ಮಳೆ ನೀರು ಮಿಶ್ರಿತ ಇಂಧನ ಹಾಕಿ 15ಕ್ಕೂ ಹೆಚ್ಚು ವಾಹನಗಳಿಗೆ ಹಾನಿ, ಪೆಟ್ರೋಲ್ ಬಂಕ್ ಮಾಲೀಕನಿಂದಲೇ ರಿಪೇರಿ ಕಾರ್ಯ

ಇಂಧನಕ್ಕೆ ಮಳೆ ನೀರು ಮಿಕ್ಸ್ ಆಗಿರುವುದನ್ನು ಗಮನಿಸದೆ ಪೆಟ್ರೋಲ್ ಬಂಕ್ ಮಾಲೀಕ ನೇರ ಗ್ರಾಹಕರ ವಾಹನಗಳಿಗೆ ಪೆಟ್ರೋಲ್ ತುಂಬಿಸಿದ್ದಾರೆ. ನೀರು ಮಿಕ್ಸ್ ಆಗಿದ್ದ ಪೆಟ್ರೋಲ್ ಹಾಕಿಸಿದ್ದಕೊಂಡಿದ್ದ 15ಕ್ಕೂ ಹೆಚ್ಚು ವಾಹನಗಳ ಎಂಜಿನ್ಗೆ ಹಾನಿಯಾಗಿದೆ.

ಮಳೆ ನೀರು ಮಿಶ್ರಿತ ಇಂಧನ ಹಾಕಿ 15ಕ್ಕೂ ಹೆಚ್ಚು ವಾಹನಗಳಿಗೆ ಹಾನಿ, ಪೆಟ್ರೋಲ್ ಬಂಕ್ ಮಾಲೀಕನಿಂದಲೇ ರಿಪೇರಿ ಕಾರ್ಯ
ಪೆಟ್ರೋಲ್ ಬಂಕ್ ಬಳಿ ಗಲಾಟೆ ನಡೆದ ಸಂದರ್ಭ

ಬೆಂಗಳೂರು: ವಾಹನ ಸವಾರರೇ ಹುಷಾರ್.. ಯಾಕಂದ್ರೆ ಕಳೆದ ಕೆಲವು ದಿನಗಳಿಂದ ಕಾಡುತ್ತಿರುವ ವರುಣ ಮತ್ತೊಂದು ಆತಂಕವನ್ನು ಸೃಷ್ಟಿಸಿದ್ದಾನೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆ ಮುಂದುವರೆದಿದ್ದು ಈಗಾಗಲೇ ಜನ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ. ಇದರ ನಡುವೆ ಮತ್ತೊಂದು ಸಮಸ್ಯೆ ಎದುರಾಗಿದೆ. ನಿಮ್ಮ ವಾಹನಕ್ಕೆ ಪೆಟ್ರೋಲ್, ಡಿಸೇಲ್ ಹಾಕಿಸೋ ಮುನ್ನ ಪರಿಶೀಲನೆ ಮಾಡಿಕೊಳ್ಳಲೇ ಬೇಕಾದ ಅನಿವಾರ್ಯತೆ ಉದ್ಭವಿಸಿದೆ.

ಹೌದು ಮಳೆಯಿಂದಾಗಿ ಬೆಂಗಳೂರಿನ ಎಂ.ಜಿ ರೋಡ್ನ ಬಂಕ್ ಒಂದರಲ್ಲಿ ಪೆಟ್ರೋಲ್ಗೆ ಮಳೆ ನೀರು ಮಿಕ್ಸ್ ಆಗಿ ಅವಾಂತರವಾಗಿರುವ ಘಟನೆ ನಡೆದಿದೆ. ಮಳೆ ಎಫೆಕ್ಟ್ ನಿಂದ ಪೆಟ್ರೋಲ್ ಬಂಕ್ನಲ್ಲಿ ಮಳೆ ನೀರು ಮಿಕ್ಸ್ ಆದ ಪೆಟ್ರೋಲ್ ಸಿಕ್ತಿದೆ. ಹೀಗಾಗಿ ಸವಾರರು ತಮ್ಮ ವಾಹನಕ್ಕೆ ಇಂಧನ ಹಾಕಿಕೊಂಡ ಮೇಲೆ ಒಮ್ಮೆ ಚೆಕ್ ಮಾಡುವುದು ಅನಿವಾರ್ಯ ಆಗಿದೆ.

