Power Cut: ಜುಲೈ 28ರ ವರೆಗೆ ಬೆಂಗಳೂರಿನ ಹಲವೆಡೆ ವಿದ್ಯುತ್ ಕಡಿತ

Bangalore News: ಕೇಬಲ್‌ಗಳ ಚಾರ್ಜಿಂಗ್, ಮರದ ಟ್ರಿಮ್ಮಿಂಗ್ ಮುಂತಾದ ನಿರ್ವಹಣಾ ಕೆಲಸಕಾರ್ಯಗಳ ಹಿನ್ನೆಲೆ ಬೆಂಗಳೂರಿನ ಹಲವು ಭಾಗಗಳಲ್ಲಿ ಜುಲೈ 28ರ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Power Cut: ಜುಲೈ 28ರ ವರೆಗೆ ಬೆಂಗಳೂರಿನ ಹಲವೆಡೆ ವಿದ್ಯುತ್ ಕಡಿತ
ಸಾಂಕೇತಿಕ ಚಿತ್ರ
Follow us
TV9 Web
| Updated By: Rakesh Nayak Manchi

Updated on:Jul 26, 2022 | 8:54 AM

ಬೆಂಗಳೂರು: ಕೇಬಲ್‌ಗಳ ಚಾರ್ಜಿಂಗ್, ಮರದ ಟ್ರಿಮ್ಮಿಂಗ್ ಮುಂತಾದ ನಿರ್ವಹಣಾ ಕೆಲಸಕಾರ್ಯಗಳ ಹಿನ್ನೆಲೆ ಬೆಂಗಳೂರಿನ ಹಲವು ಭಾಗಗಳಲ್ಲಿ ಇಂದಿನಿಂದ ಜುಲೈ 28ರ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ತಿಳಿಸಿದೆ. ಪರೀಕ್ಷಾ ಸಮಯದಲ್ಲಿ ನಿರ್ವಹಣಾ ಕಾರ್ಯವನ್ನು ನಿಲ್ಲಿಸಲಾಗಿದೆ ಎಂದು ತಿಳಿಸಿದ ಬೆಸ್ಕಾಂ ಈಗ ಬಾಕಿ ಉಳಿದಿರುವ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ನಗರದಲ್ಲಿ ಸುಮಾರು 2,500 ಟ್ರಾನ್ಸ್‌ಫಾರ್ಮರ್‌ಗಳನ್ನು ಬದಲಾಯಿಸುವ ಗುರಿಯನ್ನು  ಹೊಂದಿದ್ದು, ಇದು ವಿದ್ಯುತ್ ಪೂರೈಕೆಗೆ ಅಡ್ಡಿಯಾಗಬಹುದು. ಎರಡರಿಂದ ಮೂರು ತಿಂಗಳವರೆಗೆ ವಿದ್ಯುತ್ ಕಡಿತಗೊಳಿಸುವ ಸಾಧ್ಯತೆಯಿದೆ ಎಂದು ಬೆಸ್ಕಾಂ ಅಧಿಕಾರಿಗಳು TOI ಗೆ ತಿಳಿಸಿದ್ದಾರೆ. ಹಾಗಿದ್ದರೆ ಜು.28ರ ವರೆಗೆ ಯಾವೆಲ್ಲಾ ಪ್ರದೇಶಗಳಲ್ಲಿ ಎಷ್ಟು ಹೊತ್ತು ಪವರ್ ಕಟ್ ಆಗಲಿದೆ? ಇಲ್ಲಿದೆ ನೋಡಿ ಮಾಹಿತಿ.

ಇಂದು ಎಲ್ಲೆಲ್ಲಿ ಪವರ್ ಕಟ್?

