Kannada News Karnataka Bengaluru Due to Non-interlocking work Yesvantpur to Ahmedabad trains cancelled and Yeshwantpur to Kacheguda trains restore
ನಾನ್-ಇಂಟರ್‌ಲಾಕಿಂಗ್ ಕಾಮಗಾರಿ: ಯಶವಂತಪುರದಿಂದ ಅಹ್ಮದಾಬಾದ್ಗೆ ಬಿತ್ತು ರೆಡ್ ಸಿಗ್ನಲ್, ಯಶವಂತಪುರ ಕಾಚಿಗುಡಗೆ ಸಿಕ್ತು ಗ್ರೀನ್ ಸಿಗ್ನಲ್
ಕೇಂದ್ರೀಯ ರೈಲ್ವೆ ಇಲಾಖೆಯ ಸೂಚನೆಯಂತೆ ಕೆಲ ರೈಲುಗಳನ್ನು ರದ್ದುಗೊಳಿಸಲಾಗಿದೆ. ಹಾಗೂ ಅದೇ ರೀತಿ ಎರಡು ರೈಲುಗಳನ್ನು ಪುನರ್ ಚಾಲನೆ ಮಾಡಲಾಗಿದೆ.
ಸಾಂದರ್ಭಿಕ ಚಿತ್ರ
Follow us on
ಬೆಂಗಳೂರು: ದೌಂಡ್ – ಕುರ್ದುವಾಡಿ ಭಾಗದ ಭಿಗ್ವಾನ್ ಮತ್ತು ವಾಷಿಂಬೆ ನಿಲ್ದಾಣಗಳ ನಡುವೆ ಜೋಡಿ ಮಾರ್ಗದ ಕಾರ್ಯಕ್ಕೆ ಸಂಬಂಧಿಸಿದಂತೆ ನಾನ್-ಇಂಟರ್‌ಲಾಕಿಂಗ್ ಕಾಮಗಾರಿಯ ನಡೆಯುತ್ತಿರುವ ಹಿನ್ನೆಲೆ ಕೇಂದ್ರೀಯ ರೈಲ್ವೆ ಇಲಾಖೆಯ ಸೂಚನೆಯಂತೆ ಕೆಲ ರೈಲುಗಳನ್ನು ರದ್ದುಗೊಳಿಸಲಾಗಿದೆ. ಹಾಗೂ ಅದೇ ರೀತಿ ಎರಡು ರೈಲುಗಳನ್ನು ಪುನರ್ ಚಾಲನೆ ಮಾಡಲಾಗಿದೆ.
ರೈಲುಗಳ ಸೇವೆ ರದ್ದತಿ
ರೈಲು ಸಂಖ್ಯೆ 22601 ಎಂ.ಜಿ.ಆರ್ ಚೆನ್ನೈ ಸೆಂಟ್ರಲ್-ಸಾಯಿನಗರ ಶಿರಡಿ ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ಸೇವೆಯನ್ನು 2022ರ ಜುಲೈ 27 ಮತ್ತು ಆಗಸ್ಟ್ 03ರಂದು ರದ್ದುಗೊಳಿಸಲಾಗಿದೆ. ಮತ್ತು
ರೈಲು ಸಂಖ್ಯೆ 22602 ಸಾಯಿನಗರ ಶಿರಡಿ – ಎಂ.ಜಿ.ಆರ್ ಚೆನ್ನೈ ಸೆಂಟ್ರಲ್ ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ಸೇವೆಯನ್ನು ದಿನಾಂಕ 29.07.2022 ಮತ್ತು 05.08.2022 ರಂದು ರದ್ದುಗೊಳಿಸಲಾಗುತ್ತದೆ.
ರೈಲು ಸಂಖ್ಯೆ 16502 ಯಶವಂತಪುರ – ಅಹ್ಮದಾಬಾದ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲಿನ ಸೇವೆಯನ್ನು ದಿನಾಂಕ 31.07.2022 ಮತ್ತು 07.08.2022 ರಂದು ರದ್ದುಗೊಳಿಸಲಾಗುತ್ತದೆ.
ರೈಲು ಸಂಖ್ಯೆ 16501 ಅಹ್ಮದಾಬಾದ್ – ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲಿನ ಸೇವೆಯನ್ನು ದಿನಾಂಕ 02.08.2022 ಮತ್ತು 09.08.2022 ರಂದು ರದ್ದುಗೊಳಿಸಲಾಗುತ್ತದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಪುನರ್ ಚಾಲನೆಗೊಂಡ ರೈಲುಗಳು
ರೈಲು ಸಂಖ್ಯೆ. 16569 ಮತ್ತು 16570 ಯಶವಂತಪುರ – ಕಾಚಿಗುಡ- ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ಅನ್ನು ಪುನರ್ ಚಾಲನೆಗೊಳಿಸಲಾಗಿದೆ.
ರೈಲು ಸಂಖ್ಯೆ 16569 ಯಶವಂತಪುರ – ಕಾಚಿಗುಡ ಸಾಪ್ತಾಹಿಕ ಎಕ್ಸ್‌ಪ್ರೆಸ್ ಪ್ರತಿ ಶುಕ್ರವಾರ ಯಶವಂತಪುರದಿಂದ 29.07.2022 ರಿಂದ 26.08.2022 ರವರೆಗೆ ಪ್ರಯಾಣವನ್ನು ಪ್ರಾರಂಭಿಸುತ್ತದೆ. ಮತ್ತು ರೈಲು ಸಂಖ್ಯೆ 16570 ಕಾಚಿಗುಡ – ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್, ಪ್ರತಿ ಶನಿವಾರದಂದು 30.07.2022 ರಿಂದ 27.08.2022 ರವರೆಗೆ ಕಾಚಿಗುಡದಿಂದ ಪ್ರಯಾಣವನ್ನು ಪ್ರಾರಂಭಿಸುತ್ತದೆ. ಧರ್ಮಾವರಂ ನಿಲ್ದಾಣಕ್ಕೆ ರಾತ್ರಿ 11.43 ಗಂಟೆಗೆ ಆಗಮಿಸುವುದು.