AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುರಕ್ಷತಾ ಕಳವಳಕ್ಕೆ ಕಾರಣವಾಗುತ್ತಿವೆ ಬೆಂಗಳೂರಿನ ಸಾರ್ವಜನಿಕ ಶೌಚಾಲಯಗಳು; ಹೆಚ್ಚಿನವುಗಳಲ್ಲಿಲ್ಲ ಮೂಲಸೌಕರ್ಯ

ಸಮೀಕ್ಷೆಗೆ ಒಳಪಟ್ಟ ಶೇ 91ರಷ್ಟು ಮಹಿಳಾ ಶೌಚಾಲಯಗಳಲ್ಲಿ ಕಸದ ಬುಟ್ಟಿಗಳಿಲ್ಲ. ಇದರಿಂದಾಗಿ ಸ್ಯಾನಿಟರಿ ನ್ಯಾಪ್ಕಿನ್​ಗಳನ್ನು ವಿಲೇವಾರಿ ಮಾಡಲು ಅವರಿಗೆ ಕಷ್ಟವಾಗುತ್ತಿದೆ. ಟಿಶ್ಯೂ ಪೇಪರ್​ಗಳು, ಸ್ಯಾನಿಟರಿ ನ್ಯಾಪ್ಕಿನ್​ಗಳು, ಪ್ಲಾಸ್ಟಿಕ್​ಗಳು ಎಲ್ಲೆಂದರಲ್ಲಿ ಎಸೆದಿರುತ್ತವೆ.

ಸುರಕ್ಷತಾ ಕಳವಳಕ್ಕೆ ಕಾರಣವಾಗುತ್ತಿವೆ ಬೆಂಗಳೂರಿನ ಸಾರ್ವಜನಿಕ ಶೌಚಾಲಯಗಳು; ಹೆಚ್ಚಿನವುಗಳಲ್ಲಿಲ್ಲ ಮೂಲಸೌಕರ್ಯ
ಸಾಂದರ್ಭಿಕ ಚಿತ್ರ
TV9 Web
| Updated By: Ganapathi Sharma|

Updated on: Jan 22, 2024 | 9:51 AM

Share

ಬೆಂಗಳೂರು, ಜನವರಿ 22: ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿನ ಸಾರ್ವಜನಿಕ ಶೌಚಾಲಯಗಳ (Bengaluru’s public toilets) ಪೈಕಿ ಹೆಚ್ಚಿನವು ಸರಕ್ಷತಾ ಕಳವಳಕ್ಕೆ ಕಾರಣವಾಗಿವೆ ಎಂಬುದು ಸಮೀಕ್ಷೆಯೊಂದರಿಂದ ತಿಳಿದುಬಂದಿದೆ. ಸಾರ್ವಜನಿಕ ಶೌಚಾಲಯಗಳಲ್ಲಿ ಸರಿಯಾದ ಚಿಲಕದ ವ್ಯವಸ್ಥೆ ಇಲ್ಲದಿರುವುದು, ಲೈಟ್ ಹಾಗೂ ಇತರ ಮೂಲಸೌಕರ್ಯ ಕೊರತೆ ಇರುವುದು ಗೊತ್ತಾಗಿದೆ. ‘Nguvu Change’ನ ಅರ್ಚನಾ ಕೆಟಿಆರ್ ಅವರು ನಡೆಸಿದ ‘ದಿ ಬಿಗ್ ಬೆಂಗಳೂರು ಟಾಯ್ಲೆಟ್ ಸರ್ವೇ’ಯಲ್ಲಿ ಬೆಂಗಳೂರಿನ ಸಾರ್ವಜನಿಕ ಶೌಚಾಲಯಗಳ ದುಸ್ಥಿತಿ ಬಯಲಿಗೆ ಬಂದಿದೆ.

