ಸರ್ಕಾರದ ಮುಖ್ಯ ಕಾರ್ಯದರ್ಶಿ ಹೆಸರಲ್ಲಿ ನಕಲಿ ಆದೇಶ: ಕ್ರಮಕ್ಕೆ ಕಂದಾಯ ಇಲಾಖೆಗೆ ಪ್ರಧಾನ ಕಾರ್ಯದರ್ಶಿ ಸೂಚನೆ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 01, 2022 | 10:15 AM

ನಕಲಿ ಆದೇಶ ಹೊರಡಿಸಿದ್ದ ಹಿನ್ನಲೆ ಕಾನೂನು ಕ್ರಮ ಕೈಗೊಳ್ಳಲು ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಸುದರ್ಶನ್​ರಿಂದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ಹೆಸರಲ್ಲಿ ನಕಲಿ ಆದೇಶ: ಕ್ರಮಕ್ಕೆ ಕಂದಾಯ ಇಲಾಖೆಗೆ ಪ್ರಧಾನ ಕಾರ್ಯದರ್ಶಿ ಸೂಚನೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಸರ್ಕಾರದ ಮುಖ್ಯ ಕಾರ್ಯದರ್ಶಿ ಹೆಸರಿನಲ್ಲಿ ನಕಲಿ (Duplicate) ನೇಮಕಾತಿ ಆದೇಶದ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಅಕ್ಷಯ್ ಬಾಹುಬಲಿ ಲಕ್ಕಣ್ಣಗೌಡರು ಎಂಬುವವರನ್ನು ಉಪ ತಹಾಸಿಲ್ದಾರ್ ಹುದ್ದೆಗೆ ಆಯ್ಕೆ ಮಾಡಲಾಗಿದೆ ಎಂದು ನಕಲಿ ನೇಮಕಾತಿ ಆದೇಶ ಹೊರಡಿಸಲಾಗಿದೆ. ಉಪ ತಹಾಸಿಲ್ದಾರ್ ಹುದ್ದೆ ನೇಮಕಾತಿ ಮೂಲಕ ಭಡ್ತಿ ಮಾಡಲು ಸಾಧ್ಯವಿಲ್ಲ. ಇದು ಪೂರ್ಣ ಪ್ರಮಾಣದ ಮುಂಭಡ್ತಿ ಹುದ್ದೆ. ಆದರೆ ಪ್ರಧಾನ ಕಾರ್ಯದರ್ಶಿ ಹೆಸರಿನಲ್ಲಿ ನಕಲಿ ಆದೇಶದ ಪ್ರತಿಯನ್ನ ಕಿಡಿಗೇಡಿಗಳು ಹೊರಡಿಸಿದ್ದು, ಮುಖ್ಯ ಕಾರ್ಯದರ್ಶಿ ಕಛೇರಿಯಿಂದಲೇ ನಕಲಿ ಆದೇಶ ಪ್ರತಿ ಹೊರಡಿಸಲಾಗಿದೆಯಾ ಎಂಬ ಅನುಮಾನ ಹುಟ್ಟಿಕೊಂಡಿವೆ.

ಇದನ್ನೂ ಓದಿ: ಅಪಾರ್ಟ್ಮೆಂಟ್ಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಲಂಚ ಪಡೆಯುತ್ತಿದ್ದ ಬೆಸ್ಕಾಂ ಎಇ ಹನುಮಂತಪ್ಪ ಎಸಿಬಿ ಬಲೆಗೆ

ನಕಲಿ ಆದೇಶ ಹೊರಡಿಸಿದ್ದ ಹಿನ್ನಲೆ ಕಾನೂನು ಕ್ರಮ ಕೈಗೊಳ್ಳಲು ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಸುದರ್ಶನ್​ರಿಂದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಅಕ್ಷಯ ಬಾಹುಬಲಿ ಲಕ್ಕನಗೌಡರ್ ಸೇರಿದಂತೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹೆಸರನ್ನ ದುರ್ಬಳಕೆ ಮಾಡಿಕೊಂಡವರ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.

ಬೆಂಗಳೂರಿನ ಜೆ.ಸಿ.ನಗರ ಠಾಣೆಗೆ ಪ್ರಭಾರ ಇನ್ಸ್‌ಪೆಕ್ಟರ್​ ಆಗಿ ಸುಬ್ರಮಣಿ ನಿಯೋಜನೆ

ಬೆಂಗಳೂರಿನ ಜೆ.ಸಿ.ನಗರ ಠಾಣೆಗೆ ಪ್ರಭಾರಿ ಇನ್ಸ್‌ಪೆಕ್ಟರ್​ ಆಗಿ ಎಟಿಸಿ ಇನ್ಸ್‌ಪೆಕ್ಟರ್ ಸುಬ್ರಮಣಿ ಅವರನ್ನು ನಿಯೋಜನೆ ಮಾಡಲಾಗಿದೆ. ಕೆಲ ದಿನಗಳ ಹಿಂದೆಯಷ್ಟೆ ಜೆ.ಸಿ ನಗರ ಠಾಣೆ ಇನ್ಸ್‌ಪೆಕ್ಟರ್ ವರ್ಗಾವಣೆಯಾಗಿದ್ದು, ವರ್ಗಾವಣೆ ಬಳಿಕ ಠಾಣಾ ಇನ್ಸ್‌ಪೆಕ್ಟರ್ ಹುದ್ದೆ ಖಾಲಿ ಇತ್ತು. ಠಾಣೆಗೆ ಹೊಸ ಇನ್ಸ್‌ಪೆಕ್ಟರ್ ನಿಯೋಜನೆಯಾಗಿರಲಿಲ್ಲ. ಅದೇ ಸಂದರ್ಭದಲ್ಲಿ ಗೃಹ ಸಚಿವರ ಮನೆಗೆ ಎಬಿವಿಪಿ ಕಾರ್ಯಕರ್ತರು ಮುತ್ತಿಗೆ ಹಾಕಿ ರಂಪಾಟ ಮಾಡಿದ್ದರು. ಘಟನೆ ಬಳಿಕ ಎಚ್ಚೆತ್ತ ಹಿರಿಯ ಅಧಿಕಾರಿಗಳಿಂದ ಪ್ರಭಾರ ಇನ್ಸ್‌ಪೆಕ್ಟರ್ ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ; ITR Filing: ಆದಾಯ ತೆರಿಗೆ ಪಾವತಿಗೆ ಗಡುವು ಮುಕ್ತಾಯ; ಕೊನೆಯ ದಿನ 68 ಲಕ್ಷ ITR ಸಲ್ಲಿಕೆ

ಜೆ.ಸಿ ನಗರ ಠಾಣಾ ವ್ಯಾಪ್ತಿಯಲ್ಲೆ ನಾಲ್ಕು ಸಚಿವರ ನಿವಾಸಗಳಿವೆ. ಜಯಮಹಲ್ ಏರಿಯಾದಲ್ಲಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಶಶಿಕಲಾ ಜೊಲ್ಲೆ, ಪ್ರಭು ಚೌವ್ಹಾಣ್ ಹಾಗೂ ಬಿ.ಸಿ ಪಾಟೀಲ್, ಹಾಗೂ ಶಿವರಾಮ್ ಹೆಬ್ಬಾರ್ ನಿವಾಸಗಳಿದ್ದು, ಸದ್ಯ ಸಚಿವರ ನಿವಾಸಗಳಿಗೆ ಪೊಲೀಸರು ಭದ್ರತೆ ಕಲ್ಪಿಸಿದ್ದಾರೆ.