ಬೆಂಗಳೂರು: ಕುಡಿದ ಮತ್ತಿನಲ್ಲಿ ಯುವಕರ ಹೊಡೆದಾಟ; ಪಬ್‌ನಲ್ಲಿ ಶಿಳ್ಳೆ ಹಾಕಿದಕ್ಕೆ ಬಿಯರ್​ ಬಾಟಲಿಯಿಂದ ಹಲ್ಲೆ

| Updated By: preethi shettigar

Updated on: Oct 22, 2021 | 8:47 AM

ಹೆಚ್ಎಸ್ಆರ್ ಲೇಔಟ್​ನ ಪಬ್​ಗೆ ಕೇರಳಿಗರು ಬಂದಿದ್ದರು. ಇದೇ ಪಬ್​ಗೆ ಬಂದಿದ್ದ ೧೦ ಕ್ಕೂ ಹೆಚ್ಚು ಬೇಗೂರು ಯುವಕರ ತಂಡದ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದೆ. ಬೇಗೂರು ಮೂಲದ ಯುವಕನಿಗೆ ಪಬ್​ನ ಶೌಚಾಲಯದಲ್ಲಿ ಬಿಯರ್ ಬಾಟಲ್​ನಿಂದ ಹಲ್ಲೆ ಮಾಡಲಾಗಿದೆ.

ಬೆಂಗಳೂರು: ಕುಡಿದ ಮತ್ತಿನಲ್ಲಿ ಯುವಕರ ಹೊಡೆದಾಟ; ಪಬ್‌ನಲ್ಲಿ ಶಿಳ್ಳೆ ಹಾಕಿದಕ್ಕೆ ಬಿಯರ್​ ಬಾಟಲಿಯಿಂದ ಹಲ್ಲೆ
ಹೆಚ್ಎಸ್ಆರ್​ ಲೇಔಟ್​ನ ಪಬ್​
Follow us on

ಬೆಂಗಳೂರು: ಕುಡಿದ ಮತ್ತಿನಲ್ಲಿ ಯುವಕರು ಪರಸ್ಪರ ಹೊಡೆದಾಡಿಕೊಂಡ ಘಟನೆ ಹೆಚ್ಎಸ್ಆರ್​ ಲೇಔಟ್​ನ ಪಬ್‌ನಲ್ಲಿ ನಡೆದಿದೆ. ಸ್ಥಳೀಯರು ಮತ್ತು ಕೇರಳಿಗರ ನಡುವೆ ಹೊಡೆದಾಟ ನಡೆದಿದ್ದು, ಬೇಗೂರಿನ ಯುವಕನೊಬ್ಬನಿಗೆ ಬಾಟಲಿಯಿಂದ ಹಲ್ಲೆ ಮಾಡಲಾಗಿದೆ. ಕೇರಳದ ಯುವಕ ಪಬ್‌ನಲ್ಲಿ ಶಿಳ್ಳೆ ಹಾಕಿದ ಹಿನ್ನೆಲೆ ಸ್ಥಳೀಯರು ಪ್ರಶ್ನೆ ಮಾಡಿದ್ದು, ಮಾತಿನಚಕಮಿಕಿ ನಡೆದಿದೆ. ಕೊನೆಗೆ ಹೊಡೆದಾಟಕ್ಕೆ ಯುವಕರ ಗುಂಪು ಮುಂದಾಗಿದೆ.

ಹೆಚ್ಎಸ್ಆರ್ ಲೇಔಟ್​ನ ಪಬ್​ಗೆ ಕೇರಳಿಗರು ಬಂದಿದ್ದರು. ಇದೇ ಪಬ್​ಗೆ ಬಂದಿದ್ದ ೧೦ ಕ್ಕೂ ಹೆಚ್ಚು ಬೇಗೂರು ಯುವಕರ ತಂಡದ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದೆ. ಬೇಗೂರು ಮೂಲದ ಯುವಕನಿಗೆ ಪಬ್​ನ ಶೌಚಾಲಯದಲ್ಲಿ ಬಿಯರ್ ಬಾಟಲ್​ನಿಂದ ಹಲ್ಲೆ ಮಾಡಲಾಗಿದೆ.

ಶಿಳ್ಳೆ ಹಾಕಿದರೆ ನಿಮಗೇನು ಸಮಸ್ಯೆ ಎಂದು ಪ್ರತಿಕ್ರಿಯೆ ನೀಡಿದ್ದು, ಈ ವೇಳೆ ಮಾತಿಗೆ ಮಾತು ಬೆಳೆದು ಪರಸ್ಪರ ಹೊಡೆದಾಟ ನಡೆದಿದೆ. ಅಕ್ಟೋಬರ್ 20ರಂದು ರಾತ್ರಿ 9.30ಕ್ಕೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಹೆಚ್‌ಎಸ್ಆರ್ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಹುಲ್ ರಾಜು, ಯುವರಾಜ, ಗಣೇಶ್ ಬಂಧಿತ ಆರೋಪಿಗಳು.

ಇದನ್ನೂ ಓದಿ:
ಬೆಂಗಳೂರು: ಡ್ರಾಪ್ ಕೇಳುವ ನೆಪದಲ್ಲಿ ಮೊಬೈಲ್, ಹಣ ದರೋಡೆ; ಸಿಮ್ ವಾಪಸ್ ಕೇಳಿದ್ದಕ್ಕೆ ವ್ಯಕ್ತಿಗೆ ಚಾಕುವಿನಿಂದ ಹಲ್ಲೆ

ಬೆಳಗಾವಿ: ನೈತಿಕ ಪೊಲೀಸ್‌ಗಿರಿ ಪ್ರಕರಣ; ಅನ್ಯಕೋಮಿನ ಸ್ನೇಹಿತೆಯರ ಜತೆ ಮಾತನಾಡುತ್ತಿದ್ದ ಯುವಕನ ಮೇಲೆ ಹಲ್ಲೆಗೆ ಯತ್ನ

Published On - 8:38 am, Fri, 22 October 21