AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ರಾಮಮಂದಿರ ಉದ್ಘಾಟನೆ, ಆ ದಿನ ನೆತ್ತರು ಹರಿಯುವುದು ಗ್ಯಾರಂಟಿ ಎಂದ ಅನ್ಯಕೋಮಿನ ವ್ಯಕ್ತಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಬೂದಿಹಾಳ್ ಗ್ರಾಮದಲ್ಲಿರುವ ಅಕ್ಕಪಕ್ಕದ ಅಂಗಡಿಯವರು ಗಲಾಟೆ ಮಾಡಿಕೊಂಡಿದ್ದಾರೆ. ಈ ವೇಳೆ ‘ಆ ದಿನ (ಜನವರಿ22 ರಂದು) ನೆತ್ತರು ಹರಿಯುವುದು ಗ್ಯಾರಂಟಿ. ರಾಮಮಂದಿರ ಉರುಳಿಸಿ ಅದೇ ಜಾಗದಲ್ಲಿ ಮಸೀದಿ ನಿರ್ಮಾಣ ಆಗುತ್ತೆ’ ಎಂದು ಅನ್ಯಕೋಮಿನ ವ್ಯಕ್ತಿಯಿಂದ ವಿವಾದಾತ್ಮಕ ಹೇಳಿಕೆ ನೀಡಲಾಗಿದೆ.

ಬೆಂಗಳೂರು: ರಾಮಮಂದಿರ ಉದ್ಘಾಟನೆ, ಆ ದಿನ ನೆತ್ತರು ಹರಿಯುವುದು ಗ್ಯಾರಂಟಿ ಎಂದ ಅನ್ಯಕೋಮಿನ ವ್ಯಕ್ತಿ
ನೆಲಮಂಗಲ ಪೊಲೀಸ್ ಠಾಣೆ
ಬಿ ಮೂರ್ತಿ, ನೆಲಮಂಗಲ
| Updated By: ಗಂಗಾಧರ​ ಬ. ಸಾಬೋಜಿ|

Updated on:Jan 21, 2024 | 10:58 AM

Share

ನೆಲಮಂಗಲ, ಜನವರಿ 21: ಅಯೋಧ್ಯೆಯ ರಾಮಮಂದಿರ (Ram Mandir) ದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಕ್ಷಣಗಣನೆ ಶುರುವಾಗಿದೆ. ಹೀಗಿರುವಾಗ ನೆಲಮಂಗಲದಲ್ಲಿ ಅನ್ಯಕೋಮಿನ ವ್ಯಕ್ತಿಯಿಂದ ವಿವಾದಾತ್ಮಕ ಹೇಳಿಕೆ ನೀಡಲಾಗಿದೆ. ‘ಆ ದಿನ (ಜನವರಿ22 ರಂದು) ನೆತ್ತರು ಹರಿಯುವುದು ಗ್ಯಾರಂಟಿ. ರಾಮಮಂದಿರ ಉರುಳಿಸಿ ಅದೇ ಜಾಗದಲ್ಲಿ ಮಸೀದಿ ನಿರ್ಮಾಣ ಆಗುತ್ತೆ’ ಬೂದಿಹಾಳ್ ಗ್ರಾಮದಲ್ಲಿರುವ ಅಕ್ಕಪಕ್ಕದ ಅಂಗಡಿಯವರು ಗಲಾಟೆ ಮಾಡಿಕೊಂಡಿದ್ದಾರೆ. ಧರ್ಮೇಂದರ ಪಾಂಡೆ ಹಾಗೂ ಹುಸೇನ್ ನಡುವೆ ಮಾತುಕತೆ ಆರೋಪ ಮಾಡಲಾಗಿದ್ದು, ಪ್ರಕರಣ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ NCR ದಾಖಲು ಮಾಡಲಾಗಿದೆ.

