ಕರ್ನಾಟಕದಲ್ಲಿ ಇಂದು 89 ಮಂದಿಗೆ ಕೊರೊನಾ ಸೋಂಕು ದೃಢ; ಎಷ್ಟು ಸಾವು, ಗುಣಮುಖ ಕೇಸ್​ಎಷ್ಟು?

ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳ ಮಾಹಿತಿ: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 3336 ಜನರನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗಿದೆ. ಈ ಪೈಕಿ 89 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಬ್ಬ ಸೋಂಕಿತ ಮೃತಪಟ್ಟಿದ್ದು, 74 ಸೋಂಕಿತರು ಸೋಂಕು ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬೆಂಗಳೂರಿನಲ್ಲಿ 16 ಮಂದಿಗೆ ಕೋವಿಡ್ ದೃಢಪಟ್ಟಿದೆ.

ಕರ್ನಾಟಕದಲ್ಲಿ ಇಂದು 89 ಮಂದಿಗೆ ಕೊರೊನಾ ಸೋಂಕು ದೃಢ; ಎಷ್ಟು ಸಾವು, ಗುಣಮುಖ ಕೇಸ್​ಎಷ್ಟು?
ಕರ್ನಾಟಕದಲ್ಲಿ ಇಂದಿನ ಕೋವಿಡ್ ಪ್ರಕರಣಗಳು (ಸಾಂದರ್ಭಿಕ ಚಿತ್ರ)
Follow us
TV9 Web
| Updated By: Rakesh Nayak Manchi

Updated on: Jan 21, 2024 | 8:04 PM

ಬೆಂಗಳೂರು, ಜ.21: ಕರ್ನಾಟಕದಲ್ಲಿ ಕಳೆದ 24 ಗಂಟೆಯಲ್ಲಿ 3336 ಜನರನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗಿದೆ. ಈ ಪೈಕಿ 89 ಮಂದಿಗೆ ಕೊರೊನಾ ಸೋಂಕು (Karnataka Covid Case) ತಗುಲಿರುವುದು ದೃಢಪಟ್ಟಿದೆ. ಒಬ್ಬ ಸೋಂಕಿತ ಮೃತಪಟ್ಟಿದ್ದು, 74 ಸೋಂಕಿತರು ಸೋಂಕು ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬೆಂಗಳೂರಿನಲ್ಲಿ (Bengaluru) 16 ಮಂದಿಗೆ ಕೋವಿಡ್ ದೃಢಪಟ್ಟಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಒಬ್ಬ ಸೋಂಕಿತ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಶೇಕಡಾ 2.66 ರಷ್ಟಿದೆ. ಒಟ್ಟು 497 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ: ಭೂಕುಸಿತ, ಕೊರೊನಾದಿಂದ ಕಂಗೆಟ್ಟಿದ್ದ ಕೊಡಗು ಪ್ರವಾಸೋದ್ಯಮದಲ್ಲಿ ಭರ್ಜರಿ ಚೇತರಿಕೆ

ಜಿಲ್ಲಾವಾರು ಕೊರೊನಾ ಸೋಂಕು ಪ್ರಕರಣಗಳು

ಬೆಂಗಳೂರಿನಲ್ಲಿ ಇಂದು 16 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಬಾಗಲಕೋಟೆ 1, ಬಳ್ಳಾರಿ 1, ಬೆಳಗಾವಿ 4, ಬೆಂಗಳೂರು ಗ್ರಾಮಾಂತರ 4, ಚಾಮರಾಜನಗರ 1, ಚಿಕ್ಕಬಳ್ಳಾಪುರ 2, ಚಿತ್ರದುರ್ಗ 2, ದಕ್ಷಿಣ ಕನ್ನಡ 6, ಧಾರವಾಡ 2, ಗದಗ 2, ಹಾಸನ 5, ಕಲಬುರಗಿ 1, ಕೊಡಗು 4, ಕೊಪ್ಪಳ 2, ಮಂಡ್ಯ 1, ಮೈಸೂರು 14, ರಾಯಚೂರು 1, ರಾಮನಗರ 1, ಶಿವಮೊಗ್ಗ 3, ತುಮಕೂರು 8, ಉತ್ತರ ಕನ್ನಡ 1, ವಿಜಯನಗರ 5, ವಿಜಯಪುರ ಜಿಲ್ಲೆಯಲ್ಲಿ ಒಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