ಇಂದು (ಜುಲೈ 26) ಪೂರ್ವ ವಲಯದ ವ್ಯಾಪ್ತಿಯಲ್ಲಿರುವ ಪ್ರದೇಶಗಳಾದ ಸಿಎಂಆರ್ ರಸ್ತೆ, ಎಚ್‌ಆರ್‌ಬಿಆರ್ 3ನೇ ಬ್ಲಾಕ್, ಕರವಳ್ಳಿ ರಸ್ತೆ, ರಾಮಯ್ಯ ಲೇಔಟ್, ಅಜ್ಮಲ್ಲಪ್ಪ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪವರ್ ಕಟ್ ಆಗಲಿದೆ. ಈ ಪ್ರದೇಶಗಳಲ್ಲಿ ಬೆಳಿಗ್ಗೆ 10.30 ರಿಂದ ಸಂಜೆ 5.30 ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಪಶ್ಚಿಮ ವಲಯದಲ್ಲಿ ಉತ್ತರಹಳ್ಳಿ ರಸ್ತೆ, ಕೋಣಚಂದ್ರ ರಸ್ತೆ, ಕೋಡಿಪಾಳ್ಯ, ಅನ್ನಪೂರ್ಣೇಶ್ವರಿ ಲೇಔಟ್, ಹರ್ಷಾ ಲೇಔಟ್, ವಿದ್ಯಾಪೀಠ ರಸ್ತೆ, ಬಿಜಿಎಸ್ ಆಸ್ಪತ್ರೆ ರಸ್ತೆ, ಮೈಸೂರು ಹೆದ್ದಾರಿ, ಅಪೂರ್ವ ಬಡಾವಣೆ, ಬಿಡಬ್ಲ್ಯುಎಸ್‌ಎಸ್‌ಬಿ ಕಚೇರಿ, ಕೆಂಗೇರಿ ಮುಖ್ಯರಸ್ತೆ, ಪೂನಂ ಸಭಾಂಗಣ, ಭುವನೇಶ್ವರ ನಗರ, ದೊಡ್ಡ ಬಸ್ತಿ ಮುಖ್ಯರಸ್ತೆ, ಕಲ್ಯಾಣಿ ಲೇಔಟ್, ಆರ್‌ಆರ್ ಲೇಔಟ್, ಉಪಾಧ್ಯಾ ಲೇಔಟ್, ಕುವೆಂಪು ಮುಖ್ಯರಸ್ತೆ, ಜಿಕೆ ಗಲ್ಲಿ ರಸ್ತೆ, ಗಂಗಾನಗರ, ಯಮುನಾ ನಗರ ಶಾಲೆ, ಹೇರೋಹಳ್ಳಿ, ಮಧುರಮ್ಮ ದೇವಸ್ಥಾನ, ನಾಗರಹಳ್ಳಿ ವೃತ್ತ, ಪ್ರಸನಾ ಲೇಔಟ್, ನಾಗೇನಹಳ್ಳಿ ಸರ್ಕಲ್, ದರ್ಬೆ, ಮಾಧೇಶ್ವರ, ಹೇರೋಹಳ್ಳಿ ಕೆರೆ, ಪೂರ್ವ ಶಾಲೆ, ವಿದ್ಯಾಮಾನ್ಯ ನಗರ, ಅನುಪಮಾ ಶಾಲಾ ರಸ್ತೆ, ಮುನೀಶ್ವರ ರಸ್ತೆ, ಶಿವ ದೇವಸ್ಥಾನದ ಹತ್ತಿರ ಅಂದ್ರಹಳ್ಳಿ ಮುಖ್ಯ ರಸ್ತೆ, ಪೀಣ್ಯ 2 ಹಂತ, ಅಂದ್ರಹಳ್ಳಿ ಮುಖ್ಯರಸ್ತೆ, ವಾಲ್ಮೀಕಿ ನಗರ ಮತ್ತು ನವಿಲು ನಗರಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ರ ನಡುವೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಸೋಂಪುರ ಕೈಗಾರಿಕಾ ಪ್ರದೇಶ, ಬೀರಗೊಂಡನಹಳ್ಳಿ ಮತ್ತು ಸಿಟಿ ಪಾಳ್ಯ ಸೇರಿದಂತೆ ಪಶ್ಚಿಮ ವಲಯದ ಇತರ ಪ್ರದೇಶಗಳಲ್ಲಿ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 2 ರವರೆಗೆ ವಿದ್ಯುತ್ ಕಡಿತಗೊಳ್ಳಲಿದೆ.

ಜುಲೈ 27ರಂದು ಎಲ್ಲೆಲ್ಲಿ ಪವರ್ ಕಟ್

ಬುಧವಾರ (ಜುಲೈ 27) ಪೂರ್ವ ವಲಯದ ಬಾಣಸವಾಡಿ ಮುಖ್ಯರಸ್ತೆ, ತ್ಯಾಗರಾಜ್ ಲೇಔಟ್ (ಪ್ರೇಮ ಕರಿಯಪ್ಪ), ಮುದಪ್ಪ ರಸ್ತೆ, ಕೆಂಪಣ್ಣ ರಸ್ತೆ, ರಾಘವಪ್ಪ ರಸ್ತೆ, ಮುಕುಂದ ರಂಗಮಂದಿರ, ಪವನ್ ನರ್ಸಿಂಗ್ ಹೋಂ, ಅಂಚೆ ಕಚೇರಿ ರಸ್ತೆ, ವೆಂಕಟರಮಣ ಲೇಔಟ್ , MSO ಕಾಲೋನಿ, MEG ಆಫೀಸರ್ಸ್ ಕಾಲೋನಿ ಮತ್ತು ಪ್ರಣವ್ ಡಯಾಗ್ನೋಸ್ಟಿಕ್ಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 10.30 ರಿಂದ ಸಂಜೆ 5.30 ರವರೆಗೆ ವಿದ್ಯುತ್ ಕಡಿತಗೊಳ್ಳಲಿದೆ.

