ಇ-ಖಾತೆ ನೀಡುವುದರಲ್ಲಿ ಸಾಕಷ್ಟು ತೊಂದರೆ: 10 ಹೊಸ ಸೇವಾಕೇಂದ್ರ ಆರಂಭಕ್ಕೆ ತೀರ್ಮಾನ
ಕಂದಾಯ ಇಲಾಖೆಯ ಇ-ಖಾತಾ ವಿತರಣೆಯಲ್ಲಿನ ವಿಳಂಬ ಹಾಗೂ ಸಾರ್ವಜನಿಕರ ಗೊಂದಲ ನಿವಾರಿಸಲು ಕರ್ನಾಟಕ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ರಾಜ್ಯಾದ್ಯಂತ 10 ಇ-ಖಾತಾ ಸೇವಾ ಕೇಂದ್ರಗಳನ್ನು ಆರಂಭಿಸಲು ತೀರ್ಮಾನಿಸಲಾಗಿದೆ. ಅಲ್ಲದೆ, ಸಮಸ್ಯೆ ಬಗೆಹರಿಸಲು ಆಡಿಟ್ ತಂಡ ರಚನೆ, ಮೊಬೈಲ್ ಅಪ್ಲಿಕೇಶನ್ ಮೂಲಕ ಅರ್ಜಿ ಸಲ್ಲಿಕೆ, ಮತ್ತು ಫೇಸ್‌ಲೆಸ್ ಇ-ಖಾತಾ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಪರಿಹಾರ ನೀಡುವ ಪ್ರಯತ್ನವಾಗಿದೆ.

ಬೆಂಗಳೂರು, ಡಿ.6: ಇ-ಖಾತೆ ನೀಡುವುದರಲ್ಲಿ ಸಾಕಷ್ಟು ತೊಂದರೆಗಳು ಆಗುತ್ತಿದೆ. ಇದಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಬೇರೆ ಬೇರೆ ಕ್ರಮಗಳನ್ನು ತಂದಿದೆ. ಇದರಿಂದ ಜನರಲ್ಲಿ ತುಂಬಾ ಗೊಂದಲ ಸೃಷ್ಟಿಯಾಗಿದೆ. ಈ ಸಮಸ್ಯೆ ಪರಿಹಾರ ಮಾಡಲು 10 ಸೇವಾ ಕೇಂದ್ರ ಆರಂಭಿಸಲು ತೀರ್ಮಾನ ಮಾಡಲಾಗಿದೆ. ಈ ಬಗ್ಗೆ ಕಂದಾಯ ವಿಭಾಗದ ವಿಶೇಷ ಆಯುಕ್ತ ಮನೀಶ್ ಮೌದ್ಗಿಲ್ ಮಾಹಿತಿ ನೀಡಿದ್ದಾರೆ. ಇದುವರೆಗೂ 8.16 ಲಕ್ಷ ಇ-ಖಾತೆ ಮಾತ್ರ ನೀಡಲಾಗಿದೆ. ಇದೀಗ ಇದನ್ನು ವೇಗಗೊಳಿಸಲು 10ಕ್ಕೂ ಹೆಚ್ಚು ಸೇವಾಕೇಂದ್ರಗಳನ್ನು ಆರಂಭಿಸಲು ಮುಂದಾಗಿದೆ. ಇ-ಖಾತೆ ನೀಡುವುದರಲ್ಲಿ ಉಂಟಾದ ಸಮಸ್ಯೆ ಬಗೆಹರಿಸಲು ಆಡಿಟ್ ತಂಡ ರಚನೆ ಮಾಡಲಾಗಿದೆ. ಇ-ಖಾತೆ ರಿಜೆಕ್ಟ್ ಆದರೆ ತಂಡ ಮಾನಿಟರ್ ಮಾಡುತ್ತೆ ಎಂದು ಆಯುಕ್ತ ಮನೀಶ್ ಮೌದ್ಗಿಲ್ ಹೇಳಿದ್ದಾರೆ.
