ನಕಲಿ ಯಾವ ಕ್ಷೇತ್ರದಲ್ಲಿ ಇಲ್ಲ ಹೇಳಿ? ನಕಲಿ ಕಾಲ್​ಸೆಂಟರ್​​​ ಜಾಲ ಪತ್ತೆಯಾಯ್ತು ಸಿಲಿಕಾನ್ ಸಿಟಿ​ ಬೆಂಗಳೂರಿನಲ್ಲಿ!

| Updated By: ಸಾಧು ಶ್ರೀನಾಥ್​

Updated on: Jul 08, 2022 | 3:29 PM

ಬೆಂಗಳೂರಿನಲ್ಲಿ ನಕಲಿ ಕಾಲ್​ಸೆಂಟರ್​​​ ಜಾಲ ಪತ್ತೆಯಾಗಿದೆ. ಅದೂ ಸಿಲಿಕಾನ್ ಸಿಟಿ​ಯಲ್ಲಿ ಇಂತಹ ನಕಲಿ ಜಾಲ ಪತ್ತೆಯಾಗಿರುವುದು ಸಖೇದಾಶ್ಚರ್ಯ ಜೊತೆಗೆ, ಆತಂಕದ ವಿಷಯವೂ ಆಗಿದೆ. ಭಾರತದಲ್ಲಿ ಒಂದೆರಡು ಕಡೆ ಇಂತಹ ನಕಲಿ ಕಾಲ್​ಸೆಂಟರ್​​​ ಗಳು ತಲೆ ಎತ್ತಿದ್ದವಾದರೂ, ಬೆಂಗಳೂರಿನಲ್ಲಿ ಇಂತಹ ನಕಲಿ ಜಾಲ ಆಪರೇಟ್ ಮಾಡ್ತಾ ಇದ್ದಿದ್ದು ಇದೇ ಮೊದಲು ಎನ್ನಬಹುದು.

ನಕಲಿ ಯಾವ ಕ್ಷೇತ್ರದಲ್ಲಿ ಇಲ್ಲ ಹೇಳಿ? ನಕಲಿ ಕಾಲ್​ಸೆಂಟರ್​​​ ಜಾಲ  ಪತ್ತೆಯಾಯ್ತು ಸಿಲಿಕಾನ್ ಸಿಟಿ​ ಬೆಂಗಳೂರಿನಲ್ಲಿ!
ಕಾಲ್​ಸೆಂಟರ್​​​ ನಲ್ಲಿ ಇಂತಹ ದೃಶ್ಯ ಕಾಣಸಿಗುವುದು ಅಪರೂಪ, ಅದು ನಕಲಿಯಾಗಿದ್ದರೆ ಮಾತ್ರ ಇಂತಹ ದೃಶ್ಯ ಸೆರೆಯಾಗುತ್ತದೆ!
Follow us on

ಬೆಂಗಳೂರು: ಈಗಂತೂ ನಕಲಿ ಯಾವ ಕ್ಷೇತ್ರದಲ್ಲಿ ಇಲ್ಲ ಹೇಳೀ!? ಎಂದು ಪ್ರಶ್ನಿಸಿಕೊಂಡರೆ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ನಕಲಿ ರಾರಾಜಿಸುತ್ತಿದೆ ಎನ್ನಬಹುದು. ತಾಜಾ ಆಗಿ, ಬೆಂಗಳೂರಿನಲ್ಲಿ ನಕಲಿ ಕಾಲ್​ಸೆಂಟರ್​​​ ಜಾಲ ಪತ್ತೆಯಾಗಿದೆ. ಅದೂ ಸಿಲಿಕಾನ್ ಸಿಟಿ​ಯಲ್ಲಿ ಇಂತಹ ನಕಲಿ ಜಾಲ ಪತ್ತೆಯಾಗಿರುವುದು ಸಖೇದಾಶ್ಚರ್ಯ ಜೊತೆಗೆ, ಆತಂಕದ ವಿಷಯವೂ ಆಗಿದೆ. ಭಾರತದಲ್ಲಿ ಒಂದೆರಡು ಕಡೆ ಇಂತಹ ನಕಲಿ ಕಾಲ್​ಸೆಂಟರ್​​​ ಗಳು ತಲೆ ಎತ್ತಿದ್ದವಾದರೂ, ಬೆಂಗಳೂರಿನಲ್ಲಿ ಇಂತಹ ನಕಲಿ ಜಾಲ ಆಪರೇಟ್ ಮಾಡ್ತಾ ಇದ್ದಿದ್ದು ಇದೇ ಮೊದಲು ಎನ್ನಬಹುದು.

