ನಕಲಿ ಯಾವ ಕ್ಷೇತ್ರದಲ್ಲಿ ಇಲ್ಲ ಹೇಳಿ? ನಕಲಿ ಕಾಲ್ಸೆಂಟರ್ ಜಾಲ ಪತ್ತೆಯಾಯ್ತು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ!
ಬೆಂಗಳೂರಿನಲ್ಲಿ ನಕಲಿ ಕಾಲ್ಸೆಂಟರ್ ಜಾಲ ಪತ್ತೆಯಾಗಿದೆ. ಅದೂ ಸಿಲಿಕಾನ್ ಸಿಟಿಯಲ್ಲಿ ಇಂತಹ ನಕಲಿ ಜಾಲ ಪತ್ತೆಯಾಗಿರುವುದು ಸಖೇದಾಶ್ಚರ್ಯ ಜೊತೆಗೆ, ಆತಂಕದ ವಿಷಯವೂ ಆಗಿದೆ. ಭಾರತದಲ್ಲಿ ಒಂದೆರಡು ಕಡೆ ಇಂತಹ ನಕಲಿ ಕಾಲ್ಸೆಂಟರ್ ಗಳು ತಲೆ ಎತ್ತಿದ್ದವಾದರೂ, ಬೆಂಗಳೂರಿನಲ್ಲಿ ಇಂತಹ ನಕಲಿ ಜಾಲ ಆಪರೇಟ್ ಮಾಡ್ತಾ ಇದ್ದಿದ್ದು ಇದೇ ಮೊದಲು ಎನ್ನಬಹುದು.
ಬೆಂಗಳೂರು: ಈಗಂತೂ ನಕಲಿ ಯಾವ ಕ್ಷೇತ್ರದಲ್ಲಿ ಇಲ್ಲ ಹೇಳೀ!? ಎಂದು ಪ್ರಶ್ನಿಸಿಕೊಂಡರೆ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ನಕಲಿ ರಾರಾಜಿಸುತ್ತಿದೆ ಎನ್ನಬಹುದು. ತಾಜಾ ಆಗಿ, ಬೆಂಗಳೂರಿನಲ್ಲಿ ನಕಲಿ ಕಾಲ್ಸೆಂಟರ್ ಜಾಲ ಪತ್ತೆಯಾಗಿದೆ. ಅದೂ ಸಿಲಿಕಾನ್ ಸಿಟಿಯಲ್ಲಿ ಇಂತಹ ನಕಲಿ ಜಾಲ ಪತ್ತೆಯಾಗಿರುವುದು ಸಖೇದಾಶ್ಚರ್ಯ ಜೊತೆಗೆ, ಆತಂಕದ ವಿಷಯವೂ ಆಗಿದೆ. ಭಾರತದಲ್ಲಿ ಒಂದೆರಡು ಕಡೆ ಇಂತಹ ನಕಲಿ ಕಾಲ್ಸೆಂಟರ್ ಗಳು ತಲೆ ಎತ್ತಿದ್ದವಾದರೂ, ಬೆಂಗಳೂರಿನಲ್ಲಿ ಇಂತಹ ನಕಲಿ ಜಾಲ ಆಪರೇಟ್ ಮಾಡ್ತಾ ಇದ್ದಿದ್ದು ಇದೇ ಮೊದಲು ಎನ್ನಬಹುದು.
243 ಕಂಪ್ಯೂಟರ್ ಇಟ್ಟುಕೊಂಡು, ಅಮೆರಿಕದ ಸೇವೆಗೆ ನಕಲಿ ಕಾಲ್ಸೆಂಟರ್
ಬೆಂಗಳೂರಿನಲ್ಲಿ ಈ ಬೃಹತ್ ನಕಲಿ ಕಾಲ್ ಸೆಂಟರ್ ಜಾಲ ಪತ್ತೆಯಾಗಿರುವುದು ವೈಟ್ಫೀಲ್ಡ್, ಮಹದೇವಪುರದಲ್ಲಿ. ಸಿಲಿಕಾನ್ ಸಿಟಿಗೆ ಐಟಿ ಕ್ಷೇತ್ರ ಕಾಲಿಟ್ಟಾಗ ಬೆಂಗಳೂರಿನ ಹೆಗ್ಗುರುತಾಗಿದ್ದ ಟೆಕ್ಪಾರ್ಕ್ ಒಳಗಡೆ ಇತ್ತೀಚೆಗೆ ಈ ನಕಲಿ ಕಂಪನಿ ಕಾರ್ಯಾಚಾರಣೆ ನಡೆಸುತ್ತಿತ್ತು. ಇದೀಗ ನಕಲಿ ಕಂಪನಿ ತೆರೆದುಕೂತಿದ್ದ ಅಷ್ಟೂ ಆರೋಪಿಗಳನ್ನು ಬಂಧಿಸಲಾಗಿದೆ. ಗುಜರಾತ್ ಮೂಲದ 11 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಬಂಧಿತರಿಂದ 243 ಕಂಪ್ಯೂಟರ್ ವಶಕ್ಕೆ ಪಡೆದಿದ್ದಾರೆ.
