AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭೂಕುಸಿತ, ಕೊರೊನಾದಿಂದ ಕಂಗೆಟ್ಟಿದ್ದ ಕೊಡಗು ಪ್ರವಾಸೋದ್ಯಮದಲ್ಲಿ ಭರ್ಜರಿ ಚೇತರಿಕೆ

Kodagu Tourism: ಭೂ ಕುಸಿತ ಪ್ರವಾಹ ಮತ್ತು ಕೊರೊನಾದಿಂದ ಕೊಡಗು ಪ್ರವಾಸೋದ್ಯಮ ಬಹಳವೇ ಕಂಗೆಟ್ಟು ಹೋಗಿತ್ತು. ಆದ್ರೆ ಕಳೆದ ವರ್ಷ ಅಂದ್ರೆ 2023ರಲ್ಲಿ ಕೊಡಗು ಪ್ರವಾಸೋದ್ಯಮ ಚೇತೋಹಾರಿಯಾಗಿದ್ದು, ಉತ್ತಮ ಬೆಳವಣಿಗೆ ಕಂಡಿದೆ. ಸ್ವತಃ ಪ್ರವಾಸೋದ್ಯಮಗಳೇ ಅಚ್ಚರಿ ಪಡುವಷ್ಟು ಜಿಲ್ಲೆ ಚೇತರಿಸಿಕೊಂಡಿದೆ.

ಭೂಕುಸಿತ, ಕೊರೊನಾದಿಂದ ಕಂಗೆಟ್ಟಿದ್ದ ಕೊಡಗು ಪ್ರವಾಸೋದ್ಯಮದಲ್ಲಿ ಭರ್ಜರಿ ಚೇತರಿಕೆ
ಭೂಕುಸಿತ, ಕೊರೊನಾದಿಂದ ಕಂಗೆಟ್ಟಿದ್ದ ಕೊಡಗು ಪ್ರವಾಸೋದ್ಯಮ ಭರ್ಜರಿಯಾಗಿ ಚೇತರಿಸಿಕೊಂಡಿದೆ!
Gopal AS
| Edited By: |

Updated on: Jan 16, 2024 | 12:10 PM

Share

ದಕ್ಷಿಣ ಕಾಶ್ಮೀರ, ಕಾಫಿ ನಾಡು ಕೊಡಗು ಜಿಲ್ಲೆ 2023ರಲ್ಲಿ ಪ್ರವಾಸೋದ್ಯಮದಲ್ಲಿ ಭರ್ಜರಿ ಯಶಸ್ಸು ಕಂಡಿದೆ. ಒಂದೇ ವರ್ಷದಲ್ಲಿ ದಾಖಲೆಯ 43 ಲಕ್ಷ ಪ್ರವಾಸಿಗರಿಗೆ ಪುಟ್ಟ ಜಿಲ್ಲೆ ಆತಿಥ್ಯ ನೀಡಿದೆ. ಇನ್ನು 2014 ಕಳೆದ ವರ್ಷದ ದಾಖಲೆಯನ್ನು ಮುರಿಯುವ ನಿರೀಕ್ಷೆಯಲ್ಲಿದೆ. ಕೊಡಗು ಜಿಲ್ಲೆಯ ಪ್ರವಾಸೀ ತಾಣಗಳು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ… ಗಗನಚುಂಬಿ ಬೆಟ್ಟಗುಡ್ಡಗಳು, ಹಸಿರ ರಾಶಿ.. ಮುತ್ತಿಕ್ಕುವ ಮಂಜಿನ ಹನಿ ಎಲ್ಲವೂ ಪ್ರವಾಸಿಗರ ಪಾಲಿಗೆ ಬಹಳ ಇಷ್ಟ. ಹಾಗಾಗಿಯೇ ಪ್ರವಾಸ ಬರಲು ಬಹಳಷ್ಟು ಮಂದಿ ಕೊಡಗು ಜಿಲ್ಲೆಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.

ಭೂ ಕುಸಿತ ಪ್ರವಾಹ ಮತ್ತು ಕೊರೊನಾದಿಂದ ಕೊಡಗು ಪ್ರವಾಸೋದ್ಯಮ ಬಹಳವೇ ಕಂಗೆಟ್ಟು ಹೋಗಿತ್ತು. ಆದ್ರೆ ಕಳೆದ ವರ್ಷ ಅಂದ್ರೆ 2023ರಲ್ಲಿ ಕೊಡಗು ಪ್ರವಾಸೋದ್ಯಮ ಚೇತೋಹಾರಿಯಾಗಿದ್ದು, ಉತ್ತಮ ಬೆಳವಣಿಗೆ ಕಂಡಿದೆ. ಸ್ವತಃ ಪ್ರವಾಸೋದ್ಯಮಗಳೇ ಅಚ್ಚರಿ ಪಡುವಷ್ಟು ಜಿಲ್ಲೆ ಚೇತರಿಸಿಕೊಂಡಿದೆ.