ನೆಲಮಂಗಲ ಭಜರಂಗದಳದಿಂದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ದೂರು ಹಿನ್ನೆಲೆ ಹುಸೇನ್ ಹೇಳಿಕೆಯನ್ನು ಪೊಲೀಸರು ಪಡೆಕೊಂಡಿದ್ದಾರೆ. ಇತ್ತ ಮನೆಗೆ ಬಾರದ ಪತಿಯನ್ನ ನೆನದು ಹುಸೇನ್ ಪತ್ನಿ ಮದೀನಾ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ: ಬೆಳಗಾವಿಯಲ್ಲಿ ಶೋಭಾಯಾತ್ರೆಗೆ ಅನುಮತಿ ಕೊರಿ ಸಲ್ಲಿಸಿದ್ದ ಅರ್ಜಿ ವಜಾ

ಮುಂಜಾಗ್ರತಾ ಕ್ರಮವಾಗಿ ನೆಲಮಂಗಲ ಉಪವಿಭಾಗದ ಪೊಲೀಸರು ಅಲರ್ಟ್​ ಆಗಿದ್ದು, ಅಹಿತಕರ ಘಟನೆ ನಡೆಯದ ಹಾಗೆ ಹದ್ದಿನ ಕಣ್ಣು ಇಟ್ಟಿದ್ದಾರೆ. ಅದೇ ರೀತಿಯಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ನಿಗಾ ವಹಿಸಲಾಗಿದೆ.

ಶಂಕರಾಚಾರ್ಯರೇ ಶ್ರೀರಾಮನ ಪರಮ ಭಕ್ತರಾಗಿದ್ದರು

500 ವರ್ಷಗಳ ಹೋರಾಟದ ಫಲವಾಗಿ ಅಯೋಧ್ಯೆಯಲ್ಲಿ ರಾಮಲಲ್ಲನ ಪ್ರತಿಷ್ಠಾಪನೆಗೆ ಕ್ಷಣಗಣನೇ ಆರಂಭವಾಗಿದೆ. ಆದರೆ, ಈ ಮಧ್ಯೆ ಶಂಕರಾಚಾರ್ಯರು ಸ್ಥಾಪಿಸಿದ್ದ ನಾಲ್ಕು ಮಠಗಳ ಪೈಕಿ ಮೂರು ಮಠಗಳು ಅಯೋಧ್ಯೆ ಕಾರ್ಯಕ್ರಮಕ್ಕೆ ಗೈರಾಗುವುದನ್ನು ಸ್ಪಷ್ಟಪಡಿಸಿದ್ದರು. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹರಿಹರಪುರದಲ್ಲಿ ತುಂಗಾ ನದಿ ತೀರದಲ್ಲಿ ಆದಿ ಶಂಕರಾಚಾರ್ಯರು ಸ್ಥಾಪಿಸಿದ್ದ ಧರ್ಮಪೀಠದ ಸಚ್ಚಿದಾನಂದ ಶ್ರೀಗಳು ಶಂಕರಾಚಾರ್ಯರು-ಶ್ರೀರಾಮನ ಸಂಬಂಧವನ್ನ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ: ರಾಜ್ಯದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಹರಿ ಅಂದರೆ ಮಹಾವಿಷ್ಣು. ವಿಷ್ಣುವಿನ 7ನೇ ಅವತಾರವೇ ಶ್ರೀರಾಮನ ಅವತಾರ. ಶಂಕರಾಚಾರ್ಯರು ಕೂಡ ಶ್ರೀರಾಮನ ಪರಮಭಕ್ತರಾಗಿದ್ದರು. ಶ್ರೀರಾಮನ ಮೇಲೆ ಭಕ್ತಿ-ಭಾವ ಹೊಂದಿದ್ದ ಶಂಕರರು ಸ್ತೋತ್ರಗಳನ್ನ ರಚಿಸಿ ರಾಮನಿಗೆ ಸಮರ್ಪಿಸಿದ್ದಾರೆ. ಅಷ್ಟೇ ಅಲ್ಲದೆ, ಶಂಕರರು ಸ್ಥಾಪಿಸಿದ್ದ ಪೀಠಗಳಲ್ಲಿ ಶ್ರೀರಾಮನ ಆರಾಧನೆ ನಿರಂತರವಾಗಿರಬೇಕೆಂದು ಶಂಕರರೇ ಆದೇಶಿಸಿದ್ದಾರೆ. ಶಂಕರರು ಸ್ಥಾಪಿಸಿದ ಎಲ್ಲಾ ಮಠಗಳಲ್ಲೂ ಶ್ರೀರಾಮಮಂದಿರವಿದೆ. ಶಂಕರ ಪರಂಪರೆಯ ಎಲ್ಲಾ ಮಠಗಳು ಶ್ರೀರಾಮನನ್ನ ಆರಾಧಿಸಿಕೊಂಡು ಬರುತ್ತಿವೆ ಎಂದು ಸ್ಪಷ್ಟನೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:53 am, Sun, 21 January 24