Chamrajpet Idgah Maidan: ಬಂದ್ ಮಾಡಿಯೇ ತೀರುತ್ತೇವೆ; ಚಾಮರಾಜಪೇಟೆ ನಾಗರಿಕರ ವೇದಿಕೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 08, 2022 | 1:47 PM

ಚಾಮರಾಜಪೇಟೆ ಕ್ಷೇತ್ರದ ಬಂದ್ ಮಾಡುತ್ತೇವೆ. ಈ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಚಾಮರಾಜಪೇಟೆ ನಾಗರಿಕರ ಒಕ್ಕೂಟ ವೇದಿಕೆಯ ಸಂಚಾಲಕ ರುಕ್ಮಾಂಗದ ಹೇಳಿದ್ದಾರೆ.

Chamrajpet Idgah Maidan: ಬಂದ್ ಮಾಡಿಯೇ ತೀರುತ್ತೇವೆ; ಚಾಮರಾಜಪೇಟೆ ನಾಗರಿಕರ ವೇದಿಕೆ
ಚಾಮರಾಜಪೇಟೆ ಈದ್ಗಾ ಮೈದಾನ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಈದ್ಗಾ ಮೈದಾನ ವಿಚಾರಕ್ಕೆ ಸಂಬಂಧಿಸಿದಂತೆ ಜುಲೈ 12ರಂದು ಚಾಮರಾಜಪೇಟೆ ಕ್ಷೇತ್ರದ ಬಂದ್ ಮಾಡುತ್ತೇವೆ. ಈ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಚಾಮರಾಜಪೇಟೆ ನಾಗರಿಕರ ಒಕ್ಕೂಟ ವೇದಿಕೆಯ ಸಂಚಾಲಕ ರುಕ್ಮಾಂಗದ ಸ್ಪಷ್ಟಪಡಿಸಿದ್ದಾರೆ. ಶಾಸಕ ಜಮೀರ್ ಅಹ್ಮದ್ ಇಂದು ನಡೆಸಿದ ಸಭೆಗೆ ನಮ್ಮನ್ನು ಆಹ್ವಾನಿಸಿರಲಿಲ್ಲ. ಒಂದು ವೇಳೆ ಅವರು ಆಹ್ವಾನ ನೀಡಿದ್ದರೂ ನಾವು ಸಭೆಯನ್ನು ಬಹಿಷ್ಕರಿಸುತ್ತಿದ್ದೆವು. ಜುಲೈ 12ರ ಚಾಮರಾಜಪೇಟೆ ಬಂದ್ ನಡೆಯುವುದು ನಿಶ್ಚಿತ ಎಂದು ಹೇಳಿದರು.

ಇದನ್ನೂ ಓದಿ: ನನ್ನ ಪ್ರಾಣ ಇರೋವರೆಗೂ ಮೈದಾನ ತೆಗೆಯಲು ಸಾಧ್ಯವಿಲ್ಲ; ಜಮೀರ್ ಅಹಮದ್

ಸಭೆಯಲ್ಲಿ ಸಿಟ್ಟಾದ ಶಾಸಕರು

ಈದ್ಗಾ ಮೈದಾನ ವಿವಾದಕ್ಕೆ ಬಗ್ಗೆ ಕರೆದಿದ್ದ ಸಭೆಯಲ್ಲಿ ಶಾಸಕರು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಲು ಹಿಂದೇಟು ಹಾಕಿ, ಸಿಟ್ಟಿನಿಂದ ಕಾರಿನತ್ತ ಹೆಜ್ಜೆ ಹಾಕಿದ ಘಟನೆ ನಡೆಯಿತು. ಹಿಂದೂ ಧಾರ್ಮಿಕ ಆಚರಣೆಗಳಿಗೆ ಅವಕಾಶ ಕೊಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಲು ಹಿಂಜರಿದರು. ಬಂದ್​ಗೆ ಕರೆಕೊಟ್ಟಿದ್ದ ಸಂಘಟನೆಗಳ ಪ್ರತಿನಿಧಿಗಳಿಗೂ ಸಭೆಗೆ ಆಹ್ವಾನ ಇರಲಿಲ್ಲ. ಚಾಮರಾಜಪೇಟೆ ಮೈದಾನದಲ್ಲಿ ಶಿವರಾತ್ರಿ ಹಬ್ಬ ಆಚರಣೆಗೆ ಯಾಕೆ ಅವಕಾಶ ಇಲ್ಲ ಎಂಬ ಪ್ರಶ್ನೆಗೆ ಜಮೀರ್ ಅಹ್ಮದ್ ಕೋಪ ತೋರಿಸಿದರು.

ಚಾಮರಾಜಪೇಟೆಯ ಮೈದಾನದಲ್ಲಿ ಶಿವರಾತ್ರಿ ಹಬ್ಬ ಆಚರಣೆಗೆ ಯಾಕೆ ಅವಕಾಶ ಇಲ್ಲ ಎಂಬ ಪ್ರಶ್ನೆಗೆ ಜಮೀರ್ ಅಹ್ಮದ್ ಕೋಪಗೊಂಡರು. ಇಲ್ಲಿರುವ ಯಾರಿಗೂ ಅದರ ಅವಶ್ಯಕತೆ ಇಲ್ಲ. ನೀವು ಮಾಧ್ಯಮದವರೇ ಗೊಂದಲ ಸೃಷ್ಟಿ ಮಾಡ್ತಿದ್ದೀರಿ ಎಂದು ಜಮೀರ್ ಹರಿಹಾಯ್ದರು.

Published On - 1:46 pm, Fri, 8 July 22