ಬೆಂಗಳೂರಿನಲ್ಲಿ ಬಕ್ರೀದ್ ಮಾರ್ಗಸೂಚಿ ಪಾಲನೆ ಕಡ್ಡಾಯ: ಗಲ್ಲಿ ಗಲ್ಲಿಗೆ ತೆರಳಿ ಅನೌನ್ಸ್ ಮಾಡುತ್ತಿರುವ ಪೊಲೀಸರು, ಗೈಡ್​ಲೈನ್ಸ್​ ಏನು?

Bakrid 2022: ಬೆಂಗಳೂರಿನಲ್ಲಿ ಬಕ್ರೀದ್ ಹಬ್ಬ ಆಚರಣೆ ಹಿನ್ನೆಲೆ ಸರ್ಕಾರ ನಿಗದಿಪಡಿಸಿರುವ ನಿಯಮಾವಳಿಗಳನ್ನು ಪಾಲಿಸುವಂತೆ ಪೊಲೀಸ್ ಇಲಾಖೆ ಅರಿವು ಮೂಡಿಸುತ್ತಿದೆ. ಈ ಸಂಬಂಧ ಪೊಲೀಸ್ ಇಲಾಖೆ, ಪಶು ಪಾಲನಾ ಇಲಾಖೆ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ದೇಶನ ಪಾಲಿಸುವುದು ಕಡ್ಡಾಯವಾಗಿದೆ. ಈ ಬಗ್ಗೆ ಬೆಂಗಳೂರು ಪೊಲೀಸರು ಗಲ್ಲಿ ಗಲ್ಲಿಗೆ ತೆರಳಿ ತಿಳಿಯಹೇಳುತ್ತಿದ್ದಾರೆ.

ಬೆಂಗಳೂರಿನಲ್ಲಿ ಬಕ್ರೀದ್ ಮಾರ್ಗಸೂಚಿ ಪಾಲನೆ ಕಡ್ಡಾಯ: ಗಲ್ಲಿ ಗಲ್ಲಿಗೆ ತೆರಳಿ ಅನೌನ್ಸ್ ಮಾಡುತ್ತಿರುವ ಪೊಲೀಸರು, ಗೈಡ್​ಲೈನ್ಸ್​ ಏನು?
ಬೆಂಗಳೂರಿನಲ್ಲಿ ಬಕ್ರೀದ್ ಮಾರ್ಗಸೂಚಿ ಪಾಲನೆ ಕಡ್ಡಾಯ: ಗಲ್ಲಿ ಗಲ್ಲಿಗೆ ತೆರಳಿ ಅನೌನ್ಸ್ ಮಾಡುತ್ತಿರುವ ಪೊಲೀಸರು
TV9kannada Web Team

| Edited By: sadhu srinath

Jul 08, 2022 | 4:16 PM

ಬೆಂಗಳೂರಿನಲ್ಲಿ ಬಕ್ರೀದ್ ಹಬ್ಬ ಆಚರಣೆ ಹಿನ್ನೆಲೆ ಸರ್ಕಾರ ನಿಗದಿಪಡಿಸಿರುವ ನಿಯಮಾವಳಿಗಳನ್ನು ಪಾಲಿಸುವಂತೆ ಪೊಲೀಸ್ ಇಲಾಖೆ ಅರಿವು ಮೂಡಿಸುತ್ತಿದೆ. ಈ ಬಗ್ಗೆ, ಬೆಂಗಳೂರಿನಲ್ಲಿ ಪ್ರತಿ ಏರಿಯಾಗಳಿಗೆ ತೆರಳಿ ಪೊಲೀಸರು ಅನೌನ್ಸ್ ಮಾಡುತ್ತಿದ್ದಾರೆ. ಬಕ್ರೀದ್ ಹಬ್ಬ ಆಚರಣೆ ಮಾಡಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಪೊಲೀಸರು ತಿಳಿಸುತ್ತಿದ್ದಾರೆ.