2013ರ ಜನವರಿಯಿಂದ ಡಿಸೆಂಬರ್ ವರೆಗೆ ಜಿಲ್ಲೆಗೆ ಭರ್ತಿ 43 ಲಕ್ಷ ಮಂದಿ ಪ್ರವಾಸಿಗರು ಭೇಟಿ ನೀಡಿದ್ದಾರೆ. 2022 ರಲ್ಲಿ 27 ಲಕ್ಷ ಮಂದಿ ಜಿಲ್ಲೆಗೆ ಭೇಟಿ ನೀಡಿದ್ದರು. 2021ರಲ್ಲಿ 10 ಲಕ್ಷ ಮಂದಿ ಭೇಟಿ ನೀಡಿದ್ದರು. ಈ ಎರಡು ವರ್ಷಗಳಿಗೆ ಹೋಲಿಸಿದ್ದಲ್ಲಿ 2023ರಲ್ಲಿ ದುಪ್ಪಟ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಕೊಡಗಿನತ್ತ ಆಗಮಿಸಿದ್ದಾರೆ. ಕಾಫಿಯನ್ನೇ ನೆಚ್ಚಿಕೊಂಡಿದ್ದ ಜಿಲ್ಲೆಯ ಜನತೆ ಇದೀಗ ಪ್ರವಾಸೋದ್ಯಮವನ್ನೂ ಆದಾಯದ ಪರ್ಯಾಯ ಮೂಲವನ್ನಾಗಿ ಮಾಡಿಕೊಂಡಿರುವುದು ಪ್ರವಾಸಿಗರ ಸಂಖ್ಯೆ ಹೆಚ್ಚಾಗಲು ಕಾರಣ ಎಂಬ ಅಭಿಪ್ರಾಯವಿದೆ.

ಜಿಲ್ಲೆಯ ರಾಜಾಸೀಟ್, ಅಬ್ಬಿಫಾಲ್ಸ್​ ಮಾಂದಲಪಟ್ಟಿ, ತಲಕಾವೇರಿ ಭಾಗಮಂಡಲ, ಇಗ್ಗುತ್ತಪ್ಪ ದೇವಸ್ಥಾನ ಮಲ್ಲಳ್ಳಿ ಜಲಪಾತ, ನಾಗರಹೊಳೆ ಸಫಾರಿ, ಇರ್ಪು ಜಲಪಾತ ಹೀಗಿ ಹತ್ತು ಹಲವು ಪ್ರವಾಸೀತಾಣಗಳಿಗೆ ಪ್ರತಿನಿತ್ಯ ಸಾವಿರಾರು ಮಂದಿ ಭೇಟಿ ನೀಡ್ತಾ ಇದ್ದಾರೆ. ಒಂದು ಕಡೆ ಪ್ರವಾಸೋದ್ಯಮ ಚೇತರಿಸಿಕೊಳ್ಳುತ್ತಿದ್ದರೆ ಮತ್ತೊಂದೆಡೆ ಲಕ್ಷಾಂತರ ಪ್ರವಾಸಿಗರ ಆಗಮನದಿಂದ ಜಿಲ್ಲೆ ಕಸದ ತೊಟ್ಟಿಯಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಬರುವ ಪ್ರವಾಸಿಗರು ಎಲ್ಲೆಂದರಲ್ಲಿ ಕಸ ಬಿಸಾಡುವುದರಿಂದ ಸ್ಥಳೀಯ ಮಂದಿ ಇನ್ನಿಲ್ಲದ ಕಿರಿಕಿರಿ ಅನುಭವಿಸುತ್ತಿದ್ದಾರೆ. ಪ್ರವಾಸಿಗರಿಗೆ ಕಸದ ಬಗ್ಗೆ ಅರಿವು ಮೂಡಿಸಲು ಸ್ಥಳೀಯವಾಗಿ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುವ ಅಗತ್ಯವಿದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ.

Also Read: ಮುರುಡೇಶ್ವರದಲ್ಲಿ ಕಡಲಬ್ಬರಕ್ಕೆ ಬೀಚ್ ಬಳಿಯಿದ್ದ ಗೂಡಂಗಡಿಗಳಿಗೆ ಹಾನಿ, ಮಹಿಳೆ ಕಣ್ಣೀರು

ಇದೇ ವೇಳೆ ಜಿಲ್ಲೆಗೆ ಪ್ರತಿವರ್ಷ ಆಗಮಿಸುತ್ತಿರುವ ಪ್ರವಾಸಿಗರಿಗೆ ಸೂಕ್ತ ಸೌಲಭ್ಯಗಳು ದೊರಕುತ್ತಿಲ್ಲ ಎಂಬ ಮಾತೂ ಇದೆ. ಪ್ರವಾಸೀತಾಣಗಳ ಬಗ್ಗೆ ಮಾಹಿತಿ ನೀಡುವ ಪ್ರವಾಸೀ ಮಿತ್ರರ (ಟೂರ್​​ ಗೈಡ್​​​) ಕೊರತೆ ಇದೆ. ಪ್ರವಾಸೀತಾಣಗಳಲ್ಲಿ ಸೂಕ್ತ ಶೌಚಾಲಯದ ಅಗತ್ಯವಿದೆ. ಪ್ರವಾಸೀತಾಣಗಳಿಗೆ ತೆರಳುವ ರಸ್ತೆಗಳ ಅಭಿವೃದ್ಧಿಯಾಗಬೇಕಿದೆ. ಹಾಗೆಯೇ ಪ್ರವಾಸೀತಾಣಗಳಲ್ಲಿ ಪ್ರವಾಸಿಗರನ್ನ ಸುಲಿಗೆ ಮಾಡುವವರ ವಿರುದ್ಧ ಕ್ರಮವಾಗಬೇಕಿದೆ. ಈ ಎಲ್ಲಾ ಕೊರತೆಗಳನ್ನ ಸರಿದೂಗಿಸಿದ್ದಲ್ಲಿ ಕೊಡಗು ಪ್ರವಾಸೋದ್ಯಮ ವಿಶ್ವ ಮಟ್ಟದಲ್ಲಿ ಹೆಸರು ಮಾಡಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