243 ಕಂಪ್ಯೂಟರ್ ಇಟ್ಟುಕೊಂಡು, ಅಮೆರಿಕದ ಸೇವೆಗೆ ನಕಲಿ ಕಾಲ್​ಸೆಂಟರ್

ಬೆಂಗಳೂರಿನಲ್ಲಿ ಈ ಬೃಹತ್ ನಕಲಿ ಕಾಲ್ ​ಸೆಂಟರ್​​​ ಜಾಲ ಪತ್ತೆಯಾಗಿರುವುದು ವೈಟ್​​ಫೀಲ್ಡ್​, ಮಹದೇವಪುರದಲ್ಲಿ. ಸಿಲಿಕಾನ್ ಸಿಟಿ​ಗೆ ಐಟಿ ಕ್ಷೇತ್ರ ಕಾಲಿಟ್ಟಾಗ ಬೆಂಗಳೂರಿನ ಹೆಗ್ಗುರುತಾಗಿದ್ದ ಟೆಕ್​​ಪಾರ್ಕ್ ಒಳಗಡೆ ಇತ್ತೀಚೆಗೆ ಈ ನಕಲಿ ಕಂಪನಿ ಕಾರ್ಯಾಚಾರಣೆ ನಡೆಸುತ್ತಿತ್ತು. ಇದೀಗ ನಕಲಿ ಕಂಪನಿ ತೆರೆದುಕೂತಿದ್ದ ಅಷ್ಟೂ ಆರೋಪಿಗಳನ್ನು ಬಂಧಿಸಲಾಗಿದೆ. ಗುಜರಾತ್ ಮೂಲದ 11 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಬಂಧಿತರಿಂದ 243 ಕಂಪ್ಯೂಟರ್ ವಶಕ್ಕೆ ಪಡೆದಿದ್ದಾರೆ.

ವೈಟ್​​ಫೀಲ್ಡ್​, ಮಹದೇವಪುರ ಪೊಲೀಸರ ಜಂಟಿ ಕಾರ್ಯಾಚರಣೆ ಫಲವಾಗಿ ಇದೀಗ ಈ ಜಾಲ ಛಿದ್ರವಾಗಿದೆ. ಅಮೆರಿಕ ಪ್ರಜೆಗಳನ್ನು ಗುರಿಯಾಗಿಸಿಕೊಂಡು ಹಣ ಪಡೆದು ವಂಚನೆ ಎಸಗಲಾಗಿದೆ. ಬ್ಯಾಂಕ್​​ ಖಾತೆಯಲ್ಲಿ ಸಮಸ್ಯೆ ಎಂದು ಹೇಳಿ ಹಣ ಪಡೆದು ವಂಚನೆ ನಡೆದಿದೆ. ಅಮೆಜಾನ್​​​ ಅಕೌಂಟ್​ ಮತ್ತು ಶಾಪಿಂಗ್​​ ಮಾಡ್ತಿದ್ದವರ ಡೇಟಾ ಬಳಸಿ ಕೃತ್ಯವೆಸಗಲಾಗಿದೆ.

ಹೆಸರಿಗಷ್ಟೇ ಎಥಿಕಲ್… ಎಥಿಕಲ್ ಇನ್​ಫೋ ಕಂಪನಿ ಪ್ರೈ.ಲಿ ಹೆಸರಲ್ಲಿ ಕಾಲ್​ಸೆಂಟರ್​!

ಹೆಸರಿಗಷ್ಟೇ ಎಥಿಕಲ್… ಎಥಿಕಲ್ ಇನ್​ಫೋ ಕಂಪನಿ ಪ್ರೈ.ಲಿ ಹೆಸರಲ್ಲಿ ಕಾಲ್​ಸೆಂಟರ್​!

ಎಥಿಕಲ್ ಇನ್​ಫೋ ಕಂಪನಿ ಪ್ರೈ. ಲಿ ಹೆಸರಲ್ಲಿ ಸುಮಾರು 70 ಮಂದಿ ಸಿಬ್ಬಂದಿ ಕಾಲ್​ಸೆಂಟರ್​ ನಲ್ಲಿ ಕೆಲಸ ಮಾಡುತ್ತಿದ್ದರು. ರಾಜಸ್ಥಾನ, ಹರಿಯಾಣ, ಮಹಾರಾಷ್ಟ್ರ ಮೂಲದ ಕೆಲಸಗಾರರನ್ನೇ ಹೆಚ್ಚಾಗಿ ಇಲ್ಲಿ ಬಳಕೆ ಮಾಡಲಾಗಿತ್ತು. ಕಂಪನಿ ಸ್ಥಾಪಿಸಿದ್ದ ಆರೋಪಿಗಳು ಸ್ಕೂಲ್​ ಬಸ್​ನಲ್ಲಿ ಕೆಲಸಗಾರರನ್ನು ಕರೆತರುತ್ತಿದ್ದರು. ಬಸ್​ ಮೇಲೆ ಶಾಲೆಗಳ ಹೆಸರು ಬರೆಯಿಸಿ, ಮರಾಮೋಸ ಮಾಡುತ್ತಿದ್ದರು. ಎಸ್ ಪಿ ಎಸ್ ವಿದ್ಯಾಕೇಂದ್ರ ಹಾಗು ಪರದೇಶಿ ಮಠ ಎಂದು ಬಸ್ ಮೇಲೆ ಬರೆಸಿದ್ದರು.

ಸದರಿ ನಕಲಿ ಕಾಲ್​ಸೆಂಟರ್​ಗಳ ಬಗ್ಗೆ ತನಿಖೆ ಮುಂದುವರಿದಿದೆ. ಕಾಲ್ ಟೇಕರ್ಸ್, ಬ್ಯಾಂಕರ್ಸ್ ಮತ್ತು ಕ್ಲೋಸರ್ಸ್ ಎಂದು ಮೂರು ಹಂತದಲ್ಲಿ ಅರೋಪಿಗಳು ಅಪರೇಟ್ ಮಾಡ್ತಿದ್ದರು.