AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಕನ್ನಡ ಅತ್ಯಂತ ಸೂಕ್ಷ್ಮ ಭಾಷೆ, ಸುಸಂಸ್ಕೃತ ಭಾಷೆ: ಆದ್ರೆ ಇನ್ನೂ ಕೂಡ ಬೇರೆ ಭಾಷೆಗಳ ಭಯ ಹೆಚ್ಚಾಗ್ತಿದೆ -ಸಿಎಂ ಬೊಮ್ಮಾಯಿ

ಕನ್ನಡ ಅಭಿವೃದ್ದಿ ಪ್ರಾಧಿಕಾರ ಸಮಾರಂಭದಲ್ಲಿ ಸಿಎಂ ಬೊಮ್ಮಾಯಿ ಮಾತನಾಡಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರ 3 ದಶಕಗಳನ್ನ ಪೂರೈಕೆ ಮಾಡಿದೆ. ಮನುಷ್ಯನ ಬೆಳವಣಿಗೆಯಲ್ಲಿ ಬಾಷೆ ಬಹಳ ಪ್ರಮುಖವಾಗಿರುತ್ತೆ. ಒಂದು ವೇಳೆ ಭಾಷೆನೆ ಇಲ್ಲಾ ಅಂದ್ರೆ ನಾವು ಇಷ್ಟರ ಮಟ್ಟಿಗೆ ಬೆಳೆಯೋಕೆ ಆಗ್ತಿತ್ತಾ ಎಂದರು.

ನಮ್ಮ ಕನ್ನಡ ಅತ್ಯಂತ ಸೂಕ್ಷ್ಮ ಭಾಷೆ, ಸುಸಂಸ್ಕೃತ ಭಾಷೆ: ಆದ್ರೆ ಇನ್ನೂ ಕೂಡ ಬೇರೆ ಭಾಷೆಗಳ ಭಯ ಹೆಚ್ಚಾಗ್ತಿದೆ -ಸಿಎಂ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
TV9 Web
| Edited By: |

Updated on:Jul 08, 2022 | 7:51 PM

Share

ಬೆಂಗಳೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರ(Kannada Development Authority) ಸ್ಥಾಪನೆಗೊಂಡು ಇಂದಿಗೆ 30 ವರ್ಷ ಕಳೆದಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ(Ravindra Kala Kshethra) ಕನ್ನಡ ಅಭಿವೃದ್ದಿ ಪ್ರಾಧಿಕಾರ ವತಿಯಿಂದ 30ನೇ ವರ್ಷದ ವರ್ಷಚಾರಣೆ ಸಮಾರಂಭ ಏರ್ಪಡಿಸಲಾಗಿದ್ದು ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಉದ್ಘಾಟಿಸಿದ್ದಾರೆ. ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ್ದಾರೆ.

ಇದೇ ವೇಳೆ ಸಿಎಂ ಬೊಮ್ಮಾಯಿ ‘ಕನ್ನಡ ರಥ ಕಾಯಕ ಪಥ’ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ಸಚಿವ ಗೋವಿಂದ್ ಕಾರಜೋಳ ಅವರು ಚಿಣ್ಣರ ಸಾಹಿತ್ಯ ಮಾಲೆ ಹಾಗೂ ಕಾಯಕ ವರ್ಷದ ಅಕ್ಷರ ದಾಸೋಹ ಪುಸ್ತಕ ಲೋಕಾರ್ಪಣೆ ಮಾಡಿದ್ರು. ಸಚಿವ ಮಾಧುಸ್ವಾಮಿ, ವೈದ್ಯಕೀಯ ವಲಯದಲ್ಲಿ ಕನ್ನಡ ಬಳಕೆ ಪುಸ್ತಕ ಬಿಡುಗಡೆಗೊಳಿಸಿದ್ರು. ಇದೆ ವೇಳೆ ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಉಪಸ್ಥಿತರಿದ್ರು.