ಇಂಧನಕ್ಕೆ ಮಳೆ ನೀರು ಮಿಕ್ಸ್ ಆಗಿರುವುದನ್ನು ಗಮನಿಸದೆ ಪೆಟ್ರೋಲ್ ಬಂಕ್ ಮಾಲೀಕ ನೇರ ಗ್ರಾಹಕರ ವಾಹನಗಳಿಗೆ ಪೆಟ್ರೋಲ್ ತುಂಬಿಸಿದ್ದಾರೆ. ನೀರು ಮಿಕ್ಸ್ ಆಗಿದ್ದ ಪೆಟ್ರೋಲ್ ಹಾಕಿಸಿದ್ದಕೊಂಡಿದ್ದ 15ಕ್ಕೂ ಹೆಚ್ಚು ವಾಹನಗಳ ಎಂಜಿನ್ಗೆ ಹಾನಿಯಾಗಿದೆ. 2 ದಿನಗಳ ಹಿಂದೆ ನಡೆದಿರೋ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಸದ್ಯ ಬಂಕ್ ಸಿಬ್ಬಂದಿ ಎಡವಟ್ಟಿಗೆ ವಾಹನ ಸವಾರರು ಸಮಸ್ಯೆ ಎದುರಿಸುತ್ತಿದ್ದು ಪೆಟ್ರೋಲ್ ಬಂಕ್ಗೆ ಮುತ್ತಿಗೆ ಹಾಕಿದ್ದಾರೆ. ವಾಹನ ಮಾಲೀಕರ ಮುತ್ತಿಗೆಯಿಂದ ಕಂಗಾಲಾದ ಮಾಲೀಕ ಹಾನಿಗೊಳಗಾಗಿದ್ದ ಎಲ್ಲಾ ವಾಹನಗಳನ್ನ ರಿಪೇರಿ ಮಾಡಿಸಿ ಸಮಸ್ಯೆ ಬಗೆಹರಿಸಿದ್ದಾನೆ. ನೀರು ಮಿಕ್ಸ್ ಆದ ವೇಳೆ ಬಂಕ್ ನಲ್ಲಿ 5 ಸಾವಿರ ಲೀಟರ್ಗೂ ಹೆಚ್ಚಿನ ಪೆಟ್ರೋಲ್ ಸ್ಟಾಕ್ ಇತ್ತು. ಸದ್ಯ ಕಳೆದೆರಡು ದಿನದಿಂದ ಸತತವಾಗಿ ನೀರು ಬೇರ್ಪಡಿಸುವ ಕಾರ್ಯವನ್ನು ಸಿಬ್ಬಂದಿ ಮಾಡುತ್ತಿದ್ದು ನೀರು ಬೇರ್ಪಡಿಸಲು 500 ಲೀ. ಗೂ ಹೆಚ್ಚಿನ ಪೆಟ್ರೋಲನ್ನ ಹೊರ ಚೆಲ್ಲಲಾಗಿದೆ.

ಘಟನೆಗೆ ಕಾರಣಗಳೇನು?
ಬಂಕ್ನ ಪೆಟ್ರೋಲ್ ಪಂಪ್ ಒಂದರ ರಿಪೇರಿಗಾಗಿ ವಾರದ ಹಿಂದೆ ಹಳ್ಳ ಕೊರೆಯಲಾಗಿತ್ತು. ಹಳ್ಳದ ಮುಖಾಂತರ ಪಂಪ್ ಮತ್ತು ಸಂಪ್ನ ನಡುವೆ ಪೆಟ್ರೋಲ್ ಹೊರತೆಗೆಯಲು ಪೈಪ್ ಒಂದನ್ನ ಅಳವಡಿಸಲಾಗಿತ್ತು. ಮೂರು ದಿನದ ಹಿಂದೆ ಸುರಿದ ಮಳೆಯಿಂದ ಪಂಪ್ ರಿಪೇರಿ ಪೈಪ್ ನಿಂದ ಪೆಟ್ರೋಲ್ ಸಂಪ್ ಗೆ ನೀರು ಸೇರಿದೆ. ನೀರು ಮಿಕ್ಸ್ ಆಗಿರೋದನ್ನ ಗಮನಿಸದೆ ಬಂಕ್ ಸಿಬ್ಬಂದಿ ನೇರವಾಗಿ ಗ್ರಾಹಕರಿಗೆ ಪೆಟ್ರೋಲ್ ತುಂಬಿಸಿದ್ದಾರೆ.

ಇದನ್ನೂ ಓದಿ: ರಾತ್ರಿ ಸುರಿದ ಭಾರೀ ಮಳೆಗೆ ಏರ್​ಪೋರ್ಟ್​​ ಸಮೀಪದ ಕೆರೆ ಭರ್ತಿ; 30 ವರ್ಷಗಳ ಬಳಿಕ ತುಂಬಿದ ಚಿಕ್ಕಜಾಲ ಕೆರೆ!

Click on your DTH Provider to Add TV9 Kannada