ಪಶ್ಚಿಮ ವಲಯದ ಉತ್ತರಹಳ್ಳಿ ಮುಖ್ಯರಸ್ತೆ, ಅನ್ನಪೂರ್ಣ ಲೇಔಟ್, ಕೋನಸಂದ್ರ, ಬಿಎಚ್‌ಇಎಲ್ ಲೇಔಟ್, ಕೃಷ್ಣ ಗಾರ್ಡನ್, ಎಸ್‌ಐಆರ್ ಎಂವಿ 1ನೇ ಬ್ಲಾಕ್, ಉತ್ತರಹಳ್ಳಿ ರಸ್ತೆ, ಕೊಂಚಂದ್ರ ರಸ್ತೆ, ಕೋಡಿಪಾಳ್ಯ, ಅನ್ನಪೂರ್ಣೇಶ್ವರಿ ಲೇಔಟ್, ಬಿಇಎಲ್ 1ನೇ ಹಂತ, ಬಿಇಎಲ್ 2ನೇ ಹಂತ, ಗಾಂಧಿ ಪಾರ್ಕ್ – 1, ಡಿ ಗ್ರೂಪ್ ಎಲ್/ಓ, ಪಾರ್ಕ್ ಹತ್ತಿರ 1 ನೇ ಬ್ಲಾಕ್, ಪೂರ್ವ ಶಾಲೆ, ವಿದ್ಯಾಮಾನ್ಯ ನಗರ, ಅನುಪಮಾ ಶಾಲಾ ರಸ್ತೆ, ಮುನೀಶ್ವರ ರಸ್ತೆ ಮತ್ತು ಪೀಣ್ಯ 2 ಹಂತಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಕಡಿತಗೊಳ್ಳಲಿದೆ.

ಜುಲೈ 28ರಂದು ಎಲ್ಲೆಲ್ಲಿ ಪವರ್ ಕಟ್

ಗುರುವಾರ (ಜುಲೈ 28)ದಂದು ಪೂರ್ವ ವಲಯದ ನಾಗದೇವಿ ಇಂಡಸ್ಟ್ರೀಸ್, ಎಚ್‌ಆರ್‌ಬಿಆರ್ 3 ನೇ ಬ್ಲಾಕ್, ನೆಹರು ರಸ್ತೆ, ಮಂಗಳಾ ಲೇಔಟ್, ಆಯಿಲ್ ಮಿಲ್ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ರ ನಡುವೆ ವಿದ್ಯುತ್ ಕಡಿತಗೊಳ್ಳಲಿದೆ.

ಪಶ್ಚಿಮ ವಲಯದ ಪ್ರದೇಶಗಳಾದ ಪೂರ್ವ ಶಾಲೆ, ವಿದ್ಯಾಮಾನ್ಯ ನಗರ, ಅನುಪಮಾ ಶಾಲಾ ರಸ್ತೆ, ಮುನೀಶ್ವರ ರಸ್ತೆ, ಶಿವ ದೇವಸ್ಥಾನದ ಹತ್ತಿರ ಅಂದ್ರಹಳ್ಳಿ ಮುಖ್ಯ ರಸ್ತೆ, ಪೀಣ್ಯ 2 ಹಂತ, ವಿಘ್ನೇಶ್ವರ ನಗರ, ನೀಲಗಿರಿ ಮೇಲಿನ ರಸ್ತೆ, ಓಂಕಾರ ಆಶ್ರಮ, ಆಂಜನೇಯ ದೇವಸ್ಥಾನ, ಟಿಜಿ ಪಾಳ್ಯ ಮುಖ್ಯ ರಸ್ತೆ, ಪೀಣ್ಯ ದಂಡ ಶಿಬಿರ, ಜೋಡಿಮುನೇಶ್ವರ, ನಂದಗೋಕುಲ ಲೇಔಟ್, ಎಸ್‌ಎಲ್‌ವಿ ಕೈಗಾರಿಕಾ ರಸ್ತೆ, ಎಸ್‌ಎಲ್‌ವಿ ಇಂಡಸ್ಟ್ರಿ, ಟಿಜಿ ಪಾಳ್ಯ ರಸ್ತೆ, ಅನ್ನಪೂರ್ಣೇಶ್ವರಿ ಬಡಾವಣೆ, ಸೋಂಪುರ ಕೈಗಾರಿಕಾ ಪ್ರದೇಶ ಮತ್ತು ನಿಡವಂಡ ಗ್ರಾಮಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ಕಡಿತಗೊಳ್ಳಲಿದೆ.

Published On - 8:52 am, Tue, 26 July 22

ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