ಇನ್ನು ಕನ್ನಡ ಅಭಿವೃದ್ದಿ ಪ್ರಾಧಿಕಾರ ಸಮಾರಂಭದಲ್ಲಿ ಸಿಎಂ ಬೊಮ್ಮಾಯಿ ಮಾತನಾಡಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರ 3 ದಶಕಗಳನ್ನ ಪೂರೈಕೆ ಮಾಡಿದೆ. ಮನುಷ್ಯನ ಬೆಳವಣಿಗೆಯಲ್ಲಿ ಬಾಷೆ ಬಹಳ ಪ್ರಮುಖವಾಗಿರುತ್ತೆ. ಒಂದು ವೇಳೆ ಭಾಷೆನೆ ಇಲ್ಲಾ ಅಂದ್ರೆ ನಾವು ಇಷ್ಟರ ಮಟ್ಟಿಗೆ ಬೆಳೆಯೋಕೆ ಆಗ್ತಿತ್ತಾ. ನಮ್ಮದೇ ಆದ ಭಾಷೆ ಇರೋದು ನಮ್ಮ ಹಾಗೂ ಸಮಾಜದ ಬೆಳವಣಿಗೆಗೆ ಬಹಳ ಮುಖ್ಯ. ಭಾಷೆಯಿಂದ ಜ್ಞಾನ, ಜ್ಞಾನದಿಂದ ತಂತ್ರಜ್ಞಾನ ಬೆಳೆಯುತ್ತೆ. ಭಾಷೆ ನಮಗೆ ಎಷ್ಟು ಪ್ರಮುಖ ಅಂತ ನಾವು ದಿನನಿತ್ಯ ನೋಡ್ತಿದ್ದೇವೆ. ನಮ್ಮ ಭಾಷೆಯನ್ನ ನಾವು ಎಷ್ಟು ಬಳಸ್ತೀವಿ, ಬಳಕೆ ಮಾಡ್ತಿವಿ ಅನ್ನೋದು ಪ್ರಮುಖ ಮಾತ್ರ ವಹಿಸುತ್ತೆ.