ಹೆಚ್ ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರಿಂದ ಅನೌನ್ಸ್ ನಡೆಯುತ್ತಿದೆ. ಬಕ್ರೀದ್ ಹಬ್ಬ ಆಚರಣೆ ಬಗ್ಗೆ ಹೊರಡಿಸಿರುವ ಸರ್ಕಾರದ ಸುತ್ತೋಲೆಯಲ್ಲಿ ಹಬ್ಬದ ದಿನ ಕೋವಿಡ್ ಮಾರ್ಗಸೂಚಿ ಪಾಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕರ್ನಾಟಕ ಜಾನುವಾರ ಹತ್ಯೆ ಪ್ರತಿಬಂಧಕ ಕಾಯ್ದೆ ನಿಯಮ ಉಲ್ಲಂಘನೆಯಾಗದಂತೆ ಖುರ್ಮಾನಿ (ಪ್ರಾಣಿ ಬಲಿದಾನ) ಮಾಡುವಾಗ ಸಾರ್ವಜನಿಕ ಪ್ರದೇಶ, ರಸ್ತೆಗಳು, ಶಾಲಾ ಕಾಲೇಜು, ಆಸ್ಪತ್ರೆ ಆವರಣ, ಉದ್ಯಾನಗಳಲ್ಲಿ ಮಾಡುವುದಕ್ಕೆ ನಿಷೇಧ ವಿಧಿಸಲಾಗಿದೆ. ಜಿಲ್ಲಾಡಳಿತ, ಸ್ಥಳೀಯ ಆಡಳಿತ ಸಂಸ್ಥೆ ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರ ಖುರ್ಮಾನಿ ನಡೆಸಬೇಕು. ಈ ಸಂಬಂಧ ಪೊಲೀಸ್ ಇಲಾಖೆ, ಪಶು ಪಾಲನಾ ಇಲಾಖೆ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ದೇಶನ ಪಾಲಿಸುವುದು ಕಡ್ಡಾಯವಾಗಿದೆ. ಈ ಬಗ್ಗೆ ಬೆಂಗಳೂರು ಪೊಲೀಸರು ಗಲ್ಲಿ ಗಲ್ಲಿಗೆ ತೆರಳಿ ತಿಳಿಯಹೇಳುತ್ತಿದ್ದಾರೆ.

ಜುಲೈ 10ರಂದು ಬಕ್ರೀದ್​ ಹಬ್ಬಕ್ಕೆ ಸರ್ಕಾರದಿಂದ ಗೈಡ್​ಲೈನ್ಸ್​ ಬಿಡುಗಡೆಯಾಗಿದ್ದು, ಅವು ಹೀಗಿವೆ:

ಬಕ್ರೀದ್ ದಿನ ಖುರ್ಬಾನಿ ನೆರವೇರಿಸಲು ಸರ್ಕಾರದ ಕಂಡಿಷನ್ ಹೀಗಿದೆ- ಜಾನುವಾರು ಹತ್ಯೆ ಪ್ರತಿಬಂಧಕ ನಿಯಮ ಉಲ್ಲಂಘಿಸುವಂತಿಲ್ಲ. ಗೋಹತ್ಯೆ ನಿಷೇಧ ಕಾನೂನು ಪಾಲಿಸುವಂತೆ ಸರ್ಕಾರ ಸೂಚನೆ. ಎಲ್ಲೆಂದರಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಮಾಡುವಂತಿಲ್ಲ. ಕೊವಿಡ್ ಮಾರ್ಗಸೂಚಿ ಅನ್ವಯದಂತೆ ಪ್ರಾರ್ಥನೆ ಸಲ್ಲಿಸಬೇಕು. ಸಾರ್ವಜನಿಕ ಪ್ರದೇಶದಲ್ಲಿ ಕುರ್ಬಾನಿ ನಿಷೇಧಿಸಿದ ಸರ್ಕಾರ. ಜಿಲ್ಲಾಡಳಿತ, ಸ್ಥಳೀಯ ಆಡಳಿತ ತಿಳಿಸಿದ ಜಾಗದಲ್ಲೇ ಪ್ರಾರ್ಥನೆ. ಅಧಿಕಾರಿಗಳು ನಿಗದಿಪಡಿಸಿದ ಜಾಗದಲ್ಲೇ ಪ್ರಾರ್ಥನೆ ಮಾಡಬೇಕು. ಪ್ರಾಣಿ ತ್ಯಾಜ್ಯ ಸಾರ್ವಜನಿಕ ಸ್ಥಳದಲ್ಲಿ ವಿಲೇವಾರಿ ಮಾಡಬಾರದು ಎಂದು ಸರ್ಕಾರದ ಉಪ ಕಾರ್ಯದರ್ಶಿ ಮೆಹಬೂಬ್ ಸಾಬ್​​ ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada