:15 am, Mon, 22 January 24