ಸಮೀಕ್ಷೆಗೆ ಒಳಪಟ್ಟ ಸಾರ್ವಜನಿಕ ಶೌಚಾಲಯಗಳ ಪೈಕಿ ಶೇ 75ರಷ್ಟರಲ್ಲಿ ಚಿಲಕ ಇಲ್ಲದಿರುವುದು, ಸರಿಯಾದ ಬಾಗಿಲುಗಳು ಇಲ್ಲದಿರುವುದು ಕಂಡುಬಂದಿದೆ. ಪುರುಷ ಮತ್ತು ಮಹಿಳಾ ಶುಚಿತ್ವ ಸಿಬ್ಬಂದಿ ಶೌಚಾಲಯಗಳಲ್ಲೇ ವಾಸಿಸುವಂಥ ಪ್ರಕರಣಗಳೂ ಕಂಡುಬಂದಿದ್ದು, ಇವುಗಳ ವಿಡಿಯೋ ದಾಖಲೆ ಕೂಡ ಇದೆ ಎಂದು ಸಮೀಕ್ಷಾ ವರದಿ ತಿಳಿಸಿದೆ.

ಶೇ 66ರಷ್ಟು ಶೌಚಾಲಯಗಳಲ್ಲಿ ಸಮರ್ಪಕವಾದ ಲೈಟ್ ವ್ಯವಸ್ಥೆ ಇಲ್ಲ. ವಿಶೇಷವಾಗಿ ಮಹಿಳೆಯರಿಗೆ ಸುರಕ್ಷಿತವಾಗಿಲ್ಲ. ಮಹಿಳೆಯರು ರಾತ್ರಿ ಬಳಸುವುದಕ್ಕಂತೂ ಯೋಗ್ಯವಾಗಿಲ್ಲ ಎಂದು ಸಮೀಕ್ಷೆ ತಿಳಿಸಿದೆ.

ದರದಲ್ಲಿಯೂ ಲಿಂಗ ತಾರತಮ್ಯ

ಸಾರ್ವಜನಿಕ ಶೌಚಾಲಯಗಳಲ್ಲಿ ದರ ವಿಧಿಸುವಾಗಲೂ ಲಿಂಗ ತಾರತಮ್ಯ ಮಾಡಲಾಗುತ್ತಿದೆ. ಪುರುಷರಿಗೆ 2 ರೂ. ಹಾಗೂ ಮಹಿಳೆಯರಿಗೆ 5 ರೂ. ವಿಧಿಸಲಾಗುತ್ತಿದೆ. ಇದು ಸಾರ್ವಜನಿಕ ಶೌಚಾಲಯಗಳಲ್ಲಿ ತಾರತಮ್ಯಕ್ಕೆ ಸ್ಪಷ್ಟ ನಿದರ್ಶನ ಎಂದು ವರದಿ ಉಲ್ಲೇಖಿಸಿದೆ.

ಇದನ್ನೂ ಓದಿ: ನೈರುತ್ಯ ರೈಲ್ವೆ ವಲಯದ ಟ್ರೇನ್​​ಗಳಲ್ಲಿ ಟಿಕೆಟ್​ ರಹಿತ ಪ್ರಯಾಣ: 46 ಕೋಟಿ ರೂ. ದಂಡ ಸಂಗ್ರಹ

ಸಮೀಕ್ಷೆಗೆ ಒಳಪಟ್ಟ ಶೇ 91ರಷ್ಟು ಮಹಿಳಾ ಶೌಚಾಲಯಗಳಲ್ಲಿ ಕಸದ ಬುಟ್ಟಿಗಳಿಲ್ಲ. ಇದರಿಂದಾಗಿ ಸ್ಯಾನಿಟರಿ ನ್ಯಾಪ್ಕಿನ್​ಗಳನ್ನು ವಿಲೇವಾರಿ ಮಾಡಲು ಅವರಿಗೆ ಕಷ್ಟವಾಗುತ್ತಿದೆ. ಟಿಶ್ಯೂ ಪೇಪರ್​ಗಳು, ಸ್ಯಾನಿಟರಿ ನ್ಯಾಪ್ಕಿನ್​ಗಳು, ಪ್ಲಾಸ್ಟಿಕ್​ಗಳು ಎಲ್ಲೆಂದರಲ್ಲಿ ಎಸೆದಿರುತ್ತವೆ. ಹೆಚ್ಚಿನ ಕಡೆಗಳಲ್ಲಿ ಶೌಚಾಲಯದ ಡ್ರೈನೇಜ್ ಪೈಪ್​ಗಳು ಬ್ಲಾಕ್ ಆಗಿವೆ ಎಂದು ಸಮೀಕ್ಷಾ ವರದಿ ಉಲ್ಲೇಖಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