ಜೆ.ಸಿ.ನಗರ: ಕುಡಿದ ಅಮಲಿನಲ್ಲಿ ಎಟಿಎಂ ಕೇಂದ್ರದಲ್ಲಿ ದರೋಡೆಗೆ ಯತ್ನ
ಸಿಸಿ ಕ್ಯಾಮರಾ ಒಡೆದುಹಾಕಿ, ಎಟಿಎಂ ಒಡೆಯಲು ಪ್ರಯತ್ನಿಸಿದ್ದ. ಆ ವೇಳೆ ಎಟಿಎಂ ನಿರ್ವಹಣಾ ಕೇಂದ್ರಕ್ಕೆ ಅಲರ್ಟ್ ಸಂದೇಶ ಹೋಗಿತ್ತು. ಸದರಿ ನಿರ್ವಹಣಾ ಕೇಂದ್ರದವರು ತಕ್ಷಣ ಜೆ.ಸಿ. ನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಬರುವ ವೇಳೆಗೆ ದರೋಡೆಗೆ ಯತ್ನಿಸಿ ಪರಾರಿಯಾಗಿದ್ದ ಕೊಂಡಯ್ಯ.
ಬೆಂಗಳೂರು: ಕುಡಿದ ಅಮಲಿನಲ್ಲಿ ಖಾಸಗಿ ಬ್ಯಾಂಕಿನ ಎಟಿಎಂ ಕೇಂದ್ರದಲ್ಲಿ ದರೋಡೆಗೆ ಯತ್ನಿಸಿರುವ ಘಟನೆ ನಡೆದಿದೆ. ಬೆಂಗಳೂರಿನ ಜೆ.ಸಿ. ನಗರ ಪೊಲೀಸರಿಂದ ಕೊಂಡಯ್ಯ (35) ಎಂಬಾತನನ್ನು ಬಂಧಿಸಿದ್ದಾರೆ. ಎಂಆರ್ಎಸ್ ಪಾಳ್ಯದ HDFC ಬ್ಯಾಂಕ್ ಎಟಿಎಂನಲ್ಲಿ ಈ ಕುಕೃತ್ಯ ನಡೆದಿದೆ. ಖಾಸಗಿ ಕಚೇರಿಯಲ್ಲಿ ಹೌಸ್ಕೀಪಿಂಗ್ ಕೆಲಸ ಮಾಡುತ್ತಿದ್ದ ಕೊಂಡಯ್ಯ ಕುಡಿದ ಅಮಲಿನಲ್ಲಿ ಎಟಿಎಂ ಕೇಂದ್ರಕ್ಕೆ ನುಗ್ಗಿದ್ದ.
ಸಿಸಿ ಕ್ಯಾಮರಾ ಒಡೆದುಹಾಕಿ, ಎಟಿಎಂ ಒಡೆಯಲು ಪ್ರಯತ್ನಿಸಿದ್ದ. ಆ ವೇಳೆ ಎಟಿಎಂ ನಿರ್ವಹಣಾ ಕೇಂದ್ರಕ್ಕೆ ಅಲರ್ಟ್ ಸಂದೇಶ ಹೋಗಿತ್ತು. ಸದರಿ ನಿರ್ವಹಣಾ ಕೇಂದ್ರದವರು ತಕ್ಷಣ ಜೆ.ಸಿ. ನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಬರುವ ವೇಳೆಗೆ ದರೋಡೆಗೆ ಯತ್ನಿಸಿ ಪರಾರಿಯಾಗಿದ್ದ ಕೊಂಡಯ್ಯ. ವಿಫಲ ಯತ್ನ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನ ಪೊಲೀಸರು ತಕ್ಷಣ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕುಡಿದು ನಡು ರಸ್ತೆಯಲ್ಲಿ ಹುಟ್ಟುಹಬ್ಬ ಆಚರಣೆ; ತಡೆಯಲು ಹೋದ ಪೊಲೀಸರ ಮೇಲೆ ಹಲ್ಲೆ ಕೋಲಾರ: ಕುಡಿದ ಮತ್ತಿನಲ್ಲಿ ಮಧ್ಯ ರಸ್ತೆಯಲ್ಲಿ ಯುವಕರು ಹುಟ್ಟುಹಬ್ಬ ಆಚರಿಸಿ ರಂಪಾಟ ನಡೆಸಿರುವ ಘಟನೆ ನಡೆದಿದೆ. ಕೋಲಾರ ನಗರದ ಕುರುಬರ ಪೇಟೆ ಬಳಿಯ ಮದ್ಯ ರಸ್ತೆಯಲ್ಲಿ ಶ್ರೀಕಾಂತ್ ಹಾಗೂ ಅನಿಲ್ ಸ್ನೇಹಿತರು ರಸ್ತೆಯಲ್ಲಿ ಹುಟ್ಟು ಹಬ್ಬ ಆಚರಣೆ ಮಾಡಿದ್ದಾರೆ. ಈ ವೇಳೆ ಆಚರಣೆ ತಡೆಯಲು ಹೋದ ಪೊಲೀಸರ ಮೇಲೆಯೇ ಯುವಕರು ಹಲ್ಲೆಗೆ ಯತ್ನಿಸಿದ್ದು ಕೋಲಾರ ನಗರ ಪೊಲೀಸರು ಯುವಕರನ್ನ ವಶಕ್ಕೆ ಪಡೆದಿದ್ದಾರೆ.
Also Read: ಹಿಜಾಬ್: ಹೈಕೋರ್ಟ್ ಆದೇಶ ಒಪ್ಪಲೇಬೇಕು, ರಾಜಕೀಯ ಲಾಭ-ನಷ್ಟದ ಬಗ್ಗೆ ಯೋಚನೆ ಮಾಡಲ್ಲ -ಜೆಡಿಎಸ್ ವರಿಷ್ಠ ದೇವೇಗೌಡ
Published On - 8:27 pm, Tue, 15 March 22