ಬೇರೆ ಭಾಷೆಗಿಂತ ನಮ್ಮ ಭಾಷೆಯನ್ನ ಎಷ್ಟರ ಮಟ್ಟಿಗೆ ಬಳಕೆ ಮಾಡ್ತೇವೆ ಅನ್ನೋದ್ರ ಮೇಲೆ ನಮ್ಮ ಭಾಷೆಯ ಬೆಳವಣಿಗೆ ಆಗುತ್ತೆ. ಗೋಕಾಕ್ ಚಳುವಳಿಯ ನಂತರ ಸಾಕಷ್ಟು ಬದಲಾವಣೆ ಆಯ್ತು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಾಕಷ್ಟು ಒಳ್ಳೆ ಕೆಲಸ ಮಾಡ್ತಿದೆ. ಆದ್ರೆ ಕನ್ನಡಕ್ಕೆ ಇನ್ನೂ ಕೂಡ ಬೇರೆ ಭಾಷೆಗಳ ಭಯ ಹೆಚ್ಚಾಗ್ತಿದೆ. ನಮ್ಮ ಕನ್ನಡ ಹೇಗೆ ಅಂದ್ರೆ ಅತ್ಯಂತ ಸೂಕ್ಷ್ಮ ಭಾಷೆ, ಸುಸಂಸ್ಕೃತ ಭಾಷೆ. ನಮ್ಮ ಸಂಸ್ಕೃತಿ ತುಂಬಾ ಸಹಿಷ್ಣ ಸಂಸ್ಕೃತಿ. ಇತ್ತೀಚೆಗೆ ಭಾಷೆ ವಿಚಾರವಾಗಿ ಸಾಕಷ್ಟು ವಿವಾದ ಆಗ್ತಿದೆ. ನಮ್ಮ ಕನ್ನಡವನ್ನ ನಾವು ಉಳಿಸಬೇಕು, ಬೆಳೆಸಬೇಕು. ಎಲ್ಲಾ ಕಡೆಯು ಕನ್ನಡ ಬಳೆಸಿದಾಗ, ಕನ್ನಡ ಬೆಳವಣಿಗೆ ಆಗುತ್ತೆ. ಸಾಹಿತ್ಯ ರಚನೆ ಆಗಿದೆ. ಕೆಲವು ಪುಸ್ತಕ ಓದಿದಾಗ ಬಹಳಷ್ಟು ಆಶ್ಚರ್ಯ ಆಯ್ತು, ಕನ್ನಡ ಯಾರನ್ನು ಬಿಟ್ಟಿಲ್ಲ. ಕನ್ನಡ ಎಲ್ಲರನ್ನೂ ಸೆಳೆದಿದೆ. ನಾವೇ ಗುರುತಿಸುವ ಕೆಲಸ ಮಾಡಬೇಕು. ಟಿ.ಎಸ್. ನಾಗಾಭರಣ ಸಾಕಷ್ಟು ಕೆಲಸ ಮಾಡ್ತಿದ್ದಾರೆ. ಕನ್ನಡ ಉಳಿಸಿ ಬೆಳಸುವ ಕೆಲಸ ಇನ್ನಷ್ಟು ಮಾಡಲಿ. ಇಂದಿನ ಮೂರು ದಶಕರ ಆತ್ಮಾವಲೋಕ ಕೆಲಸ ಪ್ರಾಮಾಣಿಕವಾಗಿ ಮಾಡಬೇಕು. ಹೀಗೆ ಮಾಡಿದರೆ ಖಂಡಿತವಾಗಿಯೂ ಕನ್ನಡ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಈಗಿನ ಸಮಕಾಲೀನ ಸಾಹಿತ್ಯ ಸೇರಿದಂತೆ ಮತ್ತಷ್ಟು ಸಾಹಿತ್ಯ ಬರಲಿ ಎಂದರು.

ಸಿಎಂ ಬೊಮ್ಮಾಯಿ ಹಾವೇರಿ ಪ್ರವಾಸ ಮುಂದೂಡಿಕೆ ಸಿಎಂ ಬಸವರಾಜ ಬೊಮ್ಮಾಯಿ ನಾಳೆ ಕೈಗೊಂಡಿದ್ದ ಹಾವೇರಿ ಜಿಲ್ಲಾ ಪ್ರವಾಸ ಮುಂದೂಡಲಾಗಿದೆ. ರಾಷ್ಟ್ರಾದ್ಯಂತ ಶೋಕಾಚರಣೆ ಘೋಷಿಸಿರೋ ಹಿನ್ನೆಲೆಯಲ್ಲಿ‌ ನಾಳಿನ ಸಿಎಂ ಪ್ರವಾಸ ಮುಂದೂಡಲಾಗಿದೆ. ಹಾವೇರಿ‌ ಜಿಲ್ಲೆ ಶಿಗ್ಗಾಂವಿ ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಕಾರ್ಯಕ್ರಮಕ್ಕೆ ಸಿಎಂ ಬೊಮ್ಮಾಯಿ ಆಗಮಿಸಬೇಕಿತ್ತು. ಆದ್ರೆ ಜಪಾನ್ ದೇಶದ ಮಾಜಿ ಪ್ರಧಾನಿ ಸಿಂಜೊ ಅಬೆ ನಿಧನದ ಪ್ರಯುಕ್ತ ರಾಷ್ಟ್ರಾದ್ಯಂತ ಶೋಕಾಚರಣೆ ಘೋಷಿಸಿರೋ ಹಿನ್ನೆಲೆಯಲ್ಲಿ ಸಿಎಂ ಪ್ರವಾಸ ಮುಂದೂಡಲಾಗಿದೆ.

Published On - 7:51 pm, Fri, 8 July 22