ವೈಟ್ಫೀಲ್ಡ್, ಮಹದೇವಪುರ ಪೊಲೀಸರ ಜಂಟಿ ಕಾರ್ಯಾಚರಣೆ ಫಲವಾಗಿ ಇದೀಗ ಈ ಜಾಲ ಛಿದ್ರವಾಗಿದೆ. ಅಮೆರಿಕ ಪ್ರಜೆಗಳನ್ನು ಗುರಿಯಾಗಿಸಿಕೊಂಡು ಹಣ ಪಡೆದು ವಂಚನೆ ಎಸಗಲಾಗಿದೆ. ಬ್ಯಾಂಕ್ ಖಾತೆಯಲ್ಲಿ ಸಮಸ್ಯೆ ಎಂದು ಹೇಳಿ ಹಣ ಪಡೆದು ವಂಚನೆ ನಡೆದಿದೆ. ಅಮೆಜಾನ್ ಅಕೌಂಟ್ ಮತ್ತು ಶಾಪಿಂಗ್ ಮಾಡ್ತಿದ್ದವರ ಡೇಟಾ ಬಳಸಿ ಕೃತ್ಯವೆಸಗಲಾಗಿದೆ.
ಹೆಸರಿಗಷ್ಟೇ ಎಥಿಕಲ್… ಎಥಿಕಲ್ ಇನ್ಫೋ ಕಂಪನಿ ಪ್ರೈ.ಲಿ ಹೆಸರಲ್ಲಿ ಕಾಲ್ಸೆಂಟರ್!
ಎಥಿಕಲ್ ಇನ್ಫೋ ಕಂಪನಿ ಪ್ರೈ. ಲಿ ಹೆಸರಲ್ಲಿ ಸುಮಾರು 70 ಮಂದಿ ಸಿಬ್ಬಂದಿ ಕಾಲ್ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದರು. ರಾಜಸ್ಥಾನ, ಹರಿಯಾಣ, ಮಹಾರಾಷ್ಟ್ರ ಮೂಲದ ಕೆಲಸಗಾರರನ್ನೇ ಹೆಚ್ಚಾಗಿ ಇಲ್ಲಿ ಬಳಕೆ ಮಾಡಲಾಗಿತ್ತು. ಕಂಪನಿ ಸ್ಥಾಪಿಸಿದ್ದ ಆರೋಪಿಗಳು ಸ್ಕೂಲ್ ಬಸ್ನಲ್ಲಿ ಕೆಲಸಗಾರರನ್ನು ಕರೆತರುತ್ತಿದ್ದರು. ಬಸ್ ಮೇಲೆ ಶಾಲೆಗಳ ಹೆಸರು ಬರೆಯಿಸಿ, ಮರಾಮೋಸ ಮಾಡುತ್ತಿದ್ದರು. ಎಸ್ ಪಿ ಎಸ್ ವಿದ್ಯಾಕೇಂದ್ರ ಹಾಗು ಪರದೇಶಿ ಮಠ ಎಂದು ಬಸ್ ಮೇಲೆ ಬರೆಸಿದ್ದರು.
ಸದರಿ ನಕಲಿ ಕಾಲ್ಸೆಂಟರ್ಗಳ ಬಗ್ಗೆ ತನಿಖೆ ಮುಂದುವರಿದಿದೆ. ಕಾಲ್ ಟೇಕರ್ಸ್, ಬ್ಯಾಂಕರ್ಸ್ ಮತ್ತು ಕ್ಲೋಸರ್ಸ್ ಎಂದು ಮೂರು ಹಂತದಲ್ಲಿ ಅರೋಪಿಗಳು ಅಪರೇಟ್ ಮಾಡ್ತಿದ್ದರು.