ಇ ಖಾತಾ ನೀಡಲು ತಡವಾಗುತ್ತಿರುವ ಕಾರಣ ಪಾಸ್ ಪೋರ್ಟ್ ಸೇವಾಕೇಂದ್ರ ರೀತಿಯಲ್ಲಿ ಸೇವಾ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುವುದು, ಇದರ ಜತೆಗೆ ಇ ಖಾತಾಗೆ ವೇಗ ನೀಡಲಾಗುವುದು ಎಂದು ಹೇಳಿದ್ದಾರೆ. ಇ ಖಾತಾ ನೀಡಲು ತಡವಾಗುತ್ತಿದೆ. ಹಾಗೂ ಸರಿಯಾದ ವ್ಯವಸ್ಥೆ ಇಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸಿದರು. ಇದೀಗ ಅದನ್ನು ಪರಿಹಾರಿಸಲು ಈ ಕ್ರಮ ತರಲಾಗಿದೆ. ಜನ ಈ ಬಗ್ಗೆ ತಾಳ್ಮೆಯಿಂದ ಇರಬೇಕು ಎಂದು ಆಯುಕ್ತ ಮನವಿ ಮಾಡಿದ್ದಾರೆ. ಇನ್ನು ಬಿ ಟು ಎ ಖಾತಾ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ . ಈವರೆಗೂ 3252 ಅರ್ಜಿಗಳು ಮಾತ್ರ ಸ್ವೀಕಾರ ಮಾಡಿದ್ದೇವೆ. 8.21 ಲಕ್ಷ ಪೈಕಿ 8.16 ಲಕ್ಷ ಈ ಖಾತಾ ಅನುಮೋದನೆ ಆಗಿದೆ ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಹೇಳಿದ್ದಾರೆ. ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಕೂಡ ಬೇಸರ ವ್ಯಕ್ತಪಡಿಸಿದ್ದರು. ಇದು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣಲಿಲ್ಲ ಎಂದು ಹೇಳಿದರು.
ಸ್ಮಾರ್ಟ್ಫೋನ್ನಿಂದಲೇ ನೇರವಾಗಿ ಇ-ಖಾತಾ ಅರ್ಜಿ:
ಬೆಂಗಳೂರಿನಲ್ಲಿ ಇ-ಖಾತಾ ಅರ್ಜಿಗಳನ್ನು ಅಧಿಕೃತ ವೆಬ್‌ಸೈಟ್, ಬೆಂಗಳೂರು ಒನ್ ಕೇಂದ್ರಗಳು ಮತ್ತು ಸೈಬರ್ ಕೇಂದ್ರಗಳ ಮೂಲಕ ನಿರ್ವಹಿಸಲಾಗುತ್ತಿತ್ತು. ಇದೀಗ ಇಲ್ಲಿ ಆಗುವ ಸಮಸ್ಯೆಯನ್ನು ಪರಿಹಾರ ಮಾಡಲು ಹೊಸ ಅಪ್ಲಿಕೇಶನ್‌ನೊಂದಿಗೆ, ಆಸ್ತಿ ಮಾಲೀಕರು ಇನ್ಮುಂದೆ ತಮ್ಮ ಸ್ಮಾರ್ಟ್‌ಫೋನ್‌ಗಳಿಂದ ನೇರವಾಗಿ ಅರ್ಜಿಗಳನ್ನು ಸಲ್ಲಿಸಬಹುದು. ಆದರೆ ಈ ಬಗ್ಗೆ ಬೆಂಗಳೂರಿನ ಆಸ್ತಿ ಮಾಲೀಕರು ಅಸಮಾಧಾನ ಹೊರಹಾಕಿದ್ದಾರೆ. ಮೊಬೈಲ್ ಆ್ಯಪ್ ಮೂಲಕ ಇ ಖಾತಾ ನೋಂದಣಿ ಅಸಾಧ್ಯ ಎಂದಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಇ ಖಾತಾ ಮಾಹಿತಿ ನೀಡಲು ಬರಲಿದೆ ಮೊಬೈಲ್ ಆ್ಯಪ್!
ಫೇಸ್ ಲೆಸ್ ಇ-ಖಾತಾ:
ಇ-ಖಾತಾ (E-Khata) ನೋಂದಣಿಯಲ್ಲಿ ಆಗುತ್ತಿದ್ದ ಸಮಸ್ಯೆಗಳಿಗೆ ಕೊನೆಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಪರಿಹಾರ ನೀಡುವುದಕ್ಕೆ ಫೇಸ್‌ಲೆಸ್, ಕಾಂಟ್ಯಾಕ್ಟ್ ಲೆಸ್ ಮತ್ತು ಆನ್‌ಲೈನ್ ಇ-ಖಾತಾ ಮಾಡಿದೆ. ಫೇಸ್‌ಲೆಸ್, ಕಾಂಟ್ಯಾಕ್ಟ್-ಲೆಸ್ ಮತ್ತು ಆನ್‌ಲೈನ್ ಇ-ಖಾತಾ ಜಾರಿ ಮಾಡಿದೆ. ಈ ಹೊಸ ವ್ಯವಸ್ಥೆಯಿಂದಾಗಿ ಅಂತಿಮ ಇ-ಖಾತಾ ಅಥವಾ ಹೊಸ ಖಾತಾ ಅನುಮೋದಿಸಲು ಎಆರ್‌ಒ ಅಥವಾ ಕೇಸ್ ವರ್ಕರ್ ಆಸ್ತಿ ದಾಖಲೆಗಳನ್ನ ಮಾತ್ರ ಪರಿಶೀಲಿಸಬೇಕಾಗುತ್ತೆ.
ಲಕ್ಷ್ಮಿ ನರಸಿಂಹ
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




